ಮನೆಯ ಶಾಂತಿ ನೆಮ್ಮದಿಗೆ-ಒಂದು ಲೋಟ ನೀರಿನ ಪರೀಕ್ಷೆ!

By: Hemanth
Subscribe to Boldsky

ಎಷ್ಟೇ ದುಡಿದರೂ ಕೈಯಲ್ಲಿ ಒಂದು ಪೈಸೆ ಕೂಡ ಉಳಿಯುವುದಿಲ್ಲ. ಮನೆಯಲ್ಲಿ ಯಾವತ್ತೂ ಮನಸ್ಸಿಗೆ ಶಾಂತಿಯಿಲ್ಲ. ಮನೆಗೆ ಹೋಗುವುದೇ ಬೇಡ ಎನ್ನುವಂತಹ ಪರಿಸ್ಥಿತಿ. ಯಾಕೆಂದರೆ ಮನೆಯಲ್ಲಿ ಯಾರನ್ನೇ ನೋಡಿದರೂ ಅವರಿಗೆ ಆರೋಗ್ಯವೇ ಸರಿಯಿಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಮನೆಯಲ್ಲಿ ಜಗಳ, ಅಶಾಂತಿ ಉಂಟಾಗುವುದು!

ಮಕ್ಕಳು ಮಾತು ಕೇಳದೆ ತಮ್ಮದೇ ಲೋಕದಲ್ಲಿ ವ್ಯವಹರಿಸುತ್ತಾ ಇದ್ದಾರೆ. ಏನೇ ಮಾಡಿದರೂ ದುಡಿದ ಹಣವನ್ನು ಉಳಿತಾಯ ಮಾಡಲು ಆಗುತ್ತಿಲ್ಲ. ಯಾವುದಾದರೂ ವ್ಯವಹಾರಕ್ಕೆ ಕೈ ಹಾಕಿದರೆ ಕೈ ಸುಟ್ಟುಕೊಂಡದ್ದೇ ಹೆಚ್ಚು. ಇಷ್ಟೆಲ್ಲಾ ಸಮಸ್ಯೆಗಳಿರುವ ಜನರು ಒಂದಾ ಮನೆಯನ್ನು ಬದಲಾಯಿಸಿ ಬೇರೆ ಕಡೆ ಹೋಗುತ್ತಾರೆ. ಇಲ್ಲವೆಂದಾದರೆ ಮನೆಯನ್ನು ಒಡೆದು ಬೇರೆ ಮನೆ ಮಾಡುತ್ತಾರೆ. ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಗಾಗಿ 'ವಾಸ್ತು' ಸೂತ್ರಗಳು

ಆದರೂ ಸಮಸ್ಯೆಗಳು ಮಾತ್ರ ಮತ್ತೆ ಕಾಡುತ್ತಲೇ ಇರುತ್ತದೆ. ಇದಕ್ಕೆ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿರುವಂತಹ ನಕಾರಾತ್ಮಕ ಅಂಶಗಳೇ ಇದಕ್ಕೆಲ್ಲಾ ಕಾರಣವಾಗಿದೆ. ಆದರೆ ಒಂದು ಲೋಟ ನೀರು ನಿಮ್ಮೆಲ್ಲಾ ಸಮಸ್ಯೆಗಳನ್ನು ಬಗೆಹರಿಸಲಿದೆ...! ಅಚ್ಚರಿಯಾಯಿತೇ ಹಾಗಾದರೆ ಮುಂದೆ ಓದಿ... 

ಸ್ವಚ್ಛ ಹಾಗೂ ಶುಭ್ರ ಲೋಟ

ಸ್ವಚ್ಛ ಹಾಗೂ ಶುಭ್ರ ಲೋಟ

ಈ ಕೆಲಸಕ್ಕಾಗಿ ನೀವು ಪಾರದರ್ಶಕವಾಗಿರುವ ಒಡೆದಿರದ ಮತ್ತು ಗೆರೆಗಳು ಬಿದ್ದಿರದ ಚೆನ್ನಾಗಿ ತೊಳೆದಿರುವ, ಕೈಬೆರಳಿನ ಗುರುತು ಇರದ ಗಾಜಿನ ಲೋಟವನ್ನು ಆಯ್ಕೆ ಮಾಡಿಕೊಳ್ಳಿ. ಗಾಜಿನ ಮೇಲೆ ನಿಮ್ಮ ಗುರುತು ಕಾಣಿಸಿಕೊಳ್ಳದೆ ಇರಲು ಕೈಗೆ ಗ್ಲೌಸ್ ಧರಿಸಿ.

ಸಮುದ್ರ ಉಪ್ಪು

ಸಮುದ್ರ ಉಪ್ಪು

ಇದಕ್ಕೆ ಸಮುದ್ರದ ಉಪ್ಪನ್ನು ಬಳಸಿಕೊಳ್ಳಬೇಕು. ಊಟಕ್ಕೆ ಬಳಸುವ ಹುಡಿ ಉಪ್ಪನ್ನಲ್ಲ. ಗಾಜಿನ ಲೋಟದ 1/3 ಭಾಗದಷ್ಟು ಸಮುದ್ರದ ಉಪ್ಪನ್ನು ತುಂಬಿ.

ಬಿಳಿ ವಿನೇಗರ್

ಬಿಳಿ ವಿನೇಗರ್

ಲೋಟದ 2/1 ಭಾಗದಷ್ಟು ಬಿಳಿ ವಿನೇಗರ್ ತುಂಬಿಕೊಳ್ಳಿ. ಇದನ್ನು ಮಿಶ್ರಣ ಮಾಡಬೇಡಿ.

