For Quick Alerts
ALLOW NOTIFICATIONS  
For Daily Alerts

ಗಣೇಶನ 8 ಅವತಾರಗಳಾವುವು? ಆ ಅವತಾರ ತಾಳಿದರ ಉದ್ದೇಶವೇನು?

|

ಧರ್ಮಗ್ರಂಥಗಳ ಪ್ರಕಾರ ಗಣೇಶನು ಕಾಲ-ಕಾಲಕ್ಕೆ ತಕ್ಕಂತೆ 8 ಅವತಾರಗಳನ್ನು ತಾಳಿದನು. ಅವನ ಒಂದೊಂದು ಅವತಾರದ ಹಿಂದೆಯೂ ಕಾರಣಗಳಿವೆ. ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸುವ ಸಲುವಾಗಿ ಗಣೇಶ ತಳೆದ ಆ 8 ಅವತಾರಗಳು ಯಾವುವು, ಆ ಅವತಾರಗಳ ಹಿಂದಿನ ಉದ್ದೇಶವೇನಿತ್ತು ಎಂಬುವುದನ್ನು ನೋಡೋಣ:

Ganesh Chaturthi 2021

ಈ ಅವತಾರಗಳು ರಾಕ್ಷಸರನ್ನು ಸಂಹರಿಸಲು ತಾಳಿದ ಅವತಾರಗಳು ಎಂದು ಪೌರಾಣಿಕ ಕತೆ ಹೇಳುವುದು, ಮನುಷ್ಯರಲ್ಲಿರುವ ರಾಕ್ಷಸರೆಂದರೆ ಕಾಮ, ಕ್ರೋಧ, ಮದ, ಮತ್ಸರ, ಲೋಭ, ಅಹಂ ಹಾಗೂ ಅಜ್ಞಾನವಾಗಿದೆ. ಇವುಗಳನ್ನು ಗೆದ್ದರೆ ಮಾತ್ರ ಮನುಷ್ಯ ಒಳ್ಳೆಯವನಾಗಲು ಸಾಧ್ಯ. ಗಣೇಶನ ಕೃಪೆಯಿಂದ ಈ ರಾಕ್ಷಸರನ್ನು ಗೆಲ್ಲಲು ಸಾಧ್ಯವಾಗುವುದು ಎಂಬ ಅರ್ಥವೇ ಗಣೇಶನ ಈ ಅವತಾರಗಳಾಗಿವೆ.

ಗಣೇಶನ 8 ಅವತಾರಗಳು

1. ಏಕದಂತ

1. ಏಕದಂತ

ಮಾಧಾಸುರ ಎಂಬ ರಾಕ್ಷಸನನ್ನು ಕೊಲ್ಲಲು ಈ ಅವತಾರ ತಾಳಿದನು. ಮಾಧಾಸುರ ಎಂಬ ಅಸುರ ಶುಕ್ರಾಚಾರ್ಯರ ಆಶ್ರಯ ಪಡೆದ ಬಳಿಕ ತುಂಬಾ ಶಕ್ತಿವಂತನಾಗಿ ದುರಾಂಹಕಾರದಿಂದ ವರ್ತಿಸುತ್ತಿದ್ದು. ಈತನು ದೇವತೆಗಳಿಗೆ, ಮನುಷ್ಯರಿಗೆ ತುಂಬಾನೇ ಹಿಂಸೆ ನೀಡುತ್ತಿದ್ದ. ಇವನ ಹಿಂಸೆ ತಾಳಲಾರದೆ ದೇವತೆಗಳು ಗಣೇಶನನ್ನು ಪೂಜಿಸಿದರು. ಆಕ ಗಣೇಶ ಏಕದಂತನ ಅವತಾರ ತಾಳಿ ಆ ರಾಕ್ಷಸನನ್ನು ಕೊಂದನು ಎಂಬ ಕತೆ ಇದೆ.

