For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ 2022: ಗಣೇಶನಿಗೆ ಅಕ್ಷತೆಯನ್ನು ಏಕೆ ಪ್ರೋಕ್ಷಣೆ ಮಾಡುತ್ತೇವೆ ಗೊತ್ತೆ?

|

ಗಣೇಶನ ಕೃಪೆಗೆ ಪಾತ್ರರಾಗಲು ಅವನಿಗೆ ಇಷ್ಟವಾದ ಫಲ, ಫುಷ್ಪ, ಸಿಹಿತಿಂಡಿಗಳನ್ನು ಅರ್ಪಿಸಿ ಪೂಜಿಸುತ್ತೇವೆ. ಇದೆಲ್ಲದರ ನಡುವೆ ನಾವು ವಿನಾಯಕನಿಗೆ ಅಕ್ಷತೆ ಹಾಕುವುದನ್ನು ತಪ್ಪಿಸುವುದಿಲ್ಲ. ಅರಿಶಿನ ಮತ್ತು ಕುಂಕುಮದಿಂದ ಲೇಪಿತ ಅಕ್ಕಿ ಕಾಳನ್ನು ಅಕ್ಷತೆಯ ರೂಪದಲ್ಲಿ ಬಳಸುತ್ತಾರೆ.

ಮೋದಕ ಪ್ರಿಯ ಗಣೇಶನ ಹಬ್ಬವನ್ನು 2022ನೇ ಸಾಲಿನಲ್ಲಿ ಆಗಸ್ಟ್‌ 31ರಂದು ಆಚರಿಸಲಾಗುತ್ತಿದೆ. ಈ ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶನನ್ನು ತರುವ ಸಮಯದಿಂದ ವಿಸರ್ಜಿಸುವ ಪ್ರತಿಹಂತದಲ್ಲೂ ಮೊದಲು ಅಕ್ಷತೆಯನ್ನು ಹಾಕಿ ಮುಂದಿನ ಕಾರ್ಯ, ಪೂಜೆಗಳನ್ನು ಮಾಡುತ್ತೇವೆ. ಇನ್ನು ಹಲವರು ವಿನಾಯಕ ಚತುರ್ಥಿಯಂದು ಗಣೇಶ ಇಟ್ಟಿರುವವರ ಮನೆಗಳಿಗೆ ಹೋಗಿ ಅಕ್ಷತೆಯನ್ನು ಹಾಕಿ ವಂದಿಸುವ ವಾಡಿಕೆಯೂ ಇದೆ.

ಗಣಪತಿಯ ಪೂಜೆಯಲ್ಲಿ ಅಕ್ಷತೆಗೆ ಏಕೆ ಇಷ್ಟು ವಿಶೇಷ ಮಹತ್ವ ಇದೆ. ಅಕ್ಷತೆಯನ್ನು ಏಕೆ ಶುಭಕರ್ತಾ ಎಂದು ಹೇಳಲಾಗುತ್ತದೆ ಮುಂದೆ ನೋಡೋಣ:

ಶುಭದ ಸಂಕೇತ

ಶುಭದ ಸಂಕೇತ

ಅಕ್ಷತೆ ಅಂದರೆ ಅದು ಖುಷಿ ಮತ್ತು ಸಮೃದ್ಧಿಯ ಸಂಕೇತ. ಗಣೇಶನನ್ನು ಮನೆಗೆ ಕರೆತರುವಾಗ ಆತನ ಮೇಲೆ ಅಕ್ಷತೆ ಅಥವಾ ಅಕ್ಕಿಯನ್ನು ಹಾಕುವುದರಿಂದ ಮನೆಯಲ್ಲಿನ ಎಲ್ಲ ಬಾಧೆಗಳು ದೂರವಾಗುತ್ತವೆ. ಅಲ್ಲಿಂದ ಮನೆಯಲ್ಲಿ ಶುಭ ಮನೆ ಮಾಡುತ್ತದೆ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ದೇವತೆಗಳ ಆಶೀರ್ವಾದ

ದೇವತೆಗಳ ಆಶೀರ್ವಾದ

ಇದರ ಹೊರತಾಗಿ ಅಕ್ಷತೆ ಹಾಕುವುದರಿಂದ ಗಣೇಶನ ಜೊತೆಗೆ ಎಲ್ಲ ದೇವಾನು-ದೇವತೆಗಳ ಆಶೀರ್ವಾದ ಲಭಿಸುತ್ತದೆ. ಮನೆಯಲ್ಲಿ ಇದರಿಂದ ಸಕಾರಾತ್ಮಕತೆ ತುಂಬುತ್ತದೆ.

