For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿ 2020: ಅಷ್ಟಮಿಯ ದಿನ ಹೀಗೆ ಮಾಡಿ ನೋಡಿ, ನಿಮ್ಮ ಬಯಕೆ ಈಡೇರುವುದು

By Divya Pandith
|

ಶ್ರಾವಣ ಮಾಸದ ಕೃಷ್ಣ ಪಕ್ಷ ಅಷ್ಟಮಿಯ ದಿನ "ಶ್ರೀಕೃಷ್ಣ ಜನ್ಮಾಷ್ಟಮಿ"ಯನ್ನು ಆಚರಿಸಲಾಗುತ್ತಿದ್ದು, ಈ ವರ್ಷ(2020) ಆಗಸ್ಟ್ 11ರಂದು ಆಚರಿಸಲಾಗುತ್ತದೆ. ಪರಮಾತ್ಮನಾದ ವಿಷ್ಣುವು, ಶ್ರೀಕೃಷ್ಣನ ರೂಪದಲ್ಲಿ ಮಾನವನ ಅವತಾರ ಎತ್ತಿರುವ ಮಹತ್ತರವಾದ ದಿನವಾಗಿದೆ. ವಿಷ್ಣುವಿನ ಎಂಟನೇ ಅವತಾರವಾವಿದ್ದು, ಈ ಅವತಾರದಲ್ಲಿ ಅತ್ಯಂತ ತಮಾಷೆ ಹಾಗೂ ಪ್ರೀತಿಯಿಂದ ದೇವನು ವರ್ತಿಸಿದ್ದಾನೆ ಎಂದು ಹೇಳಲಾಗುತ್ತದೆ.

ಕೃಷ್ಣ ಜನ್ಮಾಷ್ಟಮಿಯಂದು ಈ 6 ಸ್ಥಳಗಳಿಗೆ ಭೇಟಿ ನೀಡಿದರೆ ಕಷ್ಟ ನಿವಾರಣೆಯಾಗುವುದು

ಭಕ್ತ ವತ್ಸಲಾ ಎಂದು ಕರೆಸಿಕೊಳ್ಳುವ ಶ್ರೀಕೃಷ್ಣನು ತನ್ನ ಭಕ್ತರನ್ನು ಅಪಾರ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಭಕ್ತರಿಂದ ಸುಲಭವಾಗಿ ಸಂತೋಷಗೊಳ್ಳುತ್ತಿದ್ದ. ಉದಾರ ಪ್ರೀತಿಯನ್ನು ನೀಡುವ ಈ ಭಗವಂತನ ಭಕ್ತಿಗೆ ಶರಣಾದವರು ಪ್ರಪಂಚದಾದ್ಯಂತ ಇದ್ದಾರೆ. ಜನ್ಮಾಷ್ಟಮಿಯನ್ನು ಪ್ರಪಂಚದಾದ್ಯಂತ ಬಹಳ ಸಡಗರದಿಂದ ಆಚರಿಸಲಾಗುತ್ತದೆ.

ಜನ್ಮಾಷ್ಟಮಿ ವಿಶೇಷ: ತುಳಸಿ ಕಟ್ಟೆಯ ಎದುರು ತುಪ್ಪದ ದೀಪ ಬೆಳಗಿಸಿ

ಜನ್ಮಾಷ್ಟಮಿಯು ಬಹಳ ಮಹತ್ವ ಪೂರ್ಣ ಸಂದರ್ಭವಾಗಿದ್ದು, ಕಷ್ಟಗಳ ನಿವಾರಣೆಗೆ, ಶ್ರೀಕೃಷ್ಣನ ಮೊರೆ ಹೋಗಲು ಸೂಕ್ತ ದಿನ ಎಂದು ಭಾವಿಸಲಾಗುವುದು. ಜನ್ಮಾಷ್ಟಮಿಯ ದಿನ ಕೆಲವು ಸೂಕ್ತ ವಿಧಿ-ವಿಧಾನಗಳಿಂದ ಭಗವಂತನ ಕೃಪೆಗೆ ಒಳಗಾಗಬಹುದು. ಜೀವನದಲ್ಲಿ ಅತ್ಯಂತ ಸಂತೋಷಕರ ಸಂದರ್ಭವನ್ನು ಅನುಭವಿಸಬಹುದು. ಹಾಗಾದರೆ ಆ ವಿಧಿ-ವಿಧಾನಗಳು ಯಾವುದೆಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ ಬನ್ನಿ...