ನಾಲ್ಕು ಕೈಗಳು, ಒಂದು ದಂತ, ದೊಡ್ಡ ಹೊಟ್ಟೆ, ಹಾಗೂ ಆನೆಯ ತಲೆಯನ್ನು ಹೊಂದಿರುವ ಅವತಾರವನ್ನು ಏಕದಂತ ಅವತಾರ ಎಂದು ಕರೆಯಲಾಗುವುದು.

2. ವಕ್ರತುಂಡ

2. ವಕ್ರತುಂಡ

ಮತ್ಸಾಸುರ ಎಂಬ ರಾಕ್ಷಸನನ್ನು ಕೊಲ್ಲಲು ಗಣೇಶನ ಈ ಅವತಾರವನ್ನು ತಾಳಿದನು. ಶಿವನ ಭಕ್ತನಾದ ಮತ್ಸಾಸುರ ತಪಸ್ಸು ಮಾಡಿ ಈ ಭೂಮಿಯಲ್ಲಿ ಯಾವ ಜೀವಿಯೂ ನನ್ನನ್ನು ಕೊಲ್ಲಬಾರದು ಎಂಬ ವರವನ್ನು ಪಡೆದಿದ್ದನು. ವರ ಪಡೆದ ಬಳಿಕ ಅಹಂಕಾರದಿಂದ ದೇವತೆಗಳಿಗೆ ತುಂಬಾನೇ ಕಿರುಕುಳ ನೀಡುತ್ತಿದ್ದ. ಆಗ ಅವನನ್ನು ಸಂಹರಿಸಲು ವಕ್ರತುಂಡ ಜನಿಸಿದ ಎಂದು ಪೌರಾಣಿಕ ಕತೆ ಹೇಳುತ್ತದೆ.

 3. ಗಜಾನನ

3. ಗಜಾನನ

ಈ ಅವತಾರ ತಾಳಿ ಗಣೇಶನು ರಾಕ್ಷಸನಾದ ಲೋಭಾಸುರನನ್ನು ಮಣಿಸಿದ ಕತೆಯಿದೆ. ರಾಕ್ಷಸ ನಿಯಮಗಳನ್ನು ಅನುಸರಿಸಬೇಕು ಎಂದು ಉಪಟಳ ನೀಡುತ್ತಿದ್ದ ಲೋಭಾಸುರನ ಕಾಟ ತಾಳಲಾರದೆ ದೇವತೆಗಳು ಗಜಾನನಿಗೆ ಪ್ರಾರ್ಥಿಸುತ್ತಾರೆ. ಶ್ರೀ ವಿಷ್ಣುವು ಗಜಾನನ ಸಾಮರ್ಥ್ಯದ ಬಗ್ಗೆ ಲೋಭಾಸುರನ ಬಳಿ ಹೊಗಳುತ್ತಾನೆ. ಗಜಾನನ ಬಗ್ಗೆ ಕೇಳಿದ ಲೋಭಾಸುರ ಯುದ್ಧವನ್ನು ಕೂಡ ಮಾಡದೆ ಶರಣಾದ.

4. ಲಂಭೋದರ

4. ಲಂಭೋದರ

ಸಮುದ್ರ ಮಂಥನದ ಸಮಯದಲ್ಲಿ ವಿಷ್ಣುವು ಮೋಹಿನಿಯ ಅವತಾರ ತಾಳುತ್ತಾನೆ. ಆಗ ಶಿವನು ಆ ಮೋಹಿನಾವತಾರದ ಕಡೆಗೆ ಆಕರ್ಷಿತನಾಗಿ ವೀರ್ಯವನ್ನು ಹೊರ ಹಾಕುತ್ತಾನೆ. ಅದರಿಂದ ಕ್ರೋಧಾಸುರ ಎಂಬ ರಾಕ್ಷಸನನ ಜನನವಾಗುತ್ತದೆ. ಈ ರಾಕ್ಷಸ ಸೂರ್ಯ ದೇವನನ್ನು ಪ್ರಾರ್ಥಿಸಿ ವರವನ್ನು ಪಡೆದು ಜಗತ್ತನ್ನೇ ಆಳುತ್ತಿರುತ್ತಾನೆ. ಆದರೆ ಇವನ ಆಡಳಿತಕ್ಕೆ ಎಲ್ಲರೂ ಭಯ ಭೀತರಾಗುತ್ತಾರೆ. ಆಗ ಲಂಭೋದರನ ಅವತಾರದಲ್ಲಿ ಯುದ್ಧಕ್ಕೆ ಬರುತ್ತಾನೆ, ಕ್ರೋಧಾಸುರ ಲಂಭೋದರ ಬಳಿ ಗೆಲ್ಲಲಾರದೆ ಪಾತಾಳಕ್ಕೆ ಓಡಿ ಹೋಗುತ್ತಾನೆ.

