For Quick Alerts
ALLOW NOTIFICATIONS  
For Daily Alerts

July 2022 Vrat & Festival List: ಈ ಜುಲೈ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳಿವು

|

ಎಷ್ಟು ಬೇಗ ಅರ್ಧ ವರ್ಷ ಮುಗಿದು ಹೋಯ್ತಲ್ಲಾ? ವರ್ಷದ 7ನೇ ತಿಂಗಳು ಜುಲೈ, ಈ ತಿಂಗಳು ಹಲವು ಕಾರಣಗಳಿಂದ ವಿಶೇಷವಾಗಿದೆ. ಈ ತಿಂಗಳಿನಲ್ಲಿ ಅನೇಕ ವಿಶೇಷ ಹಬ್ಬಗಳಿಗೆ. ಜಗ್ನನಾಥ ಯಾತ್ರೆ, ದೇವಶಯನಿ ಏಕಾದಶಿ , ಆಷಾಢ ಅಮವಾಸ್ಯೆ, ಭೀಮನ ಅಮವಾಸ್ಯೆ ಹೀಗೆ ವಿಶೇಷ ಹಬ್ಬಗಳು, ವ್ರತಗಳು ಈ ತಿಂಗಳಿನಲ್ಲಿದೆ.

ಈ ತಿಂಗಳಿನಲ್ಲಿ ಬರುವ ವ್ರತಗಳು ಹಾಗೂ ಹಬ್ಬಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ:

ಜುಲೈ 1 ಜಗ್ನನಾಥ ಯಾತ್ರೆ

ಜುಲೈ 1 ಜಗ್ನನಾಥ ಯಾತ್ರೆ

ಜಗತ್ಪ್ರಸಿದ್ದವಾದ ಜಗ್ನನಾಥ ಯಾತ್ರೆ ಜುಲೈ 1ರಂದು ಪ್ರಾರಂಭವಾಗುವುದು. 14 ದಿನ ಏಕಾಂತದಲ್ಲಿದ್ದ ಜಗ್ನನಾಥ ಜುಲೈ 1ಕ್ಕೆ ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನಾಂಕದಂದು ಜಗ್ನನಾಥ, ತನ್ನ ಸಹೋದರ-ಸಹೋದರಿ ಜೊತೆ ರಥಯಾತ್ರೆಯಲ್ಲಿ ಹೊರಡುತ್ತಾರೆ. ಇದನ್ನು ನೋಡಲು ಲಕ್ಷಾಂತರ ಭಕ್ತರು ನೆರೆದಿರುತ್ತಾರೆ. ಹೀಗೆ ಹೊರಡುವ ರಥ ಗುಂಡಿಚಾ ದೇಚಾಲಯ ತಲುಪುವುದು, ಅಲ್ಲಿ 7 ದಿನ ನೆಲೆಸುವ ದೇವರುಗಳು ನಂತರ ಜಗ್ನನಾಥ ದೇವಾಲಯಕ್ಕೆ ಮರಳುತ್ತಾರೆ. ಪ್ರತಿವರ್ಷ ರಥ ಯಾತ್ರೆಗೆ ಹೊಸ ರಥಗಳನ್ನು ತಯಾರಿಸಲಾಗುವುದು.

ಜುಲೈ 3 ವಿನಾಯಕ ಚತುರ್ಥಿ, ಜುಲೈ 16 ಗಜಾನನ ಸಂಕಷ್ಠಿ ಚತುರ್ಥಿ

ಜುಲೈ 3 ವಿನಾಯಕ ಚತುರ್ಥಿ, ಜುಲೈ 16 ಗಜಾನನ ಸಂಕಷ್ಠಿ ಚತುರ್ಥಿ

ಜುಲೈ 3 ವಿನಾಯಕ ಚತುರ್ಥಿ

ವಿನಾಯಕ ಚತುರ್ಥಿಯನ್ನು ಜುಲೈ 3 ಶುಕ್ರವಾರದಂದು ಆಚರಿಸಲಾಗುವುದು.

