For Quick Alerts
ALLOW NOTIFICATIONS  
For Daily Alerts

ಸೂರ್ಯ ಗ್ರಹಣ 2023 : ಈ ದಿನ ಈ ತಪ್ಪುಗಳನ್ನು ಮಾಡಲೇಬೇಡಿ !

|

ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್‌ 20 ರಂದು ಸಂಭವಿಸಲಿದೆ. ಮೊದಲ ಸೂರ್ಯಗ್ರಹಣವಾದ ಕಾರಣ ಎಲ್ಲರಲ್ಲೂ ಕೊಂಚ ಭಯ ಇದ್ದೇ ಇದೆ. ಈ ಸಮಯದಲ್ಲಿ ಕೆಲವೊಂದು ಪದ್ಧತಿಗಳನ್ನು ನಾವು ಪಾಲನೆ ಮಾಡಬೇಕು. ಪ್ರತಿ ದಿನ ಇದ್ದ ಹಾಗೇ ಸೂರ್ಯಗ್ರಹಣದ ದಿನ ಇರೋದಿಕ್ಕಾಗೋದಿಲ್ಲ. ಹಾಗಾದ್ರೆ ಸೂರ್ಯ ಗ್ರಹಣದ ದಿನ ಏನು ಮಾಡಬೇಕು? ಮಾಡಬಾರದು ಅನ್ನೋದನ್ನು ತಿಳಿಯೋಣ.

Dos and Donts On A Solar Eclipse Day

ಗ್ರಹಣ ಎನ್ನುವುದು ಖಗೋಳದಲ್ಲಿ ನಡೆಯುವ ಒಂದು ಪ್ರಕ್ರಿಯೆ. ಗ್ರಹಗಳ ನಡುವೆ ಸಂಭವಿಸುವ ಈ ವಿದ್ಯಮಾನಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಗ್ರಹಣದ ಉಂಟಾಗುವುದು ಒಂದು ಬಗೆಯ ಕಷ್ಟದ ಸಂಕೇತ. ಪರಿಸರ ಹಾಗೂ ವಾತಾವರಣವು ಗ್ರಹಣದ ಕಾಲದಲ್ಲಿ ವಿಷಮಯವಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗಾಗಿ ಗ್ರಹಣದ ಕಾಲದಲ್ಲಿ ಧಾನ, ದೇವರ ಸ್ಮರಣೆ, ಉಪವಾಸಗಳನ್ನು ಕೈಗೊಳ್ಳಲಾಗುವುದು. ವಿರಳವಾಗಿ ಕಾಣಿಸಿಕೊಳ್ಳುವ ಈ ಗ್ರಹಣದ ಸಮಯದಲ್ಲಿ ಜನರು ಸೂಕ್ತ ರೀತಿಯ ನೇಮ-ನಿಷ್ಠೆಯನ್ನು ಮಾಡಬೇಕು. ಆಗಲೇ ಉತ್ತಮ ಪ್ರತಿಫಲ ದೊರೆಯುವುದು ಎನ್ನಲಾಗುತ್ತದೆ.

ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ವಿದ್ಯಮಾನ ನಡೆದಾಗ ಸ್ವಲ್ಪ ಸಮಯ ಸೂರ್ಯನ ಬೆಳಕು ನಿರ್ಬಂಧಿಸಲ್ಪಡುತ್ತವೆ. ಸೂರ್ಯ ಗ್ರಹಣವನ್ನು ಮುಖ್ಯವಾಗಿ ನಾಲ್ಕು ವಿಧಗಳಲ್ಲಿ ವಿಂಗಡಿಸಲಾಗಿದೆ. 1. ಒಟ್ಟು ಗ್ರಹಣ, 2. ವಾಯುವ್ಯ ಗ್ರಹಣ, 3. ಖಗ್ರಾಸ್ ಸೂರ್ಯ ಗ್ರಹಣ, 4. ಭಾಗಶಃ ಗ್ರಹಣ.