ಸ್ವಚ್ಛ ನೀರು

ಸ್ವಚ್ಛ ನೀರು

ಮೂರನೇ ಭಾಗವನ್ನು ನಲ್ಲಿ ನೀರಿನಿಂದ ತುಂಬಿಸಿಕೊಳ್ಳಿ. ಇದನ್ನು ಮಿಶ್ರಣ ಮಾಡಬೇಡಿ ಅಥವಾ ಲೋಟವನ್ನು ಅಲುಗಾಡಿಸಬೇಡಿ.

ಸ್ಥಳವನ್ನು ಹುಡುಕಿ

ಸ್ಥಳವನ್ನು ಹುಡುಕಿ

ನಕಾರಾತ್ಮಕ ಅಂಶಗಳು ತುಂಬಾ ಪ್ರಭಾವವನ್ನು ಬೀರುವಂತಹ ಅಥವಾ ಕೆಟ್ಟ ಶಕ್ತಿಗಳು ಹೆಚ್ಚಾಗಿ ಬರುವಂತಹ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಈ ಜಾಗವನ್ನು ನೀವು ಪತ್ತೆ ಮಾಡಿಕೊಂಡ ಬಳಿಕ ಈ ಲೋಟವನ್ನು ಎಲ್ಲಿ ಮುಚ್ಚಿಡಬಹುದು ಎಂದು ತಿಳಿಯಲು ಪ್ರಯತ್ನಿಸಿ. ಇದನ್ನು ಹಗಲಿನಲ್ಲಿ ಮಾಡಿ ಮತ್ತು ಲೋಟವನ್ನು ಕಾಣದಂತೆ ಮುಚ್ಚಿಡಿ. ಇದು ಯಾರ ಕಣ್ಣಿಗೂ ಬೀಳದಂತಿರಲಿ. ಟೇಬಲ್ ಕೆಳಗೆ ಅಥವಾ ಇನ್ಯಾವುದಾದರೂ ವಸ್ತುವಿನ ಬದಿಯಲ್ಲಿ ಅಡಿಗಿಸಿಡಿ.

24 ಗಂಟೆ

24 ಗಂಟೆ

ಮುಂದಿನ 24 ಗಂಟೆಗಳ ಕಾಲ ಲೋಟವನ್ನು ಮುಟ್ಟಲು ಹೋಗಬೇಡಿ. ಮಕ್ಕಳು ಇದನ್ನು ಮುಟ್ಟದಿರುವಂತೆ ನೋಡಿಕೊಳ್ಳಿ.

ಗಾಜಿನ ಲೋಟದ ಬಣ್ಣ ಅಥವಾ ನೀರಿನಲ್ಲಿ ಬದಲಾವಣೆ

ಗಾಜಿನ ಲೋಟದ ಬಣ್ಣ ಅಥವಾ ನೀರಿನಲ್ಲಿ ಬದಲಾವಣೆ

24 ಗಂಟೆಗಳ ಬಳಿಕ ನೀವು ಗಾಜಿನ ಲೋಟವನ್ನು ಪರೀಕ್ಷೆ ಮಾಡಿ. ಗಾಜಿನ ಲೋಟ ಮತ್ತು ಅದರಲ್ಲಿ ಹಾಕಿರುವ ಪ್ರತಿಯೊಂದು ವಸ್ತುಗಳು ಶುಭ್ರವಾಗಿದ್ದರೆ ಇದರ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಲೋಟದರಲ್ಲಿರುವ ವಸ್ತುಗಳು ನಸು ಅಥವಾ ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗಿದ್ದರೆ ಈ ವಿಧಾನವನ್ನು ಮನೆಯ ಇತರ ಭಾಗಗಗಳಲ್ಲಿ ಕೂಡ ಪರೀಕ್ಷಿಸಿ ನೋಡಿ.

ಬದಲಾವಣೆ ಗುರುತಿಸಿ

ಬದಲಾವಣೆ ಗುರುತಿಸಿ

ಇದೇ ರೀತಿಯ ಬದಲಾವಣೆಗಳು ಮನೆಯ ಇತರ ಭಾಗಗಳಲ್ಲಿ ಕೂಡ ಕಂಡು ಬಂದರೆ ಆಗ ನೀವು ಮನೆಯಲ್ಲಿ ಮತ್ತೆ ಧನಾತ್ಮಕವಾಗಿಸುವ ಕೆಲಸ ಮಾಡಬೇಕು. ಹೀಗೆ ಮಾಡಲು ನೀವು ವಾಸ್ತು ಶಾಸ್ತ್ರಜ್ಞರ ಅಥವಾ ಫೆಂಗ್ ಶೂಯಿ ನೆರವು ಪಡೆಯಬಹುದು. ಅವರು ನಿಮ್ಮ ಮನೆಯಲ್ಲಿ ಮತ್ತೆ ಧನಾತ್ಮಕತೆಯನ್ನು ತರುತ್ತಾರೆ. ಫೆಂಗ್ ಶುಯಿ ವಾಸ್ತು ಪ್ರಕಾರ ಮನೆಯ ವಿನ್ಯಾಸ

 
English summary

Glass Water Test: if Negative Energy has taken over your house

A simple glass of water could now help you to determine if there’s actually any negative energy around you. And, once it does confirm, you can start with the journey of eliminating them. The following slides would tell you of the six steps that you must follow...
Subscribe Newsletter