For Quick Alerts
ALLOW NOTIFICATIONS  
For Daily Alerts

ಗುರು ನಾನಕ್‌ ಜಯಂತಿ: ಈ ದಿನ ಸಿಖ್‌ರು ಪಾಕಿಸ್ತಾನದ ಕರ್ತಾಪುರಕ್ಕೆ ಭೇಟಿ ನೀಡುವುದೇಕೆ ಗೊತ್ತಾ?

|

ಸಿಖ್‌ರ ಪ್ರಮುಖ ಆಚರಣೆಗಳಲ್ಲಿ ಒಂದಾದ ಗುರು ನಾನಕ್‌ ಜಯಂತಿಯನ್ನು ನವೆಂಬರ್ 27ರಂದು ಆಚರಿಸಲಾಗುವುದು. ಗುರು ನಾನಕ್ ಜಯಂತಿಯನ್ನು ತುಂಬಾನೇ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು.

Guru Nanak Jayanti

ಗುರು ನಾನಕ್ ಜಯಂತಿಯನ್ನು ಪ್ರತೀವರ್ಷ ಕಾರ್ತಿಕ ಪೂರ್ಣಿಮೆಯ ದಿನ ಆಚರಿಸಲಾಗುವುದು.

ಗುರು ನಾನಕ್ ಜಯಂತಿ ಮಹತ್ವ

ಗುರು ನಾನಕ್ ಜಯಂತಿ ಮಹತ್ವ

ಗುರು ನಾನಕ್‌ ಜಯಂತಿಯನ್ನು ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತಿದ್ದು ಈ ದಿನದಂದು ಸಿಖ್‌ ಧರ್ಮದಲ್ಲಿ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡಲಾಗುವುದು. ಈ ಆಚರಣೆಯನ್ನು ಗುರು ಪರ್ಬ ಎಂದು ಕರೆಯಲಾಗುವುದು. ಗುರು ನಾನಕ್‌ ಸಿಖ್‌ ಧರ್ಮದ ಮೊದಲು ಗುರು, ಇವರು ಜನಿಸಿದ ದಿನವನ್ನು ಗುರು ನಾನಕ್ ದಿನವನ್ನಾಗಿ ಆಚರಿಸಲಾಗುವುದು. ಈ ಬಾರಿ ಗುರುನಾನಕ್ ಅವರ 553ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.

ಯಾರಿವರು ಗುರು ನಾನಕ್ ?

ಯಾರಿವರು ಗುರು ನಾನಕ್ ?

ಗುರು ನಾನಕ್ ಅವರು ಸಿಖ್‌ ಧರ್ಮದ ಮೊದಲ ಗುರುವಾಗಿದ್ದಾರೆ. ಇವರು ಆಗ ಅಖಂಡ ಭಾರತವಾಗಿದ್ದ ತಲ್ವಾಂಡಿಯಲ್ಲಿ ಜನಿಸಿದರು (ಈಗ ಆ ಜಾಗ ಪಾಕಿಸ್ತಾನಕ್ಕೆ ಸೇರಿದೆ). ಆ ಸ್ಥಳದಲ್ಲಿ ನಂಕಾನಾ ಸಾಹಿಬ್ ಎಂಬ ಗುರುದ್ವಾರವಿದೆ. ಗುರುನಾನಕ್ ದೇವ್ ಅವರಿಗೆ 16ನೇ ವಯಸ್ಸಿನಲ್ಲಿ ವಿವಾಹ ಮಾಡಲಾಗುತ್ತೆ. ಇವರು ಸಿಖ್‌ ಧರ್ಮದ ಉದಯಕ್ಕೆ ಅಡಿಪಾಯ ಹಾಕುತ್ತಾರೆ. ಅದಾದ ಬಳಿಕ ವಿಶ್ವದ ಹಲವು ಭಾಗಗಳಿಗೆ ತಮ್ಮ ಸಹಚರರ ಜೊತೆ ಅಫ್ಘಾನಿಸ್ತಾನ, ಪರ್ಷಿಯಾ ಮತ್ತು ಅರೇಬಿಯಾದ ಮುಂತಾದ ದೇಶಗಳಿಗೆ ಹೋಗಿ ಬರುತ್ತಾರೆ. ಇವರೊಬ್ಬ ಸಂತರಾಗಿದ್ದರು, ತಮ್ಮ ಇಡೀ ಜೀವನವನ್ನು ಸಮಾಜದ ಸುಧಾರಣೆಗೆ ಮೀಸಲಿಡುತ್ತಾರೆ. ತಮ್ಮ ಜೀವನದ ಕೊನೆಯ ಸಮಯವನ್ನು ಕರ್ತಾರ್‌ಪುರದಲ್ಲಿ ಕಳೆಯುತ್ತಾರೆ, ಅಲ್ಲಿಯೇ ಮರಣವೊಂದುತ್ತಾರೆ. ಹಾಗಾಗಿ ಪಾಕಿಸ್ತಾನದ ಕರ್ತಾರ್‌ಪುರ ಸಾಹಿಬ್‌ಗೆ ಈಗಲೂ ತುಂಬಾನೇ ಮಹತ್ವವಿದೆ.

ಇವರ ನಿಸ್ವಾರ್ಥ ಸೇವೆ

ಇವರ ನಿಸ್ವಾರ್ಥ ಸೇವೆ

ಸಮಾಜಕ್ಕೆ ಇವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಈಗಲೂ ನೆನೆಸಲಾಗುತ್ತೆ. ಇವರು ಸಾಮಾಜಿಕ ನ್ಯಾಯ, ಮಾನವೀಯತೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಈ ವಿಶೇಷ ದಿನ ಗುರುದ್ವಾರಗಳಲ್ಲಿ ಅಖಂಡ ಪಥವನ್ನು ನಿರಂತರ 48 ಗಂಟೆ ಪಠಿಸಲಾಗುವುದು. ಸಿಖ್‌ರು ಗುರು ನಾನಕ್ ಜಯಂತಿ ದಿನ ಕರ್ತಾರ್‌ಪುರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ, ಸಿಖ್‌ರ ಆ ಪವಿತ್ರ ಕ್ಷೇತ್ರಕ್ಕೆ ತೆರಳಲು ಕರ್ತಾರ್‌ಪುರ ಕಾರಿಡಾರ್‌ ನಿರ್ಮಿಸಲಾಗಿದೆ.

ಗುರು ನಾನಾಕ್‌ರವರ ನೆನಪಿಗಾಗಿ ರಾವಿ ನದಿ ದಂಡೆಯಲ್ಲಿ ಸ್ಮಾರಕ ಕೂಡ ಇದೆ.

English summary

Guru Nanak Jayanti 2023: Date, history, significance in Kannada

Guru Nanak Jayanti 2022: here are date and histroy, significance of this special day read on....
X
Desktop Bottom Promotion