For Quick Alerts
ALLOW NOTIFICATIONS  
For Daily Alerts

ಚತುರ್ಥಿ ವಿಶೇಷ: ಅಷ್ಟ ನಾಮ 'ಗಣಪನಿಗೆ' ಇದೋ ನಮೋ ನಮಃ

By Super Admin
|

ದೇವನೊಬ್ಬ ನಾಮ ಹಲವು ಎಂಬುದೊಂದು ಗಾದೆ. ಪ್ರತಿ ದೇವರ ಶಕ್ತಿ ಮತ್ತು ಸಾಮರ್ಥ್ಯವನ್ನಾಧರಿಸಿ ಒಂದಕ್ಕಿಂತ ಹೆಚ್ಚು ಹೆಸರಿನಿಂದಲೂ ಕರೆಯಲಾಗುತ್ತದೆ. ಉದಾಹರಣೆಗೆ ಕೃಷ್ಣನಿಗೆ ಇರುವ ಹೆಸರುಗಳು.

ಮಹಾಭಾರತದಲ್ಲಿ ಕೃಷ್ಣನ ಪಾತ್ರವನ್ನು ಆಧರಿಸಿ ಒಟ್ಟು ಮೂವತ್ತೇಳು ಹೆಸರುಗಳಿವೆ. ಗಿರಿಯನ್ನು ಹೊತ್ತ ಕಾರಣ ಗಿರಿಧರ, ಹಸುಗಳನ್ನು ರಕ್ಷಿಸುವ ಗೋವಿಂದ, ಕಪ್ಪು ವರ್ಣದವನೆಂದು ಶ್ಯಾಮಸುಂದರ, ಕೊಳಲನ್ನು ಊದುವವನಾಗಿ ಮುರಳಿ ಇತ್ಯಾದಿ. ಗಣೇಶ ಚತುರ್ಥಿ ವಿಶೇಷ: ಗಣಪನಿಗೆ ಇವುಗಳೆಂದರೆ ಅಚ್ಚುಮೆಚ್ಚು

ಎಲ್ಲರ ನೆಚ್ಚಿನ ವಿನಾಯಕನಿಗೂ ಆತನ ಶಕ್ತಿ, ರೂಪ ಮತ್ತು ಸಾಮರ್ಥ್ಯವನ್ನಾಧರಿಸಿ ಕೆಲವಾರು ಹೆಸರುಗಳಿವೆ. ಪುರಾಣಗಳಲ್ಲಿ ಒಟ್ಟು ಎಂಟು ಹೆಸರುಗಳನ್ನು ನೀಡಿರುವ ಕಾರಣ ಗಣಪನಿಗೆ ಅಷ್ಟ ಗಣಪತಿ ಎಂದೂ ಕರೆಯುತ್ತಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನ ಹೆಸರುಗಳು ಮತ್ತು ಈ ಹೆಸರುಗಳು ಏಕಾಗಿ ಬಂದಿವೆ ಎಂಬುದನ್ನು ಅರಿಯುವುದು ಸಮಯೋಚಿತ ಹಾಗೂ ಅಗತ್ಯವೂ ಆಗಿದೆ... ಮುಂದೆ ಓದಿ...

ಏಕದಂತ

ಏಕದಂತ

ಗಣೇಶನ ಮುಖ ಆನೆಯದ್ದಾಗಿದ್ದು ಆನೆಗೆ ಇರುವ ಎರಡು ದಂತಗಳಲ್ಲಿ ಒಂದು ದಂತ (ಬಲದಂತ) ತುಂಡಾಗಿರುತ್ತದೆ. ಒಂದೇ ಪೂರ್ಣದಂತ ಇರುವ ಕಾರಣಕ್ಕಾಗಿ ಗಣೇಶನನ್ನು ಏಕದಂತ ಎಂಬ ಹೆಸರಿನಿಂದ ಕರೆಯಲಾಗುತ್ತದೆ. (ಕೆಲವು ಪುರಾಣಗಳ ಪ್ರಕಾರ ಇದು ಎಡದಂತವೂ ಆಗಿದೆ) ಗಣಪ ಕ್ರೋಧವನ್ನು ಗೆದ್ದವನಾಗಿದ್ದು ಡೊಳ್ಳು ಹೊಟ್ಟೆ ಹೊಂದಿದ್ದಾನೆ. ಕೈಯಲ್ಲಿ ಕೊಡಲಿ, ಜಪಮಾಲೆ, ಮೋದಕ ಹಿಡಿದಿರುತ್ತಾನೆ.

