For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದಲ್ಲಿ ಶಿವನಿಗೆ ಇಂತಹ ಹೂವುಗಳಿಂದ ಪೂಜಿಸಿ- ಶಿವ ಸಂತುಷ್ಟನಾಗುವನು

By Deepu
|

ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾದ ತಿಂಗಳು. ಈ ತಿಂಗಳಲ್ಲಿ ಶಿವನಿಗೆ ಇಷ್ಟವಾದ ಹೂವು, ಸಿಹಿ ತಿಂಡಿ ಹಾಗೂ ಪೂಜಾ ವಿಧಾನಗಳನ್ನು ಅನುಸರಿಸುತ್ತಾರೆ. ದೇವಾಲಯಕ್ಕೆ ಭೇಟಿ ನೀಡುವುದು ಹಾಗೂ ಶಿವನಿಗಾಗಿ ಉಪವಾಸ ಕೈಗೊಳ್ಳುವುದು ಸೇರಿದಂತೆ ಅನೇಕ ವಿಧಿ-ವಿಧಾನಗಳನ್ನು ಕೈಗೊಳ್ಳುತ್ತಾರೆ. ಇದರಿಂದ ಶಿವನು ಸಂತುಷ್ಟನಾಗಿ ನಮ್ಮ ಇಷ್ಟಾರ್ಥಗಳನ್ನು ಪೂರೈಸುವನು ಎಂದು ಹೇಳಲಾಗುತ್ತದೆ.

ಶಿವನು ವಿಶಾಲ ಹೃದಯವನ್ನು ಹೊಂದಿದ್ದಾನೆ. ಅವನ ಕೃಪೆಗೆ ಒಳಗಾಗಲು ಅಧಿಕ ಶ್ರಮವನ್ನು ಪಡಬೇಕೆಂದಿಲ್ಲ. ಅವನಿಗೆ ಇಷ್ಟವಾಗುವ ಹೂವುಗಳನ್ನು ಅರ್ಪಿಸುವುದರಿಂದಲೂ ಶಿವನನ್ನು ತೃಪ್ತಿಪಡಿಸಬಹುದು. ಜೊತೆಗೆ ಶಿವನ ಆಶೀರ್ವಾದವನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಾದರೆ ಶಿವನಿಗೆ ಇಷ್ಟವಾಗುವ ಹೂವುಗಳು ಯಾವವು ಎನ್ನುವುದರ ವಿವರಣೆಯನ್ನು ಈ ಮುಂದೆ ವಿವರಿಸಲಾಗಿದೆ....

ಶಿವನಿಗೆ ಮಲ್ಲಿಗೆ ಹೂವು ಅರ್ಪಿಸಿದರೆ-ಹಲವು ಸಮಸ್ಯೆಗಳ ನಿವಾರಣೆ

ಶಿವನಿಗೆ ಮಲ್ಲಿಗೆ ಹೂವು ಅರ್ಪಿಸಿದರೆ-ಹಲವು ಸಮಸ್ಯೆಗಳ ನಿವಾರಣೆ

ಯೋಗ ಅಥವಾ ಅದೃಷ್ಟವಿದ್ದರೆ ವ್ಯಕ್ತಿ ಏನನ್ನು ಬೇಕಾದರೂ ಪಡೆದುಕೊಳ್ಳಬಹುದು. ಶಿವನ ಆರಾಧನೆಗೆ ಮಲ್ಲಿಗೆ ಹೂವನ್ನು ಅರ್ಪಿಸಿದರೆ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ವಿಶೇಷವಾಗಿ ವಾಹನಗಳ ಯೋಗವನ್ನು ಪಡೆದುಕೊಳ್ಳುವನು. ಸ್ವಂತ ವಾಹನಗಳ ಖರೀದಿಸುವುದು ಅಥವಾ ಉತ್ತಮ ವಾಹನ ಸೌಕರ್ಯಗಳನ್ನು ಹೊಂದಿದವರೊಂದಿಗೆ ಹೋಗುವ ಅದೃಷ್ಟವು ಲಭಿಸುವುದು. ವ್ಯಕ್ತಿಯ ಬಳಿ ಐಷಾರಾಮಿ ವಾಹನಗಳು ಇಲ್ಲವಾದರೂ ಬೇರೆಯವರು ನೆರವು ನೀಡುವುದರ ಮೂಲಕ ಅದೃಷ್ಟವನ್ನು ಪಡೆದುಕೊಳ್ಳುವನು.