ಗ್ರಹಣದ ಸಂದರ್ಭದಲ್ಲಿ ನಾವು ಯಾವ ಬಗೆಯಲ್ಲಿ ಮಾನಸಿಕ ಸಿದ್ಧತೆ ಮಾಡಬೇಕು? ನಮ್ಮ ಆಚಾರ-ವಿಚಾರ ಹೇಗಿರಬೇಕು? ಗ್ರಹಣದಲ್ಲಿನ ವಿಧಗಳು ಏನು? ಇದಕ್ಕೆ ಇರುವ ಪುರಾಣ ಹಿನ್ನೆಲೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಇನ್ನಷ್ಟು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ.

ಸೂರ್ಯ ಗ್ರಹಣದ ವಿಧಗಳು:

*ಸೂರ್ಯನು ಚಂದ್ರನಿಂದ ಬಹುತೇಕವಾಗಿ ನಿರ್ಬಂಧಿಸಲ್ಪಟ್ಟಾಗ ಕರೋನಾದ ಪ್ರಕಾಶಮಾನವಾದ ಬಾಹ್ಯ ರೇಖೆಗಳು ಗೋಚರಿಸುತ್ತವೆ. ಆಗ ಅದನ್ನು ಒಟ್ಟು ಗ್ರಹಣ ಎಂದು ಕರೆಯಲಾಗುತ್ತದೆ.
*ಸೂರ್ಯನ ಮೇಲೆ ಚಂದ್ರನು ಅಡ್ಡಬಂದಿರುವಂತೆ ಕಾಣಿಸಿಕೊಂಡಾಗ ಸೂರ್ಯನ ಕೇಂದ್ರದಲ್ಲಿ ಒಂದು ಕಪ್ಪು ಚುಕ್ಕೆ ಇದ್ದಂತೆ ತೋರುತ್ತದೆ. ಕರೋನದ ಗಣನೀಯವಾದ ನೆರಳು ಇತರೆಡೆ ಗೋಚರಿಸುತ್ತದೆ. ಇದನ್ನು ವಕ್ರ ಗ್ರಹಣ ಎಂದು ಕರೆಯಲಾಗುವುದು.
*ಸೂರ್ಯನ ಬೆಳಕನ್ನು ಚಂದ್ರನು ಸಂಪೂರ್ಣವಾಗಿ ನಿರ್ಬಂಧಿಸಿದಂತೆ ಗೋಚರವಾದರೆ ಅದನ್ನು ಖಗ್ರಾಸ್ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ.
*ಚಂದ್ರನ ಒಂದು ಭಾಗದಿಂದ ಸೂರ್ಯ ನಿರ್ಬಂಧಿಸಿದಂತೆ ಗೋಚರವಾದರೆ ಅದನ್ನು ಭಾಗಶಃ ಸೂರ್ಯ ಗ್ರಹಣ ಎಂದು ಕರೆಯಲಾಗುವುದು. ಈ ಬಗೆಯ ಗ್ರಹಣ ಉಂಟಾದಾಗ ಸೂರ್ಯ ಮತ್ತು ಚಂದ್ರ ಸಂಪೂರ್ಣವಾಗಿ ಒಂದೇ ಸಾಲಿನಲ್ಲಿ ಬಂದಿರುವುದಿಲ್ಲ. ಚಂದ್ರನ ಭಾಗಶಃ ಮಾತ್ರ ಸೂರ್ಯನನ್ನು ನಿರ್ಬಂಧಿಸಿರುತ್ತದೆ.

ಐತಿಹಾಸಿಕ ಹಿನ್ನೆಲೆ:

ಐತಿಹಾಸಿಕ ಗ್ರಂಥಗಳಲ್ಲಿ ಸೂರ್ಯ ಗ್ರಹಣವನ್ನು ದುರಾದುಷ್ಟಕರವಾದ ಸಂಗತಿ ಎಂದು ವಿವರಿಸಲಾಗಿದೆ. ಗ್ರಹಣ ಸಂಭವಿಸುತ್ತದೆ ಎಂದರೆ ಏನಾದರೂ ಕೆಡುಕು ಉಂಟಾಗುವುದು ಎನ್ನುವ ವಿಚಾರವನ್ನು ಒಳಗೊಂಡಿದೆ. ಸೂರ್ಯ ಗ್ರಹಣ ನಡೆದರೆ ಸಾಕಷ್ಟು ಅಹಿತಕರ ಘಟನೆ ಉಂಟಾಗುವುದು ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ಸಹ ಒಳಗೊಂಡಿದೆ.

