For Quick Alerts
ALLOW NOTIFICATIONS  
For Daily Alerts

ಜೂನ್ 2022: ಈ ತಿಂಗಳಲ್ಲಿರುವ ಪ್ರಮುಖ ಹಬ್ಬ ಹಾಗೂ ವ್ರತಗಳ ಪಟ್ಟಿ

|

ವರ್ಷದ ಪ್ರತಿ ತಿಂಗಳು ಧಾರ್ಮಿಕ ದೃಷ್ಟಿಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಅದೇ ರೀತಿ ಜ್ಯೇಷ್ಠ ಮಾಸದಲ್ಲಿ ಬರುವ ಜೂನ್‌ ತಿಂಗಳು ಸಹ ಬಹಳ ಮಹತ್ವ ಪಡೆದಿದೆ. ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಎರಡನೇ ದಿನ ಆರಂಭವಾಗಲಿರುವ ಜೂನ್‌ ತಿಂಗಳಲ್ಲಿ ಪ್ರಮುಖ ಹಬ್ಬ ಹಾಗೂ ವ್ರತಗಳಿವೆ. ಜೊತೆಗೆ ಅನೇಕ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಈ ಕಾರಣದಿಂದಾಗಿ, ಜೂನ್ ತಿಂಗಳು ಭಕ್ತರಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ತಿಂಗಳು ಬರುವ ಪ್ರಮುಖ ಹಬ್ಬಗಳ ದಿನಾಂಕಗಳು ಮತ್ತು ಅವುಗಳ ಧಾರ್ಮಿಕ ಮಹತ್ವವೇನು ಎಂಬುದನ್ನು ತಿಳಿದುಕೊಳ್ಳೋಣ.

ಜೂನ್‌ ತಿಂಗಳಲ್ಲಿ ಬರುವ ಹಬ್ಬ ಹಾಗೂ ವ್ರತಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಜೂನ್ 2, ಗುರುವಾರ: ರಂಭಾ ತೃತೀಯಾ ವ್ರತ

ಜೂನ್ 2, ಗುರುವಾರ: ರಂಭಾ ತೃತೀಯಾ ವ್ರತ

ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ರಂಭಾ ತೃತೀಯಾ ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿ ಜೂನ್ 2 ರ ಗುರುವಾರದಂದು ಈ ಶುಭ ದಿನ ಬಂದಿದ್ದು, ಈ ದಿನ, ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯ ಮತ್ತು ತಮ್ಮ ಮಕ್ಕಳ ಪ್ರಗತಿಗಾಗಿ ಉಪವಾಸವನ್ನು ಆಚರಿಸುತ್ತಾರೆ. ಅವಿವಾಹಿತ ಹುಡುಗಿಯರು ಕೂಡ ಈ ದಿನದಂದು ರಂಭಾ ತೃತೀಯ ಉಪವಾಸವನ್ನು ಆಚರಿಸಿ ಒಳ್ಳೆಯ ವರ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ.

ಜೂನ್ 3, ಶುಕ್ರವಾರ, ವಿನಾಯಕ ಚತುರ್ಥಿ:

ಜೂನ್ 3, ಶುಕ್ರವಾರ, ವಿನಾಯಕ ಚತುರ್ಥಿ:

ಹಿಂದೂ ಕ್ಯಾಲೆಂಡರ್‌ನಲ್ಲಿ ಪ್ರತಿ ಚಂದ್ರ ಮಾಸವು ಎರಡು ಚತುರ್ಥಿ ತಿಥಿಗಳನ್ನು ಹೊಂದಿರುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಚತುರ್ಥಿ ತಿಥಿ ಗಣೇಶನಿಗೆ ಸೇರಿದ್ದು. ಶುಕ್ಲ ಪಕ್ಷದಲ್ಲಿ ಅಮವಾಸ್ಯೆ ಅಥವಾ ಅಮಾವಾಸ್ಯೆಯ ನಂತರ ಬರುವ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ ಮತ್ತು ಕೃಷ್ಣ ಪಕ್ಷದಲ್ಲಿ ಪೂರ್ಣಿಮಾಸಿ ಅಥವಾ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ . ವಿನಾಯಕ ಚತುರ್ಥಿ ಉಪವಾಸವನ್ನು ಪ್ರತಿ ತಿಂಗಳು ಮಾಡಲಾಗುತ್ತದೆ ಆದರೆ ಅತ್ಯಂತ ಮಹತ್ವದ ವಿನಾಯಕ ಚತುರ್ಥಿ ಭಾದ್ರಪದ ಮಾಸದಲ್ಲಿ ಬರುತ್ತದೆ. ಭಾದ್ರಪದ ಮಾಸದ ವಿನಾಯಕ ಚತುರ್ಥಿಯನ್ನು ಗಣೇಶ ಚತುರ್ಥಿ ಎಂದು ಕರೆಯಲಾಗುತ್ತದೆ .

