For Quick Alerts
ALLOW NOTIFICATIONS  
For Daily Alerts

ಭಗವಾನ್ ಶ್ರೀಕೃಷ್ಣ ಪ್ರತಿ ದಿನ ರಾತ್ರಿ ಈ ವನಕ್ಕೆ ಬರುತ್ತಾನಂತೆ!!

|

ಶ್ರೀ ಕೃಷ್ಣ ಪರಮಾತ್ಮನ ಅನೇಕ ಕಥೆಗಳನ್ನು ನಾವು ಬಾಲ್ಯದಿಂದಲೂ ಕೇಳಿಕೊಂಡು ಬೆಳೆದು ಬಂದಿದ್ದೇವೆ. ಕೃಷ್ಣನ ಬಾಲ್ಯದ ತುಂಟಾಟಗಳು, ಅವುಗಳೊಂದಿಗೆ ದುಷ್ಟ ಶಕ್ತಿಗಳ ವಧೆ, ಬೆಣ್ಣೆ ಕದಿಯುವುದು, ಗೋಪಿಕೆಯರನ್ನು ಕೆರಳಿಸುವುದು, ತನ್ನ ಮುಗ್ಧ ನೋಟದಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುವ ತುಂಟತನದ ಮಗು ಎಂದು ಚಿತ್ರಿಸಲಾಗಿದೆ.

ಅಲ್ಲದೆ ಕೃಷ್ಣನ ಕೊಳಲು ನಾದವು ಪ್ರಾಣಿ ಪಕ್ಷಿಗಳಿಂದ ಹಿಡಿದು ಗ್ರಾಮಸ್ಥರು ಹಾಗೂ ಗೋಪಿಕೆಯರು ಬಲು ಇಷ್ಟಪಡುತ್ತಿದ್ದರು ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಕೃಷ್ಣನು ರಾಸಲೀಲೆಯ ಕಥೆಗಳನ್ನು ಹೊಂದಿದ್ದಾನೆ. ಅದು ಬಹಳ ಆಕರ್ಷಕವಾಗಿದ್ದವು ಎಂದು ಹೇಳುವರು. ನಿಮಗೆ ಈ ವಿಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ಮುಂದೆ ವಿವರಿಸಿರುವ ವಿಶೇಷ ಸಂಗತಿಯನ್ನು ಅರಿಯಿರಿ.

ನಿಧಿವನ

ನಿಧಿವನ

ನಿಧಿವನ ಒಂದು ಉತ್ತಮ ಉದಾಹರಣೆ: ಇದು ವೃಂದಾವನದ ಆವೃತ್ತದಲ್ಲಿ ಬರುವ ಒಂದು ದಟ್ಟ ಪೊದೆಗಳಿಂದ ಕೂಡಿರುವ ಅರಣ್ಯ ಪ್ರದೇಶ ಎಂದು ಹೇಳಲಾಗುವುದು. ಇದು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ತಾಣವೂ ಹೌದು. ಇಲ್ಲಿ ಕೃಷ್ಣನು ಗೋಪಿಕೆಯರೊಂದಿಗೆ ಆಹಾರವನ್ನು ಸ್ವೀಕರಿಸುತ್ತಿದ್ದ ಎಂದು ಹೇಳಲಾಗುತ್ತದೆ. ಅಲ್ಲದೆ ರಾಧಾ ಮತ್ತು ಇತರ ಗೋಪಿಕೆಯರೊಂದಿಗೆ ರಾಸ ಲೀಲೆಯನ್ನು ನಡೆಸುತ್ತಿದ್ದ ಎಂದು ಹೇಳಲಾಗುವುದು. ಈ ಕಾರಣದಿಂದಲೇ ಸಂಜೆಯ ಆರತಿಯ ಸಮಯದ ನಂತರ ನಿಧಿವನವನ್ನು ಮುಚ್ಚಲಾಗುತ್ತದೆ.

Most Read: ಅಡುಗೆಮನೆಯ ಪುಟ್ಟ 'ಬೆಳ್ಳುಳ್ಳಿ'ಯ ಪವರ್‌ಗೆ ಬೆರಗಾಗಲೇಬೇಕು!

