For Quick Alerts
ALLOW NOTIFICATIONS  
For Daily Alerts

ಗುರು ಗೋವಿಂದ ಸಿಂಗ್‌ ಜಯಂತಿ 2022: ಧರ್ಮರಕ್ಷಣೆಗಾಗಿ ಈ ಗುರು ಸಿಖ್‌ರಿಗೆ ನೀಡಿದರು ಖಾಲ್ಸಾ ದೀಕ್ಷೆ

|

ಸಿಖ್‌ 10ನೇ ಹಾಗೂ ಕೊನೆಯ ಗುರುವಾದ ' ಗುರು ಗೋಬಿಂದ್ ಸಿಂಗ್‌ ' ಪೌಷ್ ಮಾಸದ, ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಜನಿಸಿದರು. ಈ ವರ್ಷ 'ಗುರು ಗೋಬಿಂದ್ ಸಿಂಗ್' ಅವರ ಜನ್ಮದಿನವನ್ನು ಜನವರಿ 9, 2022ರಂದು ಆಚರಿಸಲಾಗುವುದು. ಗ್ರೆಗೋರಿಯನ್‌ ಕ್ಯಾಲೆಂಡರ್ ಪ್ರಕಾರ ದಿನಾಂಕ ಪ್ರತಿವರ್ಷ ಬದಲಾಗುತ್ತಿರುತ್ತದೆ. ಈ ದಿನ ಸಿಖ್‌ರ ಪಾಲಿಗೆ ಪವಿತ್ರವಾದ ದಿನವಾಗಿದ್ದು ಸಿಖ್‌ರು ಈ ದಿನವನ್ನು ತುಂಬಾ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಲಾಗುವುದು.

Guru Gobind Singh

ಈ ವರ್ಷ ಗುರು ಗೋಬಿಂದ್‌ ಸಿಂಗ್‌ ಅವರ 355ನೇ ಜನ್ಮ ದಿನವನ್ನು ಆಚರಿಸಲಾಗುವುದು. ಇವರು ಸಿಖ್‌ ಪಂಥಕ್ಕೆ ಹೊಸ ತಿರುವು ನೀಡಿದವರು. ಸಿಖ್‌ ಧರ್ಮದ ಗುರು ಪಂಕ್ತಿಯಲ್ಲಿ ಗೋಬಿಂದ ಸಿಂಗ್‌ರು ಹತ್ತನೇ ಹಾಗೂ ಕೊನೆಯ ಗುರು. ಗುರು ನಾನಕ್‌ರು ಸಿಖ್‌ ಪಂಥದ ಸ್ಥಾಪಕರು, ಅವರು ಗುರು ಅಂಗದರನ್ನು ನೇಮಿಸುವಾಗ ಅದರಲ್ಲಿ ತಮ್ಮ ಆತ್ಮವನ್ನು ಇರಿಸಿದರು. ಗುರುತ್ವ ಗುರುವಿನಿಂದ ಗುರುವಿಗೆ ಸಾಗಿತ್ತು, ಗುರು ಗೋಬಿಂದ ಸಿಂಗ್‌ರು ಹತ್ತನೇ ಗುರುವಾದರು. ಅವರು ತಮ್ಮ ದೇಹ ತ್ಯಾಗ ಮಾಡುವ ಮುನ್ನ "ನನ್ನ ಬಳಿಕ ಯಾವುದೇ ವ್ಯಕ್ತಿ ಗುರುವಾಗಿ ಇರುವುದಿಲ್ಲ, ಗುರುವಾಣಿಯಾದ ಆದಿಗ್ರಂಥದಲ್ಲಿ ಗುರುತ್ವ ಇರುತ್ತದೆ' ಎಂದು ಹೇಳಿ ಇಹಲೋಕ ತ್ಯಜಿಸಿದರು. ಅಲ್ಲಿಂದ ಸಿಖ್‌ರು ತಮ್ಮ ಪೂಜ್ಯ ಗ್ರಂಥವಾದ ' ಗ್ರಂಥ್‌ ಸಾಹಿಬ್‌' ಅನ್ನೇ ಗುರುವಾಗಿ ಸ್ವೀಕರಿಸಿದರು.

