For Quick Alerts
ALLOW NOTIFICATIONS  
For Daily Alerts

ಅಚ್ಚರಿಯ ಲೋಕ: ಕನಸಿನಲ್ಲಿ ತ್ರಿಶೂಲ, ಶಿವಲಿಂಗ ಕಂಡುಬಂದರೆ...

By Super Admin
|

ನಾವೆಲ್ಲರೂ ಕನಸುಗಳನ್ನು ಕಾಣುತ್ತೇವೆ. ಇಲ್ಲಿ ಪ್ರಸ್ತಾಪಿಸಿರುವ ಕನಸು ಎಂದರೆ ಹಗಲುಗನಸು ಅಥಾವೂ ದೂರದೃಷ್ಟಿಯ ಕನಸಲ್ಲ, ರಾತ್ರಿ ಮಲಗಿದ ಬಳಿಕ ನಿದ್ದೆಯಲ್ಲಿ ಕಾಣುವ ಕನಸುಗಳು. ಪ್ರತಿಬಾರಿ ಮಲಗಿ ನಿದ್ದೆ ಹತ್ತಿದಾಗಲೂ ನಾವೆಲ್ಲರೂ ಕನಸುಗಳನ್ನು ಕಾಣುತ್ತೇವಾದರೂ ಅವುಗಳಲ್ಲಿ ಬಹುತೇಕವು ಮುಂಜಾನೆ ಎದ್ದ ಬಳಿಕ ನೆನಪಿರುವುದಿಲ್ಲ ಅಥವಾ ಅಸ್ಪಷ್ಟವಾಗಿ ನೆನಪಿದ್ದರೂ ಯಾವುದೇ ತರ್ಕಕ್ಕೆ ಒಳಪಡ ಕಾರಣ ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೂ ಇಲ್ಲ. ಆದರೆ ಕೆಲವು ಕನಸುಗಳು ಮಾತ್ರ ಎಚ್ಚರಾದ ಬಳಿಕ ಸ್ಪಷ್ಟವಾಗಿ ಎಚ್ಚರಿದ್ದು ಇದರಲ್ಲಿ ಕಂಡುಬಂದ ವಿಷಯಗಳನ್ನು ಮನನ ಮಾಡಿಕೊಳ್ಳಲು, ಹಲವಾರು ದಿನಗಳವರೆಗೆ ನೆನಪಿರುತ್ತವೆ. ಅಷ್ಟೇ ಏಕೆ, ನಮ್ಮ ನಿತ್ಯದ ತಲೆಬಿಸಿಗಳಿಗೂ ಕನಸುಗಳ ಮೂಲಕ ಹಲವು ಪರಿಹಾರ ದೊರಕುತ್ತವೆ. ಪುರಾಣದಲ್ಲಿ ಬಚ್ಚಿಟ್ಟ ಸತ್ಯ- ಭಗವಾನ್ ಶಿವನ ಜನ್ಮ ರಹಸ್ಯ!

ಉದಾಹರಣೆಗೆ ಹೊಲಿಗೆ ಯಂತ್ರವನ್ನು ಕಂಡುಹಿಡಿದ ಎಲಿಯಾಸ್ ಹೋವ್‌ರಿಗೆ ಸೂಜಿಯಲ್ಲೊಂದು ರಂಧ್ರ ಮಾಡುವುದು ಹೇಗೆ ಎಂದೇ ಗೊತ್ತಾಗುತ್ತಿರಲಿಲ್ಲ. ಎಷ್ಟೇ ಚಿಕ್ಕ ತೂತು ಮಾಡಿದರೂ ಸೂಜಿ ಅಲ್ಲಿಯೇ ತುಂಡಾಗುತ್ತಿತ್ತು. ಅದರಲ್ಲೂ ಬೇಗನೇ ತಯಾರಿಸಿ ಎಂದು ದೊರೆಯ ಒತ್ತಡ ಬೇರೆ, ಇದೇ ಚಿಂತೆಯಲ್ಲಿ ಮಲಗಿದ್ದವರಿಗೆ ಕನಸಿನಲ್ಲಿ ಕೆಲವು ಸೈನಿಕರು ಈಟಿಯಿಂದ ಇರಿಯುವ ಕನಸು ಬಿದ್ದಿತ್ತು. ಆ ಈಟಿಗಳ ಮೊನೆಗಳು ತ್ರಿಕೋಣಾಕೃತಿಯ ಚೂಪಾದ ತಗಡುಗಳಾಗಿದ್ದು ನಡುವಲ್ಲಿ ಒಂದು ಚಿಕ್ಕ ರಂಧ್ರ ಹೊಂದಿತ್ತು. ಬೆಳಿಗ್ಗೆ ನಾಲ್ಕು ಗಂಟೆಗೆ ಧಿಗ್ಗನೆದ್ದ ಹೋವ್ ತಕ್ಷಣ ತಮ್ಮ ಸೂಜಿಯಲ್ಲಿ ಇದನ್ನು ಪ್ರಯೋಗಿಸಲು ತೊಡಗಿದರು.

