For Quick Alerts
ALLOW NOTIFICATIONS  
For Daily Alerts

ಗಂಗಾ ಸಪ್ತಮಿ 2022: ಗಂಗಾ ಸ್ನಾನದ ಪುಣ್ಯಕ್ಕಾಗಿ ಈ ಮಂತ್ರಗಳನ್ನು ತಪ್ಪದೇ ಪಠಿಸಿ

|

ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು ಗಂಗಾ ಜಯಂತಿ ಮತ್ತು ಗಂಗಾ ಸಪ್ತಮಿ ಎಂದು ಕರೆಯಲಾಗುತ್ತದೆ. ಗಂಗಾ ಸಪ್ತಮಿಯನ್ನು ಗಂಗೆಯ ಪುನರ್ಜನ್ಮ ಎಂದೂ ಕರೆಯುತ್ತಾರೆ. ಈ ದಿನಕ್ಕೆ ಹಿಂದೂ ಧರ್ಮದಲ್ಲಿ ಬಹಳ ವಿಶೇಷವಾದ ಮಹತ್ವವಿದೆ. ಗಂಗಾ ಸಪ್ತಮಿಯ ದಿನದಂದು ಗಂಗಾಮಾತೆಯ ಕೆಲವು ಮಂತ್ರಗಳನ್ನು ಜಪಿಸಿದರೆ ಭಕ್ತರಿಗೆ ಗಂಗಾಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ. ಹಾಗಾದರೆ, ಯಾವ ಮಂತ್ರಗಳನ್ನು ಪಠಿಸುವ ಮೂಲಕ ಗಂಗಾ ಮಾತೆಯನ್ನು ಮೆಚ್ಚಿಸಬಹುದು ಮತ್ತು ಪುಣ್ಯವನ್ನು ಪಡೆಯಬಹುದು ಎಂಬುದನ್ನು ಇಲ್ಲಿ ನೋಡೋಣ.

ಗಂಗಾ ಮಂತ್ರದ ಅರ್ಥ ಹಾಗೂ ಮಹತ್ವದ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಗಂಗಾ ಸಪ್ತಮಿ ತಿಥಿ :

ಗಂಗಾ ಸಪ್ತಮಿ ತಿಥಿ :

ಸಪ್ತಮಿ ದಿನಾಂಕ ಪ್ರಾರಂಭ- 07 ಮೇ 2022, ಬೆಳಿಗ್ಗೆ 05:26 ರಿಂದ

ಸಪ್ತಮಿ ದಿನಾಂಕ ಅಂತ್ಯ - 08 ಮೇ 2022, 07:30 ರವರೆಗೆ

ಗಂಗಾ ಸಪ್ತಮಿ 2022 ಶುಭ ಮುಹೂರ್ತ :

ಗಂಗಾ ಸಪ್ತಮಿ 2022 ಶುಭ ಮುಹೂರ್ತ :

ಗಂಗಾ ಸಪ್ತಮಿ - 7 ನೇ ಮೇ 2022, ಶನಿವಾರ

ಗಂಗಾ ಸಪ್ತಮಿ ಮಧ್ಯಾಹ್ನ ಮುಹೂರ್ತ - 11:28 ರಿಂದ 02:18 ರವರೆಗೆ (ಅವಧಿ - 02 ಗಂಟೆ 50 ನಿಮಿಷಗಳು)

ಗಂಗಾ ಸಪ್ತಮಿಯಂದು ಪಠಿಸಬೇಕಾದ ಮಂತ್ರಗಳು ಹಾಗೂ ಅದರ ಅರ್ಥ:

ಗಂಗಾ ಸಪ್ತಮಿಯಂದು ಪಠಿಸಬೇಕಾದ ಮಂತ್ರಗಳು ಹಾಗೂ ಅದರ ಅರ್ಥ:

ಗಂಗಾ ಸಪ್ತಮಿಯ ದಿನದಂದು ಗಂಗಾಮಾತೆಯ ಕೆಲವು ಮಂತ್ರಗಳನ್ನು ಜಪಿಸಿದರೆ ಭಕ್ತರಿಗೆ ಗಂಗಾಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ. ಅಂತಹ ಮಂತ್ರಗಳಾವುವು ಇಲ್ಲಿದೆ ನೋಡಿ:

1. ಗಂಗೆಯಲ್ಲಿ ಸ್ನಾನ ಮಾಡುವ ಮೊದಲು ಈ ಮಂತ್ರವನ್ನು ಪಠಿಸಿ:

1. ಗಂಗೆಯಲ್ಲಿ ಸ್ನಾನ ಮಾಡುವ ಮೊದಲು ಈ ಮಂತ್ರವನ್ನು ಪಠಿಸಿ:

''ಗಂಗಾ ಚ ಯಮುನಾ ಚೈವ ಗೋದಾವರಿ ಸರಸ್ವತಿ

ನರ್ಮದೇ ಸಿಂಧು ಕಾವೇರಿ ಜಲೇ ಅಸ್ಮಿನ್ ಸನ್ನಿಧಿಂ ಕುರು''

ಅರ್ಥ: ಓ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ! (ನೀವೆಲ್ಲರೂ) ಈ ನೀರಿನಲ್ಲಿ (ನನ್ನ ಸ್ನಾನ ಮಾಡಿಸಲು) ಬನ್ನಿ ಎಂಬುದಾಗಿದೆ.