5. ಮಹೋದರ

5. ಮಹೋದರ

ಕಾರ್ತಿಕೇಯ ತಾರಕಾಸುರನ ಒಂದಾಗ ಸೇಡಿಗೆ ರಾಕ್ಷಸ ರಾಜನಾದ ಶುಕ್ರಾಚಾರ್ಯ ಮೋಹಾಸುರನ ಸೃಷ್ಟಿಸುತ್ತಾನೆ. ಆಗ ದೇವತೆಯರು ಗಣೇಶನ ಪ್ರಾರ್ಥಿಸುತ್ತಾರೆ. ಆಗ ಗಣೇಶ ಮಹೋದರನ ಅವತಾರ ಎತ್ತುತ್ತಾನೆ. ದೊಡ್ಡ ಹೊಟ್ಟೆಯ ಮಹೋದರ ಇಲಿಯ ಮೇಲೆ ಕುಳಿತು ಬರುತ್ತಿರುವುದನ್ನು ನೋಡಿ ಭಯಬಿದ್ದು ಮಹೋದರನಿಗೆ ಶರಣಾಗಿ ಮಹೋದರನ ಆರಾಧಿಸಲು ಪ್ರಾರಂಭಿಸುತ್ತಾನೆ.

6. ವಿಕಟ ಅವತಾರ

6. ವಿಕಟ ಅವತಾರ

ಗಣೇಶ ವಿಕಟ ಅವತಾರವನ್ನು ತಾಳಿ ಕಾಮಾಸುರ ಎಂಬ ರಾಕ್ಷಸನನ್ನು ಕೊಂದ ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ.

7. ವಿಘ್ನ ರಾಜ

7. ವಿಘ್ನ ರಾಜ

ಗಣೇಶ ವಿಘ್ನ ನಿವಾರಕ ಎಂಬುವುದು ಎಲ್ಲರಿಗೂ ಗೊತ್ತು. ಗಣೇಶನು ವಿಘ್ನ ನಿವಾರಕನ ಅವತಾರವನ್ನು ಪರ್ವತಗಳಿಂದ ಜನಿಸಿದ ಮಮ್‌ ಎಂಬ ರಾಕ್ಷಸನನ್ನು ಸಂಹರಿಸಲು ತಾಳಿದನು. ಈ ಮೂಲಕ ವಿಘ್ನ ರಾಜ ಜಗತ್ತಿನ ವಿಘ್ನವನ್ನು ನಿವಾರಿಸಿದ.

8. ಧೂಮ್ರವರ್ಣ

8. ಧೂಮ್ರವರ್ಣ

ಮೋಹದ ರಾಕ್ಷಸನಾದ ಅಹಂಕಾಸುರನನ್ನು ಸಂಹರಿಸಲು ಈ ಅವತಾರ ಎತ್ತುತ್ತಾನೆ. ಮಾನವನಲ್ಲಿ ಅಹಂ ಇದ್ದರೆ ಗಣೇಶ ಅವನಿಗೆ ತಕ್ಕ ಶಾಸ್ತಿ ಕಲಿಸುತ್ತಾನೆ ಎಂದು ಹೇಳಲಾಗುವುದು.

English summary

Ganesh Chaturthi special: Eight avatars of Lord Ganesh

Ganesh Chaturthi special: Eight avatars of Lord Ganesh, have a look,
X
Desktop Bottom Promotion