For Quick Alerts
ALLOW NOTIFICATIONS  
For Daily Alerts

ಗೌರಿ ಹಬ್ಬ 2022: ಗೌರಿ ಬಾಗಿನದಲ್ಲಿ ಇಡುವ ವಸ್ತುಗಳು, ಮಹತ್ವ ಹಾಗೂ ಬಾಗಿನ ನೀಡುವ ವಿಧಾನ

|

ಹೆಣ್ಣು ಮಕ್ಕಳಿಗೆ ಮೀಸಲಾದ ಹಬ್ಬಗಳಲ್ಲಿ ಪ್ರಮುಖ ಹಬ್ಬ ಗೌರಿ ಹಬ್ಬ. ಈ ಹಬ್ಬದಂದು ವಿವಾಹಿತ ಮಹಿಳೆಯರು ತನ್ನ ತಾಯಿ, ಅತ್ತಿಗೆಗೆ ಬಾಗಿನ ನೀಡಿ, ಮುತ್ತೈದೆಯರಿಗೆ ಅರಿಶಿನ, ಕುಂಕುಮವನ್ನು ನೀಡುತ್ತಾರೆ. ಗೌರಿ ದೇವಿಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸಿದರೆ ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಜೊತೆಗೆ ಸಂಸಾರದಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ನೀಡಿ ಕಾಪಾಡುತ್ತಾಳೆ ಎಂದು ಹೇಳಲಾಗುವುದು.

2022ನೇ ಸಾಲಿನಲ್ಲಿ ಗೌರಿಯು ಎಲ್ಲರ ಮನೆಗೂ ಆಗಸ್ಟ್‌ 30ರಂದು ಬರಲಿದ್ದು, ಈ ದಿನ ಮುತ್ತಯದೆಯರಿಗೆ ಬಾಗಿನ ನೀಡಿದರೆ ಶುಭಫಲ ಸಿಗುತ್ತದೆ ಎಂಬ ನಂಬಿಕೆ ಇದೆ.

ಗೌರಿ ಹಬ್ಬ ಎಂದರೆ ಹೆಚ್ಚು ಮಹತ್ವ ಪಡೆಯುವುದೇ ಬಾಗಿನ. ಈ ಬಾಗಿನವನ್ನು ಹೇಗೆ ಸಿದ್ಧಪಡಿಸಬೇಕು, ಬಾಗಿನದಲ್ಲಿ ಯಾವೆಲ್ಲಾ ವಸ್ತುಗಳನ್ನು ಇಡಬೇಕು, ಗೌರಿ ದೇವಿಯ ಕೃಪೆಗೆ ಒಳಗಾಗಲು ಸ್ವರ್ಣ ಗೌರಿ ವ್ರತವನ್ನು ಹೇಗೆ ಆಚರಿಸಬೇಕು, ಇದರ ವಿಧಿ-ವಿಧಾನಗಳೇನು, ಈ ವಿಶೇಷ ಹಬ್ಬದ ಕೆಲವು ಆಚರಣೆಯ ಬಗ್ಗೆ ತಿಳಿಯೋಣ.

ಗೌರಿ ಪೂಜೆ ಸಮಯ

ಗೌರಿ ಪೂಜೆ ಸಮಯ

2022 ಸಾಲಿನಲ್ಲಿ ಸ್ವರ್ಣ ಗೌರಿ ಪೂಜೆಯನ್ನು ಬಾಧ್ರಪದ ಮಾಸ ಶುಕ್ಲ ಪಕ್ಷದ ತದಿಗೆ ಅಂದರೆ ಆಗಸ್ಟ್‌ 30ರಂದು ಮಂಗಳವಾರ ಆಚರಿಸಲಾಗುತ್ತಿದೆ.ಪ್ರಾತಃಕಾಲ ಗೌರಿ ಪೂಜಾ ಶುಭ ಮುಹೂರ್ತ: ಬೆಳಗ್ಗೆ 6.08 ರಿಂದ 8.37ರಶುಭ ಮುಹೂರ್ತದಲ್ಲಿ ಗೌರಿ ಪೂಜೆ ಮಾಡಿದರೆ ಶುಭ ಲಭಿಸುತ್ತದೆ.

