For Quick Alerts
ALLOW NOTIFICATIONS  
For Daily Alerts

ವಿನಾಯಕ ಚತುರ್ಥಿ 2019: ವಿಘ್ನವಿನಾಶಕನನ್ನು ಒಲಿಸಿಕೊಳ್ಳುವ ಸರಳ ಮಂತ್ರಗಳು

|

ಡೊಳ್ಳು ಹೊಟ್ಟೆ, ಗಜಮುಖನೆಂದು ಪೂಜಿಸಲ್ಪಡುವ ಗಣೇಶ ದೇವರು ಕೆಡುಕು ಹಾಗೂ ಪಾಪ ವಿಮೋಚನೆ ಮಾಡುವ ಸ್ನೇಹಪರ ದೇವರೆಂದೇ ಪರಿಗಣಿಸಲಾಗಿದೆ. ಗಣಪತಿ ದೇವರನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ ಬೇರೆ ಧರ್ಮದವರು ಕೂಡ ಪೂಜಿಸುವುದು ಅವರ ಸುಂದರ ದೇಹ ಹಾಗೂ ಭಕ್ತರಿಗೆ ಒಲಿಯುವ ಕಾರಣಕ್ಕಾಗಿ. ಗಣೇಶ ದೇವರನ್ನು ಜನರ ಅಧಿಪತಿ ಗಣಪತಿ ಎಂದು ಕರೆಯಲಾಗುತ್ತದೆ.

2019ರಲ್ಲಿ ಗಣೇಶ ಚತುದರ್ಶಿ ಸೆಪ್ಟೆಂಬರ್ 2ರಂದು ಸೋಮವಾರದಂದು ಅಚರಿಸಲಾಗುತ್ತಿದ್ದು, ಈ ದಿನದಂದು ಗಣಪತಿ ದೇವರನ್ನು ಸಂಭ್ರಮದಿಂದ ಪೂಜಿಸಲಾಗುವುದು. ಬರಿಯ ಗಣೇಶ ಚತುರ್ಥಿಯಂದು ಮಾತ್ರವಲ್ಲದೆ ಇತರ ಶುಭ ಸಮಾರಂಭಗಳಲ್ಲಿ ಕೂಡ ಮೊದಲ ಪೂಜೆಯನ್ನು ಗಣಪತಿಗೆ ನೀಡಲಾಗುತ್ತದೆ. ಮೊದಲು ಗಣೇಶನಿಗೆ ಪೂಜೆಯನ್ನು ಸಲ್ಲಿಸಿದ ಬಳಿಕವೇ ಇತರ ಶುಭ ಕಾರ್ಯಗಳನ್ನು ನಡೆಸಲಾಗುತ್ತದೆ.

ವಿಘ್ನವನ್ನು ನಿವಾರಿಸುವ ವಿಘ್ನೇಶ ಎಂಬುದಾಗಿ ಕರೆಯಲ್ಪಡುವ ಗಣಪತಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಅದೇ ರೀತಿ ಜೀವನದಲ್ಲಿ ಯಾವುದೇ ಬಗೆಯ ಸಂಕಷ್ಟಗಳಿದ್ದರೂ ಗಣಪನನ್ನು ನೆನೆಯುವುದರಿಂದ ಅದು ಬಗೆಹರಿಯುತ್ತದೆ ಎಂಬುದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಇಂದಿನ ಲೇಖನದಲ್ಲಿ ಮೋದಕ ಪ್ರಿಯನನ್ನು ಬಗೆ ಬಗೆಯಾಗಿ ಪ್ರಾರ್ಥಿಸಿ ಅವರ ಆಶೀರ್ವಾದವನ್ನು ಪಡೆಯಬಹುದಾದ ಕೆಲವೊಂದು ಮಂತ್ರಗಳನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ. ಈ ಮಂತ್ರಗಳನ್ನು ಪಠಿಸಿ ಗಣಪನಿಗೆ ಪೂಜೆಯನ್ನು ಸಲ್ಲಿಸಿದರೆ ಅವರು ನಮ್ಮ ಭಕ್ತಿಗೆ ಖಂಡಿತ ಒಲಿಯುತ್ತಾರೆ. ಸರಳ ಪ್ರಾರ್ಥನೆ ಪೂಜೆಯಿಂದಲೇ ನಾವು ಗಣಪನನ್ನು ಮೆಚ್ಚಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಆ ಮಂತ್ರಗಳೇನು ಮತ್ತು ಅವುಗಳ ಅರ್ಥವನ್ನು ಇಂದಿಲ್ಲಿ ತಿಳಿದುಕೊಳ್ಳೋಣ....

