For Quick Alerts
ALLOW NOTIFICATIONS  
For Daily Alerts

ಮನುಷ್ಯನಲ್ಲಿ ಇರುವಂತಹ ನಾಲ್ಕು ಗುಣಗಳಿಂದ ಆತ ಸ್ವರ್ಗದಿಂದ ಬಂದಿರುವವನು ಎಂದು ಹೇಳಬಹುದಂತೆ!

|

ಮನುಷ್ಯನ ಜೀವನವು ತುಂಬಾ ಅಮೂಲ್ಯವಾದದ್ದು, ಅದು ನಮ್ಮ ಕೊನೆಯ ಜನ್ಮ ಎಂದು ಹೇಳಲಾಗುತ್ತದೆ. ಇದರಿಂದ ಮನುಷ್ಯನಾಗಿ ಹುಟ್ಟಿದ ಮೇಲೆ ಒಳ್ಳೆಯ ಕೆಲಸಗಳನ್ನು ಮಾಡುತ್ತಲಿರಬೇಕು. ಇದರಿಂದ ಸ್ವರ್ಗ ಪ್ರಾಪ್ತಿಯಾಗುವುದು. ಪಾಪಗಳನ್ನು ಮಾಡಿದರೆ ಅದರಿಂದ ನರಕ ಸಿಗುವುದು ಎಂದು ಹೇಳಲಾಗುತ್ತದೆ. ಹೆಚ್ಚಿನ ಎಲ್ಲಾ ಧರ್ಮಗಳಲ್ಲೂ ಇದನ್ನೇ ಹೇಳುವರು. ಭೂಮಿ ಮೇಲೆ ಮಾಡಿರುವಂತಹ ಪಾಪ ಹಾಗೂ ಪುಣ್ಯ ಕರ್ಮಗಳಿಂದ ಮನುಷ್ಯನಿಗೆ ಸ್ವರ್ಗ ಅಥವಾ ನರಕವು ಸಿಗುವುದು ಎಂದು ಪುರಾಣಗಳು, ತತ್ವಜ್ಞಾನಿಗಳು ಹೇಳುವರು.

ಹಿಂದಿನ ಜನ್ಮದಲ್ಲಿ ನಾವು ಏನು ಆಗಿದ್ದೆವು ಮತ್ತು ಮುಂದೆ ಒಂದು ಜನ್ಮ ಸಿಕ್ಕಿದರೆ ನಾವು ಏನು ಆಗಲಿದ್ದೇವೆ ಎಂದು ತಿಳಿದು ಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಯು ಖಂಡಿತವಾಗಿಯೂ ಮೂಡುವುದು. ನಾವು ಇನ್ನೊಂದು ಜನ್ಮವನ್ನು ಸ್ವರ್ಗ ಅಥವಾ ನರಕದಲ್ಲಿ ಕಳೆಯಲಿದ್ದೇವೆಯಾ ಎನ್ನುವುದಕ್ಕೆ ಚಾಣಕ್ಯ ನೀತಿಯು ಉತ್ತರವನ್ನು ಹೇಳುತ್ತದೆ. ಮನುಷ್ಯನಲ್ಲಿ ಇರುವಂತಹ ನಾಲ್ಕು ಗುಣಗಳಿಂದ ಆತ ಸ್ವರ್ಗದಿಂದ ಬಂದಿರುವವನು ಎಂದು ಹೇಳಬಹುದು. ಈ ನಾಲ್ಕು ಗುಣಗಳನ್ನು ನಿಮ್ಮ ಮುಂದೆ ಇಡಲಾಗಿದೆ. ಈ ಶ್ಲೋಕವು ಅದನ್ನು ವಿವರಿಸುತ್ತದೆ...