ಮೊದಲು ಸೂಜಿಯ ತುದಿಯನ್ನು ಬಿಸಿಮಾಡಿ ಮೆಲುವಾಗಿ ಹೊಡೆದು ಅಗಲವಾಗಿಸಿ ಅಗಲವಾದ ಸ್ಥಳದಲ್ಲಿ ಚಿಕ್ಕ ರಂಧ್ರ ಕೊರೆದರು. ಬಳಿಕ ಮತ್ತೊಮ್ಮೆ ಬಿಸಿಮಾಡಿ ಅಗಲವಾಗಿದ್ದ ಭಾಗವನ್ನು ಒಳಗೆ ಬರುವಂತೆ ಹೊಡೆದು ಸೂಜಿಯ ಗಾತ್ರ ಮೊದಲಿದ್ದಂತೆ ಮಾಡಿದರು. ಯುರೇಕಾ, ಒಂಬತ್ತು ಗಂಟೆಗೆ ರಂಧ್ರವಿದ್ದ ಸೂಜಿ ತಯಾರಾಗಿತ್ತು! (ಇಂದಿನ ಆಧುನಿಕ ತಂತ್ರಜ್ಞಾನದಲ್ಲಿಯೂ ಸೂಜಿಗಳನ್ನು ಸರಿಸುಮಾರು ಇದೇ ವಿಧಾನದಲ್ಲಿ ತಯಾರಿಸಲಾಗುತ್ತದೆ).

ಸೂಜಿಯ ಕಥೆ ಹಾಗಿದ್ದರೆ ಇಂದಿನ ದಿನಗಳಲ್ಲಿ ಕಾಣುವ ಇತರ ವಸ್ತುಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ಉತ್ತರ ನಿರಾಶಾದಾಯಕ, ಏಕೆಂದರೆ ಕನಸುಗಳನ್ನು ಪ್ರಯೋಗಗಳಿಗೆ ಒಳಪಡಿಸಲು ಸಾಧ್ಯವಿಲ್ಲದ ಕಾರಣ ಮತ್ತು ಹೆಚ್ಚಿನವು ಅರ್ಧಂಬರ್ಧ ನೆನಪಿರುವ ಕಾರಣ ಇತ್ತ ಯಾವುದೇ ಸ್ಪಷ್ಟವಾದ ವಿವರಣೆ ನೀಡಲು ಇದುವರೆಗೆ ವಿಜ್ಞಾನಕ್ಕೆ ಸಾಧ್ಯವಾಗಿಲ್ಲ. ಆದರೆ ಧಾರ್ಮಿಕ ವಿದ್ವಾಂಸರು ಇಂತಹ ಕೆಲವು ಪ್ರಕರಣಗಳನ್ನು ಆಳವಾಗಿ ಅಭ್ಯಸಿಸಿ ಹೀಗಿದ್ದರೆ ಹೀಗಾಗಬಹುದು ಎಂಬ ಒಂದು ಅಂದಾಜುಪಟ್ಟಿಯನ್ನು ತಯಾರಿಸಿದ್ದಾರೆ. ಈ ಪಟ್ಟಿಯಲ್ಲಿ ಏನಿದೆ ಎಂಬ ಕುತೂಹಲವನ್ನು ತಣಿಸಲು ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಬೆನ್ನಟ್ಟಿ ಬರುವ ಕನಸು

