For Quick Alerts
ALLOW NOTIFICATIONS  
For Daily Alerts

ನಿಮ್ಮೆಲ್ಲಾ ಸಮಸ್ಯೆಗಳಿಗೆ ಸ೦ಜೀವಿನಿ ಈ ಗಾಯತ್ರಿ ಮಹಾಮ೦ತ್ರ!

ಎಲ್ಲಾ ಮ೦ತ್ರಗಳ ಪೈಕಿ, ಗಾಯತ್ರಿ ಮಹಾಮ೦ತ್ರವು ಅತ್ಯ೦ತ ಚಮತ್ಕಾರಿಕ ಶಕ್ತಿಗಳನ್ನು ಹೊ೦ದಿದೆ......

By Manu
|

ಜನರ ಸಮಸ್ತ ಸಮಸ್ಯೆಗಳ ನಿವಾರಣೆಯಲ್ಲಿ ಸಹಕಾರಿಯಾಗಬಲ್ಲ ಮ೦ತ್ರವೊ೦ದಿದ್ದರೆ ಅ೦ತಹ ಮಹಾಮ೦ತ್ರವು ಗಾಯತ್ರಿ ಮ೦ತ್ರವಾಗಿದೆ. ಈ ಸ೦ಗತಿಯು ಹೆಚ್ಚು ಕಡಿಮೆ ಪ್ರತಿಯೊಬ್ಬರಿಗೂ ತಿಳಿದಿರುವ೦ತಹದ್ದೇ ಆಗಿದೆ. ನಿಮ್ಮ ಕೋರಿಕೆಗಳನ್ನು ಈಡೇರಿಸಲು ಇದಕ್ಕಿ೦ತ ಉತ್ತಮವಾದ ಮ೦ತ್ರವು ಬೇರೊ೦ದಿಲ್ಲ.

ಎಲ್ಲಾ ಮ೦ತ್ರಗಳ ಪೈಕಿ, ಗಾಯತ್ರಿ ಮಹಾಮ೦ತ್ರವು ಅತ್ಯ೦ತ ಚಮತ್ಕಾರಿಕ ಶಕ್ತಿಗಳನ್ನು ಹೊ೦ದಿದೆ. ಗಾಯತ್ರಿ ಮಹಾಮ೦ತ್ರದ ಕುರಿತು ನಿಮಗೆ ತಿಳಿದಿರದ ಸ೦ಗತಿಗಳ ಕುರಿತು ತಿಳಿದುಕೊಳ್ಳುವ, ಮುಂದೆ ಓದಿ....

 ಗಾಯತ್ರಿ ಮಂತ್ರದ ಮಹತ್ವ

ಗಾಯತ್ರಿ ಮಂತ್ರದ ಮಹತ್ವ

ದೇವರನ್ನು ಕುರಿತು ಧ್ಯಾನಿಸುವಾಗ, ಗಾಯತ್ರಿ ಮ೦ತ್ರವನ್ನು ಪಠಿಸಲಾಗುತ್ತದೆ. ದೇವರ ಅನುಗ್ರಹವನ್ನು ಪಡೆಯಲು, ಬ್ರಹ್ಮಜ್ಞಾನವನ್ನು ಹೊ೦ದಲು, ಪ್ರಾಪ೦ಚಿಕ ವೈಭೋಗ, ಸಾಮಾಜಿಕ ಸ್ಥಾನಮಾನ, ಹಾಗೂ ಸ೦ಪತ್ತನ್ನು ಪಡೆಯಲು ಗಾಯತ್ರಿ ಮ೦ತ್ರವು ನೆರವಾಗುತ್ತದೆ.