ಶ್ಲೋಕ

ಶ್ಲೋಕ

ಸ್ವರ್ಗವಾಸಿ ಜನ್ ಕೆ ಸಾದಾ, ಚಾರ್

ಚಿನ್ಹಾ ಲೇಖಿ ಯಹಿ

ದೇವ ವಿಪ್ರ ಪೂಜಾ ಮಧುರ್, ವಕ ದಾನ

ಕರಿ ದೇಹಿ

ಸಮಾಜಕ್ಕಾಗಿ ದಾನ ಮಾಡುವಾತ

ಸಮಾಜಕ್ಕಾಗಿ ದಾನ ಮಾಡುವಾತ

ಮುಗ್ದ ಹೃದಯವನ್ನು ಹೊಂದಿರುವಂತಹ ವ್ಯಕ್ತಿ ಇತರ ಜನರ ನೋವನ್ನು ತಿಳಿಯಬಲ್ಲ. ಇಂತಹ ವ್ಯಕ್ತಿಗಳು ಜನರು ತೊಂದರೆಗೀಡಾಗುವುದನ್ನು ನೋಡಲಾರರು. ಇಂತಹ ವ್ಯಕ್ತಿಗಳು ಬಡವರಿಗೆ, ದುರ್ಬಲರಿಗೆ ಮತ್ತು ಅಗತ್ಯವಿರುವವರಿಗೆ ನೆರವು ನೀಡುವರು. ಪ್ರತಿಯೊಬ್ಬರಿಗೂ ತಮ್ಮ ಲಾಭವನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲು ಆಗದು. ಅಗತ್ಯವಿರುವವರಿಗೆ ದಾನ ಮಾಡುವಂತಹ ಮಹತ್ವ ತಿಳಿದುಕೊಂಡಿರುವವರಿಗೆ ಮಾತ್ರ ಇದು ಸಾಧ್ಯವಿರುವುದು. ಇಂತಹವರು ಸ್ವರ್ಗದಿಂದ ಬಂದಿರುವವರು.

Most Read:ಅನಾಚಾರ ಮಾಡಿದರೂ ದುರ್ಯೋಧನ ಸ್ವರ್ಗಕ್ಕೆ ಹೋಗಲು ಕಾರಣವೇನು?

ತುಂಬಾ ವಿನಯಶೀಲ ಮತ್ತು ಸಹೃದಯಿ

ತುಂಬಾ ವಿನಯಶೀಲ ಮತ್ತು ಸಹೃದಯಿ

ಕೆಲವು ಜನರು ತುಂಬಾ ಶಾಂತ ಹಾಗೂ ಸಂಯಮದಿಂದ ಇರುವರು. ಇವರಿಗೆ ಯಾವುದೇ ರೀತಿಯ ಏರಿಳಿತದಿಂದ ಪರಿಣಾಮವಾಗದು. ಕೃಷ್ಣ ದೇವರು ಕೂಡ ಹೀಗೆ ಹೇಳುತ್ತಾರೆ... ಯಾರೂ ಅತಿಯಾಗಿ ಸಂತೋಷದಿಂದ ಇರಬಾರದು ಮತ್ತು ಅತೀ ದುಃಖಿತರಾಗಬಾರದು ಎಂದು. ಮಾತನಾಡುವ ವಿಧಾನದಿಂದಾಗಿ ಅವರು ತುಂಬಾ ಶಾಂತವಾಗಿರುವರು ಎಂದು ತಿಳಿಯುವುದು. ಇವರು ತಮ್ಮ ನಡತೆಯಲ್ಲಿ ತುಂಬಾ ಮೃಧು ಹಾಗೂ ಮಧುರವಾಗಿರುವರು. ಈ ಜನರು ತಮ್ಮ ಹಿಂದಿನ ಜನ್ಮದಲ್ಲಿ ಸ್ವರ್ಗದಲ್ಲಿದ್ದರು ಎಂದು ಹೇಳಲಾಗುತ್ತದೆ.