ಬೆನ್ನಟ್ಟಿ ಬರುವ ಕನಸು

ಒಂದು ವೇಳೆ ಕನಸಿನಲ್ಲಿ ನಿಮ್ಮನ್ನು ಯಾರಾದರೂ ಬೆನ್ನಟ್ಟಿ ಬಂದಂತೆ ಕಂಡುಬಂದರೆ ಇದು ನಿಮ್ಮ ಸ್ವಯಂಪ್ರಜ್ಞೆ ಅಥವಾ ಸ್ವಯಂ ಜಾಗೃತಿಯ ಬಗ್ಗೆ ತಿಳಿಸುತ್ತದೆ.

ಕನಸುಗಳಲ್ಲಿ ಧಾರ್ಮಿಕತೆ

ಕನಸುಗಳಲ್ಲಿ ಧಾರ್ಮಿಕತೆ

ಕನಸುಗಳಲ್ಲಿ ನೀವು ನಂಬುವ ಧರ್ಮದ ಅಥವಾ ಅದಕ್ಕೆ ಸಂಬಂಧಿಸಿದ ವಿಚಾರಗಳು ಕಂಡುಬಂದರೆ ಇದು ನೀವು ಸುತ್ತಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸೌಹಾರ್ದತೆ ಹೊಂದಿರುವ ಸಂಕೇತವಾಗಿದೆ. ಸಾಮಾನ್ಯವಾಗಿ ಭಕ್ತರು ತಮ್ಮ ಇಷ್ಟದೇವರ ಮುಖಕ್ಕಿಂತ ಹೆಚ್ಚಾಗಿ ದೇವರ ಶಕ್ತಿ ಪರಾಕ್ರಮ ಅಥವಾ ಅವರು ಬಳಸುವ ಆಯುಧ ಮತ್ತು ಶಕ್ತಿಗಳನ್ನೇ ಹೆಚ್ಚಾಗಿ ಕಾಣುತ್ತಾರೆ.

ಕನಸುಗಳಲ್ಲಿ ಧಾರ್ಮಿಕತೆ

ಕನಸುಗಳಲ್ಲಿ ಧಾರ್ಮಿಕತೆ

ಒಂದು ವೇಳೆ ನೀವು ಶಿವಭಕ್ತರಾಗಿದ್ದು ಕನಸಿನಲ್ಲಿ ಶಿವನ ತ್ರಿಶೂಲ, ಡಮರುಗ, ನಾಗರಹಾವು ಮೊದಲಾದವುಗಳನ್ನು ಕಂಡರೆ ಇದು ನಿಮ್ಮ ದೇವರ ಕುರಿತ ಭಕ್ತಿಯನ್ನೂ ಈ ಆಯುಧಗಳನ್ನು ದೇವರು ಯಾವ ಕಾರ್ಯಕ್ಕೆ ಬಳಸುತ್ತಾನೋ ಅಂತೆಯೇ ನಿಮ್ಮ ಶಕ್ತಿಯನ್ನು ಇದೇ ನಿಟ್ಟಿನಲ್ಲಿ ಹರಿಸುವ ಪರಿಯನ್ನೇ ಈ ಕನಸು ಬಿಂಬಿಸುತ್ತದೆ.

ಕನಸಿನಲ್ಲಿ ಶಿವಲಿಂಗವನ್ನು ಕಾಣುವುದು

ಕನಸಿನಲ್ಲಿ ಶಿವಲಿಂಗವನ್ನು ಕಾಣುವುದು

ಈ ಕನಸಿನ ಮೂಲಕ ನಿಮಗೆ ನಿತ್ಯವೂ ತಪಸ್ಸಿನ ಅಥವಾ ಧ್ಯಾನದ ಅಗತ್ಯವಿದೆ ಎಂದು ತಿಳಿಸುತ್ತದೆ. ಏಕೆಂದರೆ ಶಿವಲಿಂಗವನ್ನು ಕನಸಿನಲ್ಲಿ ಕಾಣುವುದು ದೇವರನ್ನು ನೋಡುವ ಅತೀವ ಹಂಬಲದ ಸಾಕಾರವಾಗಿದೆ. ಶಿವನನ್ನು ಧ್ಯಾನಿಸಿದರೆ ಖಂಡಿತಾ ಮನದಲ್ಲಿ ಪ್ರಕಟಗೊಳ್ಳುತ್ತಾನೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕನಸಿನಲ್ಲಿ ಶಿವಲಿಂಗವನ್ನು ಕಾಣುವುದು