ವಿನಾಯಕ ಚತುರ್ಥಿ ತಿಥಿ ಪ್ರಾರಂಭ ಜೂನ್ 2 ರಾತ್ರಿ 12:17

ವಿನಾಯಕ ಚತುರ್ಥಿ ತಿಥಿ ಮುಕ್ತಾಯ ಜೂನ್‌ 3 ರಾತ್ರಿ 2:41ಕ್ಕೆ

ವಿನಾಯಕ ಚತುರ್ಥಿ ಪೂಜಾ ಸಮಯ: ಜೂನ್ 3 ಬೆಳಗ್ಗೆ 10:56ರಿಂದ ಮಧ್ಯಾಹ್ನ 01:43ರವರೆಗೆ

ಜುಲೈ 16 ಗಜಾನನ ಸಂಕಷ್ಠಿ ಚತುರ್ಥಿ

ಜಲೈ 16ಕ್ಕೆ ಗಜಾನನ ಸಂಕಷ್ಠಿ ಆಚರಿಸಲಾಗುವುದು. ಈ ದಿನ ಲಂಭೋಧರನ ಆರಾಧನೆ ಮಾಡಿದರೆ ಮಕ್ಕಳಿಗೆ ಶ್ರೇಯಸ್ಸು ಉಂಟಾಗುವುದು. ಅಲ್ಲದೆ ಭಕ್ತರ ಎಲ್ಲಾ ಕಷ್ಟಗಳು ನಿವಾರಣೆಯಾಗುವುದು.

ಜುಲೈ 4 ಸ್ಕಂದ ಷಷ್ಠಿ

ಜುಲೈ 4 ಸ್ಕಂದ ಷಷ್ಠಿ

ಸ್ಕಂದ ಷಷ್ಠಿಯನ್ನು ಜುಲೈ 4 ಶುಕ್ರವಾರದಂದು ಆಚರಿಸಲಾಗುವುದು. ಸ್ಕಂದ ಷಷ್ಠಿಯನ್ನು ಸೂರ ಸಂಹಾರ ಎಂದು ಕರೆಯಲಾಗುವುದು. ಯಾರು ದಿನ ಉಪವಾಸ ವ್ರತ ಮಾಡುತ್ತಾರೋ ಅವರಿಗೆ ಒಳಿತಾಗುತ್ತದೆ, ಸಂತಾನ ಭಾಗ್ಯ ಅಪೇಕ್ಷಿತರಿಗೆ ಅದು ನೆರವೇರುವುದು. ಹೆಚ್ಚಿನ ಫಲಕ್ಕೆ 6 ದಿನಗಳ ಕಾಲ ಕಟ್ಟು ನಿಟ್ಟಿನ ವ್ರತಾಚರಣೆ ಮಾಡುವುದು ಒಳ್ಳೆಯದು.