ಮಥುರಾ ನಗರ

ಮಥುರಾ ನಗರ

ಮಥುರಾವನ್ನು ದೈವಿಕ ಪ್ರೀತಿಯ ನಗರ ಮತ್ತು ಕೃಷ್ಣ ಹುಟ್ಟಿದ ಸ್ಥಳವೆಂದು ಕರೆಯಲಾಗುತ್ತದೆ. ಮಥುರಾ ಒಂದು ಐತಿಹಾಸಿಕ ನಗರವಲ್ಲ. ಆದರೆ ಕೃಷ್ಣ ಪರಮಾತ್ಮನ ಜೀವನಕ್ಕೆ ಸಂಬಂಧಿಸಿದ ಹಲವಾರು ಆಧ್ಯಾತ್ಮಿಕ ಹಿನ್ನೆಲೆಯ ಮೂಲಕ ಸಂಬಂಧವನ್ನು ಪಡೆದುಕೊಂಡಿದೆ. ವೃಂದಾವನ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇಲ್ಲಿಯ ಒಂದು ಕಲ್ಲಿನಲ್ಲಿ ಬರೆದ ಶಾಸನದ ಪ್ರಕಾರ ಸ್ವಾನ್ ಹರಿದಾಸ್ ಎನ್ನುವವರು ಕೃಷ್ಣನ ಭಕ್ತರಾಗಿದ್ದರು. ಇವರು ತಾನ್‍ಸೆನ್ ಸಂಗೀತವನ್ನು ಕಲಿಸುವ ಸಂಗೀತಗಾರರಾಗಿದ್ದರು. ಅದೇ ಶಾಸನವು ಕೃಷ್ಣನ ರಾಸ ಲೀಲೆಯ ಬಗ್ಗೆಯೂ ಹೇಳುತ್ತದೆ.

ಕೃಷ್ಣನ ರಾಸ ಲೀಲೆಯ ಕಥೆಗಳು

ಕೃಷ್ಣನ ರಾಸ ಲೀಲೆಯ ಕಥೆಗಳು

ಕೃಷ್ಣನ ರಾಸ ಲೀಲೆಯ ಹಲವಾರು ಕಥೆಗಳು ಪುಸ್ತಕಗಳಲ್ಲಿ ವರ್ಣಿಸಲ್ಪಟ್ಟಿದೆ. ಅಲ್ಲದೆ ಜನಪದ ಕಥೆಗಳಲ್ಲಿ ಜನಪ್ರಿಯವಾದ ಕಥೆಗಳಾಗಿರುವುದನ್ನು ಕಾಣಬಹುದು. ಕೃಷ್ಣ ಪರಮಾತ್ಮನು ರಾಧೆ ಮತ್ತು ಇತರ ಗೋಪಿಕೆಯರೊಂದಿಗೆ ನೃತ್ಯವನ್ನು ಮಾಡುತ್ತಿದ್ದನು. ಅದನ್ನು ಕಾನ್ಹಾ ನೃತ್ಯ ಎಂದು ಕರೆಯಲಾಗುವುದು. ಕೃಷ್ಣನು ತನ್ನ ಕೊಳಲನ್ನು ನುಡಿಸಿದಾಗ ವೃಂದಾವನವು ಸಂಪೂರ್ಣವಾಗಿ ಆಹ್ಲಾದಕರ ವೈಭವಗಳಿಂದ ಕೂಡಿರುತ್ತಿತ್ತು ಎನ್ನಲಾಗುವುದು.

ದಂತ ಕಥೆಯ ಪ್ರಕಾರ...

ದಂತ ಕಥೆಯ ಪ್ರಕಾರ...