ಕನಸಿನಲ್ಲಿ ಶಿವಲಿಂಗವನ್ನು ಕಾಣುವುದು

ಶಿವಲಿಂಗ ಕನಸಿನಲ್ಲಿ ಕಂಡುಬಂದರೆ ಇದು ನಿಮ್ಮ ವಿಜಯ, ನಿಮ್ಮ ತೊಂದರೆಗಳಿಗೆ ಕೊನೆ ಅಥವಾ ಜೀವನ ಸಾರ್ಥಕಗೊಂಡ ಭಾವವನ್ನು ತೋರಿಸುತ್ತದೆ.

ಕನಸಿನಲ್ಲಿ ಶಿವಲಿಂಗವನ್ನು ಕಾಣುವುದು

ಕನಸಿನಲ್ಲಿ ಶಿವಲಿಂಗವನ್ನು ಕಾಣುವುದು

ಅಷ್ಟೇ ಅಲ್ಲ, ಜಗತ್ತಿನಲ್ಲಿ ಸಕಲ ಜೀವಗಳನ್ನು ಸೃಷ್ಟಿಸಿ ಅದರಲ್ಲಿ ಶಕ್ತಿ ತುಂಬಿದ ಸೃಷ್ಟಿಕರ್ತನ ಬಗ್ಗೆ ಭಕ್ತಿ ಮೂಡಿಸುತ್ತದೆ. ಒಂದು ವೇಳೆ ಶಿವಲಿಂಗದ ಕೆಳಭಾಗ ಸ್ಪಷ್ಟವಾಗಿ ಗೋಚರಿಸಿದರೆ ಇದು ಸೃಷ್ಟಿಯಲ್ಲಿ ಹೆಣ್ಣಿನ ಪಾತ್ರವನ್ನು ಬಿಂಬಿಸುತ್ತದೆ.

ಭಗವಾನ್ ಶಿವನನ್ನು ಲಿಂಗರೂಪದಲ್ಲಿ ಏಕೆ ಆರಾಧಿಸುತ್ತಾರೆ?

ಕನಸಿನಲ್ಲಿ ಶಿವ ಪಾರ್ವತಿಯರನ್ನು ಕಾಣುವುದು

ಕನಸಿನಲ್ಲಿ ಶಿವ ಪಾರ್ವತಿಯರನ್ನು ಕಾಣುವುದು

ಒಂದು ವೇಳೆ ಪಾರ್ವತಿ ಪರಮೇಶ್ವರರು ಕನಸಿನಲ್ಲಿ ಕಂಡುಬಂದರೆ ಇದು ನಿಮ್ಮ ಮನೆಬಾಗಿಲಿಗೆ ಆಗಮಿಸುವ ಅವಕಾಶಗಳ ಸಂಕೇತವಾಗಿದೆ. ಶೀಘ್ರವೇ ನಿಮಗೆ ಶುಭಸುದ್ದಿ ಬರಲಿದೆ. ಇದು ಆರ್ಥಿಕ ಲಾಭ, ಪ್ರಯಾಣದ ಅವಕಾಶ, ಮನೆಗೆ ಧಾನ್ಯ ಅಥವಾ ಆಹಾರದ ಆಗಮನ, ಸಮೃದ್ಧಿ, ಆರೋಗ್ಯ, ಉದ್ಯೋಗ, ಸಂತಾನ ಮೊದಲಾದ ಯಾವುದೇ ವಿಷಯವಾಗಿರಬಹುದು.

