For Quick Alerts
ALLOW NOTIFICATIONS  
For Daily Alerts

ಕರ್ಮದ ಕುರಿತಾಗಿ ಒಂದಿಷ್ಟು ವಿಸ್ಮಯಕಾರಿ ಸಂಗತಿಗಳು

By Deepu
|

"ಕರ್ಮ" ನಮ್ಮ ಜೀವನದಲ್ಲಿ ನಾವು ಬಳಸುವ ಪದಗಳಲ್ಲಿ ಅತಿ ಹೆಚ್ಚು ಬಳಕೆಯಾಗುವಂತಹ ಪದಗಳಲ್ಲಿ ಒಂದಾಗಿದೆ. ಇದನ್ನು ಉನ್ನತ ಮಟ್ಟದ ಚಿಂತನೆಯಲ್ಲಿ ಸಹ ಬಳಸುತ್ತಾರೆ. ಉದಾಹರಣೆಗೆ "ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ|| ಮಾ ಕರ್ಮಫಲ ಹೇತುರ್ಭೂ || ಮಾ ತೇ ಸಂಗೋಸ್ತ್ವ ಕರ್ಮಣಿ " ಎಂಬ ಶ್ಲೋಕವನ್ನು ನೀವು ಕೇಳಿರಬಹುದು. ಇದರ ಅರ್ಥ - ನೀನು ನಿನ್ನ ಕರ್ತವ್ಯ ವನ್ನು ತಿಳಿದು ಅದನ್ನು

ಮಾಡುವುದರಲ್ಲಿ ಮನಸ್ಸಿಡಬೇಕು; ಫಲದ ಚಿಂತೆ ಮಾಡದೆ ಕರ್ತವ್ಯ (ಕರ್ಮ) ಮಾಡುವುದರಲ್ಲಿ ಶ್ರದ್ಧೆ ಇಡಬೇಕು. ನಿನ್ನ ಕರ್ತವ್ಯ (ಕರ್ಮ)ವನ್ನು ಮಾಡದೆ ಇರುವ ವಿಚಾರ ನಿನಗೆ ಬಾರದೆ ಇರಲಿ. ಇದು ಕೃಷ್ಣ ಗೀತೆಯಲ್ಲಿ ಹೇಳುವ ಮಾತು. ಇಲ್ಲಿ ನಿನ್ನ ಕರ್ಮವನ್ನು ನೀನು ಮಾಡು ಎಂದು ಭಗವಾನ್ ಕೃಷ್ಣ ಹೇಳುತ್ತಾನೆ.

ಇನ್ನು ನಮ್ಮ ಮನೆಯಲ್ಲಿ ಅಹಿತಕರ ಘಟನೆಗಳು ನಡೆದಾಗ ನಾವು ನನ್ನ ಕರ್ಮ ಇದನ್ನು ಅನುಭವಿಸಬೇಕಾಗಿ ಬಂದಿದೆ ಎಂದು ನಮ್ಮನ್ನು ನಾವು ನಿಂದಿಸಿಕೊಳ್ಳುತ್ತೇವೆ. ಅಂತಾರಾಷ್ಟ್ರೀಯವಾಗಿ ಪ್ರಸಿದ್ಧವಾಗಿರುವ " ದಿ ಆಲ್‌ಕೆಮಿಸ್ಟ್" ಪುಸ್ತಕವು ಸಹ ಕರ್ಮವನ್ನು ಶ್ರದ್ಧೆಯಿಂದ ಮಾಡು ಫಲ ಸಿಕ್ಕೇ ಸಿಕ್ಕುತ್ತದೆ ಎಂಬ ತತ್ವವನ್ನು ಭೋದಿಸುತ್ತದೆ.

