For Quick Alerts
ALLOW NOTIFICATIONS  
For Daily Alerts

ದಿನದ ಅದೃಷ್ಟ ನಿಮ್ಮದಾಗಬೇಕೇ? ಹಾಗಿದ್ದರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ...

|

ದಿನ ಒಳ್ಳೆದಾದರೆ ಪ್ರತಿಯೊಂದು ಒಳ್ಳೆದಾಗುತ್ತದೆ ಎಂಬುದು ಹಿಂದಿನಿಂದಲೂ ಬಂದಿರುವ ಮಾತಾಗಿದೆ. ನೀವು ದಿನವನ್ನು ಧನಾತ್ಮಕವಾಗಿ ಆರಂಭಿಸಿದರೆ ನಿಮ್ಮ ಎಲ್ಲಾ ಕಾರ್ಯದಲ್ಲಿ ಧನಾತ್ಮಕ ಅಂಶ ಉಂಟಾಗುತ್ತದೆ ಎಂಬುದಾಗಿಯೇ ತಿಳಿದವರು ಹೇಳುತ್ತಾರೆ. ಬೇಕಿದ್ದರೆ ನೋಡಿ ನನ್ನ ಇಂದಿನ ದಿನ ಚೆನ್ನಾಗಿರುತ್ತದೆ ಎಂಬುದಾಗಿ ನಾವು ಭಾವಿಸಿ ದಿನವನ್ನು ಆರಂಭಿಸಿದರೆ ನಮಗೆ ಎಲ್ಲವೂ ಶುಭವಾಗುತ್ತದೆ. ಧನಾತ್ಮಕವಾಗಿ ಮುಂದುವರಿಯಲು ನಮಗೆ ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ಧನಾತ್ಮಕವಾಗಿ ಯೋಚಿಸಬೇಕಾಗುತ್ತದೆ. ಅಯ್ಯೋ ಇಂದಿನ ದಿನ ನಾನು ದುಃಖವನ್ನೇ ಅನುಭವಿಸಬೇಕಾಗುತ್ತದೆ ಎಂದು ಭಾವಿಸಿದರೆ ಹಾಗೆಯೇ ಸಂಭವಿಸುತ್ತದೆ. ಇದು ನಮ್ಮ ಮೆದುಳಿನ ಭಾವನೆಗಳನ್ನು ಒಳಗೊಂಡಿದೆ.

ಧನಾತ್ಮಕವಾಗಿ ಚಿಂತಿಸಬೇಕು ಎಂದಾದಲ್ಲಿ ನಾವು ಆಂತರ್ಯದಲ್ಲಿ ಗಟ್ಟಿಯಾಗಬೇಕು. ನಮಗೆಲ್ಲಾ ಕೆಟ್ಟದ್ದೇ ಬರುತ್ತದೆ ಎಂದು ಯೋಚಿಸುವ ಬದಲು ನಮಗೆ ದೊರೆತಿರುವುದನ್ನು ಒಳ್ಳೆಯದನ್ನಾಗಿ ಮಾರ್ಪಡಿಸೋಣ ಎಂಬ ದೃಢ ಸಂಕಲ್ಪವನ್ನು ಹೊಂದಬೇಕು. ಜೀವನದ ಈ ಪರೀಕ್ಷೆಯಲ್ಲಿ ನಾವು ಗೆಲ್ಲಬೇಕು ಮತ್ತು ಗಟ್ಟಿಯಾಗಿ ನಿಲ್ಲಬೇಕು. ಇದಕ್ಕೆ ಆ ಭಗವಂತನ ಅನುಗ್ರಹ ಕೂಡ ಮುಖ್ಯವಾಗಿ ಬೇಕಾಗುತ್ತದೆ. ಪರರಿಗೆ ಒಳ್ಳೆಯದು ಮಾಡಿದರೆ ಆ ಒಳ್ಳೆಯತನ ನಿಮ್ಮನ್ನು ಎಂದೆಂದಿಗೂ ಕಾಪಾಡುತ್ತದೆ ಎಂಬ ಮಾತಿನಂತೆಯೇ ನೀವು ಮನಸ್ಸಿನಲ್ಲಿ ಧನಾತ್ಮಕವಾಗಿ ಯೋಚಿಸಿದರೆ ನಿಮಗೆ ಎಲ್ಲವೂ ಒಳ್ಳೆಯದೇ ಆಗುತ್ತದೆ.