ಶಿವನ ತಾಂಡವನೃತ್ಯವನ್ನು ಕಾಣುವುದು

ಶಿವನ ತಾಂಡವನೃತ್ಯವನ್ನು ಕಾಣುವುದು

ಶಿವನ ತಾಂಡವನೃತ್ಯ ಭಾವೋದ್ವೇಗದ ಪ್ರತೀಕವಾಗಿದೆ. ನಾಟ್ಯದೇವರಾದ ನಟರಾಜನನ್ನು ಕನಸಿನಲ್ಲಿ ಕಂಡರೆ ಇದು ನಿಮ್ಮ ತೊಂದರೆಗಳು ಶೀಘ್ರದಲ್ಲಿಯೇ ನಿವಾರಣೆಯಾಗಲಿವೆ ಎಂಬ ಸಂಕೇತವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಿವನ ತಾಂಡವನೃತ್ಯವನ್ನು ಕಾಣುವುದು

ಶಿವನ ತಾಂಡವನೃತ್ಯವನ್ನು ಕಾಣುವುದು

ಅಲ್ಲದೇ ನಿಮ್ಮ ಪ್ರಯತ್ನಗಳಿಗೆ ಶೀಘ್ರವೇ ಫಲ ಸಿಗಲಿದೆ, ಆದರೆ ಇದಕ್ಕೆ ಇನ್ನಷ್ಟು ಹೆಚ್ಚಿನ ಪ್ರಯತ್ನ ಮತ್ತು ಶ್ರಮ ಅಗತ್ಯವಿದೆ ಎಂದು ಶಿವ ತನ್ನ ನೃತ್ಯದ ಮೂಲಕ ನಿಮಗೆ ತಿಳಿಸುತ್ತಿದ್ದಾನೆ.

ಶಿವನ ಮಂದಿರವನ್ನು ಕಾಣುವುದು

ಶಿವನ ಮಂದಿರವನ್ನು ಕಾಣುವುದು

ಸಾಮಾನ್ಯವಾಗಿ ಮಂದಿರಗಳ ಗೋಪುರಗಳು ಎತ್ತರವಾಗಿದ್ದು ಬಹಳ ದೂರದಿಂದಲೇ ಭಕ್ತರನ್ನು ದೇವರೆಡೆಗೆ ಬರಲು ದಾರಿ ತೋರುತ್ತವೆ. ಆದರೆ ಕನಸಿನಲ್ಲಿ ಶಿವನ ಮಂದಿರವನ್ನು ಅಥವಾ ಮಂದಿರದ ಗೋಪುರವನ್ನು ಕಂಡರೆ ಇದು ನಿಮಗೆ ದ್ವಿಪುತ್ರರನ್ನು ಹೊಂದುವ ಸಂಭವವನ್ನು ಸೂಚಿಸುತ್ತದೆ. ಅಲ್ಲದೇ ಒಂದು ವೇಳೆ ಬಹಳಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಕನಸಿನಲ್ಲಿ ಶಿವಮಂದಿರವನ್ನು ಕಂಡರೆ ಈ ಬೇನೆ ಬೇಗನೇ ಕಡಿಮೆಯಾಗುವ ಸೂಚನೆಯಾಗಿದೆ.

ಶಿವನ ಮಂದಿರವನ್ನು ಕಾಣುವುದು

ಶಿವನ ಮಂದಿರವನ್ನು ಕಾಣುವುದು

ವಿಶೇಷವಾಗಿ ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುವವರು ಶಿವಮಂದಿರನ್ನು ಕಂಡರೆ ಶೀಘ್ರವೇ ನಿಮ್ಮ ತೊಂದರೆಗೆ ಫಲಪ್ರದವಾದ ಮದ್ದು ದೊರಕಲಿದೆ ಎಂಬ ಸೂಚನೆಯಾಗಿದೆ. ಒಂದು ವೇಳೆ ಪ್ರತಿದಿನ ಮಂದಿರವನ್ನು ಕನಸಿನಲ್ಲಿ ಕಾಣುತ್ತಿದ್ದರೆ ಇದು ಧನಾಗಮನದ ಸೂಚನೆಯೂ ಆಗಿದೆ.

