For Quick Alerts
ALLOW NOTIFICATIONS  
For Daily Alerts

ಗುರು ಪೂರ್ಣಿಮೆ 2020: ಮಹತ್ವ, ಇತಿಹಾಸ ಮತ್ತು ಆಚರಣೆ

|

ಗುರು ಪೂರ್ಣಿಮೆ ಎನ್ನುವುದು ಗುರುಗಳ ಸ್ಮರಣೆಗೆ ಹಾಗೂ ಅವರ ಆಶೀರ್ವಾದ ಪಡೆಯಲು ಇರುವ ಒಂದು ಸುಸಂದರ್ಭ ಎನ್ನಬಹುದು. ಗುರುವಿನ ಆಶೀರ್ವಾದ ಅಥವಾ ಹಾರೈಕೆಯು ಇದ್ದರೆ ವ್ಯಕ್ತಿ ಜೀವನದಲ್ಲಿ ಅತ್ಯಂತ ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತಾನೆ ಎನ್ನಲಾಗುವುದು. ಗುರು ಎನ್ನುವ ಎರಡು ಪದಗಳೇ ಅತ್ಯುತ್ತಮ ಅರ್ಥವನ್ನು ನೀಡುತ್ತವೆ. ಗು ಮತ್ತು ರು ಎನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ "ಗು" ಅಂದರೆ ಅಂಧಕಾರ ಅಥವಾ ಅಜ್ಞಾನ. "ರು" ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ.

ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ನಮ್ಮ ಬುದ್ಧಿಯಲ್ಲಿ ಇದ್ದ ಕತ್ತಲು ಅಥವಾ ಅಜ್ಞಾನವನ್ನು ಓಡಿಸಿ, ಜ್ಞಾನ ಎನ್ನುವ ಬೆಳಕನ್ನು ನೀಡುವವನೇ ಗುರು. ಅಂತಹ ಗುರುವಿಗೆ ಗುಲಾಮನಾದರೆ ಸಾಕಷ್ಟು ವಿದ್ಯೆ ಮತ್ತು ಜ್ಞಾನ ದೊರೆಯುವುದು. ಜೀವನದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಎಂದು ಹೇಳಲಾಗುತ್ತದೆ.

ಈ ವರ್ಷ ಅಂದರೆ 2020ರಲ್ಲಿ ಜುಲೈ 5ರಂದು ಗುರುಗಳಿಗೆ ವಿಶೇಷವಾಗಿ ವಂಧಿಸುವ ದಿನವಾಗಿ ಆಚರಿಸಲಾಗುತ್ತಿದೆ.

Guru Purnima

ಅದ್ಭುತ ಅರ್ಥ ಹಾಗೂ ಹಿನ್ನೆಲೆಯನ್ನು ಹೊಂದಿರುವ ಗುರು ಪೂರ್ಣಿಮೆಯನ್ನು ಹಿಂದೂಗಳು, ಜೈನರು ಹಾಗೂ ಬೌದ್ಧರು ಆಚರಿಸುತ್ತಾರೆ. ಗುರುವಿಗೆ ಗೌರವ ನೀಡಿ ಬದುಕುವವನು ಜೀವನದಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಾ ಬರುತ್ತಾನೆ. ಜೊತೆಗೆ ನೆಮ್ಮದಿಯ ಬದುಕನ್ನು ಕಾಣುತ್ತಾನೆ. ತಾನು ಕೈಗೊಳ್ಳುವ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾ ಮುಂದೆ ಸಾಗುತ್ತಾನೆ. ಅದೇ ಗುರುವನ್ನು ತಿರಸ್ಕರಿಸುವವನು, ಗುರುವಿಗೆ ಗೌರವವನ್ನು ನೀಡದವನು, ಸರಿಯಾದ ಜ್ಞಾನ ಪಡೆದುಕೊಳ್ಳಲು ಸಾಧ್ಯವಿಲ್ಲ. ಅವನು ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಕಾಣುವನು ಎಂದು ಹೇಳಲಾಗುವುದು.

ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.

ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ.

ಹಲವಾರು ಹಿಂದೂಗಳು, ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.

ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ. ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ.