ಜುಲೈ 7 ಮಾಸಿಕ ದುರ್ಗಾಷ್ಟಮಿ

ಜುಲೈ 7 ಮಾಸಿಕ ದುರ್ಗಾಷ್ಟಮಿ

ಆಷಾಢ ಶುಕ್ಲ ಅಷ್ಟಮಿ

ಶುಕ್ಲ ಅಷ್ಟಮಿ ತಿಥಿ ಪ್ರಾರಂಭ ಜುಲೈ 6 ಸಂಜೆ 07:48ಕ್ಕೆ

ಶುಕ್ಲ ಅಷ್ಟಷ್ಟಮಿ ತಿಥಿ ಮುಕ್ತಾಯ ಜುಲೈ 7 ಸಂಜೆ 07:28ಕ್ಕೆ

ಜುಲೈ 10 ದೇವಶಯನಿ ಏಕಾದಶಿ

ಜುಲೈ 10 ದೇವಶಯನಿ ಏಕಾದಶಿ

ಆಷಾಢ ಶುಕ್ಲ ಏಕಾದಶಿಯನ್ನು ದೇವಶಯನಿ ಏಕಾದಶಿ ಎಂದು ಕರೆಯಲಾಗುವುದು. ಈ ದಿನದಿಂದ 4 ತಿಂಗಳ ಕಾಲ ಮಹಾವಿಷ್ಣು ಯೋಗ ನಿದ್ರೆಯಲ್ಲಿರುತ್ತಾರೆ ಎಂಬುವುದು ನಂಬಿಕೆ. ಕಾರ್ತಿಕ ಶುಕ್ಲ ಏಕಾದಶಿಯಂದು ಮಹಾವಿಷ್ಣು ವಿಶ್ರಾಂತಿಯಿಂದ ಎದ್ದು ಮತ್ತೆ ಬ್ರಹ್ಮಾಂಡದ ಕರ್ತವ್ಯ ನಿರ್ವಹಿಸುತ್ತಾನೆ.

ಜುಲೈ 24, ಕಾಮಿಕಾ ಏಕಾದಶಿ

ಈ ದಿನ ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು.

ಕಾಮಿಕಾ ಏಕಾದಶಿ ತಿಥಿ ಪ್ರಾರಂಭ: ಜುಲೈ 22 ಬೆಳಗ್ಗೆ 11:27ಕ್ಕೆ

ಕಾಮಿಕಾ ಏಕಾದಶಿ ತಿಥಿ ಮುಕ್ತಾಯ: ಜುಲೈ 24 ಭಾನುವಾರ ಮಧ್ಯಾಹ್ನ 01:45ಕ್ಕೆ

ಜುಲೈ 11 ಪ್ರದೋಷ, ಜುಲೈ 25 ಸೋಮ ಪ್ರದೋಷ ವ್ರತ

ಜುಲೈ 11 ಪ್ರದೋಷ, ಜುಲೈ 25 ಸೋಮ ಪ್ರದೋಷ ವ್ರತ

ಜುಲೈ 11ರಂದು ಮಹಾ ಶಿವನನ್ನು ಆರಾಧಿಸಲಾಗುವುದು. ಈ ತಿಂಗಳು ಮತ್ತೊಂದು ಪ್ರದೋಷ ವ್ರತವನ್ನು ಜುಲೈ 25ಕ್ಕೆ ಆಚರಿಸಲಾಗುವುದು.

ಆಷಾಢ ಪ್ರದೋಷ ಪೂಜಾ ಸಮಯ: ಜುಲೈ 11 ಬೆಳಗ್ಗೆ 07:12ರಿಂದ ರಾತ್ರಿ 9:20ರವರೆಗೆ

ಜುಲೈ 25 ಸೋಮ ಪ್ರದೋಷ

ಈ ಪ್ರದೋಷ ವ್ರತ ಸೋಮವಾರ ಬರುವುದರಿಂದ ಸೋಮ ಪ್ರದೋಷವ್ರತವೆಂದು ಕರೆಯಲಾಗುವುದು. ಅಲ್ಲದೆ ಸೋಮವಾರ ಶಿವನಿಗೆ ಮೀಸಲಾದ ದಿನವಾಗಿರುವುದರಿಂದ ಈ ದಿನದ ವ್ರತಕ್ಕೆ ಹೆಚ್ಚಿನ ಫಲ ಸಿಗುವುದು.

ತ್ರಯೋದಶಿ ತಿಥಿ ಪ್ರಾರಂಭ: ಜುಲೈ 25 ಸಂಜೆ 04:16ಕ್ಕೆ

ತ್ರಯೋದಶಿ ತಿಥಿ ಮುಕ್ತಾಯ: ಜುಲೈ 26 ಸಂಜೆ 06:47ಕ್ಕೆ

ಪ್ರದೋಷ ಪೂಜೆ ಸಮಯ: ಜುಲೈ 25 ಸಂಜೆ 07:08ರಿಂದ ರಾತ್ರಿ 09:18ರವರೆಗೆ

ಜುಲೈ 26 ಸಾವನ್ ಶಿವರಾತ್ರಿ

ಜುಲೈ 26ಮಾಸಿಕ ಶಿವರಾತ್ರಿ

ಜುಲೈ 26ರಂದು ಮಾಸಿಕ ಶಿವರಾತ್ರಿ ಆಚರಿಸಲಾಗುವುದು.