ಕನಸಿನಲ್ಲಿ ತ್ರಿಶೂಲವನ್ನು ಕಾಣುವುದು

ಕನಸಿನಲ್ಲಿ ತ್ರಿಶೂಲವನ್ನು ಕಾಣುವುದು

ಶಿವನ ತ್ರಿಶೂಲದ ಮೂರು ಮೊನೆಗಳು ಮನುಷ್ಯನ ಮೂರು ಸ್ಥಿತಿಗಳಾದ ಎಚ್ಚರ, ನಿದ್ದೆ ಮತ್ತು ಕನಸಿನ ಸ್ಥಿತಿಗಳನ್ನು ಬಿಂಬಿಸುತ್ತವೆ. ಒಂದು ವೇಳೆ ಕನಸಿನಲ್ಲಿ ತ್ರಿಶೂಲವನ್ನು ಕಂಡರೆ ಇದು ನಿಮ್ಮ ಹಿಂದಿನ, ಇಂದಿನ ಅಥವಾ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೋ ಪ್ರಕರಣ ಸಂಬಂಧಿಸಿದ್ದು ಈ ಬಗ್ಗೆ ಎಚ್ಚರಿರಲು ಸೂಚಿಸುತ್ತಿದೆ.

ಕನಸಿನಲ್ಲಿ ತ್ರಿಶೂಲವನ್ನು ಕಾಣುವುದು

ಕನಸಿನಲ್ಲಿ ತ್ರಿಶೂಲವನ್ನು ಕಾಣುವುದು

ಅಲ್ಲದೇ ಹುಟ್ಟು, ಜೀವನ ಮತ್ತು ಸಾವಿನ ಬಗ್ಗೆಯೂ ತಿಳಿಸುತ್ತದೆ. ಇನ್ನೊಂದು ಅರ್ಥದಲ್ಲಿ ಕೆಲವು ದುಷ್ಟಶಕ್ತಿಗಳನ್ನು ಕೊಂದು ಮುಂದಿನ ದಾರಿ ಸುಗಮವಾಗಿದಲು ಶಿವ ಬಳಸುವ ತ್ರಿಶೂಲ ನಿಮ್ಮ ಮುಂದಿನ ಹಾದಿ ಸುಗಮವಾಗುವ ಶುಭಸಂಕೇತವಾಗಿದೆ.

 ಶಿವನ ಶಿಖೆಯಲ್ಲಿರುವ ಚಂದ್ರನನ್ನು ಕಾಣುವುದು

ಶಿವನ ಶಿಖೆಯಲ್ಲಿರುವ ಚಂದ್ರನನ್ನು ಕಾಣುವುದು

ಶಿವನ ಶಿಖೆಯಲ್ಲಿರುವ ಚಿಕ್ಕ ಬಿಲ್ಲಿನಾಕೃತಿಯ ಚಂದ್ರ ವಿವೇಕ ಅಥವಾ ಪ್ರಜ್ಞೆಯ ಸಂಕೇತವಾಗಿದೆ. ಒಂದು ವೇಳೆ ಕನಸಿನಲ್ಲಿ ಈ ಚಂದ್ರನನ್ನು ಕಂಡರೆ ನಿಮಗೆ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತಳೆಯಲು ಇದು ಸೂಕ್ತ ಸಮಯ ಎಂದು ಅರ್ಥೈಸಿಕೊಳ್ಳಬೇಕು. ವಿಶೇಷವಾಗಿ ಇದು ಶೈಕ್ಷಣಿಕ ಅಥವಾ ಶಿಕ್ಷಣದ ಮೂಲಕ ಪಡೆಯಬಹುದಾದ ಉದ್ಯೋಗದ ಕುರಿತಾದ ನಿರ್ಧಾರಗಳಿಗೆ ಸಂಬಂಧಪಟ್ಟಿದೆ.

ಶಿವನ ಮೂರನೆಯ ಕಣ್ಣನ್ನು ನೋಡುವುದು

ಶಿವನ ಮೂರನೆಯ ಕಣ್ಣನ್ನು ನೋಡುವುದು

ಸಾಮಾನ್ಯವಾಗಿ ಮುಚ್ಚಿಯೇ ಇರುವ ಶಿವನ ಮೂರನೆಯ ಕಣ್ಣು ಜಾಗೃತೆ ಮತ್ತು ಎಚ್ಚರಿಕೆಯ ಸಂಕೇತವಾಗಿದೆ. ಈ ಕಣ್ಣನ್ನು ಕನಸಿನಲ್ಲಿ ಕಂಡರೆ ಇದು ನಿಮ್ಮ ಜೀವನದಲ್ಲಿ ಮುಂದಿನ ದಿನಗಳಲ್ಲಿ ಬರಬಹುದಾದ ಬದಲಾವಣೆಗಳ ಬಗ್ಗೆ ಸೂಚಿಸುತ್ತದೆ.

