For Quick Alerts
ALLOW NOTIFICATIONS  
For Daily Alerts

ಸಾಲಭಾಧೆಯಿಂದ ಮುಕ್ತಿ ಹೊಂದಲು ದೀಪಾವಳಿಯಂದು ಈ ಕ್ರಮಗಳನ್ನು ತಪ್ಪದೇ ಪಾಲಿಸಿ

|

ಸುಖ-ಸಮೃದ್ಧಿ ನೀಡುವ ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ದೀಪಾವಳಿಯನ್ನ ಈ ಬಾರಿ ಶುಕ್ರವಾರ, 05 ನವೆಂಬರ್ 2021 ರಂದು ಆಚರಿಸಲಾಗುತ್ತದೆ. ಈ ದಿನದಂದು ಗಣಪತಿ ಮತ್ತು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವ ಪದ್ಧತಿಯಿದೆ. ಇದರಿಂದ ಲಕ್ಷ್ಮಿ ತನ್ನ ಭಕ್ತರಿಗೆ ಸಂಪತ್ತನ್ನು ಅನುಗ್ರಹಿಸುತ್ತಾಳೆ ಎಂದು ನಂಬಿಕೆಯಿದೆ. ನೀವು ಸಾಲ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದರೆ, ದೀಪಾವಳಿಯಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಈ ಸಮಸ್ಯೆಗಳಿಂದ ಮುಕ್ತರಾಗಬಹುದು.

ಆರ್ಥಿಕ ಸಂಕಷ್ಟದಿಂದ ಹೊರಬರಲು ದೀಪಾವಳಿಯಿಂದ ಅನುಸರಿಸಬೇಕಾದ ಕೆಲವು ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

ದೀಪಾವಳಿಯ ರಾತ್ರಿ ಹೀಗೆ ಮಾಡಿ:

ದೀಪಾವಳಿಯ ರಾತ್ರಿ ಹೀಗೆ ಮಾಡಿ:

ಐದು ವೀಳ್ಯದೆಲೆ (ಹರಿದಿರಬಾರದು), ಐದು ಕವಡೆಗಳು ಮತ್ತು ಕಪ್ಪು ಅರಿಶಿನವನ್ನು ತೆಗೆದುಕೊಂಡು ಗಂಗಾಜಲದಿಂದ ಶುದ್ಧೀಕರಿಸಿ, ಈಗ ಅವುಗಳನ್ನು ಶುದ್ಧವಾದ ಕೆಂಪು ಬಟ್ಟೆಯಲ್ಲಿ ಕಟ್ಟಿ. ಈ ಕಟ್ಟನ್ನು ಬೆಳ್ಳಿಯ ಬಟ್ಟಲಿನಲ್ಲಿ ಅಥವಾ ಪೂಜೆಯ ತಟ್ಟೆಯಲ್ಲಿ ಇಟ್ಟು ದೀಪಾವಳಿಯ ರಾತ್ರಿ ಲಕ್ಷ್ಮಿಯನ್ನು ಪೂಜಿಸುವಾಗ ಪೂಜಿಸಿ. ಲಕ್ಷ್ಮಿಯ ಪಾದಕ್ಕೆ ಸ್ಪರ್ಶಿಸಿ, ಈ ಕಟ್ಟನ್ನು ಎತ್ತಿಕೊಂಡು ನಿಮ್ಮ ಹಣವಿಡುವ ಸ್ಥಳದಲ್ಲಿ ಇಡಿ. ಲಕ್ಷ್ಮಿ ದೇವಿಯ ಕೃಪೆಯಿಂದ ಸಂಪತ್ತು ಹೆಚ್ಚಾಗುವುದು. ಜೊತೆಗೆ ಸಾಲದಿಂದ ಮುಕ್ತರಾಗಬಹುದು ಎಂಬ ನಂಬಿಕೆಯಿದೆ.

ಸುಖ, ಸಮೃದ್ಧಿ ಮತ್ತು ಋಣ ಪರಿಹಾರಕ್ಕಾಗಿ ಈ ಕೆಲಸ ಮಾಡಿ:

ಸುಖ, ಸಮೃದ್ಧಿ ಮತ್ತು ಋಣ ಪರಿಹಾರಕ್ಕಾಗಿ ಈ ಕೆಲಸ ಮಾಡಿ:

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರ ಮೇಲೆ ದೇವರ ಅನುಗ್ರಹ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. ದೀಪಾವಳಿಯ ದಿನದಂದು ನಿರ್ಗತಿಕರಿಗೆ ಸಿಹಿತಿಂಡಿ, ವಸ್ತ್ರ, ಇತ್ಯಾದಿಗಳನ್ನು ದಾನ ಮಾಡಿ ಅನ್ನವನ್ನು ನೀಡಬೇಕು. ಇದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ. ಜೊತೆಗೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಲ್ಲಿ ಧನ ಧಾನ್ಯಗಳಿಗೆ ಕೊರತೆಯಾಗುವುದಿಲ್ಲ. ದೀಪಾವಳಿಯ ಅಮಾವಾಸ್ಯೆಯ ದಿನ ಹಾಗೂ ಪ್ರತಿ ಅಮಾವಾಸ್ಯೆಯಂದು ಈ ಕೆಲಸವನ್ನು ಮಾಡಬೇಕು. ಇದರಿಂದ ನೀವು ಸಾಲದಿಂದ ಸ್ವಾತಂತ್ರ್ಯವನ್ನು ಪಡೆಯುತ್ತೀರಿ ಹಾಗೂ ಜೀವನದ ಇತರ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.

