For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ: ಪೂಜಾ ಸಾಮಗ್ರಿ, ಪೂಜಾ ವಿಧಿ ಹಾಗೂ ಮಂತ್ರಗಳು

|

ಗಣೇಶ ಹಬ್ಬ ಎಂದರೆ ತುಂಬಾನೇ ಸಡಗರ-ಸಂಭ್ರಮದ ಹಬ್ಬ. ದೇಶದೆಲ್ಲಡೆ ಊರಿಗೇ ಊರೇ ಸೇರಿ ಸಂಭ್ರಮಿಸುವ ಹಬ್ಬ ಇದಾಗಿದೆ. ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ತುಂಬಾ ಅದ್ಧೂರಿಯಿಂದ ಆಚರಿಸಲಾಗುವುದು.

ಗಣೇಶನನ್ನು ಆರಾಧಿಸಲು ತುಂಬಾ ಕಟ್ಟುಪಾಡಿಲ್ಲ. ಭಕ್ತಿಯಿಂದ ಆರಾಧನೆ ಮಾಡಿದರೆ ಸಾಕು ಗಣೇಶ ತೃಪ್ತಿನಾಗುತ್ತಾನೆ. ಈ ವರ್ಷ ಕೊರೊನಾ ಕಾರಣದಿಂದ ತುಂಬಾ ಜನ ಸೇರಿ ಮಾಡುವುದಕ್ಕಿಂತ ಮನೆಯವರಷ್ಟೇ ಸೇರಿ ಆಚರಿಸಿ.

2021ರಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ ಹಾಗೂ ಪೂಜಾ ವಿಧಾನ, ಪೂಜಾ ಸಾಮಗ್ರಿ ಹಾಗೂ ಮಂತ್ರಗಳ ಬಗ್ಗೆ ಹೇಳಲಾಗಿದೆ.

ಗಣಪ ಪೂಜೆಗೆ ಶುಭ ಸಮಯ

ಗಣಪ ಪೂಜೆಗೆ ಶುಭ ಸಮಯ

ಗಣಪನ ಮೂರ್ತಿಯನ್ನು ಶುಭ ಸಮಯದಲ್ಲಿ ಕೂರಿಸಲಾಗುವುದು. 2021ರಲ್ಲಿ ಗಣಪನನ್ನು ಕೂರಿಸಲು ಶುಭ ಸಮಯ ಹೀಗಿದೆ: (bold)

ಪೂಜೆಗೆ ಮುಹೂರ್ತ: ಬೆಳಗ್ಗೆ 11.03 ರಿಂದ ಮಧ್ಯಾಹ್ನ 1.33 ರವರೆಗೆ

ಸೆಪ್ಟೆಂಬರ್‌ 10 ಶುಕ್ರವಾರ ಚತುರ್ಥಿ ತಿಥಿ ಆರಂಭ: 12.18 ರಿಂದ

ಚತುರ್ಥಿ ತಿಥಿ ಅಂತ್ಯ ಸಮಯ: ರಾತ್ರಿ 9.57ರವರೆಗೆ

ಗಣೇಶನ ಪೂಜೆಗೆ ಬೇಕಾಗುವ ಸಾಮಗ್ರಿಗಳು

ಗಣೇಶನ ಪೂಜೆಗೆ ಬೇಕಾಗುವ ಸಾಮಗ್ರಿಗಳು

ಪೂಜೆಗೆ ಬೇಕಾಗುವ ಸಾಮಗ್ರಿಗಳು

* ಗಣಪನ ಮೂರ್ತಿ

* ಮರದ ಪೀಠ

* ಅದನ್ನು ಮುಚ್ಚಲು ಹೊಸ ಹಳದಿ ಅಥವಾ ಕೆಂಪು ಬಣ್ಣದ ಬಟ್ಟೆ

* ಕೆಂಪು ದಾಸವಾಳ ಹೂಗಳು (ಸೇವಂತಿಗೆ, ಸುಗಂಧರಾಜ ಮುಂತಾದ ಹೂವುಗಳನ್ನು ಬಳಸಬಹುದು)

* ಗಣೇಶನ ಪೂಜೆಗೆ ಗರಿಕೆ ಕಡ್ಡಾಯವಾಗಿ ಇರಲೇಬೇಕು.