ಗಣೇಶ ಮಂತ್ರ

ಗಣೇಶ ಮಂತ್ರ

ಗನ್ ಗಣಪತ್ ನಾ ನಮೋ ನಾಮ, ಶ್ರೀ ಸಿದ್ಧಿ ವಿನಾಯಕ ನಮೋ ನಮಃ: ಅಷ್ಟ ವಿನಾಯಕ ನಮೋ ನಮಃ: ಗಣಪತ್ ಬಪ್ಪ ಮೊರಾಯ. ಈ ಮಂತ್ರವನ್ನು ಗಣಪತಿ ಉಪನಿಷತ್‌ನಿಂದ ಪಡೆದುಕೊಳ್ಳಲಾಗಿದೆ. ಯಾವುದಾದರೂ ಹೊಸ ಯೋಜನೆ, ಪ್ರಯಾಣ, ವಿದ್ಯಾಭ್ಯಾಸ ಅಥವಾ ಉದ್ಯೋಗವನ್ನು ಆರಂಭಿಸುವಾಗ ಈ ಮಂತ್ರವನ್ನು ಜಪಿಸಬೇಕು. ಯಾವುದೇ ವಿಘ್ನಗಳಿದ್ದಲ್ಲಿ ಅದು ನಿವಾರಣೆಗೊಂಡು ನಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಜಯ ದೊರೆಯುತ್ತದೆ.

ಓಂ ಗಾಜಾನನಮ್

ಓಂ ಗಾಜಾನನಮ್

ಓಂ ಗಾಜಾನನಮ್ ಭೂತಗಣಾದಿ ಸೇವಿತಂ ಕಪೀತ ಜಂಬೂಫಲಚಾರು ಭಕ್ಷಣಂ ಉಮಾಸುತಂ ಶೋಕವಿನಾಶಾ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಮ್. ಆನೆಯ ಮುಖವನ್ನು ಹೊಂದಿರುವವರೇ ಎಲ್ಲಾ ಚರಾಚರವಸ್ತುಗಳಿಂದ ಪೂಜೆಯನ್ನು ಪಡೆಯುವವರೇ, ಜಾಮೂನು ಹಣ್ಣನ್ನು ಭಕ್ಷಿಸುವವರೇ, ಉಮಾ ಪುತ್ರನೇ ಶೋಕವನ್ನು ನಿವಾರಿಸುವವನೇ, ಗಣೇಶನ ಕಮಲದಂತಹ ಪಾದಗಳಿಗೆ ನಾನು ನಮಿಸುತ್ತೇನೆ.

ವಕ್ರತುಂಡ ಮಂತ್ರ

ವಕ್ರತುಂಡ ಮಂತ್ರ

ಶ್ರೀ ವಕ್ರತುಂಡ ಮಾಹಾಕಾಯ ಸೂರ್ಯಕೋಟಿ ಸಮಪ್ರಭಾ ನಿರ್ವಿಘ್ನಮ್ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ, ಓ ಗಣೇಶ ಭಗವಂತ ಬಾಗಿದ ಸೊಂಡಿಲು ಮತ್ತು ಅಜಾನುಹಾಬಹುವೇ ಮಿಲಿಯಗಟ್ಟಲೆ ಸೂರ್ಯರಿಗೆ ಸಮಾನವಾದ ಪ್ರಕಾಶವನ್ನು ಹೊಂದಿರುವವರೇ, ನನ್ನನ್ನು ಆಶೀರ್ವದಿಸು ಇದರಿಂದ ನನ್ನ ದುರಿತಗಳು ನಿವಾರಣೆಯಾಗಲಿ.