ಸಮೃದ್ಧಿಗಾಗಿ

ಸಮೃದ್ಧಿಗಾಗಿ

ವೇತನದಲ್ಲಿ ಹೆಚ್ಚಳ ಆಗದೇ ಇರುವುದು, ನಿರೀಕ್ಷಿತ ಪ್ರಚಾರ ಸಿಗದಿದ್ದರೆ, ಮನೆಯಲ್ಲಿ ಆರ್ಥಿಕ ಸಮಸ್ಯೆ ತಲೆ ದೂರಿದ್ದರೆ, ಕೆಲಸದಲ್ಲಿ ಅಭಿವೃದ್ಧಿಕಾಣದಿದ್ದರೆ ಹೀಗೆ ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ ಜನ್ಮಾಷ್ಟಮಿಯ ದಿನ ಈ ವಿಧಾನವನ್ನು ಅನುಸರಿಸಿ. ಜನ್ಮಾಷ್ಟಮಿಯ ದಿನ ಏಳು ಮಹಿಳೆಯರನ್ನು ಆಹ್ವಾನಿಸಿ, ಪಾಯಸವನ್ನು/ಖೀರ್‍ಅನ್ನು ಸವಿಯಲು ನೀಡಿ. ಮುಂದಿನ 5 ಶುಕ್ರವಾರವೂ ಈ ಪರಿಯನ್ನು ಮುಂದುವರಿಸಿ. ನಿಮ್ಮ ಅದೃಷ್ಟದ ವ್ಯತ್ಯಾಸವನ್ನು ಶೀಘ್ರದಲ್ಲೇ ನೀವು ಕಾಣುತ್ತೀರಿ.

ಆರ್ಥಿಕ ಸಮಸ್ಯೆಯ ನಿವಾರಣೆಗೆ

ಆರ್ಥಿಕ ಸಮಸ್ಯೆಯ ನಿವಾರಣೆಗೆ

ಆರ್ಥಿಕವಾಗಿ ಯಾವುದೇ ಲಾಭ ಇಲ್ಲದಿರುವುದು ಅಥವಾ ಹಣದ ಸಮಸ್ಯೆಯಲ್ಲಿರುವವರು ಜನ್ಮಾಷ್ಟಮಿಯ ದಿನ ಶ್ರೀಗಂಧದ ತುಂಡಲ್ಲಿ ಶ್ರೀ ಎನ್ನುವ ಪದವನ್ನು ಬರೆಯಿರಿ. ಅದು ಕನ್ನಡ, ಇಂಗ್ಲಿಷ್, ಹಿಂದಿ ಅಥವಾ ನಿಮ್ಮ ಪ್ರಾದೇಶಿಕ ಭಾಷೆಯಲ್ಲಾದರೂ ಸರಿ. ಬರೆಯುವಾಗ ಅದರ ಅರ್ಥ ಹಾಗೂ ಉದ್ದೇಶವನ್ನು ಮನದಲ್ಲಿಟ್ಟುಕೊಂಡು ಬರೆಯಿರಿ. ಆ ಶ್ರೀಗಂಧದ ಕೊರಡು/ತುಂಡನ್ನು ಹಣ, ಚಿನ್ನ ಇಡುವ ಜಾಗ ಅಥವಾ ಲಾಕರ್‌ಗಳಲ್ಲಿ ಇಡಿ. ಶೀಘ್ರವೇ ನಿಮ್ಮ ಸಮಸ್ಯೆ ಬಗೆಹರಿದು, ಆರ್ಥಿಕ ಸಮಸ್ಯೆ ನಿವಾರಣೆಯಾಗುವುದು.

ಸಂಪತ್ತಿನ ಹೆಚ್ಚಳಕ್ಕೆ

ಸಂಪತ್ತಿನ ಹೆಚ್ಚಳಕ್ಕೆ

ನಿಮ್ಮ ಸಂಪತ್ತು ಹೆಚ್ಚಾಗಬೇಕೆಂದು ನೀವು ಬಯಸುವುದಾದರೆ ಜನ್ಮಾಷ್ಟಮಿಯ ದಿನ ಶ್ರೀಕೃಷ್ಣನಿಗೆ ಪಾನ್/ಎಲೆಅಡಿಕೆ ನೀಡಿ. ಇದರಿಂದ ಕೃಷ್ಣನು ಸಂತುಷ್ಟನಾಗಿ, ನಿಮ್ಮ ಬಯಕೆಯು ಈಡೇರುವಂತೆ ಆಶೀರ್ವದಿಸುವನು.

ಯಶಸ್ಸಿಗಾಗಿ

ಯಶಸ್ಸಿಗಾಗಿ

ನೀವು ಹೊಸ ಉದ್ಯೋಗಕ್ಕೆ ಕೈ ಹಾಕುತ್ತಿದ್ದೀರಿ ಅಥವಾ ಈಗಾಗಲೇ ಕೈಗೊಂಡಿರುವ ಕೆಲಸದಲ್ಲಿ ಯಶಸ್ಸು ಕಾಣಲು ಹಬ್ಬದ ದಿನ ಎರಡು ಬಾಳೆ ಗಿಡವನ್ನು ನೆಡಿ. ಅದಕ್ಕೆ ನೀರು, ಗೊಬ್ಬರವನ್ನು ನೀಡುತ್ತಿರಿ. ಆ ಗಿಡಕ್ಕೆ ಇನ್ನೊಂದು ಮರಿ ಗಿಡವು ಹುಟ್ಟುವವರೆಗೆ ಕಾಯಿರಿ. ನಿಮ್ಮ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದು.