ಸಾಲವನ್ನು ಕಡಿಮೆ ಮಾಡಲು ಈ ಕ್ರಮಗಳನ್ನು ತೆಗೆದುಕೊಳ್ಳಿ:

ಸಾಲವನ್ನು ಕಡಿಮೆ ಮಾಡಲು ಈ ಕ್ರಮಗಳನ್ನು ತೆಗೆದುಕೊಳ್ಳಿ:

ಕಮಲವು ಲಕ್ಷ್ಮಿಗೆ ತುಂಬಾ ಪ್ರಿಯವಾಗಿದ್ದು, ಅವಳು ಕಮಲದ ಆಸನದ ಮೇಲೆ ಕುಳಿತುಕೊಳ್ಳುತ್ತಾಳೆ. ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಗೆ ಕಮಲದ ಹೂವುಗಳು ಮತ್ತು ಕಮಲದ ಮಾಲೆಯನ್ನು ಅರ್ಪಿಸಬೇಕು. ಇದರಿಂದ ಲಕ್ಷ್ಮಿಯು ಪ್ರಸನ್ನಳಾಗಿ, ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರಮಾಡುತ್ತಾಳೆ. ಇದಲ್ಲದೇ ಋಣಮುಕ್ತರಾಗಲು ಮತ್ತು ಧನ ಪ್ರಾಪ್ತಿಯಾಗಲು ದೀಪಾವಳಿಯ ರಾತ್ರಿ ಕಮಲದ ಮಾಲೆಯೊಂದಿಗೆ ಲಕ್ಷ್ಮಿಯ ಈ ಮಂತ್ರವನ್ನು ಜಪಿಸಬೇಕು.

''ಋಣ ಪರಿಹಾರಕ್ಕಾಗಿ ಶ್ರೀಲಕ್ಷ್ಮಿ ಗಾಯತ್ರಿ ಮಂತ್ರ - 'ಓಂ ಹ್ರೀಂ ಮಹಾಲಕ್ಷ್ಮೀ ಚ ವಿದ್ಮಹೇ ವಿಷ್ಣುಪತ್ನಂ ಚ ಧೀಮಹಿ ತನ್ನೋ ಲಕ್ಷ್ಮೀ: ಪ್ರಚೋದಯಾತ್ ಹ್ರೀಂ ಓಂ''

ಈ ಮಂತ್ರವನ್ನು ನಿಯಮಿತವಾಗಿ 1008 ಬಾರಿ ಜಪಿಸಿದರೆ, ಸಾಲದಿಂದ ಮುಕ್ತಿ ಹೊಂದುವುದರ ಜೊತೆಗೆ, ನಿಮ್ಮ ಮನೆಯು ಸಂಪತ್ತಿನಿಂದ ತುಂಬಿರುತ್ತದೆ ಎಂದು ನಂಬಲಾಗಿದೆ.

ನರಕ ಚತುರ್ದಶಿಯಂದು ಈ ಕ್ರಮಗಳನ್ನು ಮಾಡಿ:

ನರಕ ಚತುರ್ದಶಿಯಂದು ಈ ಕ್ರಮಗಳನ್ನು ಮಾಡಿ:

ನಿಮ್ಮ ಮನೆಯಲ್ಲಿ ಯಾವುದೇ ಕಾರಣವಿಲ್ಲದೆ ಖರ್ಚುಗಳು ಹೆಚ್ಚಾಗುತ್ತಿದ್ದರೆ, ನರಕ ಚತುರ್ದಶಿಯಂದು ಕೆಂಪು ಚಂದನ, ಕುಂಕುಮ, ಗುಲಾಬಿ ಹೂವುಗಳನ್ನು ಇಟ್ಟು ಪೂಜಿಸಬೇಕು. ಕೆಂಪು ಬಟ್ಟೆಯ ಮೇಲೆ ಇವುಗಳನ್ನು ಹಾಕಿ, ಪೂಜೆಯು ಮುಗಿದ ನಂತರ, ನಂತರ ಅದನ್ನು ಗಂಟ ಕಟ್ಟಿ, ಸಂಪತ್ತಿನ ಸ್ಥಳದಲ್ಲಿ ಇಡಿ. ಇದು ಮನೆಯ ವ್ಯರ್ಥ ಖರ್ಚುಗಳನ್ನು ಕಡಿಮೆ ಮಾಡುತ್ತದೆ ಮತ್ತು ಸಂಪತ್ತನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ.

English summary

Do these Measures on Diwali to Get Rid of Debt and get Wealth Prosperity in Kannada

Here we talking about Do these measures on Diwali to get rid of debt and get wealth prosperity in kannada, read on
Story first published: Tuesday, November 2, 2021, 15:30 [IST]
X
Desktop Bottom Promotion