ನಿಧಿವನ ದೇವಸ್ಥಾನದಲ್ಲಿ ಸ್ಥಳೀಯರು ಕೃಷ್ಣನನ್ನು ಠಾಕೂರ್ ಜೀ ಎಂದು ಸಹ ಕರೆಯುತ್ತಿದ್ದರು. ಅಲ್ಲಿ ರಾತ್ರಿಯ ವೇಳೆ ಆಗಮಿಸುತ್ತಾರೆ. ಅಲ್ಲದೆ ಆಧ್ಯಾತ್ಮಿಕ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತದೆ. ಇದನ್ನು ರಾಧೆ ಮತ್ತು ಇತರ ಗೋಪಿಕೆಯರೊಂದಿಗೆ ನಡೆಸುವ ರಾಸಲೀಲೆ ಎಂದು ಕರೆಯುತ್ತಾರೆ. ಆದರೆ ಇದನ್ನು ಯಾವುದೇ ವ್ಯಕ್ತಿ ನೋಡಲಿಲ್ಲ ಎಂದು ಸಹ ಹೇಳಲಾಗುವುದು. ಸಾಮಾನ್ಯವಾಗಿ ನಾವು ನೋಡುವ ಮರ ಗಿಡಗಳಲ್ಲಿ ಕಾಂಡ, ಕೊಂಬೆ, ಎಲೆಗಳು ಇರುತ್ತವೆ. ಮರದ ಬೇರುಗಳು ಭೂಮಿಯ ಆಳದಲ್ಲಿ ಹೂತಿರುತ್ತವೆ. ಆದರೆ ನಿಧಿವನದಲ್ಲಿರುವ ಮರಗಳ ಬೇರುಗಳು ಮೇಲ್ಮುಖವಾಗಿರುತ್ತವೆ. ಕೊಂಬೆಗಳು ಭೂಮಿಗೆ ಮುಖವಾಗಿ ಭಾಗಿರುವುದನ್ನು ಕಾಣಬಹುದು.

Most Read: ಮುಖದ ಸೌಂದರ್ಯ ಹೆಚ್ಚಿಸಲು ಬಳಸಿ 'ಹಾಲಿನ ಫೇಸ್ ಪ್ಯಾಕ್'

ಕೃಷ್ಣ ಮತ್ತು ರಾಧೆಯ ವಿಗ್ರಹ

ಕೃಷ್ಣ ಮತ್ತು ರಾಧೆಯ ವಿಗ್ರಹ

ಇಲ್ಲಿರುವ ದೇವಾಲಯವು ಸುಂದರವಾದ ಹಾಗೂ ಶಾಂತ ಚಿತ್ರವನ್ನು ಪ್ರತಿನಿಧಿಸುವ ಕೃಷ್ಣ ಮತ್ತು ರಾಧೆಯ ವಿಗ್ರಹಗಳನ್ನು ನೋಡಬಹುದು. ಈ ದೇವಾಲಯವು ಪ್ರತಿದಿನ 5 ಗಂಟೆಗೆ ಮುಚ್ಚಲಾಗುವುದು. ನಂತರದ ಸಮಯದಲ್ಲಿ ಅಂದರೆ ರಾತ್ರಿಯ ವೇಳೆ ಕೃಷ್ಣ ಪರಮಾತ್ಮನು ರಾಸ ಲೀಲೆಗೆ ಈ ಅರಣ್ಯಕ್ಕೆ ಬರುತ್ತಾನೆ ಎನ್ನುವ ನಂಬಿಕೆಯನ್ನು ಹೊಂದಿದೆ.

ಚೋರ್ ರಾಧಾ ರಾಣಿ ದೇವಾಲಯ

ಚೋರ್ ರಾಧಾ ರಾಣಿ ದೇವಾಲಯ

ಈ ನಿಧಿವನದಲ್ಲಿ ಚೋರ್ ರಾಧಾ ರಾಣಿ ದೇವಾಲಯ ಇರುವುದನ್ನು ಕಾಣಬಹುದು. ಇಲ್ಲಿಯ ಜನರು ಹೇಳುವ ಪ್ರಕಾರ ಕೃಷ್ಣ ಕೊಳಲನ್ನು ನುಡಿಸುವಾಗ ರಾಧೆಯ ಕಡೆಗೆ ಹೆಚ್ಚು ಗಮನವನ್ನು ನೀಡುತ್ತಿರಲಿಲ್ಲ. ಇದನ್ನು ತಿಳಿದ ರಾಧೆ ಕೃಷ್ಣನ ಕೊಳಲನ್ನು ದೇವಸ್ಥಾನದಲ್ಲಿ ಬಚ್ಚಿಟ್ಟಿದ್ದಳು ಎನ್ನಲಾಗುವುದು. ಹಾಗಾಗಿಯೇ ಗೋಪಿ ಲಲಿತ ವಿಗ್ರಹವನ್ನು ರಾಧೆಗೆ ಹೋಲಿಸಿ ಪೂಜಿಸಲಾಗುವುದು.

