For Quick Alerts
ALLOW NOTIFICATIONS  
For Daily Alerts

ಸುಭದ್ರ ಕುಮಾರಿ ಚೌಹಾಣ್‌ ಅವರಿಗೆ ಗೂಗಲ್ ಗೌರವ: ಪ್ರತಿಯೊಬ್ಬ ಭಾರತೀಯ ಇವರ ಬಗ್ಗೆ ತಿಳಿದಿರಲೇಬೇಕಾದ ಸಂಗತಿಗಳು

|

ಇಂದು ಗೂಗಲ್ ಭಾರತದ ಮೊದಲ ಮಹಿಳಾ ಸತ್ಯಾಗ್ರಹಿ ಸುಭದ್ರ ಕುಮಾರಿ ಚೌಹಾಣ್‌ ಅವರ 117ನೇ ಜನ್ಮ ದಿನಾಚರಣೆಯ ದಿನಂದು ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.

Google Doodle celebrates Indias first woman Satyagrahi Subhadra Kumari Chauhans birth anniversary; know about her in kannada

ಪುರುಷ ಪ್ರಧಾನ ಸಮಾಜದಲ್ಲಿ ಕಟ್ಟಳೆಗಳನ್ನು ಮೀರಿ ಮುಂದೆ ಬಂದ ದಿಟ್ಟ ಮಹಿಳೆ ಸುಭದ್ರ ಕುಮಾರಿ ಚೌಹಾಣ್‌. ಇವರು ಬರಹಗಾರ್ತಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ. ಸುಭದ್ರರವರ 'ಜಾನ್ಸಿ ಕೀ ರಾಣಿ' ರಾಷ್ಟ್ರೀಯ ಪದ್ಯವಾಗಿದೆ.

1904 ಆಗಸ್ಟ್‌ 16ರಂದು ತಮಿಳು ನಾಡಿನ ನಿಹಾಲ್‌ಪುರ್‌ನಲ್ಲಿ ಜನಿಸಿದರು. ಇವರು ತುಂಬಾ ಬರೆಯುತ್ತಿದ್ದರು. ಸ್ಕೂಲ್‌ಗೆ ಕುದುರೆಗಾಡಿಯಲ್ಲಿ ಹೋಗುತ್ತಿರುವಾಗಲೂ ಬರೆಯುತ್ತಿದ್ದರು, ಅವರು ಒಂಭತ್ತು ವರ್ಷವಿದ್ದಾಗಲೇ ಮೊದಲ ಪದ್ಯ ಪ್ರಕಟವಾಗಿತ್ತು.

ಇವರು ಹದಿಹರೆಯದ ಪ್ರಾಯಕ್ಕೆ ಬರುವಾಗಲೇ ದೇಶದಲ್ಲಿ ಸ್ವಾತಂತ್ರ್ಯ ಕಹಳೆ ಜೋರಾಗಿತ್ತು. ಇವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.. ತಮ್ಮ ಕವನಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಗ್ಗೂಡಿಸುತ್ತಿದ್ದರು. ಪ್ರಾರಂಭದಲ್ಲಿ ಜಾತಿ ಬೇಧ, ಲಿಂಗ ತಾರತಮ್ಯ ಬಗ್ಗೆ ಬರೆಯುತ್ತಿದ್ದ ಸುಭದ್ರ ಅವರು ನಂತರ ದೇಶದ ಕುರತು ಬರೆಯಲಾರಂಭಿಸಿದರು.

1923ರಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾದರು, ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಲ್ಲಿ ನಂಧನಕ್ಕೆ ಒಳಗಾದ ಮೊದಲ ಮಹಿಳಾ ಸತ್ಯಾಗ್ರಹಿ ಸುಭದ್ರವರು. ಸುಭದ್ರವರು ಅನೇಕ ಕ್ರಾಂತಿಕಾರಿ ಹೇಳಿಕೆಗಳನ್ನು ನೀಡುತ್ತಿದ್ದರು, ಇವರು ಮಾತುಗಳು ಜನರಲ್ಲಿ ಸ್ವಾತಂತ್ರ್ಯ ಕಿಚ್ಚು ಹೆಚ್ಚಿಸುತ್ತಿತ್ತು. ಸುಭದ್ರರವರು ಒಟ್ಟು 88 ಪದ್ಯಗಳು ಮತ್ತು 46 ಚಿಕ್ಕ ಕತೆಗಳನ್ನು ಬರೆದಿದ್ದಾರೆ.

ಸುಭದ್ರ ಕುಮಾರಿ ಚೌಹಾಣ್ 1948ರಲ್ಲಿ ಮಧ್ಯಪ್ರದೇಶದಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಇಂಥ ಮಹಾನ್ ಹೋರಾಟಗಾರ್ತಿ, ಕವಿಯತ್ರಿಯನ್ನು ಗೂಗಲ್ ಡೂಡಲ್‌ ಮೂಲಕ ಸ್ಮರಿಸಲಾಗಿದೆ.

English summary

Google Doodle celebrates India's first woman Satyagrahi Subhadra Kumari Chauhan's birth anniversary; know about her in kannada

Google Doodle celebrates India's first woman Satyagrahi Subhadra Kumari Chauhan's birth anniversary, know about her in kannada...
X
Desktop Bottom Promotion