ಅಸಲಿಗೆ ಕರ್ಮ ಎಂದರೇನು? ಕರ್ಮ ಎಂಬ ಪದದ ನಿಜವಾದ ಅರ್ಥ ಕೆಲಸ, ಕಾರ್ಯ ಅಥವಾ ಕ್ರಿಯೆ. ಕರ್ಮ ಎಂಬುದನ್ನು ನಿರ್ಬಂಧಗಳನ್ನು ಹೇರುವ ಕಾನೂನು ಎಂದು ನೋಡುವುದರ ಬದಲಿಗೆ ಅದು ನಮ್ಮ ಜೀವನವನ್ನು ಉನ್ನತಿಗೆ ಕರೆದುಕೊಂಡು ಹೋಗುವ ಸಾಧನೆ ಎಂದು ನೋಡಿದರೆ ಒಳ್ಳೆಯದು. ಹೌದು ಕರ್ಮ ಎಂಬುದು ನಿಜವಾದ ಜ್ಞಾನದಿಂದ ಮಾಡುವ ಕ್ರಿಯೆ. ಒಳ್ಳೆಯ ಕರ್ಮ ಮತ್ತು ಕೆಟ್ಟ ಕರ್ಮಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಮಾನವನ ಜೀವನವನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿ, ಒಳ್ಳೆಯ ಕರ್ಮಗಳು ಅವರಿಗೆ ಒಳ್ಳೆಯ ಫಲಿತಾಂಶಗಳನ್ನು ನೀಡಿರುತ್ತವೆ. ಕೆಟ್ಟ ಕರ್ಮಗಳು ನಕಾರಾತ್ಮಕ ಫಲಿತಾಂಶಗಳನ್ನು ನೀಡಿರುತ್ತವೆ.

Facts About Karma- The Real Meaning

ನಿಮ್ಮ ಪ್ರತಿಯೊಂದು ಆಲೋಚನೆಗಳು, ಪದಗಳು, ಕಾರ್ಯಗಳು, ನಡೆಗಳಿಂದ ನೀವು ಒಂದು ನಿರ್ದಿಷ್ಟ ಶಕ್ತಿಯನ್ನು ಸೃಷ್ಟಿಸುತ್ತೀರಿ. ಈ ಶಕ್ತಿಯ ಗುಣಮಟ್ಟದಿಂದ ನೀವು ಮಾಡುವ ಕಾರ್ಯಗಳಿಗೆ ಅನುಸಾರ ನಿಖರ ಫಲಿತಾಂಶಗಳನ್ನು ಪಡೆಯುವಿರಿ. ಆದ್ದರಿಂದ ನಾವು ಮಾಡುವ ಎಲ್ಲಾ ಕಾರ್ಯಗಳಿಗೆ ಅನುಗುಣವಾಗಿ ನಾವು ಪರಿಣಾಮಗಳನ್ನು ಎದುರಿಸುತ್ತೇವೆ. ಇದರಿಂದ ನಾವು ಯಾವುದೇ ರೀತಿಯಲ್ಲಿ ಸಹ ಪಾರಾಗಲು ಸಾಧ್ಯವಿಲ್ಲ. ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದ್ದು ಮಾಡಿದರೆ ಕೆಟ್ಟದಾಗುತ್ತದೆ. ಆದ್ದರಿಂದಲೇ ದೊಡ್ಡವರು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಯಿರಿ ಎಂದು ಯಾವಾಗಲು ತಿಳಿ ಹೇಳುವುದು. ಬನ್ನಿ ಕರ್ಮದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳೋಣ

ಸಂಗತಿ #1
ನೀವು ಪ್ರಪಂಚಕ್ಕೆ ಏನು ನೀಡುತ್ತೀರೋ, ಅದನ್ನೆ ಪಡೆಯುತ್ತೀರಿ. ಅದು ಪ್ರೀತಿ, ದ್ವೇಷ, ಅಸೂಯೆ, ಕರುಣೆ ಯಾವುದಾದರು ಆಗಿರಬಹುದು, ನೀವು ಯಾವ ಭಾವನೆಯನ್ನು, ಕರ್ಮವನ್ನು ಜಗತ್ತಿಗೆ ನೀಡುತ್ತೀರೋ, ಅದನ್ನೆ ನೀವು ಪುನಃ ಪಡೆಯುವಿರಿ. ಆದ್ದರಿಂದ ಸಂತೋಷ, ಪ್ರೀತಿ ಮುಂತಾದ ಸಕಾರಾತ್ಮಕತೆಯನ್ನು ಜಗತ್ತಿಗೆ ನೀಡಿ, ಅದನ್ನೆ ಪಡೆಯಿರಿ.