Most Read: 2019 ಗುರು ಪೂರ್ಣಿಮೆ: ಇದರ ಪ್ರಾಮುಖ್ಯತೆ ಹಾಗೂ ಆಚರಣೆಯ ವಿಧಿವಿಧಾನಗಳು

ಗುರು ಪೂರ್ಣಿಮೆಯ ಮಹತ್ವ

ಪ್ರಬುದ್ಧ ಮನಸ್ಸು ಮತ್ತು ಆತ್ಮವಿಲ್ಲದ ಮಾನವರು ಕೇವಲ ಮಾಂಸ ಮತ್ತು ಮೂಳೆಯಿಂದ ಕೂಡಿರುವ ವ್ಯಕ್ತಿಯಾಗಿರುತ್ತಾನೆ. ವಂತೆ ಮಾಡುವವರು ಗುರುಗಳು. ಹುಟ್ಟಿದ ಮಗುವಿಗೆ ಆರಂಭದಲ್ಲಿ ಎಲ್ಲವನ್ನೂ ತಿಳಿಸಿಕೊಡುವವಳು ತಾಯಿ. ತಾಯಿಯೇ ಮಗುವಿನ ಮೊದಲ ಗುರು. ತಾಯಿ ಉತ್ತಮ ಜ್ಞಾನ ಹಾಗೂ ಸಂಸ್ಕಾರದ ವರ್ತನೆಯನ್ನು ತಿಳಿದಿದ್ದರೆ ಮಗುವು ಸಹ ಅವುಗಳನ್ನು ಕಲಿಯುತ್ತದೆ. ಜೀವನದಲ್ಲಿ ಅತ್ಯುತ್ತಮ ಗುಣಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಂತರದ ಹಂತದಲ್ಲಿ ವಿದ್ಯೆ ಕಲಿಸುವ ಗುರುವು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಮನುಷ್ಯನನ್ನು ಅತ್ಯಾಧುನಿಕ ವ್ಯಕ್ತಿಯನ್ನಾಗಿ ಮಾಡಲು ಉತ್ತಮ ಗುಣಗಳನ್ನು ಮತ್ತು ಅವರ ಬೋಧನೆಗಳನ್ನು ನೀಡುವವರು ಗುರುಗಳು.

ಒಬ್ಬ ವ್ಯಕ್ತಿಯ ಮೊದಲ ಗುರು ಅಥವಾ ಶಿಕ್ಷಕ ತಾಯಿ. ತಾಯಿ ಮಗುವಿಗೆ ಜೀವನದ ನಿಜವಾದ ಮೌಲ್ಯವನ್ನು ಅರ್ಥಮಾಡಿಸಿಕೊಡುತ್ತಾಳೆ. ಸರಿ ಮತ್ತು ತಪ್ಪುಗಳ ನಡುವೆ ಹೇಗೆ ವ್ಯತ್ಯಾಸವನ್ನು ತಿಳಿಸಿಕೊಡುವಳು. ಬಾಲ್ಯದಲ್ಲಿ ಅವಳು ನೈತಿಕ ಮೌಲ್ಯಗಳನ್ನು ಅವನಲ್ಲಿ ತುಂಬುತ್ತಾಳೆ, ಅದು ನಂತರ ಶಿಕ್ಷಕರ ರೂಪದಲ್ಲಿ ಬೋನಾಫೈಡ್ ಗುರುಗಳಿಂದ ತೆಗೆದುಕೊಳ್ಳಲ್ಪಡುತ್ತದೆ. ಆದ್ದರಿಂದ ನಮ್ಮ ಗುರುಗಳನ್ನು ಗೌರವಿಸುವ ಮೂಲಕ ಈ ದಿನದ ಆಚರಣೆ ಅತ್ಯಗತ್ಯವಾಗುತ್ತದೆ. ನಮ್ಮ ಗುರುಗಳು-ಪೋಷಕರು, ಶಿಕ್ಷಕರು ಮತ್ತು ನಮ್ಮ ಹಿತೈಷಿಗಳ ಸರಿಯಾದ ಬೋಧನೆಗಳು ಮತ್ತು ಆಶೀರ್ವಾದಗಳು ಮಾತ್ರ ನಮ್ಮನ್ನು ಸುಸಂಸ್ಕೃತ ಮತ್ತು ಪರಿಷ್ಕೃತ ವ್ಯಕ್ತಿಯನ್ನಾಗಿ ಮಾಡಬಹುದು.

ಗುರು ಪೂರ್ಣಿಮೆ ಆಚರಣೆಯ ಹಿಂದಿನ ಇತಿಹಾಸ

ಬೌದ್ಧಧರ್ಮ, ಹಿಂದೂ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಗುರು ಪೂರ್ಣಿಮ ಆಚರಣೆಯ ಹಿಂದೆ ಶ್ರೀಮಂತ ಇತಿಹಾಸವಿದೆ. ಗುರುವಿಗೆ ನಮನ, ಗುರುವಿನ ಸ್ಮರಣೆ ಹೀಗೆ ವಿವಿಧ ಸಂಗತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನದ ಮುಂದಿನ ಭಾಗ ತೆರೆದಿಡುವುದು.