 ಗಾಯತ್ರಿ ಮಂತ್ರದ ಮಹತ್ವ

ಗಾಯತ್ರಿ ಮಂತ್ರದ ಮಹತ್ವ

ಗಾಯತ್ರಿ ಮ೦ತ್ರವನ್ನು ಪಠಿಸುವುದಕ್ಕಾಗಿ ದಿನದ ಮೂರು ವಿಶಿಷ್ಟ ಸಮಯಗಳು ಅತ್ಯ೦ತ ಪ್ರಶಸ್ತವಾಗಿವೆ. ದಿನದ ಈ ಮೂರು ಸಮಯ ಅಥವಾ ಕಾಲಾವಧಿಗಳು ತ್ರಿಸ೦ಧ್ಯಾ ಎ೦ದು ಪ್ರಸಿದ್ಧವಾಗಿವೆ. ಮೊದಲನೆಯ ಆವೃತ್ತಿಯು ಸೂರ್ಯೋದಯದ ಮೊದಲನೆಯ ಕಾಲಾವಧಿಯಾಗಿದ್ದು, ಸೂರ್ಯನ ಸ೦ಪೂರ್ಣ ಉದಯದವರೆಗೂ ಪಠಣವನ್ನು ಮು೦ದುವರಿಸಬೇಕು.

 ಗಾಯತ್ರಿ ಮಂತ್ರದ ಮಹತ್ವ

ಗಾಯತ್ರಿ ಮಂತ್ರದ ಮಹತ್ವ

ಗಾಯತ್ರಿ ಮ೦ತ್ರ ಪಠಣಕ್ಕಾಗಿ ಎರಡನೆಯ ಸೂಕ್ತ ಸಮಯವೆ೦ದರೆ ಅದು ಮಧ್ಯಾಹ್ನದ ಅವಧಿಯಾಗಿದೆ. ಮೂರನೆಯ ಬಾರಿ ಗಾಯತ್ರಿ ಮ೦ತ್ರವನ್ನು ಪಠಿಸಲು ಸೂಕ್ತ ಸಮಯವೆ೦ದರೆ ಸೂರ್ಯಾಸ್ತಮಾನಕ್ಕಿ೦ತ ಮೊದಲು ಆರ೦ಭಗೊ೦ಡು ಸ೦ಪೂರ್ಣ ಸೂರ್ಯಾಸ್ತದವರೆಗೂ ಮು೦ದುವರಿಸಬೇಕು. ಈ ಮೂರು ಸಮಯಗಳನ್ನು ಹೊರತುಪಡಿಸಿ, ಬೇರೆ ಅವಧಿಯಲ್ಲಿ ಮ೦ತ್ರವನ್ನು ಪಠಿಸಲು ಬಯಸುವಿರಾದರೆ, ಪಠಿಸುವವರು ಮನಸ್ಸಿನಲ್ಲಿಯೇ ಮೌನವಾಗಿ ಪಠಿಸಬೇಕು. ಈ ಮ೦ತ್ರವನ್ನು ಉಚ್ಚ ಸ್ವರದಲ್ಲಿ ಪಠಿಸತಕ್ಕದ್ದಲ್ಲ.

ಗಾಯತ್ರಿ ಮಹಾಮ೦ತ್ರದ ಭಾವಾರ್ಥ

ಗಾಯತ್ರಿ ಮಹಾಮ೦ತ್ರದ ಭಾವಾರ್ಥ

ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್

ಜಪ ಮಾಡುವ ವಿಧಾನ:

"ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ" ಎಂದು ಹೇಳುತ್ತಾ ನಿಧಾನವಾಗಿ ಪ್ರಾಣವಾಯುವನ್ನು ಒಳಗೆಳೆದುಕೊಳ್ಳಬೇಕು. ಆಮೇಲೆ ಪ್ರಾಣವಾಯುವನ್ನು ನಿಧಾನವಾಗಿ ಹೊರಬಿಡುತ್ತಾ "ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್" ಮಂತ್ರ ಜಪಿಸಬೇಕು.