ಗಣೇಶ ಮಂತ್ರ ಬೀಜ ಮಂತ್ರ

ಗಣೇಶ ಮಂತ್ರ ಬೀಜ ಮಂತ್ರ

ಗಣೇಶ ಬೀಜ ಮಂತ್ರ: ಓಂ ಗಮ್ ಗಣಪತಯೇ ನಮಃ ಈ ಮಂತ್ರವು ಗಣಪತಿ ಉಪನಿಷತ್‌ನದ್ದಾಗಿದೆ. ಯೋಗ ಸಾಧನಕ್ಕೆ ಈ ಮಂತ್ರ ಉತ್ತಮ. ಗಮ್ ಎಂಬ ಅಕ್ಷರವು ಬೀಜವಾಗಿದ್ದು ಗಣೇಶನನ್ನು ಸ್ತುತಿಸುತ್ತದೆ. ಈ ಮಂತ್ರವನ್ನು ಪಠಿಸುವುದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.

ಓಂ ಶ್ರೀಮ್ ಸುಭಗಾಯ

ಓಂ ಶ್ರೀಮ್ ಸುಭಗಾಯ

ಓಂ ಶ್ರೀಮ್ ಸುಭಗಾಯ ಗಣಪತೆಯೇ ವರಾವರ್ಧ್ ಸರ್ವಜ್ಞಾನಮ್ ಮೇನ್ ವಶ್‌ಮನಾಯ ನಮಃ ಈ ಸುಭಗಾಯ ಮಂತ್ರವನ್ನು ಪಠಿಸುವುದರಿಂದ ನಮ್ಮ ವರ್ತಮಾನ ಮತ್ತು ಭವಿಷ್ಯತ್ತಿನ ಜೀವನವು ಉತ್ತಮಗೊಳ್ಳಲಿದೆ. ನಮ್ಮ ಆರೋಗ್ಯ ಮತ್ತು ಸುಖವನ್ನು ಕಾಪಾಡುವ ಗಣಪತಿಗೆ ನಮ್ಮ ವಂದನೆ.

ಓಂ ಏಕದಂತಾಯ ನಮಃ

ಓಂ ಏಕದಂತಾಯ ನಮಃ

ಓಂ ಏಕದಂತಾಯ ನಮಃ ಏಕದಂತ ಅಂದರೆ ಆನೆಯ ಸೊಂಡಿಲನ್ನು ಹೊಂದಿರುವವರು. ಏಕಾಗ್ರಚಿತ್ತದಿಂದ ಕೆಲಸವನ್ನು ಸಾಧಿಸುವ ಶಕ್ತಿಯನ್ನು ಗಣಪನು ನಮಗೆ ನೀಡುತ್ತಾರೆ ಎಂಬುದು ಈ ಮಂತ್ರದ ಅರ್ಥವಾಗಿದೆ. ಏಕಚಿತ್ತದಲ್ಲಿ ಪ್ರಾರ್ಥಿಸಲು ಗಣಪನ ಅನುಗ್ರಹವನ್ನು ಪಡೆದುಕೊಳ್ಳಲು ಈ ಮಂತ್ರ ನಮಗೆ ಸಹಕಾರಿಯಾಗಿದೆ.

ಓಂ ಲಂಬೋದರಾಯ ನಮಃ

ಓಂ ಲಂಬೋದರಾಯ ನಮಃ

ಓಂ ಲಂಬೋದರಾಯ ನಮಃ ಇದರರ್ಥ ಎಲ್ಲಾ ಖಗೋಳ ಕಾಯಗಳು ಒಬ್ಬ ವ್ಯಕ್ತಿಯೊಳಗಿವೆ. ಓಂ ಸೃಷ್ಟಿಯ ಶಬ್ದವನ್ನು ಪ್ರತಿನಿಧಿಸುತ್ತದೆ ಮತ್ತು ಇಡೀ ವಿಶ್ವವು ಅದರ ಒಳಗಿರುತ್ತದೆ. ಗಣೇಶ ಚತುರ್ಥಿಯ ಸಮಯದಲ್ಲಿ ಪಠಿಸಬೇಕಾದ ಸೂಕ್ತ ಮಂತ್ರವಾಗಿದೆ.