ಸೂರ್ಯಾಸ್ತದ ನಂತರ ದೇವಾಲಯ ಮುಚ್ಚಲಾಗುವುದು

ಸೂರ್ಯಾಸ್ತದ ನಂತರ ದೇವಾಲಯ ಮುಚ್ಚಲಾಗುವುದು

ಸೂರ್ಯಾಸ್ತದ ನಂತರ ದೇವಾಲಯದ ಸಂಕೀರ್ಣವನ್ನು ಮುಚ್ಚಲಾಗುವುದು. ಹಾಗೆಯೇ ಯಾರೂ ಅಲ್ಲಿಗೆ ಹೋಗುವುದಿಲ್ಲ ಎಂದು ಹೇಳಾಗುವುದು. ಹಾಗೊಮ್ಮೆ ರಾತ್ರಿಯ ವೇಳೆ ಅಲ್ಲಿ ಉಳಿದುಕೊಂಡರೆ ದೃಷ್ಟಿ, ಶ್ರವಣ ಹಾಗೂ ಮಾತನಾಡುವ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಾರೆ. ಹತ್ತು ವರ್ಷಗಳ ಹಿಂದೆ ಕೃಷ್ಣನ ಭಕ್ತನೊಬ್ಬ ರಾಸ ಲೀಲೆಯನ್ನು ನೋಡಲು ವನದಲ್ಲಿ ಮರೆಯಾಗಿದ್ದನು. ಮರುದಿನ ಬಾಗಿಲನ್ನು ತೆಗೆಯುವಷ್ಟರಲ್ಲಿ ಪ್ರಜ್ಞಾ ಹೀನನಾಗಿ, ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದ ಎಂದು ಹೇಳಲಾಗುತ್ತದೆ.

ವಿಶಾಖಳ ಬಾಯಾರಿಕೆ

ವಿಶಾಖಳ ಬಾಯಾರಿಕೆ

ರಾಸ ಲೀಲೆಯ ಕಾಲದಲ್ಲಿ ವಿಶಾಖಾ ಎನ್ನುವ ಗೋಪಿಕೆಯು ಬಾಯಾರಿಕೆಯಿಂದ ಬಳಲಿದ್ದಳು. ಆಗ ಕೃಷ್ಣನು ತನ್ನ ಕೊಳಲಿನಿಂದ ಭೂಮಿಯಲ್ಲಿ ಒಂದು ರಂಧ್ರವನ್ನು ಮಾಡಿದ ಅದು ಆಗ ನೀರಿನಿಂದ ತುಂಬಿತ್ತು. ಆ ನೀರಿನಿಂದಲೇ ವಿಶಾಖಳ ಬಾಯಾರಿಕೆ ಇಂಗಿತು ಎನ್ನಲಾಗುತ್ತದೆ. ಈ ಕುಂಡವನ್ನು ವಿಶಾಖ ಕುಂಡ ಎಂದು ಕರೆಯಲಾಗುತ್ತದೆ.

ಇಲ್ಲಿಗೆ ಪ್ರತಿದಿನ ರಾಧೆ ಮತ್ತು ಕೃಷ್ಣನು ಬರುತ್ತಾರಂತೆ!!

ಇಲ್ಲಿಗೆ ಪ್ರತಿದಿನ ರಾಧೆ ಮತ್ತು ಕೃಷ್ಣನು ಬರುತ್ತಾರಂತೆ!!

ನಿಧಿವನದಲ್ಲಿ ರಂಗ ಮಹಲ್ ಇದೆ. ಇಲ್ಲಿಗೆ ಪ್ರತಿದಿನ ರಾಧೆ ಮತ್ತು ಕೃಷ್ಣನು ಬರುತ್ತಾರೆ. ರಂಗ ಮಹಲ್ ಅಲ್ಲಿ ರಾಧೆ ಕೃಷ್ಣನಿಗಾಗಿ ಶ್ರೀಗಂಧದ ಹಾಸಿಗೆಯನ್ನು ಸಿದ್ಧಪಡಿಸಲಾಗುತ್ತದೆ. ಪ್ರತಿದಿನ 7 ಗಂಟೆಗೆ ಮುಂಚಿತವಾಗಿ ಅಲಂಕರಿಸಲಾಗುವುದು. ಹಾಸಿಗೆಯ ಬಳಿ ಕಮಲದ ನೀರನ್ನು ಇಡಲಾಗುವುದು.