ಧೂಮೃವರ್ಣ

ಧೂಮೃವರ್ಣ

ಧೂಮೃ ಎಂಬ ಪದ ಧೂಮದಿಮ್ದ ಬಂದಿದ್ದು ಹೊಗೆ ಎಂಬ ಅರ್ಧ ಹೊಂದಿದೆ. ಧೂಮೃವರ್ಣ ಎಂದರೆ ಹೊಗೆಯ ಬಣ್ಣವನ್ನು ಹೊಂದಿದವನು ಎಂಬ ಅರ್ಥ ಬರುತ್ತದೆ. ದೇವನೇ ಮೂಲಭೂತವಾಗಿದ್ದು ಆತನೇ ಸತ್ಯವಾಗಿದ್ದಾನೆ. ಗಣೇಶ ಈ ರೂಪದಲ್ಲಿ ಅಹಂಕಾರವನ್ನು ಮೆಟ್ಟಿ ನಿಲ್ಲುವವನಾಗಿದ್ದಾನೆ.

ವಕ್ರತುಂಡ

ವಕ್ರತುಂಡ

ಗಣೇಶನ ಸೊಂಡಿಲು ವಕ್ರವಾಗಿರುವ ಕಾರಣ ವಕ್ರತುಂಡನೆಂಬ ಹೆಸರು ಬಂದಿದೆ. ಅಂದರೆ ಮನದಲ್ಲಿರುವ ಅಸೂಯೆಯನ್ನು ತೊಡೆದುಹಾಕುವವನಾಗಿ ಈ ರೂಪ ಹೊಂದಿದ್ದಾನೆ. ನಮ್ಮ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಯನ್ನು ಗಮನಿಸಿ ನಮ್ಮನ್ನು ಸನ್ಮಾರ್ಗದತ್ತ ನಡೆಸುವ ಮಾರ್ಗದರ್ಶಕನೂ ಆಗಿದ್ದಾನೆ.

ಮಹೋದರ

ಮಹೋದರ

ಉದರ ಎಂದರೆ ಹೊಟ್ಟೆ. ಮಹಾ ಉದರ ಎಂದರೆ ದೊಡ್ಡ ಹೊಟ್ಟೆ. ದೊಡ್ಡ ಹೊಟ್ಟೆಯನ್ನು ಹೊಂದಿರುವ ಗಣೇಶ ಮಹಾ ಉದರವುಳ್ಳವ ಎಂದರೆ ಮಹೋದರನಾಗಿದ್ದಾರೆ. ಗಣೇಶನು ಇಡಿಯ ಬ್ರಹ್ಮಾಂಡವನ್ನು ಎತ್ತಿ ಹಿಡಿದಿದ್ದಾನೆ. ಮೋಹ ಅಥವಾ ಆಕರ್ಷಣೆಯನ್ನು ಇಲ್ಲವಾಗಿಸಿ ಸತ್ಯವನ್ನು ತೋರುವ ಮೂಲಕ ಸತ್ಯದ ಕಡೆ ನಡೆಸುವವನಾಗಿದ್ದಾನೆ.

ಗಜಾನಾನ

ಗಜಾನಾನ

ಕುಬೇರನ ಮಗ ಲೋಭನನ್ನು ಇಲಿಯ ಮೇಲೆ ಸವಾರಿ ಮಾಡುವ ಗಜಮುಖದ ಗಣೇಶ ಸೋಲಿಸಿ ಕೊಲ್ಲುವ ಮೂಲಕ ಶಾಂತಿಯನ್ನು ಕಾಪಾಡುತ್ತಾನೆ. ನಮ್ಮ ಮನದಲ್ಲಿಯೂ ಲೋಭ ಮತ್ತು ಅತಿಯಾಸೆಗಳೆಂಬ ರಾಕ್ಷಸರು ಶಾಂತಿಯಿಂದ ವಿಮುಖರಾಗಿಸುತ್ತಾರೆ. ಈ ರಾಕ್ಷಸರನ್ನು ಸದೆಬಡಿದು ಮನದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ಗಣೇಶ ನೆರವಾಗುತ್ತಾನೆ.