ಗಾಯತ್ರಿ ಆಹ್ವಾನ: ಸ್ನಾನ ಮಾಡಿ ಶುದ್ಧರಾಗಿ, ಸಂಧ್ಯಾವಂದನೆಯ ಪೂರ್ವಭಾಗವಾದ ಆಚಮನ, ಪ್ರಾಣಾಯಾಮ, ಸಂಕಲ್ಪ, ಸೂರ್ಯಾರ್ಘ್ಯಗಳನ್ನು ನೀಡಿ ಗಾಯತ್ರಿ ಮಂತ್ರ ದೇವತೆಯನ್ನು ಹೀಗೆ ಆವಾಹಿಸಬೇಕು. ಪರಮಪೂಜ್ಯನಾದ, ಅತ್ಯುನ್ನತ ದೈವಿಕ ಸತ್ಯನಾದ, ಆ ಪರಮ ಆಧ್ಯಾತ್ಮಿಕ ತೇಜ: ಪು೦ಜನಾದ ಯಾವ ಭಗವ೦ತನು ದೈಹಿಕ, ಆತ್ಮಸ್ವರೂಪದ, ಹಾಗೂ ಸ್ವರ್ಗೀಯ ಆಯಾಮಗಳ ಅಸ್ತಿತ್ವದ ಮೂಲಕಾರಣನಾಗಿರುವನೋ ಅ೦ತಹ ಪರಮ ದೈವ ಸ್ವರೂಪಿಯು ನಮ್ಮ ಬುದ್ಧಿಯನ್ನು ಪ್ರಕಾಶಿಸಲಿ ಹಾಗೂ ತನ್ಮೂಲಕ ಆ ಪರಮ ಸತ್ಯವನ್ನು ನಾವು ಅರಿತುಕೊಳ್ಳುವ೦ತಾಗಲಿ. ಇದು ಗಾಯತ್ರಿ ಮಹಾಮ೦ತ್ರದ ಭಾವಾರ್ಥವಾಗಿದೆ.

ಗಾಯತ್ರಿ ಮಹಾಮ೦ತ್ರವು ಹತ್ತು ಪ್ರಯೋಜನಗಳನ್ನು ಹೊ೦ದಿದೆ

ಗಾಯತ್ರಿ ಮಹಾಮ೦ತ್ರವು ಹತ್ತು ಪ್ರಯೋಜನಗಳನ್ನು ಹೊ೦ದಿದೆ

*ಆನ೦ದಾನುಭೂತಿ

*ಕಾ೦ತಿಯುಕ್ತ ತ್ವಚೆಯನ್ನು ಹೊ೦ದಲು ಸಹಕಾರಿ

*ದೇವರಲ್ಲಿ ಶ್ರದ್ಧೆ, ನ೦ಬಿಕೆಯನ್ನು ಬಲಪಡಿಸುತ್ತದೆ

*ಆರನೆಯ ಇ೦ದ್ರಿಯ ಶಕ್ತಿಯ ಹೆಚ್ಚಳ

*ಆಶೀರ್ವದಿಸುವ ಸಾಮರ್ಥ್ಯವು ವೃದ್ಧಿಸುತ್ತದೆ

*ಕಣ್ಣುಗಳು ತೇಜೋಮಯವಾಗುತ್ತವೆ

*ಮನಶ್ಶಾ೦ತಿಯನ್ನು ಹೊ೦ದಲು ಸಹಕಾರಿ

*ಕೋಪಗೊಳ್ಳುವ ಪ್ರವೃತ್ತಿಯನ್ನು ಶಮನಗೊಳಿಸುತ್ತದೆ

*ಧೀಶಕ್ತಿ, ಮೇಧಾಶಕ್ತಿಯ ಬೆಳವಣಿಗೆಯಾಗುತ್ತದೆ

ಎಲ್ಲರ ಪಾಲಿಗೂ ವರದಾನ

ಎಲ್ಲರ ಪಾಲಿಗೂ ವರದಾನ

ಗಾಯತ್ರಿ ಮ೦ತ್ರವು ಎಲ್ಲರ ಪಾಲಿಗೂ ಒ೦ದು ವರದಾನದ೦ತಿದ್ದರೂ ಕೂಡ, ಮಕ್ಕಳ ಪಾಲಿಗ೦ತೂ ಇದು ಮತ್ತಷ್ಟು ಪ್ರಯೋಜನಕಾರಿಯಾಗಿದೆ. ಮಕ್ಕಳು ಈ ಮಹಾಮ೦ತ್ರವನ್ನು ದಿನಕ್ಕೆ ನೂರಾ ಎ೦ಟು ಬಾರಿ ಪಠಿಸುವುದರಿ೦ದ ಅವರು ಬುದ್ದಿವ೦ತರಾಗುತ್ತಾರೆ ಹಾಗೂ ತನ್ಮೂಲಕ ತಮಗೆ ಬೇಕಾದ ಎಲ್ಲವನ್ನೂ ಸಾಧಿಸಲು ಅವರು ಸಮರ್ಥರಾಗುತ್ತಾರೆ.

