Just In
Don't Miss
- News
ಡೊನಾಲ್ಡ್ ಟ್ರಂಪ್ಗೆ ಹಿನ್ನಡೆ: ವಾಗ್ದಂಡನೆ ಪರ ಅಧಿಕ ಮತ
- Automobiles
ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?
- Technology
ಟಿಕ್ಟಾಕ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಮನೆಯಲ್ಲಿ ಗಣೇಶನ ಪೂಜೆಯನ್ನು ವಿಧಿವತ್ತಾಗಿ ಮಾಡುವುದು ಹೇಗೆ?
ಗಣೇಶ ಚತುರ್ಥಿಯನ್ನು ವಿನಾಯಕನ ಹುಟ್ಟಿದ ಹಬ್ಬವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಪ್ಟೆಂಬರ್ 13, 2018 ರಂದು ಈ ಹಬ್ಬವನ್ನು ಇಡಿಯ ದೇಶವೇ ಕೊಂಡಾಡುತ್ತದೆ. ಮಣ್ಣಿನಿಂದ ಗಣಪನನ್ನು ತಯಾರಿಸಿ ಪೂಜೆ ಮಾಡಿ ಮೆರವಣಿಗೆ ನಡೆಸಿ ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಪ್ರಥಮ ಪೂಜೆಗೆ ಭಾಜನರಾಗಿರುವ ಗಣಪತಿಯ ಪೂಜೆಯನ್ನು ಗಣಪನ ಹಬ್ಬದಂದು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ. ಗಣಪತಿ ಬಪ್ಪಾ ಮೋರಿಯಾ ಮಂಗಳ ಮೂರ್ತಿ ಮೋರಿಯಾ ಎಂಬ ಉದ್ಘೋಷದೊಂದಿಗೆ ಗಣಪತಿಯನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವ ಮತ್ತು ಮನೆಯಲ್ಲಿ ನಡೆಸುವ ಗಣಪನ ಪೂಜೆಗೆ ಹಲವಾರು ವ್ಯತ್ಯಾಸಗಳಿವೆ.
ಮನೆಯಲ್ಲಿ ನೀವು ಗಣೇಶನನ್ನು ಸ್ಥಾಪಿಸಿ ಮೂರ್ತಿಗೆ ಪೂಜೆಯನ್ನು ಮಾಡುತ್ತೀರಿ ಎಂದಾದಲ್ಲಿ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ವಿಧಿವತ್ತಾಗಿ ಮನೆಯಲ್ಲಿ ಗಣಪನ ಪೂಜೆಯನ್ನು ನಡೆಸಬೇಕು. ನಮಗೆಲ್ಲಾ ತಿಳಿದಿರುವಂತೆ ಗಣಪನ ಪೂಜೆಗೆ ಯಾವುದೇ ಕಟ್ಟುಪಾಡು ನಿರ್ಬಂಧಗಳು ಇರುವುದಿಲ್ಲ.
ಗಣಪತಿಯ ಮೂರ್ತಿಯ ಮುಂದೆ ಭಕ್ತಿಯಿಂದ ಕೈಮುಗಿದರೂ ಸಾಕು ಆ ಗಣಪನ ಕೃಪಾಕಟಾಕ್ಷ ನಮ್ಮ ಮೇಲಿರುತ್ತದೆ. ಆದರೆ ಗಣೇಶನ ಪೂಜೆ ಮಾಡುವ ಸಮಯದಲ್ಲಿ ನೀವು ಕೆಲವೊಂದು ನಿಯಮಗಳನ್ನು ಅನುಸರಿಸಲೇಬೇಕಾಗುತ್ತದೆ. ಅದೇನು ಎಂಬುದನ್ನು ನಾವು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ. ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದರಿಂದ ಹಿಡಿದು ನೀವು ಅನುಸರಿಸಬೇಕಾದ ಮುಹೂರ್ತ ಮೊದಲಾದ ನಿಯಮಗಳನ್ನು ಇದು ಒಳಗೊಂಡಿದೆ.

