For Quick Alerts
ALLOW NOTIFICATIONS  
For Daily Alerts

ಗಣೇಶನಿಗೆ ಮೋದಕ ಕಡ್ಡಾಯ ಏಕೆ? 21 ಮೋದಕ ಏಕೆ ಇಡಬೇಕು?

|

2021ರಂದು ಸೆಪ್ಟೆಂಬರ್ 10ಕ್ಕೆ ಗಣೇಶ ಚತುರ್ಥಿ. ಗಣಪನಿಗೆ ಪ್ರಿಯವಾದ ತಿಂಡಿಯೆಂದರೆ ಮೋದಕ. ಗಣೇಶ ಚತುರ್ಥಿಗೆ 21 ಬಗೆಯ ಮೋದಕ ಮಾಡಿ ನೈವೇದ್ಯವಾಗಿ ಇಡುತ್ತಾರೆ.

ಮೋದಕವೆಂದರೆ ಸಿಹಿ ತಿನಿಸು, ಇದನ್ನು ಸಂಕಷ್ಟಿ ಅಥವಾ ಚತುರ್ಥಿಗೆ ಹೆಚ್ಚಾಗಿ ಮಾಡಲಾಗುವುದು. ಗಣೇಶನಿಗೆ ಎಳ್ಳುಂಡೆ, ಮೋದಕ, ಕಾಯಿ ಕಡುಬುಗಳನ್ನು ಸಮರ್ಪಣೆ ಮಾಡಲಾಗುವುದು.

Ganesh Chaturthi

ಚೌತಿಯಂದು ಮೋದಕವಿಲ್ಲದಿದ್ದರೆ ಹಬ್ಬವೇ ಅಪೂರ್ಣ. ಮೋದಕ ಪ್ರಿಯನಿಗೆ ಕಡ್ಡಾಯವಾಗಿ ಮೋದಕ ಇಡಲೇಬೇಕು.

 ಗಣೇಶನಿಗೆ ಮೋದಕ ಏಕೆ ಪ್ರಿಯವಾದದ್ದು ಎಂಬುದರ ಹಿಂದಿರುವ ಪೌರಾಣಿಕ ಕತೆ

ಗಣೇಶನಿಗೆ ಮೋದಕ ಏಕೆ ಪ್ರಿಯವಾದದ್ದು ಎಂಬುದರ ಹಿಂದಿರುವ ಪೌರಾಣಿಕ ಕತೆ

ದೇವಾನುದೇವತೆಗಳು ಶಿವ ಪಾರ್ವತಿ ಮನೆಗೆ ಭೇಟಿ ನೀಡುತ್ತಾರೆ. ಆಗ ಒಂದು ಮೋದಕವನ್ನು ಪಾರ್ವತಿಗೆ ಕೊಡುತ್ತಾರೆ. ಗಣೇಶ, ಕಾರ್ತಿಕ ಇಬ್ಬರಲ್ಲಿ ಯಾರಿಗೆ ಕೊಡುವುದು ಎಂಬ ಗೊಂದಲ ಪಾರ್ವತಿಗೆ. ತನ್ನಿಬ್ಬರು ಮಕ್ಕಳನ್ನು ಕರೆದು ಯಾರು ತ್ರಿಲೋಕವನ್ನು ಮೊದಲು ಯಾರು ಸುತ್ತಿ ಬರುತ್ತಾರೋ ಅವರಿಗೆ ಈ ಮೋದಕ ನೀಡುವುದಾಗಿ ಹೇಳುತ್ತಾನೆ. ಕಾರ್ತಿಕ ತನ್ನ ವಾಹನವಾದ ನವಿಲು ಏರಿ ಹೊರಡುತ್ತಾನೆ. ಗಣಪನ ಶಿವ-ಪಾರ್ವತಿಗೆ ಮೂರು ಸುತ್ತು ಹಾಕುತ್ತಾನೆ. ಪಾರ್ವತಿ ಏಕೆ ನಮ್ಮ ಸುತ್ತು ಹಾಕಿದೆ ಎಂದು ಕೇಳಿದಾಗ ಮೂರು ಲೋಕಕ್ಕೆ ಅಧಿಪತಿಗಳಾದ ನಿಮ್ಮನ್ನು ಸುತ್ತು ಹಾಕಿದರೆ ಮೂರು ಲೋಕ ಸುತ್ತು ಹಾಕಿದಂತೆಯೇ ಎನ್ನುತ್ತಾನೆ. ಗಣಪನ ಬುದ್ಧಿವಂತಿಕೆಯನ್ನು ಕಂಡು ಖುಷಿಗೊಂಡ ಪಾರ್ವತಿ ಮೋದಕವನ್ನು ಲಂಭೋದರನಿಗೇ ನೀಡುತ್ತಾಳೆ.