ಆಧ್ಯಾತ್ಮದೆಡೆಗೆ ಹೆಚ್ಚು ವಾಲಿರುವಂತವರು

ಆಧ್ಯಾತ್ಮದೆಡೆಗೆ ಹೆಚ್ಚು ವಾಲಿರುವಂತವರು

ಯಾವುದೇ ರೀತಿಯ ಪೂಜೆ ಮಾಡುವುದಿದ್ದರೂ ಆಗ ಮನೆ ದೇವರಿಗೆ ಪೂಜೆ ಮೊದಲು ಮಾಡಬೇಕು ಎಂದು ಹೇಳಲಾಗುತ್ತದೆ. ಆಧ್ಯಾತ್ಮಿಕವಾಗಿ ನಂಬಿಕೆ ಉಳ್ಳವರು ಮತ್ತು ಧಾರ್ಮಿಕ ಆಚರಣೆಗಳ ಮೇಲೆ ನಂಬಿಕೆ ಇರುವಂತಹ ವ್ಯಕ್ತಿಗಳು ಹಿಂದಿನ ಜನ್ಮದಲ್ಲಿ ಸ್ವರ್ಗದಲ್ಲಿ ಇದ್ದವರು ಎಂದು ಚಾಣಕ್ಯನ ನೀತಿ ಹೇಳುತ್ತದೆ.

Most Read:ಹಿಂದೂ ಧರ್ಮದಲ್ಲಿ ವಾರದ ವಿಶಿಷ್ಟ ದಿನಗಳಲ್ಲಿ ನಾನ್‌ವೆಜ್ ಸೇವಿಸುವುದಿಲ್ಲ ಯಾಕೆ ಗೊತ್ತೇ?

ಹಸಿದವರಿಗೆ ಆಹಾರ ನೀಡುವವರು

ಹಸಿದವರಿಗೆ ಆಹಾರ ನೀಡುವವರು

ಭೂಮಿ ಮೇಲೆ ಪ್ರತಿಯೊಬ್ಬರು ಬದುಕಬೇಕು ಎನ್ನುವುದು ಮೊದಲ ತತ್ವವಾಗಿದೆ. ಆದರೆ ಪಕ್ಷಿಗಳು, ಪ್ರಾಣಿಗಳು ಅಥವಾ ಮನುಷ್ಯನಿಗೆ ಹಸಿದಿರುವಾಗ ಆಹಾರ ನೀಡುವುದು ತುಂಬಾ ಪುಣ್ಯದ ಕೆಲಸ ಎಂದು ಹೇಳಲಾಗುತ್ತದೆ. ಇದರಿಂದ ಅವರ ಆತ್ಮವು ಸ್ವರ್ಗದಲ್ಲಿ ನೆಲೆಸುವುದು ಮತ್ತು ಅವರು ಸ್ವರ್ಗದಿಂದ ಬಂದವರು ಎಂದು ಹೇಳಬಹುದು. ಸ್ವಾರ್ಥಿಗಳು ಮಾತ್ರ ತಮ್ಮ ಹೊಟ್ಟೆಯನ್ನು ಮಾತ್ರ ತುಂಬಿಸುವಲ್ಲಿ ತಲ್ಲೀನರಾಗಿರುವರು. ಬೇರೆಯವರ ಹಸಿವು ತಿಳಿದವರು ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ ಎಂದು ಚಾಣಕ್ಯ ನೀತಿಯು ಹೇಳುತ್ತದೆ. ಇಂತಹ ಜನರು ಸ್ವರ್ಗದಿಂದ ಬಂದವರು ಎಂದು ಹೇಳಲಾಗುತ್ತದೆ.

English summary

Four Signs That You Have Been To Heaven

For sure, you have heard the philosophy that humans are sent to either heaven or hell after death. If not sent to heaven or hell, either the soul wanders on earth, or it gets liberated from the cycle of birth and death. Chanakya told about some signs that indicate a person was sent to heaven after death in the past life.
X
Desktop Bottom Promotion