2. ಗಂಗಾ ಸಪ್ತಮಿಯ ಪೂಜೆಯ ಸಮಯದಲ್ಲಿ ಈ ಮಂತ್ರ ಪಠಿಸಿ:

2. ಗಂಗಾ ಸಪ್ತಮಿಯ ಪೂಜೆಯ ಸಮಯದಲ್ಲಿ ಈ ಮಂತ್ರ ಪಠಿಸಿ:

''ಓಂ ನಮೋ ಗಂಗಾಯೈ ವಿಶ್ವರೂಪಿಣಾಯೈ ನಾರಾಯಣಾಯೈ ನಮೋ ನಮಃ''

ಅರ್ಥ: ಗಂಗಾ ಮಾತೆ ನೀನು ವಿಶ್ವರೂಪಿಣಿ, ನೀನು ನರನಾರಾಯಣ ರೂಪಿ, ಗಂಗಾಮಯಿ, ನಿನಗೆ ನಮಸ್ಕಾರಗಳು ಎಂಬುದಾಗಿದೆ.

ಗಂಗಾ ಸಪ್ತಮಿಯ ದಿನದಂದು ಪೂಜೆಯ ಸಮಯದಲ್ಲಿ ನೀವು ಈ ಪವಿತ್ರ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಪ್ರತಿದಿನವೂ ಜಪಿಸಬಹುದು.

''ಗಂಗಾಂ ವಾರಿ ಮನೋಹರಿ ಮುರಾರಿಚರಂಚುತಮ್

ತ್ರಿಪುರಾಋಷಿರ್ಶ್ಚರೀ ಪಾಪಹಾರೀ ಪುನತು ಮಾತಾ''

ಅರ್ಥ: ಸುಂದರವಾಗಿರುವ, ವಿಷ್ಣುವಿನ ಪಾದಗಳಿಂದ ಹುಟ್ಟಿದ, ತ್ರಿಪುರಾರಿಯ ತಲೆಯ ಮೇಲೆ ಕುಳಿತಿರುವ, ಪಾಪ ವಿನಾಶಿನಿ, ಓ ತಾಯಿಯೇ, ನನ್ನನ್ನು ಶುದ್ಧಿಸು ಎಂಬುದಾಗಿದೆ.

3. ಗಂಗೆಯಲ್ಲಿ ಸ್ನಾನ ಮಾಡಲಾಗದಿದ್ದರೆ ಹೀಗೆ ಮಾಡಿ:

3. ಗಂಗೆಯಲ್ಲಿ ಸ್ನಾನ ಮಾಡಲಾಗದಿದ್ದರೆ ಹೀಗೆ ಮಾಡಿ:

ಗಂಗಾ ಸಪ್ತಮಿಯ ಪವಿತ್ರ ದಿನದಂದು ನಿಮಗೆ ಗಂಗಾ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಮನೆಯಲ್ಲೇ ಸ್ನಾನ ಮಾಡುವ ನೀರಿಗೆ ಗಂಗಾ ಜಲವನ್ನು ಬೆರೆಸಿ ಸ್ನಾನ ಮಾಡಬಹುದು. ಈ ದಿನ ಸ್ನಾನ ಮಾಡುವಾಗ "ಓಂ ನಮೋ ಗಂಗಾಯೈ ವಿಶ್ವರೂಪಿಣ್ಯೈ ನಾರಾಯಣ್ಯೈ ನಮೋ ನಮಃ" ಎನ್ನುವ ಮಂತ್ರವನ್ನು ಪಠಿಸುತ್ತಾ ಸ್ನಾನ ಮಾಡಿ. ಮನೆಯಲ್ಲಿ ಗಂಗಾ ಸ್ನಾನ ಮಾಡಿದ ನಂತರ, ಈ ಕೆಳಗಿನ ಮಂತ್ರವನ್ನು ಪಠಿಸುತ್ತಾ ಗಂಗಾ ಮಾತೆಯ ಚಿತ್ರವನ್ನು ಪೂಜಿಸಿ.

''ನಮಾಮಿ ಗಂಗೇ ತವ ಪಾದ ಪಂಕಜಂ ಸುರಾಸುರೈವೃಂದಿತ ದಿವ್ಯ ರೂಪಂ

ಭುಕ್ತಿ ಚ ಚ ಮುಕ್ತಿ ಚ ದದಾಸಿ ನಿತ್ಯಂ ಭಾವಾನುಸಾರೇಣ ಸದಾನಾರಾಯಣಂ''

''ಗಂಗಾ ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ

ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ''

ಅರ್ಥ: ಗಂಗೆಯನ್ನು ನೂರು ಕಿ.ಮೀ ದೂರ ನಿಂತು ಸ್ಮರಿಸುವವನು ಸಹ ತನ್ನ ಪಾಪಗಳೆಲ್ಲವನ್ನು ಕಳೆದು, ವಿಷ್ಣುವಿನ ಅಂದರೆ ಸ್ವರ್ಗಕ್ಕೆ ತೆರಳುತ್ತಾರೆ. ಇದರರ್ಥ ನೀವು ಗಂಗೆಯಿರುವ ಜಾಗಕ್ಕೆ ಹೋಗಿ, ಪೂಜೆ-ಪಠಣೆ ಮಾಡಬೇಕೆಂದಿಲ್ಲ. ಎಲ್ಲಿದ್ದೀರೋ ಅಲ್ಲಿಂದಲೇ ಶ್ರದ್ಧೆಯಿಂದ ಮಂತ್ರವನ್ನು ಪಠಿಸಿದರೆ, ಗಂಗಾಮಾತೆ ನಿಮ್ಮೆಲ್ಲ ಪಾಪಗಳನ್ನು ಕಳೆಯುತ್ತಾಳೆ ಎಂಬುದಾಗಿದೆ.

English summary

Ganga Saptami 2022 : Maa Ganga Mantra Benefits And Significance In kannada

Here we talking about Ganga Saptami 2022 : Maa Ganga Mantra Benefits And Significance In kannada, read on
X
Desktop Bottom Promotion