For Quick Alerts
ALLOW NOTIFICATIONS  
For Daily Alerts

ಬಕ್ರೀದ್ ದಿನ ಕೋಳಿ ಬಲಿ ಯಾಕೆ ಕೊಡಲ್ಲ?

|
ಬಕ್ರೀದ್ ದಿನ ಆಡು ಕುರಿಗಳನ್ನ ಬಲಿ ಕೊಡಲಾಗುತ್ತೆ | ಆದರೆ ಕೋಳಿಗಳನ್ನ ಬಲಿ ಕೊಡೋಲ್ಲ ಯಾಕೆ? | Oneindia Kannada

ವಿಶ್ವದೆಲ್ಲೆಡೆಯಲ್ಲಿ ಮುಸ್ಲಿಮರು ಬಕ್ರೀದ್ ನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಬಕ್ರೀದ್ ಆಚರಿಸುತ್ತಿರುವ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು ಅಲ್ಲಾಹುನ ಆಜ್ಞೆಯಂತೆಪ್ರವಾದಿ ಅಬ್ರಾಹಂ ಅವರು ತನ್ನ ಮಗನನ್ನೇ ಬಲಿ ನೀಡಿದ ದಿನವಾಗಿದೆ. ಪ್ರವಾದಿ ಅವರು ತನ್ನ ಮಗನನ್ನು ಬಲಿ ನೀಡಲು ತಯಾರುಗುತ್ತಿದ್ದ ಅಂತಿಮ ಕ್ಷಣದಲ್ಲಿ ಮಗನ ಬದಲಿಗೆ ಅಲ್ಲಿ ಕುರಿ ಇತ್ತಂತೆ.

ಇದರಿಂದ ಕುರಿಯನ್ನೇ ಬಲಿ ಕೊಡುವಂತಹ ಸಂಪ್ರದಾಯವು ಬೆಳೆದು ಬಂದಿದೆ ಎಂದು ಹೇಳಲಾಗುತ್ತದೆ. ಈ ದಿನ ಪುರುಷರು ಹಾಗೂ ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸುವರು. ಮಸೀದಿಯಲ್ಲಿ ವಿಶೇಷ ನಮಾಜ್ ಸಲ್ಲಿಸಲಾಗುತ್ತದೆ.

 ಬಕ್ರೀದ್ ದಿನ ಪಾಲಿಸಬೇಕಾದ ನಿಯಮಗಳು

ಬಕ್ರೀದ್ ದಿನ ಪಾಲಿಸಬೇಕಾದ ನಿಯಮಗಳು

*ಬಲಿ ನೀಡಲು ಮುಸ್ಲಿಮರು ಕೆಲವೊಂದು ನಿಯಮಗಳನ್ನು ಪಾಲಿಸುವರು. ಪ್ರಾಣಿಯನ್ನು ಬಲಿ ಕೊಡಲು ಆಯ್ಕೆ ಮಾಡಿದ ಬಳಿಕ ಅದರ ಮಾಂಸವನ್ನುಮೂರು ಸಮಪಾಲಾಗಿ ಮಾಡಲಾಗುತ್ತದೆ. ಒಂದು ಭಾಗ ಕುಟುಂಬಕ್ಕೆ, ಇನ್ನೊಂದನ್ನು ಕುಟುಂಬ ಮತ್ತು ಸ್ನೇಹಿತರಲ್ಲಿ ಹಂಚಲಾಗುತ್ತದೆ. ಕೊನೆಯ ಭಾಗವನ್ನು ಬಡವರಿಗೆ ಹಾಗೂ ಅಗತ್ಯವಿರುವವರಿಗೆ ಹಂಚಲಾಗುತ್ತದೆ. ಈ ನಿಯಮವನ್ನು ಅಲ್ಲಾಹುವೇ ಮಾಡಿರುವುದು.

ತ್ಯಾಗ ಬಲಿದಾನದ ಪ್ರತೀಕವಾದ 'ಬಕ್ರೀದ್ ಹಬ್ಬದ' ವಿಶೇಷತೆ

ಬಕ್ರೀದ್ ದಿನ ಪಾಲಿಸಬೇಕಾದ ನಿಯಮಗಳು

ಬಕ್ರೀದ್ ದಿನ ಪಾಲಿಸಬೇಕಾದ ನಿಯಮಗಳು

*ಬಲಿದಾನದ ಬಳಿಕ ಮಾಂಸವನ್ನು ಹಂಚಿಕೊಂಡು ಮನೆಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ಮಾಡಲಾಗುವುದು. ಇದರನ್ನು ಕುಟುಂಬಿಕರು ಹಾಗೂ ಸ್ನೇಹಿತರಿಗೆ ಹಂಚಲಾಗುತ್ತದೆ.

*ಈ ದಿನ ನೀಡುವಂತಹ ಪ್ರಾಣಿ ಬಲಿಯ ಮಹತ್ವವನ್ನು ತಿಳಿದುಕೊಳ್ಳುವುದು ಅತೀ ಅಗತ್ಯ. ಅಲ್ಲಾಹು ಅವರು ನೀಡುವ ಅನತಿಯಂತೆ ಈ ದಿನ ಪ್ರಾಣಿ ಬಲಿ ನೀಡಲಾಗುತ್ತದೆ.