ಜ್ಯೋತಿಷ್ಯ: ಹುಟ್ಟಿದ ವಾರ ಗೊತ್ತಿದ್ದರೆ ಸಾಕು, ಭವಿಷ್ಯ ನಿರ್ಧರಿಸಬಹುದು!

ಇಂದಿನ ನಮ್ಮ ಲೇಖನದಲ್ಲಿ ನಿಮ್ಮ ದಿನವನ್ನು ಧನಾತ್ಮಕವಾಗಿ ಆರಂಭಿಸಬೇಕು ಎಂದಾದಲ್ಲಿ ಯಾವ ಸಲಹೆಗಳನ್ನು ಪಾಲಿಸಬೇಕು ಎಂಬುದನ್ನು ಅರಿತುಕೊಳ್ಳೋಣ. ವಾರದ ದಿನಗಳಿಗಾಗಿ ಶುಭ ಸಲಹೆಗಳು. ನಮ್ಮ ದಿನವನ್ನು ಉತ್ತಮವಾಗಿ ಆರಂಭಿಸಬೇಕು ಎಂದೇ ನಾವು ಬಯಸುತ್ತೇವೆ ಅಲ್ಲವೇ? ಭಾರತೀಯ ಜ್ಯೋತಿಷ್ಯ ಶಾಸ್ತ್ರ ಉತ್ತಮ ಕೊಡುಗೆಗಳನ್ನು ನೀಡಿದೆ. ಪ್ರತಿ ದಿನವನ್ನು ಗ್ರಹ ಅಥವಾ ದೇವರು ಆಳ್ವಿಕೆ ಮಾಡುತ್ತಾರೆ. ನಿಮ್ಮ ದಿನವನ್ನು ಶುಭವಾಗಿಸುವ ಸಲಹೆ ಇಲ್ಲಿದೆ.

1. ಸೋಮವಾರಕ್ಕಾಗಿ ಶುಭ ಸಲಹೆಗಳು

1. ಸೋಮವಾರಕ್ಕಾಗಿ ಶುಭ ಸಲಹೆಗಳು

ಸೋಮವಾರವನ್ನು ಶಿವನು ಆಳುತ್ತಾರೆ. ಆದ್ದರಿಂದ ಈ ದಿನವನ್ನು ಅವರ ಆಶೀರ್ವಾದದೊಂದಿಗೆ ಆರಂಭಿಸಿ ಇದರಿಂದ ನಿಮಗೆ ಯಶಸ್ಸು ದೊರೆಯುತ್ತದೆ. ನಿಮ್ಮ ಈ ದಿನದ ಚಟುವಟಿಕೆ ಯಾವುದೇ ಆಗಿರಲಿ ನಿಮಗೆ ಶಿವನ ಆಶೀರ್ವಾದ ದೊರೆಯುತ್ತದೆ. ಹೊಸ ವೃತ್ತು ಜೀವನವನ್ನು ಮತ್ತು ಆರ್ಥಿಕ ಚಟುವಟಿಕೆಯನ್ನು ಆರಂಭಿಸಲು ಈ ದಿನ ಉತ್ತಮವಾದುದು.

ಸೋಮವಾರಕ್ಕಾಗಿ ಉತ್ತಮ ಸಲಹೆಗಳು

ಈ ದಿನ ಬಿಳಿ ಬಣ್ಣದ ದಿರಿಸನ್ನು ಧರಿಸುವುದು ಉತ್ತಮ ಅದೃಷ್ಟ ಎಂದೆನಿಸಿದೆ ಮತ್ತು ಸೋಮವಾರದಂದು ಕಪ್ಪು ದಿರಿಸನ್ನು ಧರಿಸಬೇಡಿ. ಮನೆಯನ್ನು ಬಿಡುವ ಮೊದಲು ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ. ಸೋಮವಾರದಂದು ಜೇನು ಮತ್ತು ಮುಳ್ಳು ಸೌತೆ ಸೇವಿಸಿ ಇದರಿಂದ ಅದೃಷ್ಟ ನಿಮಗೊದಗಿ ಬರಲಿದೆ.

