For Quick Alerts
ALLOW NOTIFICATIONS  
For Daily Alerts

ನಿಮ್ಮ ಪ್ರೀತಿ ಪಾತ್ರರಿಗೆ ದೀಪಾವಳಿ ಶುಭಾಶಯ ಕೋರಲು ಇಲ್ಲಿದೆ ಸಂದೇಶ

|

ಬೆಳಕಿನ ಹಬ್ಬ ದೀಪಾವಳಿ ಎಂದರೆ ಸಡಗರ-ಸಂಭ್ರಮ. ಅಂದಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ. ಎಲ್ಲೆಲ್ಲೂ ಬೆಳಕನ್ನು ಹರಡುತ್ತಾ ಸಂಭ್ರಮದ ವಾತಾವರಣವನ್ನು ಹೆಚ್ಚಿಸುವ ಅತ್ಯಂತ ದೊಡ್ಡ ಹಬ್ಬ ದೀಪಾವಳಿ. ಐದು ದಿನಗಳ ಕಾಲ ಆಚರಿಸಲಾಗುವ ಈ ಹಬ್ಬವು ವಿಶೇಷವಾದ ಧಾರ್ಮಿಕ ಆಚರಣೆಗಳನ್ನು ಒಳಗೊಂಡಿದೆ. ಪ್ರದೇಶದಿಂದ ಪ್ರದೇಶಕ್ಕೆ ಈ ಹಬ್ಬದ ಆಚರಣೆಯಲ್ಲಿ ಕೊಂಚ ವಿಭಿನ್ನತೆ ಇರುವುದನ್ನು ಕಾಣಬಹುದು.

ಐದು ದಿನದ ಹಬ್ಬಗಳ ಆಚರಣೆಯಲ್ಲಿ ವಿವಿಧ ಆಚರಣೆಗಳನ್ನು ಅನುಸರಿಸಲಾಗುವುದು. ಮನೆಯನ್ನೆಲ್ಲಾ ಸ್ವಚ್ಛ ಮಾಡಿ ದೀಪಾವಳಿಗೆ ಅಲಂಕಾರ ಮಾಡಲಾಗುವುದು. ದೀಪಾವಳಿ ಆಚರಣೆ ಇಂದಿನಿಂದಲೇ ಅಂದರೆ ಧಂತೆರೇಸ್‌ ದಿನದಿಂದಲೇ ಪ್ರಾರಂಭವಾಗುವುದು. ನಾಳೆ ಅಂದರೆ 14ನೇ ತಾರೀಕು ದೀಪಾವಳಿ ಹಬ್ಬದ ಆಚರಣೆ. ಲಕ್ಷ್ಮಿ ದೇವಿಯ ಆರಾಧನೆಯೊಂದಿಗೆ ವಿವಿಧ ದೇವತೆಗಳಿಗೂ ಪೂಜೆ ಸಲ್ಲಿಸಲಾಗುವುದು. ದೀಪಾವಳಿ ಹಬ್ಬದ ಅಮವಾಸ್ಯೆಯ ದಿನವನ್ನು ಅತ್ಯಂತ ಮಹತ್ವದ ದಿನ ಎಂದು ಪರಿಗಣಿಸಲಾಗುವುದು. ಅದು ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುವರು. ಇದನ್ನು ಸಾಮಾನ್ಯವಾಗಿ ಲಕ್ಷ್ಮಿ ಪೂಜೆ, ಲಕ್ಷ್ಮಿ -ಗಣೇಶ ಪೂಜೆ ಅಥವಾ ದೀಪಾವಳಿ ಪೂಜೆ ಎಂದು ಸಹ ಕರೆಯಲಾಗುತ್ತದೆ.

ಈ ದೀಪಾವಳಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಲು ಇಲ್ಲಿದೆ ನೋಡಿ ಮೆಸೇಜ್.

* ನಿಮಗೂ, ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು

* ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ, ನಮ್ಮಲ್ಲಿರುವ ಕೋಪ., ಅಹಂ ದೂರವಾಗಲಿ, ಪ್ರೀತಿಯ ಬೆಳಕು ಹರಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.

* ಕಷ್ಟಗಳು ದೂರವಾಗಲಿ, ಬಾಳು ಬಂಗಾರವಾಗಿ, ದೀಪಾವಳಿಯ ಸಂಭ್ರಮ ವರ್ಷಪೂರ್ತಿ ನೆಲೆಸಲಿ, ದೀಪಾವಳಿ ಹಬ್ಬದ ಶುಭಾಶಯಗಳು.

* ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು, ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.

* ಬೆಳಕಿನ ಹಬ್ಬ ದೀಪಾವಳಿ ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ ನೀಡಲಿ, ದೀಪಾವಳಿ ಹಬ್ಬದ ಶುಭಾಶಯಗಳು

* ಅಜ್ಞಾನ, ಅಂಧಕಾರ ದೂರವಾಗಲಿ, ದ್ವೇಷ, ಅಸೂಯೆ ದೂರವಾಗಲಿ, ಬಾಳಲ್ಲಿ ಸಂತಸ ಬೆಳಗಲಿ, ದೀಪಾವಳಿ ಹಬ್ಬದ ಶುಭಾಶಯಗಳು

* ಕತ್ತಲು ಕರಗುವಂತೆ ಕಷ್ಟ ಕರಗಲಿ, ದೀಪದ ಬೆಳಕಿನಂತೆ ಸಂತೋಷ ಬರಲಿ, ಜೀವನ ಆನಂದವಾಗಿರಲಿ, ದೀಪಾವಳಿ ಹಬ್ಬದ ಶುಭಾಶುಗಳು

* ಬೆಳಕಿನ ಹಬ್ಬ ದೀಪಾವಳಿ ಬದುಕಿನಲ್ಲಿ ಹೊಸ ಬೆಳಕು ತರಲಿ, ಜೀವನದಲ್ಲಿ ನೆಮ್ಮದಿ ಇರಲಿ, ಆರೋಗ್ಯ, ಐಶ್ವರ್ಯ ಆ ದೇವ ಕರುಣಿಸಲಿ, ದೀಪಾವಳಿ ಹಬ್ಬದ ಶುಭಾಶಯಗಳು

English summary

Diwali Wishes, Quotes, Images, facebook and Whatsapp Status Messages in Kannada

Here are Diwali wishes, quotes, images, facebook and whatsapp status message have a look.
X