ಸಂಗತಿ #2
ನಿಮ್ಮ ಸುತ್ತ ಮುತ್ತ ಇರುವ ಬಹಿರಂಗ ಲೋಕವು ಶುದ್ಧಿಯಾಗಬೇಕು ಎಂದರೆ ನೀವು ಮೊದಲು ಅಂತರಂಗ ಶುದ್ಧಿಯನ್ನು ಹೊಂದಿರಬೇಕು. ಒಂದು ವೇಳೆ ನೀವು ಪ್ರಪಂಚವನ್ನು ಬದಲಿಸಬೇಕು ಎಂದಾದಲ್ಲಿ, ಮೊದಲು ನೀವು ಬದಲಾಗಬೇಕು. ಆ ಬದಲಾವಣೆಯು ನಿಮ್ಮ ಮನಸ್ಸಿನಿಂದ ಆರಂಭವಾಗಿರಬೇಕು.

ಸಂಗತಿ #3
ನಿಮ್ಮ ಆಂತರಿಕ ಸ್ಥಿತಿಯು ನಿಮ್ಮ ಸುತ್ತ ಮುತ್ತಲ ಪರಿಸರದ ಮೇಲೆ ಪ್ರಭಾವ ಬೀರುತ್ತದೆ. ಹಾಗೆಯೇ ನಿಮ್ಮ ಸುತ್ತ ಮುತ್ತಲ ಪರಿಸರವು ನಿಮ್ಮ ಆಂತರಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ನಿಮಗೆ ಸರಿಹೊಂದುವ ಒಳ್ಳೆಯ ಪರಿಸರವನ್ನು ಆಯ್ಕೆ ಮಾಡಿಕೊಳ್ಳಿ. ಅದರ ಜೊತೆಗೆ ನಿಮ್ಮ ಆಲೋಚನೆಗಳನ್ನು, ಪದಗಳನ್ನು ಮತ್ತು ಕ್ರಿಯೆಗಳನ್ನು ಸಹ ನೀವು ಜಾಗರೂಕತೆಯಿಂದ ಆರಿಸಿಕೊಳ್ಳಬೇಕಾಗುತ್ತದೆ. ಇವೆಲ್ಲವು ನಿಮ್ಮ ಆಂತರಿಕ ಸ್ಥಿತಿಯನ್ನು ಶುದ್ಧವಾಗಿಡುತ್ತವೆ.

ಸಂಗತಿ #4
ನಿಮ್ಮ ಹಿಂದಿನ ಕ್ರಿಯೆಗಳು, ಚಿಂತನೆಗಳು ಮತ್ತು ವರ್ತನೆಗಳು ಸಹ ನಿಮ್ಮ ವರ್ತಮಾನದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ಜಾಗರೂಕತೆಯಿಂದ ಕ್ರಿಯೆಗಳನ್ನು ಆರಿಸಿ.

ಸಂಗತಿ #5
ಇಡೀ ಪ್ರಪಂಚದಲ್ಲಿ ಉಚಿತ ಮಧ್ಯಾಹ್ನದ ಊಟಕ್ಕಿಂತ ಹೆಚ್ಚಿನದು ಯಾವುದು ಇಲ್ಲ. ಉಚಿತವಾಗಿ ನಿಮಗೆ ಯಾವುದಾದರು ಉಡುಗೊರೆ ಬರಬೇಕು ಎಂದರೆ, ಅದಕ್ಕೆ ನೀವು ಏನಾದರು ಸಾಧನೆ ಮಾಡಿರಬೇಕಾಗುತ್ತದೆ. ಆದ್ದರಿಂದ ಯಾವುದಾದರು ಸಾಧನೆ ಮಾಡಿ. ಇವು ಕರ್ಮಗಳ ಕುರಿತಾದ ಕೆಲವೊಂದು ಸಂಗತಿಗಳಾಗಿವೆ, ಒಳ್ಳೆಯದನ್ನು ಮಾಡಿ, ಒಳ್ಳೆಯದೆ ದೊರೆಯುತ್ತದೆ.

English summary

Facts About Karma- The Real Meaning

The literal meaning of karma is action. Instead of using the laws of karma to feel constrained, it is better to understand the true meaning of them so that you can make your life better. It is good to know about good karma and bad karma as true knowledge can liberate us
X
Desktop Bottom Promotion