2.ಮಂಗಳವಾರಕ್ಕಾಗಿ ಅದೃಷ್ಟ ಸಲಹೆಗಳು

2.ಮಂಗಳವಾರಕ್ಕಾಗಿ ಅದೃಷ್ಟ ಸಲಹೆಗಳು

ಈ ದಿನ ಕಾರ್ತಿಕೇಯನನ್ನು ನೆನೆದರೆ ನಿಮಗೆ ಶುಭವಾಗಲಿದೆ. ತನ್ನ ಭಕ್ತರ ಮೇಲೆ ಕಾರ್ತಿಕೇಯ ಶುಭದ ಮಳೆಯನ್ನೇ ಸುರಿಸುತ್ತಾರೆ. ಪ್ರಾಣಿ ಸಾಕಣೆಯಂತಹ ಚಟುವಟಿಕೆಯನ್ನು ಈ ದಿನ ಮಾಡಿ ಮತ್ತು ಕಾರ್ತಿಕೇಯನ ಅನುಗ್ರಹ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ.

ಮಂಗಳವಾರಕ್ಕಾಗಿ ಅದೃಷ್ಟ ಸಲಹೆಗಳು

ಮಂಗಳವಾರದಂದು ಕೆಂಪು ಬಣ್ಣದ ದಿರಿಸನ್ನು ಧರಿಸುವುದು ಶುಭವಾಗಿದೆ. ನಿಮ್ಮ ಬಳಿ ಕೆಂಪು ದಿರಿಸು ಇಲ್ಲದಿದ್ದರೆ ಕೆಂಪು ಬಣ್ಣದ ಹೂವನ್ನು ಧರಿಸಿ ಇದರಿಂದ ಅದೃಷ್ಟ ನಿಮ್ಮದಾಗಲಿದೆ. ಈ ದಿನ ಕೊತ್ತಂಬರಿ ಸೊಪ್ಪು ತಿನ್ನುವುದರಿಂದ ಕೂಡ ಅದೃಷ್ಟ ಒಲಿಯಲಿದೆ. ಗ್ರಿಲ್ ಮಾಡಿದ ಬದನೆಕಾಯಿ ಮತ್ತು ಆಲೂಗಡ್ಡೆಯನ್ನು ಸೇವಿಸಬಹುದು. ನಿಮ್ಮ ತೊಂದರೆಗಳು ನಿವಾರಣೆಯಾಗಲಿದೆ.

3.ಬುಧವಾರಕ್ಕಾಗಿ ಅದೃಷ್ಟ ಸಲಹೆಗಳು

3.ಬುಧವಾರಕ್ಕಾಗಿ ಅದೃಷ್ಟ ಸಲಹೆಗಳು

ಬುಧವಾರದ ಆಡಳಿತ ಮಾಡುವ ದೇವರು ವಿಷ್ಣುವಾಗಿದ್ದಾರೆ. ಇದು ಪ್ರಣಯಕ್ಕೆ ಉತ್ತಮ ದಿನವೆನಿಸುತ್ತದೆ. ಭಗವಾನ್ ವಿಷ್ಣು ತನ್ನ ಬುದ್ಧಿಶಕ್ತಿಯನ್ನು ಬುದ್ಧಿವಂತಿಕೆಯೊಂದಿಗೆ ಮಹಾನ್ ಬುದ್ಧಿವಂತಿಕೆಗೆ ಆಶೀರ್ವದಿಸುತ್ತಾರೆ. ಅದು ಎಲ್ಲಾ ಅಲ್ಲ, ಬೆಳಿಗ್ಗೆ ಮುಂಜಾನೆ ಕೈಗೊಂಡ ಎಲ್ಲಾ ಸಣ್ಣ ಪ್ರಯಾಣಗಳು ಯಶಸ್ಸನ್ನು ಖಚಿತಪಡಿಸುತ್ತದೆ.

ಬುಧವಾರಕ್ಕಾಗಿ ಅದೃಷ್ಟ ಸಲಹೆಗಳು

ಈ ದಿನ ಹಸಿರು ಬಣ್ಣದ ದಿರಿಸನ್ನು ಧರಿಸುವುದು ನಿಮಗೆ ಶುಭವನ್ನು ತರಲಿದೆ. ಮನೆಯಿಂದ ಹೊರಡುವ ಮುಂಚೆ ಸಿಹಿಯನ್ನು ಸೇವಿಸಿ. ಈ ದಿನ ಬೀನ್ಸ್ ಸೇವನೆ ಮತ್ತು ಮೂಂಗ್‌ದಾಲ್ ಸೇವಿಸುವುದು ಉತ್ತಮವಾಗಿದೆ.