ಬಿಲ್ವಪತ್ರೆ ಶಿವನಿಗೆ ಅರ್ಪಿಸಿ

ಬಿಲ್ವಪತ್ರೆ ಶಿವನಿಗೆ ಅರ್ಪಿಸಿ

ಶಂಖಪುಷ್ಪ ಮತ್ತು ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸುವುದರಿಂದ ಜೀವನದಲ್ಲಿ ವೈಭವವನ್ನು ಅನುಭವಿಸಬಹುದು. ಜೀವನದಲ್ಲಿ ಉತ್ತಮ ಒಳಹರಿವನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಶಿವನಿಗೆ ಕಮಲದ ಹೂವನ್ನು ಅರ್ಪಿಸುವುದರಿಂದ ನಮ್ಮ ನಕ್ಷತ್ರಗಳ ಫಲವು ಉತ್ತಮವಾಗುವುದು. ಉತ್ತಮ ಸ್ಥಿತಿಯಲ್ಲಿ ನಕ್ಷತ್ರಗಳು ಬದಲಾವಣೆಯನ್ನು ಹೊಂದಿದರೆ ಬಹುಬೇಗ ಶ್ರೀಮಂತರಾಗುವರು. ಶಿವನಿಗೆ ಇಷ್ಟವಾದ ಬಿಲ್ವ ಪತ್ರೆಯನ್ನು ಅರ್ಪಿಸುವುದರಿಂದ ಹೆಚ್ಚಿನ ಸಂಪತ್ತನ್ನು ಗಳಿಸಲು ಅನುಕೂಲವಾಗುವುದು. ಮಲ್ಲಿಗೆ ಹೂವನ್ನು ಅರ್ಪಿಸುವುದರಿಂದ ಸಾಕಷ್ಟು ಸಮೃದ್ಧತೆ ಹಾಗೂ ಆಹಾರದೊಂದಿಗೆ ಮನೆಯು ತುಂಬಿಕೊಂಡು ಇರುವುದು. ಇನ್ನು ಬಿಲ್ವಪತ್ರೆಯು ಶಿವನ ಜೊತೆಗೆ ಒಂದು ವಿಶೇಷವಾದ ಸಂಬಂಧವನ್ನು ಹೊಂದಿದೆ. ಶಿವನಿಗೆ ಬಿಲ್ವಪತ್ರೆಯೆಂದರೂ, ಬಿಲ್ಪ ಪತ್ರೆಯ ಮರವೆಂದರೂ ತುಂಬಾ ಪ್ರೀತಿ. ಯಾರು ಬಿಲ್ಪ ಪತ್ರೆಯಿಂದ ಪೂಜಿಸುತ್ತಾರೋ, ಅವರ ಕರೆಗೆ ಶಿವ ಸ್ಪಂದಿಸುತ್ತಾನಂತೆ. ಇದಕ್ಕಾಗಿ ಶಿವಲಿಂಗಕ್ಕೆ ಬಿಲ್ವಾರ್ಚನೆ ಸಹ ಮಾಡಿಸುತ್ತಾರೆ. ಆಯುರ್ವೇದದ ಪ್ರಕಾರ ಬಿಲ್ವ ಪತ್ರೆಯಲ್ಲಿ ಹಲವಾರು ಔಷಧೀಯ ಗುಣಗಳು ಇವೆಯಂತೆ. ಆ ಮೂರು ಎಲೆಗಳ ಗುಚ್ಛವು ಸತ್ವ, ರಜಸ್ ಮತ್ತು ತಮಸ್ಸು ಎಂಬ ಗುಣಗಳನ್ನು ಸೂಚಿಸುತ್ತದೆಯಂತೆ. ಸತ್ವ ಗುಣವೆಂದರೆ ಧನಾತ್ಮಕ ಗುಣಗಳು ಮತ್ತು ತಮಸ್ಸು ಎಂದರೆ ನಕಾರಾತ್ಮಕ ಗುಣಗಳನ್ನು ಸೂಚಿಸುತ್ತದೆ..ಯಾರು ಈ ಎಲೆಗಳನ್ನು ಸ್ಪರ್ಶಿಸುತ್ತಾರೋ ಅವರಿಗೆ ಈ ಎಲೆಗಳಲ್ಲಿರುವ ಧನಾತ್ಮಕ ಶಕ್ತಿಯು ಸಂಚಯ ವಾಗುತ್ತದೆಯಂತೆ. ಆದ್ದರಿಂದಲೇ ಇದನ್ನು ಸ್ಪರ್ಶಿಸಿದರೆ ಪಾಪ ಕರ್ಮಗಳಿಂದ ಮುಕ್ತಿಯನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