ಜುಲೈ 13 ಗುರು ಪೂರ್ಣಿಮಾ

ಜುಲೈ 13 ಗುರು ಪೂರ್ಣಿಮಾ

ಹಿಂದೂ ತಿಂಗಳ ಆಷಾಢ ಮಾಸ ಜುಲೈ 13ರಂದು ದಂದು ಪೂರ್ಣ ಚಂದ್ರನ ದಿನದಂದು ಗುರುವಿಗೆ ವಿಶೇಷ ಗೌರವ ಸಲ್ಲಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ವ್ಯಾಸರ ನೆನಪಿಗಾಗಿ ಈ ದಿವವನ್ನು ಆಚರಿಸಲಾಗುತ್ತದೆ. ನಾಲ್ಕು ವೇದಗಳನ್ನು 18 ಪುರಾಣಗಳನ್ನು ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದ ಮಹಾತ್ಮರಾಗಿದ್ದಾರೆ ವೇದವ್ಯಾಸರು. ಬೌದ್ಧರಿಗೂ ಗುರು ಪೂರ್ಣಿಮೆ ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ.

ಜುಲೈ 16 ಕರ್ಕ ಸಂಕ್ರಾಂತಿ

ಜುಲೈ 16 ಕರ್ಕ ಸಂಕ್ರಾಂತಿ

ಕರ್ಕ ಸಂಕ್ರಾಂತಿಯಂದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಈ ದಿನ ಭಕ್ತರು ಆಹಾರ ಹಾಗೂ ವಸ್ತ್ರಗಳನ್ನು ದಾನ ಮಾಡುತ್ತಾರೆ. ಪೌರಾಣಿಕ ಹಿನ್ನೆಲೆ ನೋಡಿದಾಗ ಕರ್ಕ ಸಂಕ್ರಾಂತಿಯ ದಿನದ ನಂತರ ಸೂರ್ಯ, ವಿಷ್ಣು ಹಾಗೂ ಇತರ ದೇವರು ಗಾಢ ನಿದ್ದೆಗೆ ಜಾರುತ್ತಾರೆ, ಈ ಸಮಯದಲ್ಲಿ ಶಿವನು ಇಡೀ ವಿಶ್ವವನ್ನು ನೋಡಿಕೊಳ್ಳುತ್ತಾನೆ ಎಂದು ಹೇಳಲಾಗುವುದು.

ಆಷಾಢ ಅಮವಾಸ್ಯೆ, ಭೀಮನ ಅಮವಾಸ್ಯೆ

ಆಷಾಢ ಅಮವಾಸ್ಯೆ, ಭೀಮನ ಅಮವಾಸ್ಯೆ

ಆಷಾಢ ಅಮವಾಸ್ಯೆ, ಭೀಮನ ಅಮವಾಸ್ಯೆಯನ್ನು ಜುಲೈ 28ಕ್ಕೆ ಆಚರಿಸಲಾಗುವುದು. ಈ ದಿನ ಪಿತೃ ತರ್ಪಣ ಕೂಡ ಮಾಡಲಾಗುವುದು. ಪತ್ನಿ ಪತಿಯ ಆಯುಸ್ಸು, ಆರೋಗ್ಯ, ಸಂಪತ್ತು ವೃದ್ಧಿಗಾಗಿ ಭೀಮನ ಅಮವಾಸ್ಯೆ ಆಚರಿಸಲಾಗುವುದು.

English summary

Festivals and Vrats in the month of July 2022

What are the festivals and vrat we have in the month of July 2022,here is the complete list..
X
Desktop Bottom Promotion