ಮಹಾಭಾರತದಲ್ಲಿ ಪಾಂಡವರು ಕೌರವರ ಜೊತೆ ಜೂಜಾಟ ಆಡಿ ಸೋತಿರುವುದು ಸೂರ್ಯಗ್ರಹಣದ ದಿನದಂದೆ ಎಂದು ಹೇಳಲಾಗುತ್ತದೆ. ಅಲ್ಲದೆ ಪಾಂಡವರ ರಾಜಕುಮಾರನಾದ ಅರ್ಜುನನು ಕೌರವರ ಮುಖಂಡನನ್ನು ಕೊಂದಿದ್ದು ಸಹ ಸೂರ್ಯ ಗ್ರಹಣದಂದೆ. ಭಗವಾನ್ ಶ್ರೀಕೃಷ್ಣನು ತನ್ನ ರಾಜ್ಯವಾದ ದ್ವಾರಕಾವನ್ನು ಕಳೆದುಕೊಂಡಿದ್ದು ಅಥವಾ ಮುಳುಗಿದ್ದು ಸೂರ್ಯ ಗ್ರಹಣದ ದಿನದಂದೆ ಎಂದು ಹೇಳಲಾಗುತ್ತದೆ.

ಪುರಾತನ ಕಾಲದಿಂದಲೂ ಸೂರ್ಯನನ್ನು ತಂದೆ-ತಾಯಿಗೆ ಸಮಾನವಾದ ದೇವರು ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಪ್ರಕೃತಿಗೆ ಸೂರ್ಯನನ್ನು ರಾಜ ಎಂದು ಸಹ ಹೇಳಲಾಗುವುದು. ಹಾಗಾಗಿ ಸೂರ್ಯನ ಪಥದಲ್ಲಿ ಅಡಚಣೆ ಉಂಟಾದರೆ ಅದು ಅರಸನಿಗೆ ಅಡ್ಡಿ ಅಥವಾ ಅಡಚಣೆ ಉಂಟುಮಾಡಿದಂತೆ ಎನ್ನಲಾಗುವುದು.

ಗ್ರಹಣದ ಇತಿಹಾಸ:

ಒಂದು ಕಥೆಯ ಪ್ರಕಾರ... "ರಾಹು ಎನ್ನುವ ಆಕಾಶ ಕಾಯವು ಸೂರ್ಯನ ಪಥವನ್ನು ನಿರ್ಬಂಧಿಸಿತ್ತು. ಈ ಮಹಾಕಾಯ ಸೂರ್ಯನ ಕಿರಣವನ್ನು ನಿರ್ಬಂಧಿಸಿರುವುದರ ಪರಿಣಾಮವಾಗಿ ಎಲ್ಲೆಡೆಯೂ ಕತ್ತಲು ಸಂಭವಿಸಿತು. ಆಗ ಮಹಾ ಋಷಿಯಾದ ಅತ್ರಿಯು ತನ್ನ ದಿವ್ಯ ಶಕ್ತಿಯಿಂದ ಸೂರ್ಯನ ಪಥದಲ್ಲಿ ಅಡ್ಡವಾಗಿ ನಿಂತ ರಾಹುವನ್ನು ತೆಗೆದು, ಸೂರ್ಯನ ಬೆಳಕು ಎಲ್ಲೆಡೆ ಹರಡುವಂತೆ ಮಾಡಿದನು" ಎಂದು ಹೇಳಲಾಗುತ್ತದೆ. ಈ ಘಟನೆಯನ್ನು ಸೂರ್ಯನ ಮೊದಲ ಗ್ರಹಣ ಎಂದು ಗುರುತಿಸಲಾಯಿತು.