ಇದನ್ನು ಮಾನವೀಯವಾಗಿ ಮಾಡಲಾಗುವುದು. ಪ್ರಾಣಿಗಳನ್ನು ಅಲ್ಲಾಹುವಿನ ಹೆಸರಿನಲ್ಲಿ ಬಲಿ ನೀಡಲಾಗುತ್ತದೆ.

*ಅಲ್ಲಾಹುವಿನ ಆಶೀರ್ವಾದ ಪಡೆಯಲು ಹೀಗೆ ಮಾಡಲಾಗುವುದು. ಹೆಚ್ಚಿನ ಮಾಂಸವನ್ನು ಬಡವರಿಗೆ ನೀಡಲಾಗುತ್ತದೆ. ಸ್ವಲ್ಪ ಭಾಗವನ್ನು ಮಾತ್ರ ಕುಟುಂಬಕ್ಕಾಗಿ ಇಡಲಾಗುತ್ತದೆ. ಇದರಿಂದ ಅಲ್ಲಾಹುವಿನ ಕೃಪೆಗೆ ಪಾತ್ರರಾಗಬಹುದು ಎಂದು ನಂಬಲಾಗಿದೆ.

*ಖುರ್ಬಾನಿ ಎನ್ನುವುದರ ಅರ್ಥ ಅಲ್ಲಾಹುವನ್ನು ತೃಪ್ತಿ ಪಡಿಸುವುದು. ಅಲ್ಲಾಹು ಆಜ್ಞೆ ನೀಡಿದರೆ ತುಂಬಾ

*ಪ್ರೀತಿಪಾತ್ರವಾಗಿರುವುದನ್ನು ಕೂಡ ಬಲಿ ನೀಡಲು ಸಿದ್ಧರಿರಬೇಕು ಎನ್ನುವುದು ಇದರ ಅರ್ಥವಾಗಿದೆ. ಪ್ರವಾದಿ ಅಬ್ರಾಹಂ ಇದನ್ನೇ ಮಾಡಿರುವುದು.

 ಬಕ್ರೀದ್ ಎಂದರೆ ಹಂಚಿಕೊಳ್ಳುವುದು

ಬಕ್ರೀದ್ ಎಂದರೆ ಹಂಚಿಕೊಳ್ಳುವುದು

ಈ ಹಬ್ಬದ ಸಂಭ್ರಮ ಹಂಚಿಕೊಳ್ಳುವುದರಲ್ಲಿ ಅಡಗಿದೆ. ವಿಶ್ವದಾದ್ಯಂತ ಮುಸ್ಲಿಮರು ತಮ್ಮ ಪಾಲಿಗೆ ಬಂದ ಮಾಂಸದ ಅಡುಗೆ ಮಾಡಿ ತಮ್ಮ ಬಂಧು ಬಳಗ, ಸ್ನೇಹಿತರೊಂದಿಗೆ ಹಂಚಿಕೊಂಡು ಊಟ ಮಾಡುವುದರಲ್ಲಿ ಸಾರ್ಥಕತೆ ಅನುಭವಿಸುತ್ತಾರೆ. ವಿಶೇಷವಾಗಿ ಬಡಬಗ್ಗರಿಗೆ ಊಟ ಮತ್ತು ಮಾಂಸ ಹಂಚುವುದರಲ್ಲಿ ಮನೆಯ ಸದಸ್ಯರು ಸಮಾನವಾಗಿ ಭಾಗಿಯಾಗಿ ಕರುಣೆ, ಅನುಕಂಪ, ಬಡವರ ಬಗ್ಗೆ ವಾತ್ಸಲ್ಯ, ನೆರವು ನೀಡುವ ಮನಸ್ಸನ್ನು ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಮೂಡುವಂತೆ ಮಾಡಲಾಗುತ್ತದೆ.

