For Quick Alerts
ALLOW NOTIFICATIONS  
For Daily Alerts

Gowri Habba 2022: ಗೌರಿ ಹಬ್ಬದ ದಿನ, ಶುಭ ಮುಹೂರ್ತ ಮತ್ತು ಹಬ್ಬದ ಮಹತ್ವ

|

ಪ್ರಕೃತಿಯ ಪ್ರತಿರೂಪ ಗೌರಿ ದೇವಿ. ಪಾರ್ವತಿ ದೇವಿಯ ಅಪರಾವತಾರ ಗೌರಿ ವ್ರತ ಈ ವರ್ಷ 2022ನೇ ಸಾಲಿನಲ್ಲಿ ಆಗಸ್ಟ್‌ 30ರಂದು ಆಚರಿಸಲಾಗುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಮಹತ್ವ ಪಡೆದಿರುವ ಸ್ವರ್ಣ ಗೌರಿ ವ್ರತ ಪುತ್ರ ವಿನಾಯಕ ಚತುರ್ಥಿಯ ಹಿಂದಿನ ದಿನ ಆಚರಿಸಲಾಗುತ್ತದೆ.

ಶಕ್ತಿ, ಧೈರ್ಯ, ಸ್ಥೈರ್ಯಕ್ಕೆ ಹೆಸರುವಾಗಿಯಾದ ಗೌರಿ ಮಾತೆ ಶಕ್ತಿಯನ್ನು ನಮಗೆ ದಯಪಾಲಿಸಲು ಎಂದು ಮಹಿಳೆಯರು ಗೌರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಗೌರಿ ವ್ರತದ ಪೂಜಾ ದಿನ, ಶುಭ ಸಮಯ ಹಾಗೂ ಗೌರಿ ಹಬ್ಬದ ಮಹತ್ವದ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಗೌರಿ ವ್ರತದ ದಿನಾಂಕ, ಶುಭ ಮುಹೂರ್ತ

ಗೌರಿ ವ್ರತದ ದಿನಾಂಕ, ಶುಭ ಮುಹೂರ್ತ

ಅಗಸ್ಟ್‌ 30ರಂದು ಮಂಗಳವಾರ

ಭಾದ್ರಪದ ಮಾಸ ಶುಕ್ಲ ಪಕ್ಷದ ತದಿಗೆ

ಪ್ರಾತಃಕಾಲ ಗೌರಿ ಪೂಜಾ ಶುಭ ಮುಹೂರ್ತ: ಬೆಳಗ್ಗೆ 6.08 ರಿಂದ 8.37

ಗೌರಿ ವ್ರತದ ಮಹತ್ವ

ಗೌರಿ ವ್ರತದ ಮಹತ್ವ

ಭಗವಾನ್ ಶಿವನ ಪತ್ನಿ ಮತ್ತು ಗಣೇಶ ಮತ್ತು ಕಾರ್ತಿಕೇಯರ ತಾಯಿ ಗೌರಿ ದೇವಿಯನ್ನು ಅತ್ಯಂತ ಶಕ್ತಿಶಾಲಿ ದೇವಿಯಾಗಿ ಪೂಜಿಸಲಾಗುತ್ತದೆ. ಅವಳು ಶಕ್ತಿ, ದೈವಿಕತೆ, ಸೃಜನಶೀಲ ಶಕ್ತಿಯ ಪರಿಕಲ್ಪನೆಯಾಗಿದ್ದಾಳೆ. ಗೌರಿ ಹಬ್ಬದ ಸಮಯದಲ್ಲಿ, ಶುಕ್ಲ ಪಕ್ಷದಲ್ಲಿ ಅಂದರೆ ಬಾಧ್ರಪದ ಮಾಸದ ಮೂರನೇ ದಿನ ತದಿಗೆಯ ದಿನ ಮಾತಾ ಗೌರಿಯು ತನ್ನ ತವರು ಮನೆಗೆ ಬಂದು ಬಾಗಿನ ಪಡೆಯುತ್ತಾಳೆ, ಮರುದಿನ ಚತುರ್ಥಿಯಂದು ಅವಳ ಮಗ ಗಣೇಶನು ಗೌರಿಯನ್ನು ಕೈಲಾಸ ಪರ್ವತಕ್ಕೆ ಕರೆದೊಯ್ಯುವಂತೆ ಬರುತ್ತಾನೆ. ಅಂತೆಯೇ ಗೌರಿ ವ್ರತದ ದಿನ ವಿವಾಹಿತ ಮಹಿಳೆಯರು ತಮ್ಮ ತವರು ಮನೆಗೆ ಬಂದು ಬಾಗಿನ ಪಡೆಯುವ ಸಂಪ್ರದಾಯ ಈಗಲೂ ಮುಂದುವರೆದಿದೆ.

ಪೂಜಾ ದಿನ, ಶುಭ ಮುಹೂರ್ತ ಮತ್ತು ಹಬ್ಬದ ಮಹತ್ವ

ಪೂಜಾ ದಿನ, ಶುಭ ಮುಹೂರ್ತ ಮತ್ತು ಹಬ್ಬದ ಮಹತ್ವ

ವಿವಾಹಿತ ಮಹಿಳೆಯರು ತಮ್ಮ ವೈವಾಹಿಕ ಜೀವನ ಉತ್ತಮವಾಗಿರಲು, ಪತಿಯ ದೀರ್ಘಾಯುಷ್ಯ ಹಾಗೂ ಕೌಟುಂಬಿಕ ಜೀವನದ ಶ್ರೇಯೋಭಿವೃದ್ಧಿಗಾಗಿ ಗೌರಿ ದೇವಿಯ ಆಶೀರ್ವಾದ ಪಡೆಯಲು ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ. ಅವಿವಾಹಿತ ಹೆಣ್ಣು ಮಕ್ಕಳು ಉತ್ತಮ ಜೀವನ ಸಂಗಾತಿ ಸಿಗಲಿ ಎಂದು ಕೋರಿ ದೇವಿ ವ್ರತವನ್ನು ಮಾಡುತ್ತಾರೆ. ವ್ರತದ ದಿನ ಉಪವಾಸ ಆಚರಿಸುತ್ತಾರೆ, ಗೌರಿಯ ಆಶೀರ್ವಾದ ಎಂದು ಭಾವಿಸಿ 16 ಗಂಟುಗಳ ಗೌರ ದಾರವನ್ನು ಧರಿಸುತ್ತಾರೆ.

English summary

Gowri Habba 2022: Date, Shubh Muhurat, Significance and Importance of Swarna Gowri Vratha in Kannada

Here we are discussing about Gowri Habba Swarna Gowri Vrata 2021: Date, Shubh Muhurat, Significance and Importance of Swarna Gowri Vratha in Kannada. Read more.
X
Desktop Bottom Promotion