ಲಂಬೋದರ

ಲಂಬೋದರ

ಗಣೇಶನು ಕ್ರೋಧವನ್ನು ನಾಶಮಾಡುವವನಾಗಿದ್ದು ಈ ಕ್ರೋಧವನ್ನು ತನ್ನ ಬೊಜ್ಜುತುಂಬಿದ ಹೊಟ್ಟೆಯಲ್ಲಿ ಅರಗಿಸಿಕೊಳ್ಳುತ್ತಾನೆ ಎಂಬ ನಂಬಿಕೆಯಿದೆ. ಕ್ರೋಧ, ಋಣಾತ್ಮಕ ಭಾವನೆಗಳನ್ನು ನಿವಾರಿಸುವ ಮೂಲಕ ನೆಮ್ಮದಿಯನ್ನು ನೀಡುತ್ತಾನೆ.

ವಿಕಟ

ವಿಕಟ

ವಿರೂಪಗೊಂಡ ಎಂಬ ಅರ್ಥ ಬರುವ ವಿಕಟ ಎಂಬ ಹೆಸರು ಈತನ ಒಂದು ಅಸಾಮಾನ್ಯ ಅವತಾರವಾಗಿದೆ. ಈ ಅವತಾರದಲ್ಲಿ ಗಣೇಶ ಕಾಮಾಸುರನನ್ನು ಸೋಲಿಸುತ್ತಾನೆ. ಮನದಲ್ಲಿ ಮೂಡುವ ಕಾಮವಾಂಛೆಗಳನ್ನು ನಿಗ್ರಹಿಸುವ ಮೂಲಕ ಗಣೇಶ ಮನವನ್ನು ಗೆಲ್ಲಲು ನೆರವಾಗುತ್ತಾನೆ.

ವಿಘ್ನರಾಜ

ವಿಘ್ನರಾಜ

ವಿಘ್ನ ಎಂದರೆ ಒಂದು ಕೆಲಸಕ್ಕೆ ಎದುರಾಗುವ ಯಾವುದೇ ರೂಪದ ಅಡ್ಡಿ. ತನ್ನ ಭಕ್ತರ ಕೆಲಸಕ್ಕೆ ಅಡ್ಡಿಬರುವ ವಿಘ್ನಗಳನ್ನು ನಿವಾರಿಸಿ ಕೆಲಸ ಸುಸೂತ್ರವನ್ನಾಗಿಸುವ ಕಾರಣಕ್ಕೆ ಗಣೇಶನನ್ನು ವಿಘ್ನರಾಜ ಎಂದು ಕರೆಯಲಾಗುತ್ತದೆ. ನಮ್ಮ ಮನಸ್ಸಿನಲ್ಲಿರುವ ಅಹಮ್ಮಿಕೆ, ಗರ್ವ ಅಥವಾ ಒಣಪ್ರತಿಷ್ಠೆಯನ್ನು ನಿವಾರಿಸಿ ಸ್ವಸಾಮರ್ಥ್ಯವನ್ನು ಪ್ರಕಟಿಸಲು ಗಣೇಶ ನೆರವಾಗುತ್ತಾನೆ.

ಗಣೇಶನ ಕೃಪೆಗೆ ಪಾತ್ರರಾಗಿ...

ಗಣೇಶನ ಕೃಪೆಗೆ ಪಾತ್ರರಾಗಿ...

ನಮ್ಮ ಸ್ವಂತ ಸಾಮರ್ಥ್ಯಗಳನ್ನು ಅರಿತು ಮುಂದುವರೆದರೇ ನಿಜವಾದ ಆನಂದ ದೊರಕುತ್ತದೆ. ಈ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನ ಹೆಸರುಗಳ ಬಗ್ಗೆ ತಿಳಿಸು ಈ ಹಬ್ಬವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಗಣೇಶನ ಕೃಪೆಗೆ ಪಾತ್ರರಾಗಬಹುದು ಹಾಗೂ ನಮಗೆ ಎದುರಾಗುವ ವಿಘ್ನ ಕಂಟಕಗಳನ್ನು ನಿವಾರಿಸಿ ಉತ್ತಮ ಜೀವನ ಸಾಗಿಸಬಹುದು.

English summary

Ganesha's Eight Forms And Names-Recall On Ganesh Chaturthi

Let us look into the eight important forms of Lord (Ashta Ganapati ) and celebrate Ganesha Chaturthi delving into their meaning. The eight formsand are manifestations to quell the eight human weaknesses by understanding them and worshipping the Lord.
Story first published: Sunday, September 4, 2016, 14:48 [IST]
X
Desktop Bottom Promotion