ಗುರು ಗೋಬಿಂದ ಸಿಂಗ್‌ ಅವರು ಅಪತ್ರಿಮ ವೀರರಾಗಿದ್ದರು, ಇವರಿಗೆ ಕಠಾರಿ ವಿದ್ಯೆ, ಬಿಲ್ಲು ವಿದ್ಯೆ ಹಾಗೂ ಹೋರಾಟದ ವಿವಿಧ ಆಯಾಮಗಳನ್ನು ಬಲ್ಲವರಾಗಿದ್ದರು. ಅವರು ಬಾಲಕನಾಗಿದ್ದಾಗ ಅವರ ತಂದೆಯನ್ನು ಔರಂಗಜೇಬ ಕೊಂದಿದ್ದನು. ಆಗ ಅವರಿಗೆ ಹಿಂದುಗಳು ತಮಮ್ ಕ್ಷತ್ರೀಯ ಬಲ ತೋರದಿದ್ದರೆ ತಮಗೆ ಉಳಿಗಾಲವಿಲ್ಲ ಎಂದರ್ಥ ಅವರು ಯುದ್ಧಕ್ಕೆ ಅವಶ್ಯಕವಾದ ಎಲ್ಲಾ ಬಗೆಯ ವಿದ್ಯೆಯನ್ನು ಕಲಿತು. ಸಾಧು ಸ್ವಭಾವದ ಸಿಖ್‌ರನ್ನು ವೀರ ಕ್ಷತ್ರೀಯರನ್ನಾಗಿ ಪರಿವರ್ತಿಸಿದವರು ಗುರು ಗೋಬಿಂದ್‌ ಸಿಂಗ್‌.
1699ರಲ್ಲಿ ಬೈಸಾಖಿ ಹಬ್ಬದಂದು ಪಂಜಾಬಿನ ಆನಂದ ಪುರದಲ್ಲಿ ತನ್ನ ಅನುಯಾಯಿಗಳನ್ನು ಸೇರಿಸಿದ ಗುರು ಗೋಬಿಂದ್ ಸಿಂಗ್‌ 'ನಮ್ಮ ಧರ್ಮ ರಕ್ಷಣೆಗಾಗಿ ಬಿಲಿ ನೀಡಬೇಕಾಗಿದೆ, ಜೀವ ಬಲಿ ಕೊಡಲು ಸಿದ್ಧವಿರುವವರು ಮುಂದೆ ಬನ್ನಿ' ಎಂದು ಹೇಳುತ್ತಾರೆ. ಗುರುವಿನ ಪ್ರಶ್ನೆಗಳಿಗೆ ಎಲ್ಲರೂ ಮುಖ-ಮುಖ ನೋಡುತ್ತಾರೆ, ಆಗ ಅವರು ಮತ್ತೊಮ್ಮೆ ಆ ಮಾತುಗಳನ್ನು ಹೇಳುತ್ತಾರೆ, ಆಗ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಮುಂದೆ ಬರುತ್ತಾನೆ, ಆ ವ್ಯಕ್ತಿಯನ್ನು ಅಲ್ಲಿದ್ದ ಡೇರೆ ಒಳಗಡೆ ಕೊಂಡೊಯ್ಯದ್ದ ಗುರು ಗೋಬಿಂದ್ ಸಿಂಗ್ ಕೈಯಲ್ಲಿ ರಕ್ತವಿರುವ ಖಡ್ಗದೊಂದಿಗೆ ಹೊರ ಬರುತ್ತಾರೆ, ಎಲ್ಲರೂ ಆ ವ್ಯಕ್ತಿ ಬಲಿಯಾದರು ಎಂದೇ ಯೋಚಿಸುತ್ತಾರೆ, ನಾನು ಬಲಿಗೆ ಸಿದ್ಧ ಎಂದು ಮತ್ತೊಂದು ವ್ಯಕ್ತಿ ಬರುತ್ತಾರೆ, ಅವರನ್ನು ಒಳಗಡೆ ಕೊಂಡೊಯ್ಯದ್ದ ಗುರು ರಕ್ತವಿರುವ ಖಡ್ಗದೊಂದಿಗೆ ಹೊರ ಬರುತ್ತಾರೆ, ಹೀಗೆ 5 ಜನ ಮುಂದೆ ಬರುತ್ತಾರೆ.

ಆದರೆ ಗುರು ಅವರನ್ನು ಬಲಿ ನೀಡಿರುವುದಿಲ್ಲ, ಅವರನ್ನು ಡೇರೆಯಿಂದ ಹೊರಗಡೆ ಕರೆದುಕೊಂಡು ಬರುತ್ತಾರೆ, ಧರ್ಮಕ್ಕಾಗಿ ಪ್ರಾಣ ನೀಡಲು ಬಂದ ಅವರಿಗೆ 'ಪಂಚ್ ಪ್ಯಾರೇ' ಎಂದು ಕರೆಯಲಾಗುತ್ತದೆ, ಅಲ್ಲದೆ ಎಲ್ಲರ ಹೆಸರಿನ ಮುಂದೆ ಸಿಂಗ್ (ಸಿಂಹ) ಎಂದು ಸೇರಿಸಿದರು.

ಸಿಖ್‌ರು ಕೇಶ ಬಿಡಬೇಕು, ಕಂಘ, ಕಡ, ಕಚ್ಛಾ, ಕೃಪಾಣ ಇವುಗಳನ್ನು ಧರಿಸಬೇಕು ಎಂಬ ನಿಯಮ ತಂದರು, ಅಲ್ಲದೆ ಸಿಖ್‌ರ ಗ್ರಂಥವಾದ ಗುರು ಸಾಹಿಬ್ ಮಾತ್ರ ನಿಮ್ಮ ಗುರು ಎಂದು ಘೋಷಿಸಿದರು. ಸಿಖ್‌ರಿಗೆ ಧರ್ಮ ರಕ್ಷಣೆಗಾಗಿ ಖಾಲ್ಸಾ ದೀಕ್ಷೆ ನೀಡಿದರು. ಸಿಖ್‌ರನ್ನು ವೀರರನ್ನಾಗಿ ಮಾಡಿದರು. ಎಲ್ಲಿ ಐವರು ಸಿಖ್‌ರಿರುತ್ತಾರೋ ಅಲ್ಲಿ ದೇವರು ಇರುತ್ತಾರೆ ಎಂದು ಹೇಳಲಾಗುವುದು,.

English summary

Guru Gobind Singh Jayanti 2022 Date, History and Significance in kannada

Guru Gobind Singh Jayanti 2022 Date, History and Significance in kannada, read on.. .
Story first published: Friday, January 7, 2022, 19:50 [IST]
X
Desktop Bottom Promotion