For Quick Alerts
ALLOW NOTIFICATIONS  
For Daily Alerts

ಸ್ವರ್ಣಗೌರಿ ವ್ರತ 2022: ದಿನ, ಪೂಜಾ ಸಮಯ, ವ್ರತ ಹಾಗೂ ಬಾಗಿನದ ಮಹತ್ವ

|

ಎಲ್ಲರ ಮನೆಗೆ ಗಣೇಶ ಬರುವ ಮುನ್ನಾ ದಿನ ಬರುವ ತಾಯಿ ಗೌರಿ ಹೆಣ್ಣು ಮಕ್ಕಳ ನೆಚ್ಚಿನ ದೇವಿ. ಮಣ್ಣಿನ ಮೂರ್ತಿಯಲ್ಲಿ ದೇವಿಯನ್ನು ಸ್ಥಾಪಿಸಿ ಅವಳಿಗೆ ಇಷ್ಟವಾಗುವ ನೈವೇದ್ಯವನ್ನು ಅರ್ಪಿಸಿ, ನಾನಾ ಹೂವುಗಳಿಂದ ಅಲಂಕರಿಸಿ, ಮುತ್ತೈದೆಯರಿಗೆ, ಹೆಣ್ಣು ಮಗಳಿಗೆ ಬಾಗಿನ ನೀಡುವ ಸಂಪ್ರದಾಯವಿದೆ.

Gowri Festival/ Swarna Gowri Vrata 2020 Date, Time and Significance

ಶಿವನ ಪತ್ನಿ ಪಾರ್ವತಿ ಎಂದೂ ಕರೆಯಲ್ಪಡುವ ಗೌರಿ ದೇವಿಗೆ ಅರ್ಪಿತವಾದ ಹಬ್ಬ ಪ್ರಧಾನವಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿದೆ.

ಗೌರಿ ವ್ರತ ಪೂಜಾ ದಿನ, ಶುಭಸಮಯ

ಗೌರಿ ವ್ರತ ಪೂಜಾ ದಿನ, ಶುಭಸಮಯ

2022ನೇ ಸಾಲಿನಲ್ಲಿ ಆಗಸ್ಟ್ 30ರಂದು ಗೌರಿ ವ್ರತವನ್ನು ಆಚರಿಸಲಾಗುತ್ತಿದೆ. ಭಾಧ್ರಪದ ಮಾಸದಲ್ಲಿ ಆಚರಿಲ್ಪಡುವ ಗೌರಿ ವ್ರತವನ್ನು ತೃತೀಯ ತಿಥಿ (ಮೂರನೇ ದಿನ), ಶುಕ್ಲ ಪಕ್ಷದಂದು ಮನೆಗೆ ತರುವುದು ವಾಡಿಕೆ.

ಪ್ರಾತಃಕಾಲ ಗೌರಿ ಪೂಜಾ ಶುಭ ಮುಹೂರ್ತ: ಬೆಳಗ್ಗೆ 6.08 ರಿಂದ 8.37 ರವರೆಗೆ

ಗೌರಿ ಹಬ್ಬದ ಮಹತ್ವ

ಗೌರಿ ಹಬ್ಬದ ಮಹತ್ವ

ಗೌರಿ ದೇವಿಯು ತನ್ನ ತಾಯಿಯ ಮನೆಗೆ ತದಿಗೆ ದಿನ ಭೇಟಿ ನೀಡಿ ಮರುದಿನ ಕೈಲಾಸಕ್ಕೆ ಹಿಂದಿರುಗುತ್ತಾಳೆ. ಈ ರೀತಿ ತವರು ಮನೆಗೆ ಬಂದ ಗೌರಿಯನ್ನು ಮರಳಿ ಕೈಲಾಸಕ್ಕೆ ಕರೆದುಕೊಂಡು ಹೋಗಲು ಮರುದಿನ ಪುತ್ರ ಗಣೇಶ ಬಂದ ಎಂದು ನಂಬಲಾಗಿದೆ. ಈ ಸಮಯದಲ್ಲಿ ಗೌರಿಯನ್ನು ತೃಪ್ತಿಪಡಿಸಲು ಮುತ್ತೈದೆಯರು ಗೌರಿ ವ್ರತ ಮಾಡುತ್ತಾರೆ ಎಂದು ಸಹ ಪ್ರತೀತಿ ಇದೆ.