4. ಗುರುವಾರಕ್ಕಾಗಿ ಅದೃಷ್ಟ ಸಲಹೆಗಳು

4. ಗುರುವಾರಕ್ಕಾಗಿ ಅದೃಷ್ಟ ಸಲಹೆಗಳು

ಈ ದಿನ ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆದುಕೊಳ್ಳಲು ಶುಭ ದಿನವಾಗಿದೆ. ಮತ್ತು ಈ ದಿನ ದೇವಸ್ಥಾನಕ್ಕೆ ಭೇಟಿ ನೀಡಿ.

ಗುರುವಾರಕ್ಕಾಗಿ ಅದೃಷ್ಟ ಸಲಹೆಗಳು

ಈ ದಿನ ಹಳದಿ ಅಥವಾ ಬಿಳಿ ಬಟ್ಟೆಗಳನ್ನು ಧರಿಸುವುದು ಅದೃಷ್ಟದ ಸಂಕೇತವಾಗಿದೆ. ಈ ಬಣ್ಣಗಳನ್ನು ನಿಮಗೆ ಧರಿಸಲು ಸಾಧ್ಯವಿಲ್ಲ ಎಂದಾದಲ್ಲಿ ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಬಿಳಿ ಹೂಗಳನ್ನು ಇರಿಸಿ. ನಿಮ್ಮ ಮನೆಯನ್ನು ಬಿಡುವ ಮೊದಲು ಹಳದಿ ಸಾಸಿವೆಯನ್ನು ಸೇವಿಸಿ. ಹಳದಿ ಬೇಳೆ, ಪಪ್ಪಾಯ ಮತ್ತು ಅನ್ನದೊಂದಿಗೆ ತುಪ್ಪ ಸೇರಿಸಿ ಸೇವಿಸುವುದು ಒಳ್ಳೆಯದು.

5. ಶುಕ್ರವಾರಕ್ಕಾಗಿ ಅದೃಷ್ಟ ಸಲಹೆಗಳು

5. ಶುಕ್ರವಾರಕ್ಕಾಗಿ ಅದೃಷ್ಟ ಸಲಹೆಗಳು

ಶುಕ್ರವಾರ ಭುವನೇಶ್ವರಿ ದೇವಿ ಭಕ್ತರನ್ನು ಅನುಗ್ರಹಿಸುತ್ತಾರೆ. ಅವರ ಆಶೀರ್ವಾದವನ್ನು ಪಡೆಯುವುದು ನಿಮಗೆ ಒಳ್ಳೆಯ ಫಲಿತಾಂಶಗಳನ್ನು ನೀಡಲಿದೆ. ಈ ದಿನ ಹೊಸ ವಾಹನವನ್ನು ಖರೀದಿಸುವುದು ಒಳ್ಳೆಯದಾಗಿದೆ ಮತ್ತು ಗಭೀರ ರೋಗಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಆಭರಣ, ರತ್ನಗಳು ಮತ್ತು ಹೊಸ ಮನೆಯನ್ನು ಈ ದಿನ ಖರೀದಿಸಬಹುದಾಗಿದೆ.

ಶುಕ್ರವಾರಗಳಂದು ಅದೃಷ್ಟ ಸಲಹೆಗಳು

ತಿಳಿ ನೀಲಿ ಅಥವಾ ಬಿಳಿ ಈ ದಿನ ಉತ್ತಮವಾಗಿದೆ. ಮನೆಯನ್ನು ಬಿಡುವ ಮೊದಲು ಮೊಸರು ಸೇವಿಸಿ. ಇಲ್ಲದಿದ್ದರೆ ಪನ್ನೀರ್ ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಸೇವಿಸಿ.