ಮೊರದ ಬಾಗಿನಕ್ಕೆ ಬೇಕಾಗುವ ಮಂಗಳದ್ರವ್ಯಗಳು

ಮೊರದ ಬಾಗಿನಕ್ಕೆ ಬೇಕಾಗುವ ಮಂಗಳದ್ರವ್ಯಗಳು

10 ಮೊರ

4 ವಿವಿಧ ಬೇಳೆಗಳ ಮಿಶ್ರಣ 3 ಕಪ್‌ (ತೊಗರಿ ಬೇಳೆ, ಕಡ್ಲೆ ಬೇಳೆ, ಹೆಸರು ಬೇಳೆ, ಉದ್ದಿನ ಬೇಳೆ, ಹೆಸರುಕಾಳು)

2 ಕಪ್ ಅಕ್ಕಿ

1/2 ಕಪ್ ಗೋಧಿ

ಬೆಲ್ಲ ಅಚ್ಚು 1

ಅರಿಶಿನ ಮತ್ತು ಕುಂಕುಮ

ಕಣ್ಣು ಕಪ್ಪು ಅಥವಾ ಕಪ್ಪಿನ ಡಬ್ಬಿ 1

1 ಡಜನ್ ಬಳೆ

1 ಜೋಡಿ ಓಲೆ

1 ಕರಿಮಣಿ

1 ಕನ್ನಡಿ

1 ಬಾಚಣಿಗೆ

1 ಬ್ಲೌಸ್‌ ಪೀಸ್‌ (ಕೆಂಪು ಅಥವಾ ಹಸಿರು)

ವೀಳ್ಯದ ಎಲೆ ಮತ್ತು ಅಡಿಕೆ

1 ತೆಂಗಿನಕಾಯಿ

ಬಾಳೆಹಣ್ಣು 2

ದಕ್ಷಿಣೆ ಕಾಸು

ಬಾಗಿನದಲ್ಲಿ ಇಡುವ ವಸ್ತುವಿನ ಅರ್ಥ ಹಾಗೂ ಅದರ ಸ್ವರೂಪ

ಬಾಗಿನದಲ್ಲಿ ಇಡುವ ವಸ್ತುವಿನ ಅರ್ಥ ಹಾಗೂ ಅದರ ಸ್ವರೂಪ

ಅರಿಶಿನ ಗೌರಿದೇವಿ, ಕುಂಕುಮ ಮಹಾಲಕ್ಷ್ಮಿ ಹಾಗೂ ಸಿಂಧೂರ ಸರಸ್ವತಿ ದೇವಿಯ ಸ್ವರೂಪ

ಕನ್ನಡಿ - ರೂಪ ಲಕ್ಷ್ಮಿ

ಬಾಚಣಿಗೆ - ಶೃಂಗಾರ ಲಕ್ಷ್ಮಿ

ಕಾಡಿಗೆ - ಲಜ್ಜಾಲಕ್ಷ್ಮಿ

ಅಕ್ಕಿ - ಶ್ರೀ ಲಕ್ಷ್ಮಿ

ತೊಗರಿ ಬೇಳೆ - ವರ ಲಕ್ಷ್ಮಿ

ಉದ್ದಿನ ಬೇಳೆ - ಸಿದ್ಧ ಲಕ್ಷ್ಮಿ

ತೆಂಗಿನ ಕಾಯಿ - ಸಂತಾನ ಲಕ್ಷ್ಮಿ

ವೀಳ್ಯದೆಲೆ - ಧನ ಲಕ್ಷ್ಮಿ

ಅಡಿಕೆ - ಇಷ್ಟಲಕ್ಷ್ಮಿ

ಫಲ ಹಣ್ಣು - ಜ್ಞಾನ ಲಕ್ಷ್ಮಿ

ಬೆಲ್ಲ - ರಸ ಲಕ್ಷ್ಮಿ

ಬಟ್ಟೆ - ವಸ್ತ್ರ ಲಕ್ಷ್ಮಿ

ಹೆಸರು ಬೇಳೆ - ವಿದ್ಯಾ ಲಕ್ಷ್ಮಿ

ಈ 16 ವಸ್ತುಗಳು ಬಾಗಿನದಲ್ಲಿ ಇಟ್ಟು ಕೊಡುವುದರಿಂದ 16 ಶೋಡಷ ಲಕ್ಷ್ಮಿಗೆ ಸಮ ಎಂದು ಹೇಳಲಾಗುತ್ತದೆ.