ಗೌರಿ ಹಬ್ಬದಂದು ಸುಮಂಗಲಿಯರು ಉಪವಾಸವನ್ನು ಆಚರಿಸುತ್ತಾರೆ, ಗೌರಿ ದೇವಿಯನ್ನು ಆರಾಧಿಸುತ್ತಾರೆ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ ಆಶೀರ್ವಾದ ಪಡೆಯುತ್ತಾರೆ. ಮಹಿಳೆಯರು 16 ಗಂಟುಗಳ ಪವಿತ್ರ ಗೌರಿದಾರವನ್ನು ತಮ್ಮ ಬಲಗೈಗೆ ಕಟ್ಟಿಕೊಳ್ಳುತ್ತಾರೆ. ಇದು ಗೌರಿಯ ಆಶೀರ್ವಾದವೆಂದು ಭಾವಿಸುತ್ತಾರೆ. ಗೌರಿಯನ್ನು ಆರಾಧಿಸುವುದರಿಂದ ಸುಖ ಸಂಪತ್ತು ಸುಧೀರ್ಘ ಸುಂದರ ಜೀವನವನ್ನು ನೀಡುವುದಲ್ಲದೆ, ಉತ್ತಮ ಜೀವನ ಸಂಗಾತಿ ಸಿಗುತ್ತಾರೆ ಎಂದು ಸ್ವರ್ಣಗೌರಿ ವ್ರತವನನ್ನು ಮಾಡುತ್ತಾರೆ.

ಗೌರಿ ಬಾಗಿನದ ಪದ್ಧತಿ

ಗೌರಿ ಬಾಗಿನದ ಪದ್ಧತಿ

ಪ್ರಕೃತಿಯ ಪ್ರತಿರೂಪ ಅಥವಾ ಪ್ರತಿನಿಧಿ ಗೌರಿ ಎಂದು ಎನ್ನಲಾಗುತ್ತದೆ. ಗೌರಿ ಹಬ್ಬ ಎಂದರೆ ಹೆಣ್ಣುಮಕ್ಕಳಿಗೆ ಎಲ್ಲಿಲ್ಲದ ಸಡಗರ ಏಕೆಂದರೆ ತವರು ಮನೆಗೆ ಹೋಗಿ ಬಾಗಿನ ಪಡೆಯುವ ಸಂಪ್ರದಾಯ ಈ ಹಬ್ಬದ ಹಿಂದಿದೆ. ಈ ಹಬ್ಬದಲ್ಲಿ ಹೆಣ್ಣು ಮಕ್ಕಳಿಗೆ ಹೆತ್ತವರು ಅಥವಾ ಸೋದರ ಸಂಬಂಧಿಗಳು ಉಡುಗೊರೆ ನೀಡಿ ನೂರ್ಕಾಲ ಬಾಳೆಂದು ಹಾರೈಸುತ್ತಾರೆ.

ಸ್ವರ್ಣಗೌರಿ ವ್ರತದಲ್ಲಿ ಬಾಗಿನ ಕೊಡುವುದೇ ಒಂದು ವಿಶೇಷ. ಬಾಗಿನ ನೀಡಲು, ಮೊರವನ್ನು ಶುಭ್ರಗೊಳಿಸಿ ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ನವಧಾನಧಾನ್ಯಗಳನ್ನು ಇಟ್ಟು, ತೆಂಗಿನಕಾಯಿ, ಬಿಚ್ಚೋಲೆ, ಕನ್ನಡಿ, ಕಪ್ಪು ಬಳೆಗಳು, ಅಕ್ಕಿ, ಗೋಧಿ, ಬೆಲ್ಲ, 5 ಬಗೆಯ ಹಣ್ಣುಗಳು, ರವಿಕೆ ಮುತ್ತೈದೆಯರು ಉಪಯೋಗಿಸುವ ವಸ್ತುಗಳನ್ನು ಇಟ್ಟು ಮೊರದ ಬಾಗಿನ ಸಿದ್ಧಪಡಿಸಿ ಗೌರಿಯ ಮುಂದಿಡುತ್ತಾರೆ. ಆ ಮೊರವನ್ನು ಅರಿಶಿನಕ್ಕೆ ಬಂದ ಸುಮಂಗಲಿಯರಿಗೆ ನೀಡುತ್ತಾರೆ. ಕನಿಷ್ಠ ಐವರು ಮುತ್ತೈದೆಯರಿಗೆ ಬಾಗಿನ ನೀಡುವುದು ಪದ್ಧತಿ.

ಮಂಗಳಕರವಸ್ತುಗಳನ್ನು ಕೊಡುವುದರಿಂದ ಆರ್ಥಿಕವಾಗಿ, ಉತ್ತಮ ಆರೋಗ್ಯ, ಸುಖ, ಶಾಂತಿ, ಸಮೃದ್ಧಿ, ಸಕಲ ಸೌಲಭ್ಯಗಳನ್ನು ಪಡೆದು ಸದಾ ಕಾಲ ಮುತ್ತೈದೆಯಾಗಿ ಬಾಳು ಎನ್ನುವುದು ಈ ಬಾಗಿನ ಕೊಡುವುದರ ಉದ್ದೇಶವಾಗಿದೆ.

English summary

Gowri Festival Swarna Gowri Vrata 2022 Date, Shubu Muhurat and Significance

Here we are going to tell you about Gowri Festival/ Swarna Gowri Vrata 2020 Date, Time and Significance.Gowri Habba 2020 date, timings and significance: Married women keep Swarna Gowri Vratham on Tritiya Tithi, Shukla Paksha, Bhadrapada. Read more.
X
Desktop Bottom Promotion