For Quick Alerts
ALLOW NOTIFICATIONS  
For Daily Alerts

ಕಾರ್ತಿಕ ಮಾಸ 2021: ಶಿವನ ಮಾಸದಲ್ಲಿರುವ ಹಬ್ಬ ಹಾಗೂ ವ್ರತಗಳು

|

ಹಿಂದೂಗಳ ಪವಿತ್ರ ಮಾಸಗಳಲ್ಲಿ ಒಂದಾದ ಕಾರ್ತಿಕ ಮಾಸಕ್ಕೆ ಬಹಳ ವಿಶೇಷ ಮಾನ್ಯತೆ ಇದೆ. ಪುರುಷೋತ್ತಮ ಮಾಸ ಎಂದೂ ಕಾರ್ತಿಕ ಮಾಸ ವಿಷ್ಣು ಹಾಗೂ ಶಿವನಿಗೆ ಅರ್ಪಿತವಾಗಿದೆ. ಹಲವು ತಿಂಗಳಿನಿಂದ ನಿದ್ದೆಯಲ್ಲಿದ್ದ ವಿಷ್ಣು ಕಾರ್ತಿಕ ಮಾಸದಲ್ಲಿ ಎಚ್ಚರಗೊಳ್ಳುತ್ತಾನೆ ಎಂಬ ನಂಬಿಕೆ ಇದೆ. ಈ ಮಾಸದಲ್ಲಿ ಶಿವ ಹಾಗೂ ವಿಷ್ಣುವಿನ ಆರಾಧನೆ, ತುಳಸಿಪೂಜೆ, ದೀಪ ಹಚ್ಚುವುದು, ಬಡವರಿಗೆ ದಾನ ಮಾಡುವುದರಿಂದ ಸಂಕಷ್ಟ ಪರಿಹಾರವಾಗುತ್ತದೆ ಹಾಗೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ.

2021ನೇ ಸಾಲಿನಲ್ಲಿ ಕಾರ್ತಿಕ ಮಾಸ ನವೆಂಬರ್‌ 5ರಿಂದ ಆರಂಭವಾಗಿ ಡಿಸೆಂಬರ್‌ 4ರವರೆಗೆ ಇರಲಿದೆ. ಈ ಮಾಸದಲ್ಲಿ ದೀಪಾವಳಿ, ತುಳಸಿ ವಿವಾಹ ಸೇರಿದಂತೆ ಪ್ರಮುಖವಾದ ಹಬ್ಬ ಹಾಗೂ ವ್ರತಗಳಿವೆ. ಕಾರ್ತಿಕ ಮಾಸದಲ್ಲಿ ಯಾವ ದಿನ ಯಾವ ಹಬ್ಬ ಹಾಗೂ ವ್ರತಗಳಿವೆ ಎಂಬುದರ ಪಟ್ಟಿ ಇಲ್ಲಿದೆ.