ಬಾಗಿನ ಸಿದ್ಧಪಡಿಸುವುದು ಹೇಗೆ?

ಬಾಗಿನ ಸಿದ್ಧಪಡಿಸುವುದು ಹೇಗೆ?

ಹೊಸದಾಗಿ ಖರೀದಿಸಿದ ಮೊರವನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ

ನಂತರ ಮೊರದ ಒಳಗೆ ಹಾಗೂ ಹೊರಗೆ ‍‍‍X ರೀತಿಯಲ್ಲಿ ಅರಿಶಿನವನ್ನು ಹಚ್ಚಿ ಮಧ್ಯದಲ್ಲಿ ಹಾಗೂ ಕೊನೆಗಳಲ್ಲಿ ಕುಂಕುಮ ಇಡಿ.

ಬೀಳ್ಯದೆಲೆ ಕನಿಷ್ಟ 2 ಎಲೆ ಕನಿಷ್ಠ 4 ಅಡಿಕೆ ಹಾಗೂ ತೆಂಗಿನ ಕಾಯಿ ಇಡಿ

ನಿಮ್ಮ ಅನುಕೂಲಕ್ಕೆ ತಕ್ಕಂತೆ ದಕ್ಷಿಣೆ ಕಾಸು ಇಡಿ (11,21,51,101,201...)

ಗ್ರಂಥಿಗೆ ಅಂಗಡಿಯಲ್ಲಿಸಿಗುವ ಗೌರಿ ಸಾಮಾನು ಇಡಿ (ಕಪ್ಪು ಬಳಿ, ಕನ್ನಡಿ, ಕಾಡಿಗೆ, ಅರಿಶಿನ, ಕುಂಕುಮ, ಬಾಚಣಿಗೆ)

ಒಂದು ಡಜನ್‌ ಬಳೆ, ಬ್ಲೌಸ್‌ ಪೀಸ್‌.

ಬೆಲ್ಲ, ಅಕ್ಕಿ, ತೊಗರಿಬೇಳೆ, ಹೆಸರುಬೇಳೆ, ಉದ್ದಿನ ಬೇಳೆ, ಕಡಲೆಬೇಳೆ, ಹೆಸರುಕಾಳು,

ಹಣ್ಣುಗಳು ಇಷ್ಟಕ್ಕೆ ತಕ್ಕಂತೆ ಇಡಬಹುದು

ಮತ್ತೊಂದು ಮೊರವನ್ನು ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಇಡಿ.

ಅಂತಿಮವಾಗಿ ಮೊರವನ್ನು ದಾರದಿಂದ ಕಟ್ಟಬೇಕು.

ನಿಮಗೆ ಇಷ್ವಾದಂತೆ ಮೊರವನ್ನು ಅಲಂಕರಿಸಬಹುದು.

ಬಾಗಿನ ನೀಡುವ ವಿಧಾನ

ಬಾಗಿನ ನೀಡುವ ವಿಧಾನ

* ನಾಗರಪಂಚಮಿಯಂದು ಸಹೋದರಿಯರು ತಮ್ಮ ಸಹೋದರರಿಗೆ ಮನೆಗೆ ಕರೆದು ಉಪಚಾರ ಮಾಡುತ್ತಾರೆ, ರಕ್ಷಾ ಬಂಧನ ಕಟ್ಟಿ ತಮ್ಮ ಸಹೋದರನ ಏಳ್ಗೆಗಾಗಿ ಪ್ರಾರ್ಥಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಮುಂದಿನ ಗೌರಿ ಹಬ್ಬದಲ್ಲಿ ಸಹೋದರಿಯನ್ನು ಕರೆದು ಉಪಚಾರ ಮಾಡಿ, ದಕ್ಷಿಣೆ ನೀಡಿ ಕಳುಹಿಸಬೇಕು ಎಂಬ ಪದ್ಧತಿ ರೂಢಿಯಲ್ಲಿದೆ.

* ಒಂದು ಬಾಗಿನವನ್ನು ದೇವಿಗೆ ಸಮರ್ಪಿಸಿ, ಉಳಿದ ಬಾಗಿನವನ್ನು ತಾಯಿ, ಅತ್ತೆ, ಅತ್ತಿಗೆ ಹೀಗೆ ಮುತ್ತೈದೆ ಮಹಿಳೆಯರಿಗೆ ನೀಡಲಾಗುತ್ತದೆ.