6. ಶನಿವಾರಗಳಿಗಾಗಿ ಅದೃಷ್ಟ ಸಲಹೆಗಳು

6. ಶನಿವಾರಗಳಿಗಾಗಿ ಅದೃಷ್ಟ ಸಲಹೆಗಳು

ಈ ದಿನ ಶನಿ ದೇವರ ಅನುಗ್ರಹವನ್ನು ಪಡೆದುಕೊಳ್ಳುವುದು ನಿಮಗೆ ಶುಭವಾಗಿದೆ. ನಿಮ್ಮ ಜೀವನದಲ್ಲಿರುವ ಕಷ್ಟಗಳನ್ನು ನಿವಾರಿಸಲು ಈ ದಿನ ಉತ್ತಮವಾಗಿದೆ. ಆರ್ಥಿಕ ಲಾಭಗಳನ್ನು ಪಡೆದುಕೊಳ್ಳಲು ಈ ದಿನ ಉತ್ತಮವಾಗಿದೆ. ಈ ದಿನ ಶನಿ ಪೂಜೆಯನ್ನು ಮಾಡಿ ನಿಮ್ಮ ಜೀವನದಲ್ಲಿ ಅದೃಷ್ಟವನ್ನು ತನ್ನಿ.

ಶನಿವಾರಕ್ಕಾಗಿ ಅದೃಷ್ಟ ಸಲಹೆಗಳು

ಈ ದಿನ ಎಳ್ಳಿನ ಪೇಸ್ಟ್ ಇಲ್ಲವೇ ಕಪ್ಪು ಬದನೆಯನ್ನು ಸೇವಿಸುವುದು ಶನಿವಾರದ ಅದೃಷ್ಟದ ಸಂಕೇತವಾಗಿದೆ. ಈ ದಿನ ನೇರಳೆ ಬಣ್ಣದ ಹೂವುಗಳನ್ನು ಮನೆಯಲ್ಲಿರಿಸಿ ಮತ್ತು ಕಪ್ಪು ಬಣ್ಣದ ದಿರಿಸನ್ನು ಧರಿಸಿ. ಇದರಿಂದ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಮನೆಯನ್ನು ಬಿಡುವ ಮೊದಲು ತುಪ್ಪವನ್ನು ಸೇವಿಸಿ ಇದು ಅದೃಷ್ಟದ ಸಂಕೇತವಾಗಿದೆ.

7. ಭಾನುವಾರಕ್ಕಾಗಿ ಅದೃಷ್ಟ ಸಲಹೆಗಳು

7. ಭಾನುವಾರಕ್ಕಾಗಿ ಅದೃಷ್ಟ ಸಲಹೆಗಳು

ಈ ದಿನ ಸೂರ್ಯನ ಅಳ್ವಿಕೆ ಇರುತ್ತದೆ. ಯಾವುದೇ ವಿವಾದಗಳನ್ನು ನಿವಾರಿಸಲು ಈ ದಿನ ಉತ್ತಮವಾದುದು. ಹೊಸ ಮನೆಯ ಪ್ರವೇಶಕ್ಕೆ ಈ ದಿನ ಉತ್ತಮವಲ್ಲ. ಈ ದಿನ ಮಾಡುವ ಎಲ್ಲಾ ಪ್ರಯಾಣಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ.

ಭಾನುವಾರಕ್ಕಾಗಿ ಅದೃಷ್ಟ ಸಲಹೆಗಳು

ಈ ದಿನ ಗುಲಾಬಿ ಮತ್ತು ಮೆರೂನ್ ಬಣ್ಣದ ದಿರಿಸುಗಳನ್ನು ಧರಿಸುವುದು ಶುಭವಾಗಿದೆ. ಭಾನುವಾರ ಅಡಿಕೆ ತಿನ್ನುವುದು ಒಳ್ಳೆಯದಾಗಿದೆ ಅಂತೆಯೇ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ ಇದರಿಂದ ಅದೃಷ್ಟ ನಿಮ್ಮದಾಗಲಿದೆ. ಮೂಂಗ್‌ದಾಲ್ ಮತ್ತು ಬೇಲದ ಹಣ್ಣನ್ನು ತಿನ್ನುವುದು ಈ ದಿನ ಶುಭವಾಗಿದೆ.

English summary

Good luck tips for everyday of the week

Don’t we all want to begin our day in the best way possible? Indian Astrology has so much to offer. Did you know each day of the week is ruled and by particular planet and deity? Here are tips and tricks to help make your days luckier and work more auspicious.
X
Desktop Bottom Promotion