ನವೆಂಬರ್ 5: ಗೋವರ್ಧನ ಪೂಜೆ, ಬಲಿ ಪ್ರತಿಪಾದ, ಅನ್ನಕೂಟ

ನವೆಂಬರ್ 5: ಗೋವರ್ಧನ ಪೂಜೆ, ಬಲಿ ಪ್ರತಿಪಾದ, ಅನ್ನಕೂಟ

ನವೆಂಬರ್ 6: ಚಂದ್ರ ದರ್ಶನ, ಚಿತ್ರಗುಪ್ತ ಪೂಜೆ, ಯಮ ದ್ವಿತೀಯ, ಭಾಯಿ ದೂಜ್

ನವೆಂಬರ್ 8: ವಿನಾಯಕ ಚತುರ್ಥಿ

ನವೆಂಬರ್ 9: ಪಾಂಡವ ಪಂಚಮಿ

ನವೆಂಬರ್ 10: ಛತ್ ಪೂಜೆ, ಸೂರ್ಯ ಷಷ್ಠಿ ವ್ರತ

ನವೆಂಬರ್ 11: ಗೋಪಾಷ್ಟಮಿ

ನವೆಂಬರ್ 12: ಆಮ್ಲಾ ನವಮಿ

ನವೆಂಬರ್‌ 13: ಕಂಸ ವಧೆ

ನವೆಂಬರ್ 15: ದೇವತಾನಿ ಏಕಾದಶಿ, ತುಳಸಿ ವಿವಾಹ/ತುಳಸಿ ಪೂಜೆ

ನವೆಂಬರ್ 16: ವೃಶ್ಚಿಕ ಸಂಕಷ್ಟಿ ಫಲಂ, ವೆಂಬರ್ ಪ್ರದೋಷ ವ್ರತ

ನವೆಂಬರ್ 17: ಬೈಕುಂಠ ಚತುರ್ದಶಿ, ತ್ರಿಪುರಾರಿ ಪೂರ್ಣಿಮಾ

ನವೆಂಬರ್ 18:ತ್ರಿಪುರಾರಿ ಪೌರ್ಣಿಮ

ನವೆಂಬರ್ 19: ಕಾರ್ತಿಕ ಪೂರ್ಣಿಮಾ

ನವೆಂಬರ್ 27: ಕಾಲಭೈರವ ಜಯಂತಿ:

ನವೆಂಬರ್ 30: ಅಳಂದಿಯಾತ್ರಾ

ಕಾರ್ತಿಕ ಸೋಮವಾರದ ವಿಶೇಷ

ಕಾರ್ತಿಕ ಸೋಮವಾರದ ವಿಶೇಷ

ಶಿವನ ಮಾಸ ಎಂದೇ ಹೆಸರಾಗಿರುವ ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ಶಿವನ ಪೂಜೆ ಮಾಡುವುದು ಪುಣ್ಯಪ್ರದ ಎನ್ನಲಾಗುತ್ತದೆ. ಅದರಲ್ಲೂ ಬ್ರಾಹ್ಮಿ ಮುಹೂರ್ತದಲ್ಲಿ ಶಿವನನ್ನು ಪೂಜಿಸಿದರೆ ಒಳಿತಾಗುತ್ತದೆ. ಹಾಗೆಯೇ ಕಾರ್ತಿಕ ಮಾಸದಲ್ಲಿ ಪುಣ್ಯನದಿಗಳ ಸ್ನಾನ ಮಾಡುವುದು ಶಿವನ ಕೃಪೆಗೆ ಪಾತ್ರರಾಗಲು ಉತ್ತಮ ಮಾರ್ಗ. ಈ ರೀತಿ ಬ್ರಾಹ್ಮಿ ಮುಹೂರ್ತದಲ್ಲಿ ನದಿಯಲ್ಲಿ ಸ್ನಾನ ಮಾಡುವುದರಿಂದ ಭೌತಿಕ ಕಲ್ಮಶಗಳನ್ನು ಹೋಗಲಾಡಿಸುವುದರ ಜೊತೆಗೆ ಮಾನಸಿಕ ಶಾಂತಿ, ಕೋಪ-ತಾಪ ಕಡಿಮೆ ಮಾಡುತ್ತದೆ ಎಂಬ ನಂಬಿಕೆ ಇದೆ.

ದೀಪ ಹಚ್ಚುವುದರ ಮಹತ್ವ

ದೀಪ ಹಚ್ಚುವುದರ ಮಹತ್ವ

ಭಗವಂತನ ಪ್ರಿತ್ಯರ್ಥವಾಗಿರುವ ಕಾರ್ತಿ ಮಾಸದಲ್ಲಿ ಸೂರ್ಯೊದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ದೀಪ ಬೆಳಗಿದರೆ ಶ್ರೇಯಸ್ಕರ. ಅದರಲ್ಲೂ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ದೀಪ ಬೆಳಗಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ, ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಕಾರ್ತಿಕ ಮಾಸ ಹೆಸರಿನ ಹಿನ್ನೆಲೆ

ಕಾರ್ತಿಕ ಮಾಸ ಹೆಸರಿನ ಹಿನ್ನೆಲೆ

ಕಾರ್ತಿಕ ಎನ್ನುವುದು ಒಂದು ನಕ್ಷತ್ರದ ಹೆಸರು, ಈ ನಕ್ಷತ್ರ ಚಂದ್ರನಿಗೆ ಬಹಳ ಸಮೀಪ ಬರುತ್ತದೆ. ಅಲ್ಲದೆ ಈ ಮಾಸದಲ್ಲಿ ಹುಣ್ಣಿಮೆಯ ಚಂದ್ರ ಕಾರ್ತಿಕ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಪ್ರತಿ ಮಾಸದಲ್ಲೂ ಒಂದು ದೇವರನ್ನು ಆರಾಧಿಸಲಾಗುತ್ತದೆ. ಹಾಗೆಯೇ ಈ ಮಾಸದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ.

English summary

Festivals and Vrats in the month of Kartik Month 2021

Here we are discussing about Festivals and Vrats in the month of Kartik Month 2021. Read more.
X
Desktop Bottom Promotion