ಮೊದಲ ಪೂಜಾಕಾರಕ

ಮೊದಲ ಪೂಜಾಕಾರಕ

ಯಾವುದೇ ಶುಭ ಕಾರ್ಯ ಇದ್ದರೂ ಗಣೇಶನಿಗೆ ಮೊದಲು ಪೂಜಿಸಲಾಗುತ್ತದೆ. ಸರ್ವ ದೇವತೆಗಳಲ್ಲೂ ವಿನಾಯಕನಿಗೆ ಪೂಜೆಗೆ ಪ್ರಥಮ ಆದ್ಯತೆ. ಈ ವೇಳೆ ಸಮೃದ್ಧಿ ಎಂದು ಪರಿಗಣಿಸಲಾದ ಅಕ್ಕಿ, ಶುಭ ಎಂದು ಹೇಳಲಾಗುವ ಅರಿಶಿನ ಹಾಗೂ ಕುಂಕುಮವನ್ನು ಮಿಶ್ರಣ ಮಾಡಿ ಅರ್ಪಿಸುವುದು ಮಂಗಳಕರ ಎನ್ನಲಾಗುತ್ತದೆ.

ಐದು ದೇವತೆಗಳ ಶಕ್ತಿ

ಐದು ದೇವತೆಗಳ ಶಕ್ತಿ

ಗಣೇಶಯನ್ನು ಮನೆಗೆ ಸ್ವಾಗತಿಸುವಾಗ, ಕುಂಕುಮದೊಂದಿಗೆ ಅಕ್ಷತೆಯನ್ನು ಪ್ರೋಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಏಕೆಂದರೆ ಅಕ್ಕಿ ಧಾನ್ಯವು ಐದು ಪ್ರಮುಖ ದೇವತೆಗಳಾದ ಶಿವ, ಶಕ್ತಿ, ಶ್ರೀರಾಮ, ಶ್ರೀ ಕೃಷ್ಣ ಮತ್ತು ಶ್ರೀ ಗಣೇಶರಿಂದ ಧನಾತ್ಮಕತೆ ಮತ್ತು ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.

ಮುರಿಯದ ಅಕ್ಕಿ ಬಳಸಿ

ಮುರಿಯದ ಅಕ್ಕಿ ಬಳಸಿ

ಮುರಿಯದ ಅಕ್ಕಿಯನ್ನು ಬಳಸುವುದರಿಂದ ದೇವಾನು-ದೇವತೆಗಳಿಂದ ಉತ್ತಮ ಕಂಪನಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಅರಿಶಿನ-ಕುಂಕುಮ ತಪ್ಪಿಸಬೇಡಿ

ಅರಿಶಿನ-ಕುಂಕುಮ ತಪ್ಪಿಸಬೇಡಿ

ಗಣೇಶ ಅಥವಾ ಯಾವುದೇ ದೇವರಿಗೆ ಅಕ್ಷತೆಯನ್ನು ಪ್ರೋಕ್ಷಣೆ ಮಾಡುವಾಗ ಅಕ್ಕಿಯನ್ನು ಹಾಗೆಯೇ ಹಾಕುವಂತಿಲ್ಲ, ದಕ್ಕೆ ಕುಂಕುಮ ಅಥವಾ ಅರಿಶಿನವನ್ನು ಲೇಪಿಸಬೇಕು. ಅಕ್ಕಿ ಮುರಿಯದಂತೆ ನೀವು ಅದನ್ನು ನಿಧಾನವಾಗಿ ಮಿಶ್ರಣ ಮಾಡಬೇಕು.

English summary

Ganesh Chaturthi: Significance of Akshat/Rice During Ganesh Sthapana in kannada

Here we are discussing about Ganesh Chaturthi 2021: Significance of Akshat/Rice During Ganesh Sthapana in kannada. Read more.
X
Desktop Bottom Promotion