ಗಣಪತಿಗೆ 21 ಮೋದಕ ಏಕೆ ಅರ್ಪಿಸಲಾಗುತ್ತದೆ

ಗಣಪತಿಗೆ 21 ಮೋದಕ ಏಕೆ ಅರ್ಪಿಸಲಾಗುತ್ತದೆ

ಣೇಶನ ಪೂಜೆಗೆ ಏಕೆ 21 ಮೋದಕ ಇಡುತ್ತಾರೆ ಎಂಬುದರ ಹಿಂದೆಯೂ ಸುಂದರವಾದ ಕತೆಯಿದೆ.

ಒಮ್ಮೆ ದಟ್ಟಾರಣ್ಯದಲ್ಲಿ ವಾಸಿಸುತ್ತಿದ್ದ ಅನುಷ್ಯಾ ಋಷಿ ಮನೆಗೆ ಶಿವ ಪಾರ್ವತಿ ಹಾಗೂ ಗಣಪನ ಜೊತೆ ಭೇಟಿ ನೀಡುತ್ತಾನೆ. ಆ ಸಮಯದಲ್ಲಿ ಶಿವನಿಗೆ ತುಂಬಾ ಹಸಿವು ಉಂಟಾಗಿರುತ್ತದೆ. ಶಿವ ಅನುಷ್ಯಾ ಋಷಿಯ ಪತ್ನಿ ಬಳಿ ಆಹಾರ ಬಡಿಸುವಂತೆ ಹೇಳುತ್ತಾನೆ. ಆಗ ಅನುಷ್ಯಾ ಮೊದಲಿಗೆ ಬಾಲ ಗಣಪನಿಗೆ ಆಹಾರ ಪಡಿಸುತ್ತೇನೆ. ಅವನು ತಿಂದಾದ ಬಳಿಕ ನಿಮಗೆ ಬಡಿಸುತ್ತೇನೆ ಎಂದು ಹೇಳುತ್ತಾಳೆ. ಆಕೆ ವಿಧ-ವಿಧ ಭಕ್ಷ್ಯಗಳನ್ನು ಗಣಪನಿಗೆ ಬಡಿಸುತ್ತಾಳೆ. ಆದರೆ ಗಣಪನ ತಿನ್ನುತ್ತನೇ ಇರುತ್ತಾನೆ, ತಯಾರು ಮಾಡಿಟ್ಟ ಆಹಾರವೆಲ್ಲಾ ಮುಗೀತಾಬರುತ್ತದೆ, ಆದರೆ ಗಣಪ ತಿನ್ನುವುದನ್ನು ನಿಲ್ಲಿಸುವುದಿಲ್ಲ. ಇತ್ತ ಶಿವನಿಗೆ ತುಂಬಾ ಹಸಿವಾಗುತ್ತಿರುತ್ತದೆ. ಗಣಪ ಈ ರೀತಿ ತಿಂದರೆ ಶಿವನಿಗೆ ಬಡಿಸಲು ಆಹಾರಕ್ಕೆ ಏನು ಮಾಡುವುದು ಎಂಬ ಚಿಂತೆ ಋಷಿಯ ಪತ್ನಿಗೆ ಕಾಡುವುದು. ಆಗ ಆಕೆ ಒಂದು ಸಿಹಿ ತಿನಿಸು ತಂದು ಗಣಪನಿಗೆ ನೀಡುತ್ತಾಳೆ. ಅದನ್ನು ತಿಂದ ತಕ್ಷಣ ಗಣಪ ತೃಪ್ತಿಯಿಂದ ತೇಗುತ್ತಾನೆ. ಇದೇ ಸಮಯಕ್ಕೆ ಶಿವಕೂಡ 21 ಬಾರಿ ತೇಗುತ್ತಾನೆ. ಆಶ್ಚರ್ಯವೆಂದರೆ ಶಿವ ಕೂಡ ನನಗೂ ಹೊಟ್ಟೆ ತುಂಬಿದೆ ಎಂದು ಹೇಳುತ್ತಾನೆ. ಹೀಗಾಗಿ ಗಣಪನಿಗೆ 21 ಮೋದಕಗಳನ್ನು ನೈವೇದ್ಯವಾಗಿ ಇಡಲಾಗುವುದು.

ಮೋದಕ ಜೊತೆ ಲಡ್ಡೂ ಇಡಬೇಕು

ಮೋದಕ ಜೊತೆ ಲಡ್ಡೂ ಇಡಬೇಕು

ಗಣೇಶನಿಗೆ ಸಿಹಿ ಎಂದರೆ ಇಷ್ಟವೆಂಬುವುದು ಆತನಿಗೆ ಇಡುವ ಆಹಾರಗಳನ್ನು ನೋಡಿದಾಗ ತಿಳಿಯುತ್ತದೆ. ಗಣಪನ ಚಿತ್ರಗಳಲ್ಲಿ ಕೈಯಲ್ಲಿ ಲಡ್ಡು ಇರುವುದು ನೋಡಬಹುದು. ಗಣೇಶ ಚತುರ್ಥಿಗೆ ಬಗೆ ಬಗೆಯ ಲಡ್ಡುಗಳನ್ನು ಮಾಡಿ ಇಡಲಾಗುವುದು.