ಗಣೇಶ ಸ್ಥಾಪನಾ ಮುಹೂರ್ತ
ಮನೆಯಲ್ಲಿ ಗಣಪನ ಮೂರ್ತಿಯನ್ನು ಇರಿಸುವ ಸಮಯ ಮತ್ತು ಪೂಜೆಗೆ ಅಣಿಗೊಳಸಿಬೇಕಾದ ಸಮಯವನ್ನು ಇದು ನಿಗದಿಪಡಿಸುತ್ತದೆ. ಈ ಸಮಯ ಹೆಚ್ಚು ಶುಭಕರವಾಗಿದೆ. ಈ ಬಾರಿ ಮುಹೂರ್ತವು 13 ಸಪ್ಟೆಂಬರ್ರಂದು 11:08 ರ ಬೆಳಗ್ಗೆಯಿಂದ ಮಧ್ಯಾಹ್ನ 1:34 ರವರೆಗೆ ಇದೆ

ಗಣೇಶನ ಮೂರ್ತಿಯನ್ನು ಸ್ಥಾಪಿಸುವುದು
ಸ್ನಾನವನ್ನು ಮಾಡಿ ಪೂಜಾ ಸ್ಥಳವನ್ನು ಶುದ್ಧೀಕರಿಸಿದ ನಂತರ, ಸ್ಟೂಲ್ ತೆಗೆದುಕೊಳ್ಳಿ ಮತ್ತು ಅದರ ಮೇಲೆ ಕೆಂಪು ಬಟ್ಟೆಯನ್ನು ಹಾಸಿ. ಸ್ಟೂಲ್ನ ಮಧ್ಯಭಾಗದಲ್ಲಿ, ಸ್ವಲ್ಪ ಅಕ್ಕಿ ಹರಡಿ ಮತ್ತು ಅಕ್ಕಿಯ ಪದರದ ಮೇಲೆ ಗಣೇಶ ಮೂರ್ತಿಯನ್ನಿರಿಸಿ. ಗಣೇಶನ ಸೊಂಡಿಲು ಎಡಭಾಗದಲ್ಲಿದೆ ಮತ್ತು ಮೂರ್ತಿಯ ಬಣ್ಣವು ಕೆಂಪು ಇಲ್ಲದಿದ್ದರೆ ಬಿಳಿ ಬಣ್ಣದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಕಲಶ ಸ್ಥಾಪನೆ ಮತ್ತು ರಿಧಿ ಸಿದ್ಧಿ
ಒಂದು ತಾಮ್ರದ ಕಲಶವನ್ನು (ಕಲಶ ಎಂದೂ ಕರೆಯುತ್ತಾರೆ) ತೆಗೆದುಕೊಳ್ಳಿ ಮತ್ತು ಅದನ್ನು ಅದರಲ್ಲಿ ನೀರು ತುಂಬಿಸಿ. ಕೆಂಪು ಬಟ್ಟೆಯಿಂದ ಅದನ್ನು ಮುಚ್ಚಿ ಮತ್ತು ಕಲಶ ಮತ್ತು ಬಟ್ಟೆಯನ್ನು ಎರಡೂ ಮೊಲಿ (ಪವಿತ್ರ ಕೆಂಪು ದಾರ) ಬಳಸಿ ಒಟ್ಟಿಗೆ ಕಟ್ಟಿ. ವಾಯುವ್ಯದಲ್ಲಿ ಕಲಶವನ್ನಿರಿಸಿ ಅಥವಾ ಗಣೇಶನ ವಿಗ್ರಹದ ಎಡಭಾಗದಲ್ಲಿ ಇರಿಸಿ. ಗಣೇಶನ ವಿಗ್ರಹದ ಪ್ರತಿ ಬದಿಯಲ್ಲಿ ಎರಡು ಅಡಿಕೆಯನ್ನು (ಸುಪರಿ) ಇರಿಸಲು ಮರೆಯಬೇಡಿ. ಇವು ಗಣೇಶನ ಪತ್ನಿಯರಾದ, ರಿಧಿ ಮತ್ತು ಸಿದ್ಧಿಯನ್ನು ಸಂಕೇತಿಸುತ್ತದೆ.