ಬೌದ್ಧ ಧರ್ಮದಲ್ಲಿ ಗುರು ಪೂರ್ಣಿಮೆ

ಈ ಧರ್ಮಕ್ಕೆ ಅಡಿಪಾಯ ಹಾಕಿದ ಭಗವಾನ್ ಬುದ್ಧನಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ಹುಣ್ಣಿಮೆಯ ದಿನದಂದು, ಭಗವಾನ್ ಬುದ್ಧಗಾಯದಲ್ಲಿನ ಬೋಧಿ ಮರದ ಕೆಳಗೆ ಜ್ಞಾನೋದಯ ಪಡೆದ ನಂತರ ಉತ್ತರ ಪ್ರದೇಶದ ಸಾರನಾಥದಲ್ಲಿ ತಮ್ಮ ಮೊದಲ ಧರ್ಮೋಪದೇಶವನ್ನು ನೀಡಿದರು ಎಂದು ಬೌದ್ಧರು ನಂಬುತ್ತಾರೆ. ಅಂದಿನಿಂದ, ಈ ಹಬ್ಬವನ್ನು ಆರಾಧಿಸಲು ಸಮರ್ಪಿಸಲಾಯಿತು.

ಬುದ್ಧನು ತನಗೆ ಜ್ಞಾನೋದಯವಾಗಿ ೫ ವಾರಗಳ ನಂತರ ಬೋಧಗಯಾ ಇಂದ ಸಾರನಾಥಕ್ಕೆ ಹೋದನು. ಜ್ಞಾನೋದಯಕ್ಕಿಂತ ಮುಂಚೆ (ಬುದ್ಧನಾಗಬೇಕಿದ್ದ) ಗೌತಮನು ತಾನು ಮಾಡುತ್ತಿದ್ದ ತೀವ್ರ ತಪಸ್ಸನ್ನು ಒಂದು ದಿನ ಬಿಟ್ಟು ಬಿಟ್ಟ. ಆಗ ಅವನ ಗೆಳೆಯರಾದ ಪಂಚವಗ್ಗೀಯ ಸನ್ಯಾಸಿಗಳು ಗೌತಮನನ್ನು ಬಿಟ್ಟು ಇಸಿಪತನ (ಸಾರನಾಥ್)ಗೆ ಹೋದರು. ಬುದ್ದನಿಗೆ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಆ ತನ್ನ ಐದು ಸಂಗಾತಿಳು ಧರ್ಮ ಬೋಧನೆಗೆ ಯೋಗ್ಯರಾದವರು ಎಂದು ತಿಳಿದಿದ್ದರಿಂದ ತನಗೆ ಜ್ಞಾನೋದಯವಾದ ನಂತರ ಅವರನ್ನು ಹುಡುಕಿಕೊಂಡು ಉರುವೇಲಾಯಿಂದ ಇಸಿಪತನಕ್ಕೆ ಹೊರಟನು. ಸಾರನಾಥಕ್ಕೆ ಹೋಗುವಾಗ ಗಂಗಾ ನದಿಯನ್ನು ದಾಟಬೇಕಾಯಿತು. ನಾವಿಕರಿಗೆ ಕೊಡಲು ದುಡ್ಡು ಇಲ್ಲದ ಕಾರಣ ಗೌತಮ ಬುದ್ಧನು ಗಂಗಾ ನದಿಯನ್ನು ಗಾಳಿಯಲ್ಲಿಯೇ ದಾಟಿದನು. ಇದನ್ನು ಕೇಳಿದ ಅಲ್ಲಿನ ರಾಜಾ ಬಿಂಬಸಾರನು ನದಿ ದಾಟುವ ಸನ್ಯಾಸಿಗಳಿಗೆ ಯಾವುದೇ ರೀತಿಯ ಹಣ ಕೇಳಬಾರದೆಂದು ಆದೇಶ ಹೊರಡಿಸಿದನು. ಗಂಗಾ ನದಿ ದಾಟಿ ಅವನ ಹಳೆಯ ಸಂಗಾತಿಗಳು ಮತ್ತೆ ಸಿಕ್ಕಾಗ ಗೌತಮ ಬುದ್ಧನು ಅವರಿಗೆ ಧರ್ಮ ಬೋಧನೆ ಮಾಡಿದನು. ಅದನ್ನು ಸ್ವೀಕರಿಸಿ ಅರ್ಥ ಮಾಡಿಕೊಂಡ ಆ ಸಂಗಾತಿಗಳಿಗೂ ಜ್ಞಾನೋದಯವಾಯಿತು. ಅವರಿಂದ ಸಂಘ ಎಂಬ ಜ್ಞಾನೋದಯವಾದವರ ಪಂಗಡ ಶುರುವಾಯಿತು. ಅಂದು ಬುದ್ಧ ನೀಡಿದ ಬೋಧನೆ ಅವನ ಮೊದಲನೇಯ ಬೋಧನೆಯಾಗಿದ್ದು ಅದನ್ನು ಧಮ್ಮಚಕ್ಕಪ್ಪವತ್ತನ ಸುತ್ತ (ಧರ್ಮಚಕ್ರ ಪ್ರವರ್ತನ ಸೂತ್ರ) ಎಂದು ಕರೆಯಲಾಗುತ್ತದೆ. ಇದು ನಡೆದಿದ್ದು ಆಷಾಢ ಪೂರ್ಣಿಮೆಯ ದಿನ

ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮೆ

ಹಿಂದೂ ಪುರಾಣದ ಪ್ರಕಾರ, ಈ ದಿನ ಶಿವನು ಯೋಗದ ಜ್ಞಾನವನ್ನು ಏಳು ಅನುಯಾಯಿಗಳಿಗೆ ಅಥವಾ "ಸಪ್ತಾರಿಶಿಗಳಿಗೆ" ರವಾನಿಸುವ ಮೂಲಕ ಗುರುನಾದನೆಂದು ನಂಬಲಾಗಿದೆ. ಅಂದಿನಿಂದ, ಹಿಂದೂ ಭಕ್ತರು ಈ ದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸುತ್ತಾರೆ.
ಹಿಂದೂ ಧರ್ಮದಲ್ಲಿ, ಗುರು ಪೂರ್ಣಿಮವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಈ ದಿನದಂದು ವೇದ ವ್ಯಾಸ ಮಹಾನ್ ಋಷಿ ಜನಿಸಿದರು. ಅವರನ್ನು ಹಿಂದೂ ಸಂಪ್ರದಾಯಗಳಲ್ಲಿ ಅತ್ಯಂತ ಪ್ರಭಾವಶಾಲಿ ಗುರುಗಳು ಮತ್ತು ಗುರು-ಶಿಷ್ಯ ಪದ್ಧತಿಯ ಸಾರಾಂಶವೆಂದು ಕರೆಯಲಾಗುತ್ತದೆ. ಅವರು ತಮ್ಮ ಪ್ರಸಿದ್ಧ ಕೃತಿ ಬ್ರಹ್ಮ ಸೂತ್ರದ ಬರವಣಿಗೆಯನ್ನು ಈ ದಿನದಂದು ಮುಗಿಸಿದರು ಎಂಬ ನಂಬಿಕೆಯೂ ಇದೆ. ಅವರ ಶಿಷ್ಯರು ಈ ದಿನದಂದು ಈ ಸೂತ್ರಗಳನ್ನು ಪಠಿಸುತ್ತಾರೆ ಮತ್ತು ಅವರ ಕೆಲಸದ ಬಗ್ಗೆ ಅವರ ಸಮರ್ಪಣೆ ಮತ್ತು ಗೌರವವನ್ನು ಸೂಚಿಸುತ್ತಾರೆ.

ಜೈನ ಧರ್ಮದಲ್ಲಿ ಗುರು ಪೂರ್ಣಿಮೆ

ಜೈನ ಧರ್ಮದ ಪ್ರಸಿದ್ಧ 24 ನೇ ತೀರ್ಥಂಕರರಾದ ಮಹಾವೀರನನ್ನು ಗೌರವಿಸಲು ಗುರು ಪೂರ್ಣಿಮಾವನ್ನು ತ್ರಿನೋಕ್ ಗುಹಾ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಈ ದಿನ ಮಹಾವೀರನು ತನ್ನ ಮೊದಲ ಅನುಯಾಯಿ ಗೌತಮ್ ಸ್ವಾಮಿಯನ್ನು ಪಡೆದನೆಂದು ಜೈನ ಧರ್ಮದ ಅನುಯಾಯಿಗಳು ನಂಬುತ್ತಾರೆ. ನಂತರ ಅವರು ತ್ರಿನೋಕ್ ಗುಹಾ ಆದರು ಎಂಬ ನಂಬಿಕೆಯನ್ನು ಹೊಂದಿದ್ದಾರೆ.