 ಪುರಿ ಉಂಡೆ

ಪುರಿ ಉಂಡೆ

ಗಣಪನಿಗೆ ಪುರಿ ಉಂಡೆ ಏಕೆ ನೀಡುತ್ತಾರೆ ಎಂಬುವುದರ ಹಿಂದೆಯೂ ಪೌರಾಣಿಕ ಕತೆಯಿದೆ. ಒಮ್ಮೆ ಕುಬೇರ ಗಣಪನನ್ನು ಊಟಕ್ಕೆ ಆಹ್ವಾನಿಸುತ್ತಾನೆ. ಆದರೆ ಗಣಪನಿಗೆ ಎಷ್ಟು ಆಹಾರ ತಿಂದರೂ ಹೊಟ್ಟೆ ತುಂಬುವುದಿಲ್ಲ. ಆಗ ಶಿವ ಕುಬೇರನ ಹತ್ತಿರ ಶ್ರದ್ಧೆ ಹಾಗೂ ಒಳ್ಳೆಯ ಆಲೋಚನೆಯಿಂದ ಪುರಿ ಉಂಡೆ ನೀಡುವಂತೆ ಹೇಳುತ್ತಾನೆ. ಆಗ ಗಣೇಶನಿಗೆ ತೃಪ್ತಿಯಾಗುತ್ತದೆ. ಊಟದ ಬಳಿಕ ಸ್ನ್ಯಾಕ್ಸ್ ಆಗಿ ಗಣಪ ಪುರಿ ಉಂಡೆ ಬಳಸುತ್ತಾನೆ ಎಂದು ಹೇಳಲಾಗುತ್ತದೆ.

ಬಾಳೆಹಣ್ಣು ಹಾಗೂ ಗರಿಕೆ ಹುಲ್ಲು

ಬಾಳೆಹಣ್ಣು ಹಾಗೂ ಗರಿಕೆ ಹುಲ್ಲು

ಇನ್ನು ಗಣಪನಿಗೆ ಬಾಳೆಹಣ್ಣು ಇಡುತ್ತಾರೆ. ಜೊತೆಗೆ ಗರಿಕೆ ಹುಲ್ಲು ಕಡ್ಡಾಯವಾಗಿ ಇಡಲೇಬೇಕು. ಇದರ ಹಿಂದೆಯೂ ಸುಂದರ ಪೌರಾಣಿಕ ಕತೆಯಿದೆ.

ಅನಲಾಸುರ ಎಂಬ ರಾಕ್ಷಸ ದೇವತೆಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದ. ಆ ರಾಕ್ಷಸನ ಕಣ್ಣಿನಿಂದ ಬರುವ ಬೆಂಕಿಯು ಅವನ ದಾದಿಯಲ್ಲಿ ಸಿಗುವ ಎಲ್ಲರನ್ನೂ ಸುಟ್ಟು ಭಸ್ಮ ಮಾಡುತ್ತಿದ್ದ. ಈ ರಾಕ್ಷಸನಿಂದ ದೇವತೆಗಳನ್ನು ರಕ್ಷಿಸಲು ಗಣಪ ಆ ರಾಕ್ಷಸನ ಜೊತೆಗೆ ಹೋರಾಟ ಮಾಡುತ್ತಾ ಅನಲಾಸುರ ರಾಕ್ಷಸನನ್ನು ಸಂಪೂರ್ಣ ನುಂಗಿ ಬಿಡುತ್ತಾನೆ. ಇದರಿಂದಾಗಿ ಗಣಪನ ಹೊಟ್ಟೆ ಉಬ್ಬುವುದು, ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಗಣಪ ಕಷ್ಟಪಡುತ್ತಾನೆ. ಶಿವ, ವಿಷ್ಣು, ಚಂದ್ರ ಎಲ್ಲಾ ಬಂದು ಗಣಪನ ನೋವು ಕಡಿಮೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ, ಆಗ ಋಷಿ ಮುನಿಗಳು 21 ಗರಿಕೆಯನ್ನು ಗಣೇಶನ ತಲೆ ಮೇಲೆ ಇಡುತ್ತಾರೆ, ಗಣಪನ ದೇಹದ ಉಷ್ಣಾಂಶವೆಲ್ಲಾ ಮಾಯವಾಗುವುದು. ಹೀಗಾಗಿ ಗಣಪನಿಗೆ ಗರಿಕೆ ಕಡ್ಡಾಯ.

ಗಣೇಶ ಚತುರ್ಥಿಗೆ ಅವನಿಗೆ ಇಷ್ಟವಾದ ತಿನಿಸುಗಳೊಂದಿಗೆ ಪ್ರತಿಷ್ಠಾಪನೆಗೆ ನೀವು ಸಿದ್ಧರಿದ್ದೀರಿ ತಾನೆ? ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು...

English summary

Ganesh Chaturthi 2021: Here Why Lord Ganesha Love modak and Why to keep 21 Modak

Here are muthological stories of why lord ganesha love modak and why to keep 21 modak in ganesha pooja and why garike must to keep for ganesha, Have a look,
X
Desktop Bottom Promotion