Most Read: ಒಂದೇ ಒಂದು ರಸಗುಲ್ಲಾ ತಿಂದರೂ ಸಾಕು-ಆರೋಗ್ಯಕ್ಕೆ ಬಹಳ ಒಳ್ಳೆಯದು

ಇಲ್ಲಿ ತುಳಸಿ ಸಸ್ಯವನ್ನು ಯಾರೂ ಮುಟ್ಟುವುದಿಲ್ಲ

ಇಲ್ಲಿ ತುಳಸಿ ಸಸ್ಯವನ್ನು ಯಾರೂ ಮುಟ್ಟುವುದಿಲ್ಲ

ಅಲ್ಲದೆ ಇಲ್ಲಿ ಜೋಡಿಯಾದ ತುಳಸಿ ಗಿಡ ಇರುವುದನ್ನು ಕಾಣಬಹುದು. ಕೃಷ್ಣ ಪರಮಾತ್ಮನು ರಾಸ ಲೀಲೆ ನಡೆಸುವಾಗ ತುಳಸಿ ಗಿಡಗಳು ಗೋಪಿಕೆಯರಾಗಿ ಬದಲಾಗುತ್ತಾರೆ ಎಂದು ಹೇಳಲಾಗುವುದು. ಹಾಗಾಗಿ ಈ ದೇವಸ್ಥಾನದ ಸಂಕೀರ್ಣದಲ್ಲಿ ಯಾರೂ ತುಳಸಿ ಎಲೆಯನ್ನು ಕೀಳುವುದು ಅಥವಾ ಎಸೆಯುವ ಕೆಲಸ ಮಾಡುವುದಿಲ್ಲ. ಹಾಗೆ ಮಾಡಿದರೆ ಅವರಿಗೆ ದುರಂತ ಸಂಭವಿಸುವುದು ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿಯೆ ಇಲ್ಲಿ ತುಳಸಿ ಸಸ್ಯವನ್ನು ಯಾರೂ ಮುಟ್ಟುವುದಿಲ್ಲ.

ಕೃಷ್ಣ ರಾತ್ರಿ ವೇಳೆಯಲ್ಲಿ ಈ ವನದಲ್ಲಿ ರಾಸ ಲೀಲೆ ನಡೆಸುತ್ತಾನೆಯೇ?

ಕೃಷ್ಣ ರಾತ್ರಿ ವೇಳೆಯಲ್ಲಿ ಈ ವನದಲ್ಲಿ ರಾಸ ಲೀಲೆ ನಡೆಸುತ್ತಾನೆಯೇ?

ಕೃಷ್ಣ ಪರಮಾತ್ಮನು ರಾತ್ರಿ ವೇಳೆಯಲ್ಲಿ ಈ ವನದಲ್ಲಿ ರಾಸ ಲೀಲೆ ನಡೆಸುತ್ತಾನೆಯೇ? ಎನ್ನುವುದು ಚರ್ಚಾ ವಿಷಯವಾಗಿರಬಹುದು. ಆದರೆ ಅದು ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಕೃಷ್ಣ ಪರಮಾತ್ಮನು ವಿಷ್ಣುವಿನ ಎಂಟನೇ ಅವತಾರ ಹಾಗೂ ಸರ್ವೋಚ್ಚ ದೇವನಾಗಿ ಪೂಜಿಸಲಾಗುತ್ತದೆ. ನಿಗೂಢತೆ ಏನೇ ಇರಲಿ. ದೈವ ಶಕ್ತಿಯಿಂದ ಮನುಷ್ಯನ ಕಲ್ಯಾಣ ವಾಗುತ್ತದೆ ಎನ್ನುವುದು ಪುಣ್ಯ ವಿಚಾರ. ಇದರಿಂದಲೇ ಮನುಷ್ಯನ ಏಳಿಗೆ ಎನ್ನುವುದನ್ನು ನೆನಪಿಡಬೇಕು.

English summary

Does Lord Krishna visit this place every night?

We've all heard tales of Lord Krishna since our childhood. His portrayal as a naughty kid - from stealing butter to teasing Gopis and giving innocent looks when caught red-handed - can melt anyone's heart. We've also heard about how his flute play would cast a spell on anyone specially the villagers and Gopis. We've also heard about his Raas-Leela. All this appears so fascinating. But what intrigues us more is the mysterious tales associated with Lord Krishna for centuries.
Story first published: Thursday, October 4, 2018, 17:15 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more