* ಸೀರೆ ಉಟ್ಟ ಮುತ್ತೈದೆಯರಿಗೆ ಬಾಗಿನ ನೀಡಬೇಕು, ನೀವು ಸಹ ಕಡ್ಡಾಯವಾಗಿ ಸೀರೆ ಉಟ್ಟಿರಬೇಕು.

* ಮೊದಲು ಮುತ್ತೈದೆಯರಿಗೆ ಅರಿಶಿನ ಹಚ್ಚಿ, ಕುಂಕುಮ ಇಡಿ ಅವರ ಮಾಂಗಲ್ಯಕ್ಕೆ ಅರಿಶಿನ ಕುಂಕುಮ ಕೊಡಿ.

* ನಂತರ ಕೈಗಳಿಗೆ ಬಳೆ ಹಾಕಿ.

* ಬಾಗಿನವನ್ನು ನಿಮ್ಮ ಸೆರಗಿನಲ್ಲಿ ಮುಚ್ಚಿ ಅವರ ಸೆರಗಿಗೆ ಬಾಗಿನ ಕೊಡ್ತಾ ಇದ್ದೇನೆ ಎಂದು ಹೇಳುತ್ತಾ

* ಮೂರು ಬಾರಿ ಸೆರಗಿನಲ್ಲೇ ಕೊಟ್ಟು ತೆಗೆದುಕೊಂಡು ಮಾಡಬೇಕು ಮೂರನೇ ಬಾರಿ ಅಂತಿಮವಾಗಿ ಅವರ ಸೆರಗಿನಲ್ಲಿ ಇಟ್ಟು

* ನಂತರ ಅವರ ಮಡಿಲಿನಲ್ಲಿ ಮೂರು ಬಾರಿ ಅಕ್ಕಿಯನ್ನು ನಮ್ಮ ಸೆರಗಿಗೆ ಹಾಕಬೇಕು ಹಾಗೂ ಮತ್ತೆ ನಮ್ಮ ಸೆರಗಿನಲ್ಲಿರುವ ಅಕ್ಕಿಯನ್ನು ಮೂರು ಬಾರಿ ಅವರಿಗೆ ಹಾಕಬೇಕು.

FAQ's
  • ಕನಿಷ್ಠ ಎಷ್ಟು ಜನ ಮುತ್ತೈದೆಯರಿಗೆ ಬಾಗಿನ ನೀಡಬಹುದು?

    ಕನಿಷ್ಠ ಐದು ಮುತ್ತೈದೆಯರಿಗೆ ಬಾಗಿನ ನೀಡಬೇಕು.

  • ಐದು ಮುತ್ತೈದೆಯರಿಗೆ ನೀಡಲು ಸಾಧ್ಯವಾಗದಿದ್ದರೆ ಏನು ಮಾಡಬೇಕು?

    ಐದು ಮುತ್ತೈದೆಯರಿಗೆ ಬಾಗಿನ ನೀಡಲು ಸಾಧ್ಯವಾಗದೇ ಇದ್ದರೆ ಉಳಿದ ಬಾಗಿನವನ್ನು ದೇವಿ ದೇವಾಲಯಗಳಲ್ಲಿ ದೇವರಿಗೆ ನೀಡಬಹುದು. ಇದು ಸಹ ಮುತ್ತೈದೆಯರಿಗೆ ನೀಡಿದಷ್ಟೇ ಶ್ರೇಷ್ಠ.

     

  • ಬಾಗಿನ ಅವಿವಾಹಿತ ಹೆಣ್ಣು ಮಕ್ಕಳು ನೀಡಬಹುದೇ?

    ಅವಿವಾಹಿತ ಹೆಣ್ಣು ಮಕ್ಕಳಿಗೂ ಬಾಗಿನ ನೀಡಬಹುದು, ಆದರೆ ಬಾಗಿನಲ್ಲಿ ಆ ಹೆಣ್ಣು ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಇಡಬೇಕು.

English summary

Gowri Habba : How to prepare Gowri baagina and list of items

Here we are discussing about Gowri Habba 2021: How to prepare Gowri baagina and list of items in Kannada. Read more.
X
Desktop Bottom Promotion