ಸಂಕಲ್ಪ ಮತ್ತು ಮಂತ್ರಗಳು
ನಿರ್ದಿಷ್ಟ ದಿನಗಳಂದು ಗಣೇಶನಿಗೆ ಮಾಡುವ ಪ್ರಾರ್ಥನೆಗಳನ್ನು ಸಂಕಲ್ಪ ಸೂಚಿಸುತ್ತದೆ. ಮೂರ್ತಿಯನ್ನು ಸ್ಥಾಪಿಸಿದ ನಂತರ ಅಕ್ಷತೆಯನ್ನು ತೆಗೆದುಕೊಂಡು ಅದರಲ್ಲಿ ಹೂವು ಹಾಕಿ ಬಲಕೈಯಲ್ಲಿ ಹೂವನ್ನು ಹಿಡಿದುಕೊಂಡು ಪ್ರಾರ್ಥನೆಯನ್ನು ಮಾಡಬೇಕು.

ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು:
1. ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನ ಕುರುಮೇ ದೇವ, ಸರ್ವಕಾರ್ಯೇಷು ಸರ್ವದಾ
2. ಓಂ ಗಣೇಶಾಯ ನಮಃ
ಗಣೇಶ ಚತುರ್ಥಿ: ಗಣೇಶನಿಗೆ ಪೂಜೆ ಮಾಡುವ ವಿಧಿವಿಧಾನಗಳು ಹೀಗಿರಲಿ ...

ಪೂಜಾ ವಿಧಿ
ಗಣೇಶನಿಗೆ ಗಂಗಾ ಜಲ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಿ ಈ ಸಮಯದಲ್ಲಿ ದುರ್ವ ಹುಲ್ಲು ಮತ್ತು ವೀಳ್ಯದೆಲೆಯನ್ನು ಬಳಸಿ. ಶೋಡಶೋಪಚಾರ ಪೂಜೆಯನ್ನು ಮಾಡಿ ಅಂತೆಯೆ ವಿಗ್ರಹವನ್ನು ಹಳದಿ ಬಣ್ಣದ ಬಟ್ಟೆಯಿಂದ ಅಲಂಕರಿಸಿ. ಕುಂಕುಮ ಮತ್ತು ಅಕ್ಕಿಯಿಂದ ತಿಲಕವನ್ನು ಹಚ್ಚಿ. ಹೂವು ಅರ್ಪಿಸಿ ಮತ್ತು ಗಣಪನಿಗೆ ಸಿಹಿಯನ್ನು ಪ್ರಸಾದವಾಗಿ ನೀಡಿ. ಮೋದಕ ಅಥವಾ ಲಾಡನ್ನು ನೀವು ಪ್ರಸಾದವಗಿ ಗಣಪನಿಗೆ ನೀಡಬಹುದು. ಪಂಚಮೇವವನ್ನು ನೀಡಿ. (ಐದು ಹಣ್ಣುಗಳು) ನಂತರ, ದೀಪವನ್ನು ಹಚ್ಚಿ ಮತ್ತು ಆರತಿಯನ್ನು ಬೆಳಗಿ.

ದಿನಕ್ಕೆ ಮೂರು ಬಾರಿ ಭೋಗವನ್ನು ಅರ್ಪಿಸುವುದು
ಗಣೇಶನಿಗೆ ಆಹಾರ ಮತ್ತು ಸಿಹಿತಿಂಡಿ ಎಂದರೆ ಬಹಳ ಅಚ್ಚುಮೆಚ್ಚು. ಅದರಲ್ಲೂ ಲಾಡು ಮತ್ತು ಮೋದಕವೆಂದರೆ ಗಣೇಶನಿಗೆ ಪಂಚಪ್ರಾಣವಾದುದು. ಆದ್ದರಿಂದ ನಾವು ಗಣಪನಿಗೆ ಲಾಡು ಮತ್ತು ಮೋದಕವನ್ನು ಪ್ರಸಾದವಾಗಿ ನೀಡಬೇಕು. ಅದರಲ್ಲೂ ಗಣೇಶ ನಮ್ಮ ಮನೆಗೆ ಅತಿಥಿಯಾಗಿ ಬರುತ್ತಾರೆ ಮತ್ತು ಮೂರು ಹೊತ್ತು ನಾವು ಆಹಾರವನ್ನು ನೈವೇದ್ಯ ರೂಪದಲ್ಲಿ ನಾವು ಗಣಪನಿಗೆ ನೀಡಬೇಕು. ಹೀಗೆ ಹತ್ತು ದಿನ ಮಾಡಬೇಕು. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ, ಅದು ಅಶುಭ ಎಂದು ಕರೆಯಲಾಗುತ್ತದೆ.