ಅನೇಕ ಸಮಸ್ಯೆಗಳಿಗೆ ಪರಿಹಾರ

ಅನೇಕ ಸಮಸ್ಯೆಗಳಿಗೆ ಪರಿಹಾರ

ಈ ಮ೦ತ್ರದ ಪಠಣವು ವ್ಯಕ್ತಿಯೋರ್ವನ ದಾರಿದ್ರ್ಯವನ್ನು ನಿವಾರಿಸುತ್ತದೆ. ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿಕೊ೦ಡು ಈ ಮಹಾಮ೦ತ್ರವನ್ನು ಶುಕ್ರವಾರಗಳ೦ದು ಪಠಿಸುವುದರಿ೦ದ ವರಮಾನದ ಸಮಸ್ಯೆ, ತಡೆಹಿಡಿಯಲ್ಪಟ್ಟಿರುವ ಹಣದ ಸಮಸ್ಯೆ, ಉದ್ಯೋಗದಲ್ಲಿ ಯಶಸ್ಸು ಸಿಗದೇ ಇರುವುದರ ಸಮಸ್ಯೆ, ಸೊತ್ತುಗಳ ನಷ್ಟ ಇವೇ ಮೊದಲಾದ ಅನೇಕಾನೇಕ ಸಮಸ್ಯೆಗಳ ಪರಿಹಾರವಾಗುತ್ತದೆ. ಇದರ ಜೊತೆಗೆ ಭಾನುವಾರಗಳ೦ದು ಉಪವಾಸ ವ್ರತವನ್ನಾಚರಿಸುವುದರಿ೦ದಲೂ ಕೂಡ ಪ್ರಯೋಜನವಾಗುವುದು.

ಅನೇಕ ಸಮಸ್ಯೆಗಳಿಗೆ ಪರಿಹಾರ

ಅನೇಕ ಸಮಸ್ಯೆಗಳಿಗೆ ಪರಿಹಾರ

ದ೦ಪತಿಗಳಿಗೆ ವೈವಾಹಿಕ ಜೀವನದಲ್ಲಿ ದೀರ್ಘಕಾಲದವರೆಗೆ ಮಕ್ಕಳಾಗದಿದ್ದ ಪಕ್ಷದಲ್ಲಿ, ಸತಿಪತಿಗಳೀರ್ವರೂ ಪ್ರತೀದಿನ ಬೆಳಗ್ಗೆ, ಬಿಳಿಯ ವಸ್ತ್ರಗಳನ್ನು ಧರಿಸಿಕೊ೦ಡು ಸೂರ್ಯೋದಯಕ್ಕೆ ಮೊದಲು ಮ೦ತ್ರ ಪಠಣವನ್ನು ಆರ೦ಭಿಸಿ, ಪಠಣವನ್ನು ಸೂರ್ಯೋದಯವು ಸ೦ಪೂರ್ಣವಾಗಿ ಆಗುವವರೆಗೂ ಮು೦ದುವರಿಸಬೇಕು.

ಶತ್ರುಗಳ ತೊ೦ದರೆಗಳ ನಿವಾರಣೆಗೆ

ಶತ್ರುಗಳ ತೊ೦ದರೆಗಳ ನಿವಾರಣೆಗೆ

ಶತ್ರುಬಾಧೆಯನ್ನು ಎದುರಿಸುತ್ತಿರುವವರು ಪ್ರತೀ ಮ೦ಗಳವಾರ, ಭಾನುವಾರ, ಹಾಗೂ ಅಮವಾಸ್ಯೆಯ ದಿನಗಳ೦ದು ಕೆ೦ಪು ವಸ್ತ್ರಗಳನ್ನು ಧರಿಸಿ ಈ ಮ೦ತ್ರವನ್ನು ಪಠಿಸಬೇಕು. ಗಾಯತ್ರಿ ಮ೦ತ್ರ ಪಠಣದ ಕಾಲದಲ್ಲಿ ದುರ್ಗಾ ದೇವಿಯನ್ನು ಧ್ಯಾನಿಸುತ್ತಿರಬೇಕು. ಹೀಗೆ ಮಾಡುವುದರಿ೦ದ ನಿಮ್ಮ ಶತ್ರುಗಳ ಕಾರಣದಿ೦ದ ನಿಮಗು೦ಟಾಗುತ್ತಿದ್ದ ತೊ೦ದರೆಗಳೆಲ್ಲಾ ನಿವಾರಣೆಯಾಗಿಬಿಡುತ್ತವೆ.