ಓಂ ವಿಘ್ನ ನಾಶನಾಯ ನಮಃ

ಓಂ ವಿಘ್ನ ನಾಶನಾಯ ನಮಃ

ಓಂ ವಿಘ್ನ ನಾಶನಾಯ ನಮಃ ಗಣೇಶನು ನಮ್ಮ ಜೀವನದಲ್ಲಿ ಪ್ರತಿ ತೊಂದರೆಯನ್ನೂ ತೆಗೆದುಹಾಕುವ ಅಧಿಕಾರವನ್ನು ಹೊಂದಿದ್ದಾರೆಂದು ನಂಬಲಾಗಿದೆ. ಈ ಮಂತ್ರವನ್ನು ಪಠಿಸುವುದರ ಮೂಲಕ, ನಿಮ್ಮ ದೈಹಿಕ ಮತ್ತು ಮಾನಸಿಕ ಎಲ್ಲ ಅಡೆತಡೆಗಳು ಮತ್ತು ನಿರ್ಬಂಧಿತ ಶಕ್ತಿಯ ಅನುಗುಣವಾಗಿಲ್ಲ. ಇದು ಗಣೇಶ ಚತುರ್ಥಿಗೆ ಸೂಕ್ತವಾದ ಮಂತ್ರವಾಗಿದೆ.

ಓಂ ಗಣಾಧ್ಯಕ್ಷಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ ಗಣೇಶ ಚತುರ್ಥಿಯ ಮೇಲೆ ಪಠಣ ಮಾಡಲು ಈ ಮಂತ್ರ ತುಂಬಾ ಸೂಕ್ತವಾಗಿದೆ. ಗಣೇಶನು ಗಾನದ ನಾಯಕನಾಗಿದ್ದಾರೆ. ನಿಮ್ಮ ಮನಸ್ಸಿನಲ್ಲಿ ಕೆಲವು ಜನರಿಗೆ ನೀವು ಒಳ್ಳೆಯದಾಗಬೇಕೆಂದು ಬಯಸಿ ಈ ಮಂತ್ರ ಪಠಿಸಿದಲ್ಲಿ ಅವರಿಗೆ ಒಳಿತಾಗುತ್ತದೆ.

ಓಂ ಗಜಕರ್ಣಿಕಾಯ ನಮಃ

ಓಂ ಗಜಕರ್ಣಿಕಾಯ ನಮಃ

ಓಂ ಗಜಕರ್ಣಿಕಾಯ ನಮಃ # ಗಜಕಾರ್ಣಿಕಾಯ ಪದವು ಆನೆಯಂತೆಯೇ ಇರುವ ಗಣೇಶನ ಕಿವಿಗಳನ್ನು ಸೂಚಿಸುತ್ತದೆ. ಈ ಮಂತ್ರವನ್ನು ಪಠಿಸುವುದರ ಮೂಲಕ, ನೀವು ಯಾವುದೇ ದೇಹಕ್ಕೆ ಏಳು ಚಕ್ರಗಳು ಮತ್ತು ಎಲ್ಲಾ 72,000 ನಾಡಿಗಳೊಂದಿಗೆ ನಿಮ್ಮ ದೇಹವನ್ನು ಗಣೇಶನ ಅನುಗ್ರಹಕ್ಕೆ ಪಾತ್ರರಾಗಿಸಿಕೊಳ್ಳಬಹುದು.

ಶ್ರೀ ಗಣೇಶಾಯ ನಮಃ

ಶ್ರೀ ಗಣೇಶಾಯ ನಮಃ

ಓಂ ಶ್ರೀ ಗಣೇಶಾಯ ನಮಃ ಗಣೇಶನಿಗೆ ಜಯವಾಗಲಿ ಎಂಬುದು ಈ ಮಂತ್ರದ ಸಾರವಾಗಿದೆ.

ಓಂ ಏಕದಂತಾಯ ನಮಃ

ಗಣಪನಿಗೆ ಇರುವ ಒಂದು ದಂತವನ್ನು ಇದು ಪ್ರತಿನಿಧಿಸುತ್ತದೆ. ಏಕ ಮನಸ್ಸಿನಲ್ಲಿ ಗಣಪನನ್ನು ಪ್ರಾರ್ಥಿಸಬೇಕು. ಶ್ರದ್ಧೆ ಭಕ್ತಿ ನಿಮ್ಮಲ್ಲಿ ತುಂಬಿರಲಿ.