ಸೂರ್ಯ ಗ್ರಹಣದಂದು ಏನು ಮಾಡಬೇಕು? ಏನು ಮಾಡಬಾರದು?

ಗ್ರಹಣವು ಒಂದು ವಿಶೇಷ ಘಟನೆಯಾಗಿರುವುದರಿಂದ ಇಂತಹ ಸಮಯದಲ್ಲಿ ಕೆಲವು ಮಂಗಳಕರ ಕೆಲಸವನ್ನು ಕೈಗೊಳ್ಳಬೇಕಾಗುವುದು. ಜೊತೆಗೆ ಒಂದಿಷ್ಟು ಕೆಲಸ ಅಥವಾ ವಿಷಯಗಳಿಂದ ಸಾಕಷ್ಟು ದೂರ ಸರಿಯ ಬೇಕು.

* ಸೂರ್ಯ ದೇವನು ಸೃಷ್ಟಿಗೆ ಶಕ್ತಿಯನ್ನು ನೀಡುವ ದೇವ. ಇವನು ಶಕ್ತಿ, ಆತ್ಮವಿಶ್ವಾಸ, ಸಾಮಾಜಿಕ ಗೌರವ ಹಾಗೂ ಯಶಸ್ಸನ್ನು ತಂದುಕೊಡುವನು. ಸೂರ್ಯ ಗ್ರಹಣದ ಸಮಯದಲ್ಲಿ ಸೂರ್ಯನ ಮಂತ್ರವನ್ನು ಪಠಿಸುವುದರಿಂದ ಒಳ್ಳೆಯ ಅದೃಷ್ಟ ಹಾಗೂ ಸಂತೋಷ ಲಭಿಸುವುದು. ಈ ಸಮಯವು ಧ್ಯಾನಕ್ಕೂ ಉತ್ತಮವಾದದ್ದು ಎಂದು ಹೇಳಲಾಗುತ್ತದೆ.

* ಸೂರ್ಯನ ಗ್ರಹಣದ ಸಮಯವನ್ನು ಪವಿತ್ರ ಗ್ರಂಥಗಳಲ್ಲಿ ಸೂತಕ ಎಂದು ಕರೆಯಲಾಗುತ್ತದೆ. ಸೂತಕ ಎನ್ನುವುದು ದುರಾದೃಷ್ಟದ ಸಮಯವನ್ನು ಸೂಚಿಸುತ್ತದೆ. ಹಾಗಾಗಿ ಈ ದಿನದಂದು ದೇವರು ಅಥವಾ ವಿಗ್ರಹದ ಪೂಜೆಯನ್ನು ಮಾಡಬಾರದು.

* ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು. ಸೂರ್ಯನ ಹಾನಿಕಾರಕ ಕಿರಣಗಳು ಮಹಿಳೆಯ ಭ್ರೂಣದ ಮೇಲೆ ಪ್ರಭಾವ ಬೀರುವುದು. ಚರ್ಮದ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುತ್ತದೆ.

*ಗ್ರಹಣದ ಸಮಯದಲ್ಲಿ ಬೆಳಕಿಗೆ ತೆರೆದಿದ್ದ ಹಣ್ಣು-ಹಂಪಲುಗಳನ್ನು ಸಹ ಸೇವಿಸಬಾರದು. ವೈಜ್ಞಾನಿಕವಾಗಿ ಸೂರ್ಯನ ಹಾನಿಕಾರಕ ಕಿರಣವು ಇವುಗಳ ಮೇಲೆ ಬಿದ್ದಿರುತ್ತವೆ.