 ಶೀಘ್ರ ವಿವಾಹ

ಶೀಘ್ರ ವಿವಾಹ

ಅನೇಕ ಮಂದಿ ಯೋಗ್ಯ ವಯಸ್ಸಿನಲ್ಲಿ ವಿವಾಹವಾಗದೆ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ. ವಿವಾಹದ ಘಳಿಗೆಗಾಗಿ ಕಾತರಿಸುತ್ತಿರುತ್ತಾರೆ. ಅಂತಹವರು ಶಿವನಿಗೆ ಬಿಲ್ವ ಪತ್ರೆಯನ್ನು ಅರ್ಪಿಸುವುದರಿಂದ ಬಹುಬೇಗ ವಿವಾಹ ಯೋಗವನ್ನು ಪಡೆದುಕೊಳ್ಳಬಹುದು. ಸಾಕಷ್ಟು ಹುಡುಕಾಟ ನಡೆಸಿದರೂ ವಿವಾಹ ಯೋಗ ಕೂಡಿಬರುವುದಿಲ್ಲ. ಅಂತಹವರು ಒಂದು ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿದರೂ ಅದೃಷ್ಟವನ್ನು ಬದಲಾಯಿಸಿಕೊಳ್ಳಬಹುದು...

ಖಿನ್ನತೆಯ ನಿವಾರಣೆಗೆ - ಶಿವನಿಗೆ ಮಲ್ಲಿಗೆ ಹೂವು ಅರ್ಪಿಸಿ

ಖಿನ್ನತೆಯ ನಿವಾರಣೆಗೆ - ಶಿವನಿಗೆ ಮಲ್ಲಿಗೆ ಹೂವು ಅರ್ಪಿಸಿ

ಸಮಸ್ಯೆ ಎನ್ನುವುದು ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ಅವುಗಳನ್ನು ಸಹಿಸಿಕೊಂಡು ಮುಂದೆ ಸಾಗುವುದು ಜೀವನ. ಆದರೆ ಕೆಲವೊಮ್ಮೆ ಅತಿಯಾದ ಸಮಸ್ಯೆಗಳಿಂದ ಮನಸ್ಸು ನೋವು ಹಾಗೂ ಖಿನ್ನತೆಗೆ ಒಳಗಾಗುವುದುಗಿದೆ. ಇಂತಹ ಸಮಸ್ಯೆಯನ್ನು ದೂರವಿಡಲು ಶಿವನಿಗೆ ಶಫಾಲಿ ಅಥವಾ ರಾತ್ರಿ ಮಲ್ಲಿಗೆ ಹೂವನ್ನು ಅರ್ಪಿಸಬೇಕು.

 ಸಾಮಾಜಿಕ ಗೌರವಕ್ಕೆ

ಸಾಮಾಜಿಕ ಗೌರವಕ್ಕೆ

ಸಮಾಜದಲ್ಲಿ ಉತ್ತಮ ವ್ಯಕ್ತಿ, ಅಧಿಕಾರ ಹಾಗೂ ಗೌರವ ದೊರೆಯಬೇಕು ಎನ್ನುವುದುನ್ನು ಎಲ್ಲರೂ ಬಯಸುತ್ತಾರೆ. ಆದರೆ ಅದು ಬೆರಳೆಣಿಕೆಯ ಜನರಿಗೆ ಮಾತ್ರ ಪ್ರಾಪ್ತಿಯಾಗುವುದು. ಇಂತಹ ಒಂದು ಯೋಗವನ್ನು ಹಾಗೂ ಗೌರವವನ್ನು ಪಡೆದುಕೊಳ್ಳಲು ಶಿವನಿಗೆ ಕೋಟೆ ಹೂವನ್ನು ಅರ್ಪಿಸಬೇಕು. ಅಧಿಕ ಆಭರಣ ಅಪೇಕ್ಷೆ ಪಡುವವರು ಸಹ ಈ ಹೂವನ್ನು ಶಿವನಿಗೆ ಅರ್ಪಿಸಬೇಕು.