ಡಮರುಗವನ್ನು ಕಾಣುವುದು

ಡಮರುಗವನ್ನು ಕಾಣುವುದು

ಡಮರುಗ ಸದಾ ವಿಸ್ತರಿಸುತ್ತಿರುವ ವಿಶ್ವ ಅಥವಾ ಬ್ರಹ್ಮಾಂಡದ ಪ್ರತೀಕವಾಗಿದೆ. ಅಲ್ಲದೇ ಡಮರುಗ ಶ್ರವಣಶಕ್ತಿಯ ಸಂಕೇತವೂ ಆಗಿದೆ. ಡಮರುಗವನ್ನು ಕನಸಿನಲ್ಲಿ ಕಾಣುವುದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಧನಾತ್ಮಕ ಶಕ್ತಿಯ ಹರಿಯುವಿಕೆ ಹಾಗೂ ತನ್ಮೂಲಕ ಎರಡೂ ಕಡೆ ಉನ್ನತಿಯನ್ನು ಪಡೆಯುವ ಸಂಕೇತವಾಗಿದೆ.

ಶಿವನ ಜಟೆಯಿಂದ ಇಳಿಯುವ ಗಂಗೆಯನ್ನು ಕಾಣುವುದು

ಶಿವನ ಜಟೆಯಿಂದ ಇಳಿಯುವ ಗಂಗೆಯನ್ನು ಕಾಣುವುದು

ಗಂಗೆ ಎಂದರೆ ತಿಳಿವಳಿಕೆ ಮತ್ತು ಜ್ಞಾನದ ಸಂಕೇತವಾಗಿದೆ. ತಿಳಿವಳಿಕೆಯಿಂದ ಆತ್ಮಶುದ್ಧಿಯಾಗುತ್ತದೆ. ಸಾಮಾನ್ಯವಾಗಿ ತಿಳಿವಳಿಕೆ ಮೆದುಳಿನಲ್ಲಿ ಸಂಗ್ರಹವಾಗಿರುವ ಕಾರಣ ತಲೆಯನ್ನು ಜ್ಞಾನದ ಸಂಕೇತವೆಂದೂ ಅರ್ಥೈಸಿಕೊಳ್ಳಬಹುದು. ಅಂತೆಯೇ ಹೃದಯ ಪ್ರೀತಿಯ ಸಂಕೇತವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಿವನ ಜಟೆಯಿಂದ ಇಳಿಯುವ ಗಂಗೆಯನ್ನು ಕಾಣುವುದು

ಶಿವನ ಜಟೆಯಿಂದ ಇಳಿಯುವ ಗಂಗೆಯನ್ನು ಕಾಣುವುದು

ಒಂದು ವೇಳೆ ಶಿವನ ತಲೆಯಿಂದ ಗಂಗೆ ಇಳಿದುಬರುತ್ತಿರುದುವನ್ನು ಕನಸಿನಲ್ಲಿ ಕಂಡರೆ ಇದು ನಿಮ್ಮ ಪ್ರೀತಿ, ತಿಳಿವಳಿಕೆ, ಜ್ಞಾನ ಮತ್ತು ಸಮೃದ್ಧಿಯನ್ನು ಬಿಂಬಿಸುತ್ತದೆ. ಅಂದರೆ ಈ ಕನಸಿನಿಂದ ನಿಮ್ಮ ಜೀವನದಲ್ಲಿ ಪ್ರೀತಿ, ಸಮೃದ್ಧಿ ಮತ್ತು ಜ್ಞಾನ ಹೆಚ್ಚುವ ಸಂಕೇತ ಸಿಗುತ್ತದೆ.

English summary

From Trishul to Shivlinga, what does dreams about Lord Shiva mean?

Spiritual dreams come when your thoughts are positive for everyone. Have you ever seen Lord Shiva or his symbols like Trishul or snake in your dreams? If yes then here the exact meaning what it actually means...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more