* 11 ಮೋದಕ ಮತ್ತು 11 ಲಡ್ಡುಗಳು

* ನೈವೇದ್ಯ

* ಪಂಚಾಮೃತ

* ಜನಿವಾರ

* ಅಕ್ಷತೆ

* ಕುಂಕುಮ

* ಅರಿಶಿಣ

* ಚಂದನ

* ಧೂಪ ಮತ್ತು ಅಗರಬತ್ತಿ

* ದೀಪ, ಬತ್ತಿ ಎಣ್ಣೆ

*ತಾಮ್ರದ ಕಲಶ

* ತಾಂಬೂಲ

* 5 ಬಗೆಯ ಹಣ್ಣುಗಳು

* ಕಳಶ

* ಘಂಟೆ

* ಈ ಎಲ್ಲಾ ಸಾಮಗ್ರಿ ಇಡಲು ದೊಡ್ಡ ತಟ್ಟೆ

ಗಣೇಶನ ಮೂರ್ತಿ ಸ್ಥಾಪನೆ ಹಾಗೂ ಪೂಜಾ ವಿಧಿ

ಗಣೇಶನ ಮೂರ್ತಿ ಸ್ಥಾಪನೆ ಹಾಗೂ ಪೂಜಾ ವಿಧಿ

* ಬೆಳಗ್ಗೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆ ತೊಟ್ಟು ಪೂಜಾ ಸ್ಥಳವನ್ನು ಶುದ್ಧ ಮಾಡಬೇಕು. ದೇವರ ಮಂಟಪ ಅಥವಾ ಮರದ ಪೀಠ, ಮೇಜು ಹೀಗೆ ನೀವು ಯಾವುದರ ಮೇಲೆ ಕೂರಿಸುತ್ತೀರೋ ಅದರ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹಾಸಬೇಕು. ಮಧ್ಯ ಭಾಗದಲ್ಲಿ ಒಂದು ತಟ್ಟೆಯಷ್ಟು ಅಕ್ಕಿ ಹಾಕಿ ಅದನ್ನು ಸ್ವಲ್ಪ ಹರಡಿ ಅದರ ಮೇಲೆ ಗಣೇಶನ ಮೂರ್ತಿಯನ್ನು ಕೂರಿಸಬೇಕು.

* ನಂತರ ಗಣೇಶನಿಗೆ ಗಂಗಾ ಜಲ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಿ ಗರಿಕೆ ಗುಲ್ಲು ಮತ್ತು ವೀಳ್ಯೆದೆಲೆಯನ್ನು ಬಳಸಿ ಶೋಡಶೋಪಚಾರ ಪೂಜೆ ಮಾಡಿ ವಿಗ್ರಹವನ್ನು ಹಳದಿ ಬಣ್ಣದ ಬಟ್ಟೆಯಿಂದ ಸುತ್ತಿ ಅಲಂಕಾರ ಮಾಡಬೇಕು. ಹೂಗಳನ್ನು ಹಾಕಿ ಅಲಂಕಾರ ಮಾಡಿ.

* ಈಗ ಗಣಪನಿಗೆ ಪ್ರಿಯವಾದ ಮೋದಕ ಹಾಗೂ ಹಣ್ಣುಗಳನ್ನು ಅರ್ಪಿಸಬೇಕು, ಪಂಚಾಮೃತ ಮಾಡಿ ಅರ್ಪಿಸಿ.

* ನಂತರ ದೀಪವನ್ನು ಹಚ್ಚಿ, ಆರತಿಯನ್ನು ಬೆಳಗಿ ಕುಂಕುಮದಿಂದ ತಿಲಕವನ್ನು ಇಟ್ಟು ಗಣಪತಿಗೆ ಸಿಹಿಯನ್ನು ನೈವೇದ್ಯವಾಗಿ ಅರ್ಪಿಸಿ.

ಗಣೇಶನ ಮೂರ್ತಿ ಕೂರಿಸುವಾಗ ಕಲಶ ಸ್ಥಾಪನೆ ಮಾಡುವ ವಿಧಾನ

ಗಣೇಶನ ಮೂರ್ತಿ ಕೂರಿಸುವಾಗ ಕಲಶ ಸ್ಥಾಪನೆ ಮಾಡುವ ವಿಧಾನ

ತಾಮ್ರದ ಕಲಶದಲ್ಲಿ ನೀರನ್ನು ತುಂಬಿ ಅದನ್ನು ಕೆಂಪು ಬಟ್ಟೆಯಿಂದ ಸುತ್ತಿ, ಕೆಂಪು ದಾರದಿಂದ ಕಟ್ಟಿ ವಾಯುವ್ಯ ದಿಕ್ಕಿನಲ್ಲಿ ಅಥವಾ ಗಣೇಶನ ಕೂರಿಸಿದ ಎಡಭಾಗದಲ್ಲಿ ಇರಿಸಬೇಕು.

ಉಪವಾಸವಿದ್ದು ಗಣೇಶನ ಆರಾಧನೆ ಮಾಡಿ

ಉಪವಾಸವಿದ್ದು ಗಣೇಶನ ಆರಾಧನೆ ಮಾಡಿ

ಭಕ್ತರನ್ನು ಬೇಡಿದ್ದನ್ನು ಗಣಪ ಕರುಣಿಸುತ್ತಾನೆ. ಈ ಗಣಪನ ಒಲಿಸಿಕೊಳ್ಳಲು ಭಕ್ತಿಯೊಂದಿದ್ದರೆ ಸಾಕು. ಭಕ್ತಿಯಿಂದ ಉಪವಾಸವಿದ್ದು ಗಣೇಶನ ಪೂಜೆ ಮಾಡಿದ ನಂತರ ಎಲ್ಲಾ ದೇವರುಗಳನ್ನು ಮನಸ್ಸಿನಲ್ಲಿ ಧ್ಯಾನಿಸಿ ನಂತರ ಪ್ರಸಾದವನ್ನು ಹಂಚಬೇಕು.

ಗಣಪತಿ ಪೂಜೆಯಲ್ಲಿ ಈ ಮಂತ್ರಗಳನ್ನು ಹೇಳಿ

ಗಣಪತಿ ಪೂಜೆಯಲ್ಲಿ ಈ ಮಂತ್ರಗಳನ್ನು ಹೇಳಿ

"ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ, ಸರ್ವಕಾರ್ಯೇಷು ಸರ್ವದಾ"

" ಓಂ ಗಣೇಶಾಯ ನಮಃ"

English summary

Ganesh Chaturthi Puja Vidhi, Puja Samagri List and Puja mantra in kannada

Ganesh Chaturthi Puja Vidhi, Puja Samagri List and Puja mantra in kannada, Read on....
X
Desktop Bottom Promotion