ಗುರು ಪೂರ್ಣಿಮೆ ಆಚರಣೆಗಳು:

ಗುರು ಪೂರ್ಣಿಮಾವನ್ನು ದೇಶಾದ್ಯಂತ ಸಂತೋಷ ಮತ್ತು ಚೈತನ್ಯದಿಂದ ಆಚರಿಸಲಾಗುತ್ತದೆ. ಈ ದಿನವು ಕೇವಲ ಮೂರು ಧರ್ಮಗಳಿಗೆ (ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಜೈನ ಧರ್ಮ) ಮಾತ್ರ ಸೀಮಿತವಾಗಿಲ್ಲ. ಇತರ ಧರ್ಮದ ಜನರು ಈ ಹಬ್ಬದ ಆಚರಣೆಯನ್ನು ನಡೆಸುತ್ತಾರೆ. ಪ್ರತಿಯೊಂದು ಧರ್ಮದಲ್ಲೂ ವಿಭಿನ್ನತೆ ಇರುವುದನ್ನು ಕಾಣಬಹುದು. ಶಿಷ್ಯರು ತಮ್ಮ ಗುರುಗಳ ಸ್ಮರಣಾರ್ಥವಾಗಿ ನಡೆಸುವ ಧಾರ್ಮಿಕ ಚಟುವಟಿಕೆಗಳೊಂದಿಗೆ ದಿನವು ಪ್ರಾರಂಭವಾಗುತ್ತದೆ. ಜನರು ತಮ್ಮ ಪೂಜೆಯನ್ನು ತಮ್ಮ ಮನೆಗಳಲ್ಲಿ ಅಥವಾ ದೇವಾಲಯದಲ್ಲಿ ತಮ್ಮ ಗುರುಗಳ ಹೆಸರಿನಲ್ಲಿ ನಡೆಸುತ್ತಾರೆ.

ಶಿಕ್ಷಣ ಸಂಸ್ಥೆಗಳಲ್ಲಿ, ಶಾಲೆಗಳು ಮತ್ತು ಕಾಲೇಜುಗಳಂತೆ, ಗುರು ಪೂರ್ಣಿಮಾವನ್ನು ಶಿಕ್ಷಕರಿಗೆ ಕೃತಜ್ಞರಾಗಿರುವ ಮೂಲಕ ಆಚರಿಸಲಾಗುತ್ತದೆ ಮತ್ತು ಅವರ ಬೋಧನೆ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಈ ದಿನ ಅನೇಕ ಶಿಕ್ಷಣ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿವೆ. ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಭೇಟಿ ಮಾಡಲು ಮತ್ತು ಅವರಿಗೆ ಉಡುಗೊರೆಗಳನ್ನು ನೀಡಲು ಭೇಟಿ ನೀಡುತ್ತಾರೆ.

ಹಿಂದೂ ಸನ್ಯಾಸಿಗಳು ಅಥವಾ ಸನ್ಯಾಸಿಗಳು ಸಹ ಚತುರ್ಮಾಸ್ ಸಂದರ್ಭದಲ್ಲಿ ತಮ್ಮ ಗುರುಗಳ ಗೌರವಾರ್ಥವಾಗಿ ಪೂಜೆ ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಕೆಲವರು ಪ್ರತ್ಯೇಕತೆಗೆ ಒಳಗಾಗುತ್ತಾರೆ ಮತ್ತು ತಮ್ಮನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸಿದರೆ, ಇನ್ನೂ ಕೆಲವರು ಧರ್ಮೋಪದೇಶವನ್ನು ಸಾರ್ವಜನಿಕರಿಗೆ ನೀಡುತ್ತಾರೆ. ಗೀತ ಮತ್ತು ನೃತ್ಯದ ಭಾರತೀಯ ಶಾಸ್ತ್ರೀಯ ಪ್ರಕಾರಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಈ ಉತ್ಸವವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

English summary

Guru Purnima 2019:Significance and History

Guru Purnima is an auspicious occasion to pay remembrance to our gurus and seek their blessings. The word “Guru’ is ironic in meaning as ‘Gu’ means darkness and ‘ru’ signifies the elimination of darkness. So, together they make a true sense and depict guru as the one who enlightens our mind and soul, and removes all the darkness from our lives. This festival is predominantly, observed by the Hindus, Jains, and the Buddhists on a full moon day of the Shaka Samvat every year in accordance with Panchanga or the Hindu calendar. On this day, the devotees commemorate and worship their gurus and teachers, and also thank them for their wisdom and teachings. This year, the big day was celebrated all over India, it is expected to be celebrated on July 16.
X
Desktop Bottom Promotion