ಜೂನ್ 9, ಗುರುವಾರ_ಶ್ರೀ ಗಂಗಾ ದಸರಾ

ಜೂನ್ 9, ಗುರುವಾರ_ಶ್ರೀ ಗಂಗಾ ದಸರಾ

ಗಂಗಾ ದಸರಾ ಹಬ್ಬವನ್ನು ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಜೂನ್ 9 ರ ಗುರುವಾರದಂದು ಬಂದಿದೆ. ಈ ದಿನಾಂಕವನ್ನು ಅತ್ಯಂತ ಅದೃಷ್ಟವೆಂದು ಪರಿಗಣಿಸಲಾಗಿದೆ ಏಕೆಂದರೆ ಈ ದಿನಾಂಕದಂದು ಗಂಗಾ ಮಾತೆ ಮಾನವರನ್ನು ರಕ್ಷಿಸಲು ಸ್ವರ್ಗದಿಂದ ಭೂಮಿಗೆ ಬಂದಳು ಎಂಬ ನಂಬಿಕೆಯಿದೆ. ಅಂದಿನಿಂದ ಈ ದಿನಾಂಕದಂದು ಗಂಗೆಯನ್ನು ಪೂಜಿಸುವ ಸಂಪ್ರದಾಯ ಪ್ರಾರಂಭವಾಯಿತು. ಈ ಶುಭದಿನದಂದು ಗಂಗಾಸ್ನಾನ ಮಾಡುವುದರಿಂದ ಪಾಪ ನಾಶವಾಗುತ್ತದೆ ಮತ್ತು ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ.

ಜೂನ್ 11, ಶನಿವಾರ ನಿರ್ಜಲ ಏಕಾದಶಿ

ಜೂನ್ 11, ಶನಿವಾರ ನಿರ್ಜಲ ಏಕಾದಶಿ

ಜ್ಯೇಷ್ಠ ಮಾಸದ ಏಕಾದಶಿಯಂದು ನಿರ್ಜಲ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಉಪವಾಸದ ಸಮಯದಲ್ಲಿ ನೀರು ಕುಡಿಯುವುದನ್ನು ನಿಷೇಧಿಸಲಾಗಿದ್ದು, ಆದ್ದರಿಂದ ಇದನ್ನು ನಿರ್ಜಲ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ವಿಷ್ಣುವಿನ ಅನುಗ್ರಹ ಪ್ರಾಪ್ತಿಯಾಗಿ, ಮೋಕ್ಷ ಪ್ರಾಪ್ತಿಯಾಗುತ್ತದೆ. ಒಂದು ವರ್ಷದಲ್ಲಿ ಬರುವ 24 ಏಕಾದಶಿಗಳ ಉಪವಾಸವನ್ನು ಮಾಡಲು ನಿಮಗೆ ಸಾಧ್ಯವಾಗದಿದ್ದರೆ ನಿರ್ಜಲ ಏಕಾದಶಿ ಉಪವಾಸವನ್ನು ಆಚರಿಸುವುದರಿಂದ ಎಲ್ಲಾ ಏಕಾದಶಿಗಳ ಪುಣ್ಯ ಫಲಿತಾಂಶಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.

ಜೂನ್ 12, ಭಾನುವಾರ, ಪ್ರದೋಷ ವ್ರತ:

ಜೂನ್ 12, ಭಾನುವಾರ, ಪ್ರದೋಷ ವ್ರತ:

ದಕ್ಷಿಣ ಭಾರತದಲ್ಲಿ ಪ್ರದೋಷಂ ಎಂದೂ ಕರೆಯಲ್ಪಡುವ ಪ್ರದೋಷ ವ್ರತವನ್ನು ಶಿವನ ಆಶೀರ್ವಾದ ಪಡೆಯಲು ಆಚರಿಸಲಾಗುತ್ತದೆ .ಪ್ರದೋಷ ವ್ರತವನ್ನು ತ್ರಯೋದಶಿ ತಿಥಿಗಳಲ್ಲಿ ಆಚರಿಸಲಾಗುತ್ತದೆ,

ಜೂನ್ 14, ಗುರುವಾರ ಸಂತ ಕಬೀರ ಜಯಂತಿ

ಜೂನ್ 14, ಗುರುವಾರ ಸಂತ ಕಬೀರ ಜಯಂತಿ

ಸಂತ ಕಬೀರ ಜಯಂತಿಯ ಹಬ್ಬವನ್ನು ಪ್ರತಿ ವರ್ಷ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಬಾರಿ ಅವರ ಜನ್ಮದಿನವು ಜೂನ್ 14 ರಂದು ಬಂದಿದೆ.