 ಓಂ ಸುಮುಖಾಯ ನಮಃ

ಓಂ ಸುಮುಖಾಯ ನಮಃ

ಈ ಮಂತ್ರವು ಸರಳ ಅರ್ಥವನ್ನು ಹೊಂದಿದೆ. ಮುಖ, ಆತ್ಮ ಎಲ್ಲವೂ ಸುಂದರವಾಗಿದೆ ಎಂಬ ಅರ್ಥವನ್ನು ಇದು ನೀಡುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮಲ್ಲಿ ಒಂದು ಸುಂದರತೆ ಮೂಡುತ್ತದೆ. ನಿಮ್ಮಲ್ಲಿ ಮಾತನಾಡುವವರು ಹೆಚ್ಚಿನ ಪ್ರೀತಿಯಿಂದ ನಿಮ್ಮಲ್ಲಿ ಸಂವಾದ ನಡೆಸುತ್ತಾರೆ.

ಓಂ ಕ್ಷಿಪ್ರ ಪ್ರಸಾದಾಯ ನಮಃ

ಓಂ ಕ್ಷಿಪ್ರ ಪ್ರಸಾದಾಯ ನಮಃ

ಕ್ಷಿಪ್ರವೆಂದರೆ ಶೀಘ್ರ ಎಂಬ ಅರ್ಥವನ್ನು ನೀಡುತ್ತದೆ. ನಿಮ್ಮ ದಾರಿಯಲ್ಲಿ ಬರುವ ಯಾವುದೇ ಅಪಾಯವನ್ನು ತೊಡೆದುಹಾಕುವಲ್ಲಿ ಇದು ಸಮರ್ಥವಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಮನಸ್ಸು ದೇಹ ಪರಿಶುದ್ಧವಾಗುತ್ತದೆ.

 ಓಂ ಬಾಲಚಂದ್ರಾಯ ನಮಃ

ಓಂ ಬಾಲಚಂದ್ರಾಯ ನಮಃ

ಸಂಸ್ಕೃತದಲ್ಲಿ ಬಾಲವೆಂದರೆ ಹಣೆಯ ಮಧ್ಯಭಾಗವಾಗಿದೆ. ಚಂದ್ರ ಎಂದರೆ ಚಂದ್ರದೇವನಾಗಿದ್ದಾನೆ. ಹಣೆಯ ಮಧ್ಯಭಾಗದಲ್ಲಿ ಚಂದ್ರನನ್ನು ಇರಿಸಿಕೊಂಡವರು ಎಂದರೆ ನಿಮ್ಮೊಳಗಿನ ಅಂತರಾಳವನ್ನು ಪರಿಶೋಧಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಇದು ಬೆಳವಣಿಗೆ ಮತ್ತು ಶಾಂತಿಯ ಸಂಕೇತವಾಗಿದೆ.

ಓಂ ಗಣಾಧ್ಯಕ್ಷಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ

ನೀವು ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮಲ್ಲಿ ಒಂದು ರೀತಿಯ ಚೈತನ್ಯ ಉಂಟಾಗುತ್ತದೆ.

 ಓಂ ವಿನಾಯಕಾಯ ನಮಃ

ಓಂ ವಿನಾಯಕಾಯ ನಮಃ

ವಿನಾಯಕ ಎಂಬುದು ಗಣೇಶನ ಇನ್ನೊಂದು ಹೆಸರಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಸ್ವರ್ಣಯುಗ ತೊಡಗುತ್ತದೆ ಎಂದಾಗಿದೆ. ನಿಮ್ಮ ಕಚೇರಿ, ಮನೆಯಲ್ಲಿ ನೀವೇ ಬಾಸ್ ಆಗುತ್ತೀರಿ. ನಿಮ್ಮ ಜೀವನ ಮತ್ತು ಕೆಲಸದಲ್ಲಿನ ವಿಘ್ನಗಳನ್ನು ನಿವಾರಿಸಲು ಈ ಮಂತ್ರ ಸಹಾಯ ಮಾಡಲಿದೆ. ಈ ಮಂತ್ರವನ್ನು ನಿತ್ಯವೂ ಪಠಿಸುವುದರಿಂದ ನಿಮ್ಮ ಎಲ್ಲಾ ದುರಿತಗಳು ನಿವಾರಣೆಯಾಗುತ್ತದೆ.

English summary

Ganesh mantras for all problems in life

Om Gan Ganapataye Namo Namaha, Shree Siddhi Vinayak Namo Namaha Ashta Vinayak Namo Namaha Ganapati Bappa Moraya...This is a mantra from Ganapati Upanishad. One may always use it before beginning a journey, a new course in school, new career or job, or before entering into any new contract or business so that impediments are removed and your endeavor may be crowned with success.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more