* ಅಲ್ಯೂಮಿನಿಯಂ, ಉಕ್ಕು, ಕಬ್ಬಿಣ, ಸೇರಿದಂತೆ ಇನ್ನಿತರ ಲೋಹಗಳು ಗ್ರಹಣದ ಕಾಲದ ಸೂರ್ಯನ ಕಿರಣಗಳಿಂದ ಪ್ರಭಾವಿತವಾಗುತ್ತವೆ. ಹಾಗಾಗಿ ಈ ಸಂದರ್ಭದಲ್ಲಿ ಚಾಕು, ಮೊನಚಾದ ವಸ್ತು ಸೇರಿದಂತೆ ಇನ್ನಿತರ ಲೋಹದ ಆಯುಧಗಳನ್ನು ಬಳಸಬಾರದು.

* ಗ್ರಹಣದ ಸಮಯದಲ್ಲಿ ಸೂರ್ಯನ ಕಿರಣವು ದುಃಖಕರ ಮತ್ತು ಹಾನಿಕಾರಕ ಎಂದು ಪರಿಗಣಿಸಲಾಗಿದೆ. ಈ ಸಮಯಾದಲ್ಲಿ ಆಹಾರ ತಯಾರಿಸುವುದು ಮತ್ತು ಅದನ್ನು ಸೇವಿಸುವುದನ್ನು ನಿರಾಕರಿಸಲಾಗಿದೆ. ಈ ವೇಳೆಯಲ್ಲಿ ಎಲ್ಲಾ ವಸ್ತು ಕಲುಶಿತವಾಗಿರುತ್ತವೆ. ಅವುಗಳನ್ನು ಸೇವಿಸಿದರೆ ಅನಾರೋಗ್ಯ ಉಂಟಾಗುವುದು.

* ಈ ಸಮಯದಲ್ಲಿ ಮಲಗಬಾರದು.

* ಈ ಸಮಯದಲ್ಲಿ ತುಳಸಿ ಗಿಡ ಮತ್ತು ಶಮಿ ಗಿಡವನ್ನು ಮುಟ್ಟಬಾರದು.

ಗ್ರಹಣದ ನಂತರ ಕೈಗೊಳ್ಳಬೇಕಾದ ಕೆಲಸ:

* ಸೂರ್ಯ ಗ್ರಹಣದ ನಂತರ ಸ್ನಾನ ಮಾಡುವುದನ್ನು ಮರೆಯದಿರಿ.
* ಗ್ರಹಣದ ನಂತರ ತುಳಸಿ ನೀರು, ಶಮಿ ನೀರು ಅಥವಾ ಗೋ ಮೂತ್ರವನ್ನು ಸಿಂಪಡಿಸಲು ಮರೆಯದಿರಿ.
* ಗ್ರಹಣದ ನಂತರ ದಾನ ಮಾಡಿದರೆ ಅತ್ಯುತ್ತಮವಾದದ್ದು. ಹಾಗಾಗಿ ದಾನ ಮಾಡಬೇಕು ಎಂದು ಸಲಹೆ ನೀಡಲಾಗುತ್ತದೆ.

ಸೂರ್ಯ ಗ್ರಹಣದ ಸಮಯದಲ್ಲಿ ಹೇಳಬಹುದಾದ ಮಂತ್ರಗಳು:

* ಸೂರ್ಯನ ಮಂತ್ರಗಳನ್ನು ಪಠಿಸಬೇಕು.
* ಗಾಯತ್ರಿ ಮಂತ್ರವನ್ನು ಸಹ ಪಠಿಸಲು ಶಿಫಾರಸು ಮಾಡಲಾಗುವುದು.
* ಮಹಾಮೃತ್ಯುಂಜಯ ಮಂತ್ರಗಳನ್ನು ಸಹ ಗ್ರಹಣದ ಸಂದರ್ಭದಲ್ಲಿ ಓದಬಹುದು.

English summary

Dos and Don'ts On A Solar Eclipse Day

A solar eclipse occurs when the moon lies between the sun and the earth. It blocks the light of the sun for some time. A solar eclipse is mainly of four types: a total eclipse, an annular eclipse, a hybrid eclipse and a partial eclipse. This year, on July 13, we will see a partial solar eclipse. It will remain for the period from 7.18 to 9:44 am.
X
Desktop Bottom Promotion