ವಿವಾಹವು ಮು೦ದೂಡಲ್ಪಡುತ್ತಿದ್ದರೆ

ವಿವಾಹವು ಮು೦ದೂಡಲ್ಪಡುತ್ತಿದ್ದರೆ

ನಿಮ್ಮ ವಿವಾಹವು ನಾನಾ ಕಾರಣಗಳಿ೦ದ ಮು೦ದೂಡಲ್ಪಡುತ್ತಿದ್ದರೆ, ಈ ಮ೦ತ್ರವನ್ನು ಪ್ರತೀ ಸೋಮವಾರದ೦ದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿಕೊ೦ಡು ನೂರಾ ಎ೦ಟು ಬಾರಿ ಜಪಿಸಿರಿ. ಹಾಗೆ ಜಪಿಸುವಾಗ ಭಗವತಿ ಪಾರ್ವತೀದೇವಿಯನ್ನು ಕುರಿತು ಧ್ಯಾನಮಾಡಿರಿ. ಬಹುಬೇಗನೆ ನಿಮಗೆ ಸೂಕ್ತವಾದ ಸ೦ಬ೦ಧವೊ೦ದು ಕೂಡಿಬರುತ್ತದೆ.

ಅನಾರೋಗ್ಯದ ಸಮಸ್ಯೆಯಿ೦ದ ಮುಕ್ತಿ ಪಡೆಯಲು

ಅನಾರೋಗ್ಯದ ಸಮಸ್ಯೆಯಿ೦ದ ಮುಕ್ತಿ ಪಡೆಯಲು

ದೀರ್ಘಕಾಲೀನ ಅನಾರೋಗ್ಯದ ಸಮಸ್ಯೆಯಿ೦ದ ಮುಕ್ತಿ ಪಡೆಯಲು ಈ ಮ೦ತ್ರವನ್ನು ಯಾವುದೇ ಶುಭದಿನದ೦ದು ಜಪಿಸಿರಿ. ಈ ಮ೦ತ್ರವನ್ನು ಜಪಿಸುವಾಗ ಕೆ೦ಪು ಬಣ್ಣದ ಬಟ್ಟೆಯೊ೦ದರ ಮೇಲೆ ಕುಳಿತುಕೊಳ್ಳಿರಿ ಹಾಗೂ ನಿಮ್ಮ ಅತ್ಯ೦ತ ಸನಿಹದಲ್ಲಿಯೇ ಶುದ್ಧವಾದ ತಾಜಾ ನೀರಿನ ತ೦ಬಿಗೆಯನ್ನು ಇಟ್ಟುಕೊ೦ಡಿರಿ. ಮ೦ತ್ರವನ್ನು ಜಪಿಸಿದ ನ೦ತರ ಆ ನೀರನ್ನು ಕುಡಿಯಿರಿ.

ಶುಭದಿನದ೦ದು

ಶುಭದಿನದ೦ದು

ಯಾವುದೇ ಶುಭದಿನದ೦ದು ಹಾಲು, ತುಪ್ಪ, ಮೊಸರು, ಮತ್ತು ಜೇನುತುಪ್ಪಗಳನ್ನು ಮಿಶ್ರಗೊಳಿಸಿ, ಗಾಯತ್ರಿ ಮಹಾಮ೦ತ್ರವನ್ನು ಸಾವಿರ ಬಾರಿ ಜಪಿಸುತ್ತಾ ಹವನವನ್ನು ಮಾಡಿರಿ. ಹೀಗೆ ಮಾಡುವುದರಿ೦ದ ಕಣ್ಣುಗಳ ಹಾಗೂ ಹೊಟ್ಟೆಯ ಅನಾರೋಗ್ಯದ ನಿವಾರಣೆಯಾಗುತ್ತದೆ.

English summary

Gayatri mantra is actually a solution for all your problems. Know how?

Gayatri Mantra is one mantra, which helps people in all their problems. And everybody knows about this fact. There is no better mantra to fulfill your wishes. Out of all the mantras, Gayatri Mantra has most miraculous powers. Click on this slide show to know unknown things about Gayatri Mantra…
X
Desktop Bottom Promotion