ಸಾಲಗಳ ನಿವಾರಣೆಗೆ

ಸಾಲಗಳ ನಿವಾರಣೆಗೆ

ನೀವು ಮಾಡಿಕೊಂಡ ಸಾಲ ನಿಮ್ಮನ್ನು ಕಾಡುತ್ತಿದ್ದರೆ, ಜನ್ಮಾಷ್ಟಮಿಯ ದಿನ ಆಲದ ಮರದ ಬೇರಿಗೆ ನೀರನ್ನು ಉಣಿಸಿ. ಶ್ರದ್ಧೆ ಮತ್ತು ಭಕ್ತಿಯಿಂದ ಈ ಕೆಲಸ ಮಾಡಿದರೆ ಶೀಘ್ರದಲ್ಲೇ ನಿಮ್ಮ ಸಾಲ ನಿವಾರಣೆ ಹೊಂದುವುದು.

ಸಾಮಾಜಿಕವಾಗಿ ಮನ್ನಣೆ

ಸಾಮಾಜಿಕವಾಗಿ ಮನ್ನಣೆ

ನೀವು ಸಮಾಜದಲ್ಲಿ ಉನ್ನತ ಮಟ್ಟದ ಮನ್ನಣೆ ಪಡೆದುಕೊಳ್ಳಬೇಕೆಂದರೆ, ಜನ್ಮಾಷ್ಟಮಿಯ ದಿನ ಕುಂಕುಮ, ಶ್ರೀಗಂಧದ ಪುಡಿ, ಕೇಸರಿ ಮತ್ತು ಗುಲಾಬಿ ನೀರನ್ನು ಸೇರಿಸಿ ಒಂದು ಮಿಶ್ರಣವನ್ನು ತಯಾರಿಸಿ. ಹಬ್ಬದಂದು ಇದನ್ನು ಹಣೆಗೆ ಹಚ್ಚಿಕೊಳ್ಳಿ. ಉಳಿದ ಮಿಶ್ರಣವನ್ನು ನಿತ್ಯವೂ ಬಳಸಬಹುದು. ಈ ಪರಿಯಿಂದ ನಿಧಾನವಾಗಿ ಸಾಮಾಜಿಕ ಮನ್ನಣೆಯನ್ನು ಪಡೆದುಕೊಳ್ಳುತ್ತೀರಿ ಹಾಗೂ ಅಂತರ್ಮುಖಿ ಸ್ವಭಾವವೂ ಕಡಿಮೆಯಾಗುವುದು.

ಹಣಕಾಸಿನ ಬಿಕ್ಕಟ್ಟಿನಿಂದ ಪಾರಾಗಲು

ಹಣಕಾಸಿನ ಬಿಕ್ಕಟ್ಟಿನಿಂದ ಪಾರಾಗಲು

ಹಣಕಾಸಿನ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ, ಹಬ್ಬದಂದು ರಾಧಾ ಮತ್ತು ಶ್ರೀಕೃಷ್ಣನ ದೇಗುಲಕ್ಕೆ ಹೋಗಿ, ಹಳದಿ ಹೂವಿನ ಹಾರವನ್ನು ಸಮರ್ಪಿಸಿ. ಶೀಘ್ರದಲ್ಲೇ ಸಮಸ್ಯೆ ಬಗೆ ಹರಿಯುವುದು.

ಆಸೆ ಪೂರೈಸಲು

ಆಸೆ ಪೂರೈಸಲು

ನಿಮ್ಮ ಮನಸ್ಸಿನಲ್ಲಿರುವ ಬಯಕೆ ಈಡೇರಬೇಕೆಂದುಕೊಂಡಿದ್ದರೆ, ಜನ್ಮಾಷ್ಟಮಿಯ ದಿನ ಹತ್ತಿರದ ಶ್ರೀಕೃಷ್ಣ ದೇವಸ್ಥಾನಕ್ಕೆ ತೆಂಗಿನಕಾಯಿ ಹಾಗೂ ಬಾದಾಮಿಯನ್ನು ನೀಡಿ. ಹೀಗೆ 27 ದಿನದವರೆಗೆ ನೀಡುತ್ತಾ ಬಂದರೆ ಶೀಘ್ರವೇ ನಿಮ್ಮ ಬಯಕೆ ಈಡೇರುವುದು.

English summary

Krishna Janmashtami 2020: Do These Things On Janmashtami To Improve Your Life

Janmashtami is celebrated on Ashtami (the eighth day) during the Krishna Paksha of the Hindu month of Bhadrapada. As per the Gregorian calendar, Janmashtami will be celebrated on the 14th August this year (2017). Some also celebrate it on the 15th depending on their beliefs.
X
Desktop Bottom Promotion