For Quick Alerts
ALLOW NOTIFICATIONS  
For Daily Alerts

May 2022 Vrat And Festivals : ಮೇ ತಿಂಗಳಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ ಇಲ್ಲಿದೆ

|

ಪ್ರತಿಯೊಂದು ತಿಂಗಳು ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು, ಆಯಾ ತಿಂಗಳಲ್ಲಿ ವಿಭಿನ್ನ ಹಬ್ಬ ಹಾಗೂ ವ್ರತಗಳನ್ನು ಆಚರಿಸಲಾಗುವುದು. ಅದೇ ರೀತಿ ವರ್ಷದ 5ನೇ ತಿಂಗಳಾದ ಮೇ ತಿಂಗಳಲ್ಲಿ ಅಕ್ಷಯ ತೃತೀಯ ಸೇರಿದಂತೆ, ಮುಸ್ಲಿಮರ ಪ್ರಮುಖ ಹಬ್ಬವಾದ ಈದ್ ಉಲ್ ಫಿತರ್ ನ್ನು ಆಚರಿಸಲಾಗುವುದು. ಇವುಗಳ ಜೊತೆಗೆ 2022ರ ಮೇ ತಿಂಗಳಲ್ಲಿ ಬರುವ ಇತರ ಪ್ರಮುಖ ಹಬ್ಬಗಳು ಮತ್ತು ಅವುಗಳ ಪ್ರಾಮುಖ್ಯತೆಯೇನು ಎಂಬುದನ್ನು ಇಲ್ಲಿ ನೋಡೋಣ.

ಮೇ ತಿಂಗಳಲ್ಲಿ ಇರುವ ಹಬ್ಬಗಳು ಹಾಗೂ ವ್ರತಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮೇ 3 ಅಕ್ಷಯ ತೃತೀಯ:

ಮೇ 3 ಅಕ್ಷಯ ತೃತೀಯ:

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯನ್ನು ಅಕ್ಷಯ ತೃತೀಯ ಎಂಬ ವಿಶೇಷ ಹಬ್ಬವೆಂದು ಪರಿಗಣಿಸಲಾಗಿದೆ. ಈ ಬಾರಿಯ ಅಕ್ಷಯ ತೃತೀಯ ಮೇ 3 ರಂದು ಬಂದಿದ್ದು, ಈ ದಿನ ಚಿನ್ನವನ್ನು ಖರೀದಿಸುವುದರಿಂದ ವಿಶೇಷ ಲಾಭವೂ ಇದೆ. ಅಂದರೆ, ಈ ದಿನ ಹೊಸ ವಸ್ತುಗಳನ್ನು ಖರೀದಿಸುವುದರಿಂದ, ಆ ಸಂಪತ್ತು ಹೆಚ್ಚಳವಾಗುವುದು ಎಂಬ ನಂಬಿಕೆಯಿದೆ. ಆದ್ದರಿಂದ ಈ ದಿನ ಹೆಚ್ಚಾಗಿ ಚಿನ್ನ ಖರೀದಿಸುವುದು ವಾಡಿಕೆ.

ಮೇ 3 ಈದ್ ಉಲ್ ಫಿತರ್:

ಮೇ 3 ಈದ್ ಉಲ್ ಫಿತರ್:

ಈದ್-ಉಲ್-ಫಿತರ್ ಮುಸ್ಲಿಮರ ಪವಿತ್ರ ಹಬ್ಬವಾಗಿದ್ದು ಇದನ್ನು ರಂಜಾನ್ ಉಪವಾದ ಕೊನೆಯ ದಿನದಂದು ಆಚರಿಸಲಾಗುತ್ತದೆ. ಅಂದರೆ, ರಂಜಾನ್ ತಿಂಗಳು ಈದ್-ಉಲ್-ಫಿತರ್‌ನೊಂದಿಗೆ ಕೊನೆಗೊಳ್ಳುತ್ತದೆ. ಮುಸ್ಲಿಮರು ರಂಜಾನ್ ತಿಂಗಳು ಪೂರ್ತಿ ಉಪವಾಸ ಮಾಡುತ್ತಾರೆ. ಚಂದ್ರನನ್ನು ನೋಡಿದ ನಂತರ ಈದ್ ಆಚರಿಸಲಾಗುತ್ತದೆ. ಇದನ್ನು ಮೇ 3ರಂದು ಆಚರಿಸಲಾಗುತ್ತದೆ.