ಜೂನ್ 14, ಗುರುವಾರ, ವಟ ಸಾವಿತ್ರಿ ವ್ರತ:

ಜೂನ್ 14, ಗುರುವಾರ, ವಟ ಸಾವಿತ್ರಿ ವ್ರತ:

ವತ ಸಾವಿತ್ರಿ ಉಪವಾಸವನ್ನು ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ, ಆದರೂ ಕೆಲವು ಸ್ಥಳಗಳಲ್ಲಿ ಈ ಉಪವಾಸವನ್ನು ಅಮಾವಾಸ್ಯೆಯ ದಿನವೂ ಆಚರಿಸಲಾಗುತ್ತದೆ. ಈ ದಿನ ವಿವಾಹಿತ ಮಹಿಳೆಯರು ಆಲದ ಮರವನ್ನು ಪೂಜಿಸಿ, ತಮ್ಮ ಗಂಡನ ಏಳಿಗೆಗಾಗಿ ಪ್ರಾರ್ಥಿಸುತ್ತ್ತಾರೆ.

ಜೂನ್ 15, ಬುಧವಾರ, ಮಿಥುನ ಸಂಕ್ರಾಂತಿ:

ಜೂನ್ 15, ಬುಧವಾರ, ಮಿಥುನ ಸಂಕ್ರಾಂತಿ:

ಮಿಥುನ ಸಂಕ್ರಾಂತಿಯು ಹಿಂದೂ ಕ್ಯಾಲೆಂಡರ್‌ನಲ್ಲಿ ಮೂರನೇ ಸೌರ ಮಾಸದ ಆರಂಭವನ್ನು ಸೂಚಿಸುತ್ತದೆ. ವರ್ಷದ ಎಲ್ಲಾ ಹನ್ನೆರಡು ಸಂಕ್ರಾಂತಿ ದಾನ-ಪುಣ್ಯ ಚಟುವಟಿಕೆಗಳಿಗೆ ಅತ್ಯಂತ ಮಂಗಳಕರವಾಗಿದೆ. ಮಿಥುನ ಸಂಕ್ರಾಂತಿಯ ಸಮಯದಲ್ಲಿ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದು ಅಥವಾ ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

24 ಜೂನ್, ಶುಕ್ರವಾರ ಯೋಗಿನಿ ಏಕಾದಶಿ:

24 ಜೂನ್, ಶುಕ್ರವಾರ ಯೋಗಿನಿ ಏಕಾದಶಿ:

ಯೋಗಿನಿ ಏಕಾದಶಿ ಅಥವಾ ಶಯನಿ ಏಕಾದಶಿ ಉಪವಾಸವನ್ನು ಆಷಾಢ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನಾಂಕದಂದು ಆಚರಿಸಲಾಗುತ್ತದೆ. ಈ ಉಪವಾಸವು ಪಾಪಗಳನ್ನು ತೊಡೆದುಹಾಕುವ ಮೂಲಕ ಸಂತೋಷವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಜೊತೆಗೆ ಯೋಗಿನಿ ಏಕಾದಶಿ ಉಪವಾಸವು ಮೂರು ಲೋಕಗಳಲ್ಲಿಯೂ ಮುಕ್ತಿಯನ್ನು ನೀಡುತ್ತದೆ. ಯೋಗಿನಿ ಏಕಾದಶಿ ಉಪವಾಸ ಮಾಡುವವರು, 88 ಸಾವಿರ ಬ್ರಾಹ್ಮಣರಿಗೆ ಅನ್ನದಾನ ಮಾಡಿದ ಫಲವನ್ನು ಪಡೆಯುತ್ತಾರೆ ಎಂದು ಶ್ರೀಕೃಷ್ಣನು ಈ ಉಪವಾಸದ ಬಗ್ಗೆ ಹೇಳಿದ್ದಾನೆ.

27 ಜೂನ್, ಸೋಮವಾರ, ಮಾಸಿಕ ಶಿವರಾತ್ರಿ:

27 ಜೂನ್, ಸೋಮವಾರ, ಮಾಸಿಕ ಶಿವರಾತ್ರಿ:

ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಮಾಸಿಕ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಉಪವಾಸವನ್ನು ಮಹಾಶಿವರಾತ್ರಿಯಂತೆ ಫಲಪ್ರದವೆಂದು ಪರಿಗಣಿಸಲಾಗಿದೆ. ಪ್ರತಿ ತಿಂಗಳು ಬರುವುದರಿಂದ ಇದನ್ನು ಮಾಸಿಕ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಶಿವನಿಗೆ ಸಮರ್ಪಿತವಾದ ಈ ದಿನ, ಉಪವಾಸವನ್ನು ಆಚರಿಸುವುದರಿಂದ, ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ವ್ಯಕ್ತಿಯು ಆನಂದ ಮತ್ತು ಮೋಕ್ಷವನ್ನು ಪಡೆಯುತ್ತಾನೆ ಎಂಬ ನಂಬಿಕೆಯಿದೆ.

English summary

Festivals and Vrats in the Month of June 2022

Here we talking about Festivals and vrats month of june 2022, read on
X
Desktop Bottom Promotion