ಉತ್ತಮ ಆರೋಗ್ಯಕ್ಕೆ

ಉತ್ತಮ ಆರೋಗ್ಯಕ್ಕೆ

ದೀರ್ಘಾಯುಷ್ಯದ ವರೆಗೂ ಉತ್ತಮ ಆರೋಗ್ಯ ಭಾಗ್ಯವನ್ನು ಪಡೆದುಕೊಳ್ಳಲು ಶ್ರಾವಣ ಮಾಸದಲ್ಲಿ ಶಿವನಿಗೆ ಗರಿಕೆ/ದೂರ್ವೆಯನ್ನು ಅರ್ಪಿಸಬೇಕು ಎಂದು ಹೇಳಲಾಗುವುದು. ಇದರಿಂದ ಶಿವನು ದೀರ್ಘಾಯುಷ್ಯವನ್ನು ಆಶೀರ್ವದಿಸುತ್ತಾನೆ ಎನ್ನಲಾಗುವುದು. ಅಲ್ಲದೆ ಉಳಿದ ದಿನದಲ್ಲಿ ಮಾಡುವ ಶಿವನ ಆರಾಧನೆಗಿಂತ ಶ್ರಾವಣ ಮಾಸದಲ್ಲಿ ಮಾಡುವ ಆರಾಧನೆ 108 ಪಟ್ಟು ಹೆಚ್ಚು ಶ್ರೇಷ್ಠ ಹಾಗೂ ಶಕ್ತಿಯುತವಾದದ್ದು ಎಂದು ಹೇಳಲಾಗುವುದು. ಹಾಗಾಗಿಯೇ ಶ್ರಾವಣ ತಿಂಗಳಲ್ಲಿ ಮಧ್ಯಾಹ್ನ ಪೂಜೆ, ಸೋಮವಾರ ವ್ರತ ಹಾಗೂ ಶಿವನ ಆರಾಧನೆ ಮಾಡುವುದರಿಂದ ಶಿವ ಸಂತುಷ್ಟನಾಗುವನು ಎಂದು ಹೇಳಲಾಗುತ್ತದೆ

ಶಾಂತಿಯುತವಾದ ಜೀವನ ಹಾಗೂ ಶಾಂತಿಯುತವಾದ ಮರಣ

ಶಾಂತಿಯುತವಾದ ಜೀವನ ಹಾಗೂ ಶಾಂತಿಯುತವಾದ ಮರಣ

ಭಾರತೀಯ ಮಹಿಳಾ ದೇವತೆಗಳ ಮೆಚ್ಚಿನ ಪುಷ್ಪ ಕಮಲ. ಹಾಗೆಂದೇ ನಮ್ಮಲ್ಲಿ ಕಮಲದ ಹೂವಿಗೆ ವಿಶೇಷವಾದ ಸ್ಥಾನವಿದೆ. ಕಮಲದ ಹೂವು ಮನೆಯಲ್ಲಿದ್ದರೆ ಆ ಕುಟುಂಬಕ್ಕೆ ಆಯಸ್ಸು,ಆರೋಗ್ಯ, ಸಕಲ ಸಮೃದ್ಧಿಗಳು ಲಭಿಸುತ್ತವೆ ಎನ್ನುವ ನಂಬಿಕೆಯಿದೆ. ಅದಕ್ಕಾಗಿಯೇ ಅನೇಕ ಮನೆಗಳ ಹಜಾರದ ಮೂಲೆಯೊಂದರಲ್ಲಿ ಸಣ್ಣ ಕಮಲವೊಂದು ನಗುತ್ತಿರುವುದನ್ನ ನೀವು ಕಾಣಬಹುದು. ಅಂತೆಯೇ ಶಿವನಿಗೂ ಬಿಳಿ ಕಮಲವೆಂದರೆ ಅಚ್ಚುಮೆಚ್ಚು. ಶಿವನಿಗೆ ಬಿಳಿ ಕಮಲವನ್ನು ಅರ್ಪಿಸುವುದರ ಮೂಲಕ ಶಾಂತಿಯುತವಾದ ಜೀವನ ಹಾಗೂ ಸಾವಿನ ನಂತರ ಮೋಕ್ಷವನ್ನು ಪಡೆದುಕೊಳ್ಳಲು ಸಹಾಯವಾಗುವುದು ಎಂದು ಹೇಳಲಾಗುತ್ತದೆ.

English summary

Favourite flowers to Lord Shiva

Shravana month is dedicated to Lord Shiva. Devotees worship him with all the dedication and seek the fulfilment of their desires. From observing fasts to visiting the temples, devotees try all they can to please the deity. Most of us have heard that Lord Shiva can be pleased with minimal offerings. But, it is also said that a person can get all his wishes granted by offering just a few flowers to Shiva. Today we are going to tell you some flowers which you should offer to Shiva for his blessings.
X
Desktop Bottom Promotion