ತ್ಯಾಗದ ಕುರುಹಾಗಿ ಕುರಿಯನ್ನು ಬಲಿನೀಡುವುದು

ತ್ಯಾಗದ ಕುರುಹಾಗಿ ಕುರಿಯನ್ನು ಬಲಿನೀಡುವುದು

ಪ್ರವಾದಿಯವರ ಭಕ್ತಿ, ಶ್ರದ್ಧೆ ಮತ್ತು ತ್ಯಾಗಕ್ಕೆ ಮೆಚ್ಚಿದ ದೇವರು ಅವರ ಮಗನ ಸ್ಥಾನದಲ್ಲಿ ಕುರಿಯೊಂದನ್ನು ಬಲಿಪಡೆದುಕೊಳ್ಳುತ್ತಾರೆ. ಅರಬಿ ಭಾಷೆಯಲ್ಲಿ ಬಕ್ರ್ ಎಂದರೆ ಕುರಿ, ಈದ್ ಅಂದರೆ ಹಬ್ಬ. ತ್ಯಾಗದ ಕುರುಹಾಗಿ ಕುರಿಯನ್ನು ಬಲಿನೀಡುವುದೇ ಬಕ್ರೀದ್ ಆಗಿದೆ. ವಾಸ್ತವವಾಗಿ ಇಲ್ಲಿ ಕುರಿ ಸಾಂಕೇತಿಕವಾಗಿದ್ದು ನಮ್ಮ ಮನಸ್ಸಿನಲ್ಲಿರುವ ಲೋಭ, ಮತ್ಸರ, ಮೋಹ ಮೊದಲಾದವುಗಳನ್ನು ಬಲಿ ನೀಡಬೇಕೆಂಬುದೇ ಈ ಹಬ್ಬದ ಸೂಚನೆಯಾಗಿದೆ. ಇದನ್ನೇ ತ್ಯಾಗ ಅಥವಾ ಕುರ್ಬಾನಿ ಎಂದು ಕರೆಯಲಾಗುತ್ತದೆ.

ಆಡಿನ ಬದಲಿಗೆ ಕೋಳಿಯನ್ನು ಯಾಕೆ ಬಲಿ ನೀಡಲ್ಲ?

ಆಡಿನ ಬದಲಿಗೆ ಕೋಳಿಯನ್ನು ಯಾಕೆ ಬಲಿ ನೀಡಲ್ಲ?

ಆಡು, ಕುರಿಗಳನ್ನು ಬಲಿ ನೀಡಬಹುದು. ಕೋಳಿ ಅಥವಾ ಆಸ್ಟ್ರಿಚ್ ನಂತಹ ಪಕ್ಷಿಗಳನ್ನು ಬಲಿ ನೀಡುವುದು ತಪ್ಪು. ಇದೊಂದು ಕಟ್ಟುಪಾಡು ಆಗಿರುವ ಕಾರಣದಿಂದ ಪ್ರತಿಯೊಂದು ಮುಸ್ಲಿಮರ ಮನೆಯಲ್ಲಿ ಬಲಿ ನೀಡಲಾಗುತ್ತದೆ. ಇದರಿಂದ ಪ್ರತಿಯೊಂದು ಮನೆಯಲ್ಲೂ ಮಾಂಸವಿರುವುದು. ಬಕ್ರೀದ್ ಸಮಯದಲ್ಲಿ ಕೋಳಿಮಾಂಸಕ್ಕೆ ಹೆಚ್ಚು ಮಹತ್ವ ನೀಡಲ್ಲ. ಯಾಕೆಂದರೆ ಬಕ್ರೀದ್ ವೇಳೆ ಕೋಳಿ ಮಾಂಸ ಸೇವಿಸುವುದು ಪಾಪವೆಂದು ಭಾವಿಸಲಾಗುತ್ತದೆ.

ಆಡಿನ ಬದಲಿಗೆ ಕೋಳಿಯನ್ನು ಯಾಕೆ ಬಲಿ ನೀಡಲ್ಲ?

ಆಡಿನ ಬದಲಿಗೆ ಕೋಳಿಯನ್ನು ಯಾಕೆ ಬಲಿ ನೀಡಲ್ಲ?

ಅಲ್ಲಾಹುವಿನ ಹೆಸರಿನಲ್ಲಿ ಬಲಿ ನೀಡುವ ಕಾರಣದಿಂದಾಗಿ ಮಾಂಸವು ವ್ಯರ್ಥವಾಗಬಾರದು ಎನ್ನಲಾಗುತ್ತದೆ. ಇದರಿಂದ ಕೋಳಿಗೆ ಪ್ರಾಮುಖ್ಯತೆ ಇಲ್ಲ. ಕೋಳಿ ಬಲಿ ನೀಡದೆ ಇರುವ ಕಾರಣದಿಂದಾಗಿ ಇದರ ಬೇಡಿಕೆ ಕೂಡ ಕಡಿಮೆ. ಬಕ್ರೀದ್ ವೇಳೆ ರುಚಿರುಚಿಯಾದ, ಘಮಘಮವೆನ್ನುವ ಮಾಂಸದ ಅಡುಗೆಗಳು ತಯಾರಾಗುತ್ತದೆ. ಇದನ್ನು ಈ ದಿನ ಆನಂದಿಸಿ, ಕೋಳಿ ಮಾಂಸ ವರ್ಷಪೂರ್ತಿ ತಿನ್ನಬಹುದು... ಏನಂತೀರಾ?

ಬಕ್ರೀದ್ ಗೆ 7 ನಾನ್ ವೆಜ್ ಸ್ಪೆಷೆಲ್ ಅಡುಗೆ

English summary

During Bakrid festival Why Chicken Is Not Eaten

Bakrid is around the corner; and you may be coaxing your Muslim friends for a treat of some yummy mutton Biryani, isn't it? Bakrid is celebrated by Muslims all over the world. It is a celebrated in the memory of Prophet Abraham who was willing to sacrifice his own son on the command of Allah. As the prophet was readying his son for the sacrifice, his son was replaced by a goat at the last moment. Hence, the tradition to sacrifice a goat started. Men and women dress up in new clothes and greet each other. Special Namaz is done and people pray for the well-being and prosperity of their family members.
X
Desktop Bottom Promotion