For Quick Alerts
ALLOW NOTIFICATIONS  
For Daily Alerts

ಸ್ನೇಹ ಅಮೂಲ್ಯ ಮತ್ತು ನಿಸ್ವಾರ್ಥ

|
Kannada Zen story
10 ಜನರಿರುವ ಗುಂಪೊಂದು ದಟ್ಟ ಕಾಡಿನೊಳಗೆ ಪ್ರವೇಶಿಸಿತು. ಹೀಗೆ ನಡೆಯುತ್ತಿರುವಾಗ ದಾರಿ ತಪ್ಪಿ ಬೇರೆ ದಾರಿಯಲ್ಲಿ ಸಾಗಿ ಮರುಭೂಮಿ ತಲುಪಿದರು. ಅವರಿಗೆ ತುಂಬಾ ಬಾಯಾರಿಕೆಯಾಯಿತು. ಎಲ್ಲಾದರೂ ನೀರು ಸಿಗಬಹುದೇ ಎಂದು ಒಬ್ಬೊಬ್ಬರೂ ಒಂದೊಂದು ದಿಕ್ಕಿನಲ್ಲಿ ಹುಡುಕಲಾರಂಭಿಸಿದರು.

ಅದರಲ್ಲಿ ಇಬ್ಬರು ಜೊತೆ ಸೇರಿ ತುಂಬಾ ದೂರ ನಡೆದರು. ಎಲ್ಲಿಯೂ ನೀರು ಕಾಣಲಿಲ್ಲ. ಹೀಗೆ ನಡೆದು ತುಂಬಾ ದೂರ ಸಾಗಿದಾಗ ಒಂದು ದೂರದಲ್ಲಿ ನೀರು ಹರಿಯುತ್ತಿರುವ ಶಬ್ದ ಮತ್ತು ಪಕ್ಷಿಗಳ ಇಂಚರ ಕೇಳಿ ಬಂದಿತು. ಅವರರಿಬ್ಬರು ಆ ದಿಕ್ಕಿನತ್ತ ಸಾಗಿದರು. ಆಗ ಒಂದು ದೊಡ್ಡದಾದ ಗೋಡೆಯಿತ್ತು ಅದರಾಚೆಗೆ ನೀರು ಮತ್ತು ಹಣ್ಣುಗಳ ಮರ ಕಾಣಿಸಿದವು.

ಗೋಡೆಯನ್ನು ಕಷ್ಟಪಟ್ಟು ಏರಿ, ಆಚೆ ಕಡೆಗೆ ಜಿಗಿದು ಕೊಳದ ಸಮೀಪಕ್ಕೆ ನೀರು ಕುಡಿಯಲು ಓಡೋಡಿ ಬಂದರು. ಬಗ್ಗಿ ನೀರನ್ನು ಬೊಗಸೆಯಷ್ಟು ತೆಗೆದು ಇನ್ನೇನು ಕುಡಿಯಬೇಕು ಅನ್ನುವಷ್ಟರಲ್ಲಿ ಅವರ ಜೊತೆ ಬಂದ ಇತರ ಸ್ನೇಹಿತರನ್ನು ನೆನಪಾಯಿತು. ತಕ್ಷಣವೆ ಕೊಳದಿಂದ ಹಿಂದೆಕ್ಕೆ ಬಂದು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ನಂತರ ಕುಡಿಯುವ ಎಂದು ಹಿಂತಿರುಗಿದರು.

ನಿಜವಾದ ಸ್ನೇಹ ನಿಸ್ವಾರ್ಥ ಮತ್ತು ಅಮೂಲ್ಯವಾದದು ಅನ್ನುವುದು ಇದಕ್ಕೆ.

English summary

Kannada Zen story | Inspirational short stories | ಝೆನ್ ಕಥೆ : ಸ್ನೇಹ ನಿಸ್ವಾರ್ಥ ಮತ್ತು ಅಮೂಲ್ಯKannada Zen story, Inspirational short stories, ಝೆನ್ ಕಥೆ : ಸ್ನೇಹ ನಿಸ್ವಾರ್ಥ ಮತ್ತು ಅಮೂಲ್ಯ

One friends group were lost while traversing a desert. Hunger and thirst took on to them. Ultimately they came face to face with a wall.
X
Desktop Bottom Promotion