 ಮೇ 8 ಶ್ರೀ ಗಂಗಾ ಜಯಂತಿ:

ಮೇ 8 ಶ್ರೀ ಗಂಗಾ ಜಯಂತಿ:

ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿಯನ್ನು ಗಂಗಾ ಸಪ್ತಮಿ ಎಂದು ಆಚರಿಸಲಾಗುತ್ತದೆ. ಈ ದಿನ ಗಂಗಾ ದೇವಿಯು ಕಾಣಿಸಿಕೊಂಡಳು ಎಂಬ ಐತಿಹ್ಯವಿದೆ. ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡುವುದು ಮತ್ತು ದಾನ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ.

ಮೇ 9 ಬಗಳಾಮುಖಿ ಜಯಂತಿ:

ಮೇ 9 ಬಗಳಾಮುಖಿ ಜಯಂತಿ:

ಬಗಳಾಮುಖಿ ವೈಶಾಖ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಕಾಣಿಸಿಕೊಂಡಳು. ಈ ದಿನವನ್ನು ಶ್ರೀ ಬಗಳಾಮುಖಿ ಜಯಂತಿ ಎಂದು ಆಚರಿಸಲಾಗುತ್ತದೆ. ಈ ಬಾರಿಯ ಈಕೆಯ ಜನ್ಮದಿನವನ್ನು ಮೇ 9 ರಂದು ಆಚರಿಸಲಾಗುತ್ತದೆ. ದುರ್ಗೆಯ 10 ಮಹಾವಿದ್ಯೆಗಳಲ್ಲಿ ಬಗಳಾಮುಖ ಕೂಡ ಒಬ್ಬಳು ಎಂದು ಹೇಳಲಾಗುತ್ತದೆ ಮತ್ತು ಇದನ್ನು ತಂತ್ರ ಮಂತ್ರದ ದೇವತೆ ಎಂದು ಪರಿಗಣಿಸಲಾಗಿದೆ. ದೇವಿಯ ಈ ರೂಪವನ್ನು ಪೂಜಿಸುವುದರಿಂದ ಜೀವನದ ಅಡೆತಡೆಗಳು ಮತ್ತು ದುಷ್ಟ ಕಣ್ಣಿನ ಪ್ರಭಾವವು ದೂರವಾಗುತ್ತದೆ.

ಮೇ 12 ಮೋಹಿನಿ ಏಕಾದಶಿ:

ಮೇ 12 ಮೋಹಿನಿ ಏಕಾದಶಿ:

ವೈಶಾಖ ಮಾಸದ ಶುಕ್ಲ ಪಕ್ಷದ 11ನೇ ದಿನ ಅಂದರೆ ಏಕಾದಶಿಯಂದು ಮೋಹಿನಿ ಏಕಾದಶಿಯ ಉಪವಾಸವನ್ನು ಆಚರಿಸುವ ಕಾನೂನು ಇದೆ. ಈ ವ್ರತವನ್ನು ಆಚರಿಸುವುದರಿಂದ ನಿಮ್ಮ ಎಲ್ಲಾ ಪಾಪಗಳು ನಾಶವಾಗಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಒಮ್ಮೆ ಶ್ರೀರಾಮನು ಗುರು ವಶಿಷ್ಠರ ಆಜ್ಞೆಯ ಮೇರೆಗೆ ಈ ಉಪವಾಸವನ್ನು ಆಚರಿಸಿದನು ಜೊತೆಗೆ ರಾಜ ಯುಧಿಷ್ಠಿರನು ದ್ವಾಪರ ಯುಗದಲ್ಲಿ ಕೃಷ್ಣನ ಆಜ್ಞೆಯ ಮೇರೆಗೆ ಮೋಹಿನಿ ಏಕಾದಶಿಯ ಉಪವಾಸವನ್ನು ಆಚರಿಸಿದನು ಎಂಬ ನಂಬಿಕೆಯಿದೆ.

ಮೇ 14 ನರಸಿಂಹ ಜಯಂತಿ:

ಮೇ 14 ನರಸಿಂಹ ಜಯಂತಿ:

ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಜಯಂತಿಗೆ ಹೆಚ್ಚಿನ ಮಹತ್ವವಿದೆ. ಈ ವರ್ಷ ಮೇ 14 ರಂದು ನರಸಿಂಹ ಜಯಂತಿ ಆಚರಿಸಲಾಗುತ್ತಿದೆ. ಈ ದಿನದಂದು ಹಿರಣ್ಯಕಶಿಪುವಿನಿಂದ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ವಿಷ್ಣುವು ಅರ್ಧ ಪುರುಷ ಮತ್ತು ಅರ್ಧ ಸಿಂಹದ ರೂಪದಲ್ಲಿ ನರಸಿಂಹನಾಗಿ ಅವತರಿಸಿದನು. ನರಸಿಂಹ ಜಯಂತಿಯ ದಿನದಂದು ಉಪವಾಸ ಮಾಡುವುದರಿಂದ ಭಕ್ತನ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಮೇ 16 ಬುದ್ಧ ಪೂರ್ಣಿಮಾ:

ಮೇ 16 ಬುದ್ಧ ಪೂರ್ಣಿಮಾ:

ಸನಾತನ ಧರ್ಮದಲ್ಲಿ ಈ ಹುಣ್ಣಿಮೆಗೆ ವಿಶೇಷ ಮಹತ್ವವಿದೆ ಎಂದು ಪರಿಗಣಿಸಲಾಗಿದೆ. ಭಗವಾನ್ ವಿಷ್ಣುವಿನ 9 ನೇ ಅವತಾರವು ಈ ದಿನ ನಡೆಯಿತು ಎಂದು ನಂಬಲಾಗಿದೆ. ಬುದ್ಧ ಪೂರ್ಣಿಮೆಗೆ ಪೌರಾಣಿಕ ಮಹತ್ವ ಕೂಡ ಇದೆ.

ಮೇ 26 ಅಪರ ಏಕಾದಶಿ:

ಮೇ 26 ಅಪರ ಏಕಾದಶಿ:

ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಅಪರ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವರ್ಷ ಈ ಶುಭ ದಿನಾಂಕವು ಮೇ 26 ರಂದು ಬಂದಿದ್ದು, ಈ ದಿನದಂದು ವಿಷ್ಣುವಿನ ಆರಾಧನೆಗೆ ಬಹಳ ಮಹತ್ವವಿದೆ. ಈ ದಿನದಂದು, ಪೂಜೆ ಮತ್ತು ಧಾರ್ಮಿಕ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಿದರೆ, ವರ್ಷವಿಡೀ ವಿಷ್ಣುವಿನ ಆಶೀರ್ವಾದ ಲಭ್ಯವಾಗುವುದು.

ಮೇ 29 ವಟ ಸಾವಿತ್ರಿ ವ್ರತ:

ಮೇ 29 ವಟ ಸಾವಿತ್ರಿ ವ್ರತ:

ಪ್ರತಿ ವರ್ಷ ವಟ ಸಾವಿತ್ರಿ ವ್ರತವನ್ನು ಜ್ಯೇಷ್ಠ ಕೃಷ್ಣ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ ಅದು ಮೇ 29 ರಂದು ಬಂದಿದೆ. ಹಿಂದೂ ಧರ್ಮದಲ್ಲಿ, ವಿವಾಹಿತ ಮಹಿಳೆಯರು ತಮ್ಮ ದಾಂಪತ್ಯದ ಒಳಿತಿಗಾಗಿ ಹಾಗೂ ಪತಿಯ ದೀರ್ಘಾಯಸ್ಸಿಗಾಗಿ ಈ ಉಪವಾಸವನ್ನು ಆಚರಿಸುತ್ತಾರೆ. ಈ ದಿನ ವಿವಾಹಿತ ಮಹಿಳೆಯರು ಆಲದ ಮರವನ್ನು ಪೂಜಿಸುತ್ತಾರೆ ಮತ್ತು ಪ್ರದಕ್ಷಿಣೆ ಹಾಕುತ್ತಾರೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನ ಸತಿ ಸಾವಿತ್ರಿಯು ಯಮರಾಜನಿಂದ ತನ್ನ ಪತಿಯ ಜೀವವನ್ನು ಮರಳಿ ಪಡೆದಳು ಎಂದು ಹೇಳಲಾಗುತ್ತದೆ.

ಮೇ 30 ಶನಿ ಜಯಂತಿ ಮತ್ತು ಸೋಮಾವತಿ ಅಮವಾಸ್ಯೆ:

ಮೇ 30 ಶನಿ ಜಯಂತಿ ಮತ್ತು ಸೋಮಾವತಿ ಅಮವಾಸ್ಯೆ:

ಈ ಬಾರಿ ಮೇ ತಿಂಗಳ ಕೊನೆಯ ದಿನ ಅಮಾವಾಸ್ಯೆಯಾಗಿದ್ದು, ಸೋಮವಾರ ಬೀಳುವುದರಿಂದ ಸೋಮಾವತಿ ಅಮವಾಸ್ಯೆ ಎಂದು ಕರೆಯಲಾಗುವುದು. ಈ ದಿನ ಶನಿ ಜಯಂತಿಯನ್ನೂ ಆಚರಿಸಲಾಗುವುದು. ಶನಿಯು ಈ ದಿನ ಜನಿಸಿದರೆಂಬ ನಂಬಿಕೆಯಿದೆ.

English summary

Festivals and Vrats in the Month of May 2022

Here we talking about Festivals and Vrats in the month of May 2022, read on
X
Desktop Bottom Promotion