For Quick Alerts
ALLOW NOTIFICATIONS  
For Daily Alerts

ಲಕ್ಷ್ಮಿ ಪೂಜೆಯ ದಿನ ಅಪ್ಪಿ ತಪ್ಪಿಯೂ ನಿಮ್ಮಿಂದ ಈ ತಪ್ಪುಗಳು ಆಗಬಾರದು , ಎಚ್ಚರದಿಂದಿರಿ!

By Divya Pandith
|

ದೀಪಾವಳಿ ಎಂದರೆ ದೀಪಗಳ ಸರಣಿ ಅಥವಾ ದೀಪಗಳ ಸಮೂಹ ಎಂದರ್ಥವಾಗುತ್ತದೆ. ದೀಪ ಎನ್ನುವ ರೂಪಕವೇ ಬಹಳ ಅದ್ಭುತವಾದದ್ದು. ಕತ್ತಲನ್ನು ಓಡಿಸಿ ಬೆಳಕನ್ನು ನೀಡುವ ದೀಪ ಜ್ಞಾನ, ಬೆಳಕು, ಭವಿಷ್ಯ, ಬಾಳು ಎನ್ನುವ ಭವ್ಯವಾದ ಅರ್ಥವನ್ನು ನೀಡುತ್ತದೆ. ತಾನು ಬೆಳಗುತ್ತಾ ಜಗತ್ತನ್ನು ಬೆಳಗುವ ಶಕ್ತಿ ಇರುವುದು ದೀಪಕ್ಕೆ ಮಾತ್ರ. ಈ ದೀಪಗಳನ್ನು ಬೆಳಗುತ್ತಾ ವೈಭವ ಹಾಗೂ ಸಡಗರದ ಸಂಭ್ರಮ ಆಚರಿಸುವ ಹಬ್ಬವೇ ದೀಪಾವಳಿ.

ಆಧ್ಯಾತ್ಮಿಕ ಹಾಗೂ ಪುರಾಣ ಇತಿಹಾಸ ಹೊಂದಿರುವ ದೀಪಾವಳಿಯನ್ನು ಹಿಂದೂ ಸಮುದಾಯದ ಸಡಗರದ ಹಬ್ಬಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಹಬ್ಬದ ದಿನ ನಿರ್ಮಲ ಮನಸ್ಸಿನಿಂದ ಮನೆಯನ್ನು ಬೆಳಗುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ವರ್ಷಪೂರ್ತಿ ಸಮೃದ್ಧಿ ಸುಖವನ್ನು ನೀಡಬೇಕೆಂಬ ಆಸೆಯನ್ನು ದೇವಿಯ ಮುಂದಿಟ್ಟು, ಲಕ್ಷ್ಮಿ ದೇವಿಯನ್ನು ಆರಾಧಿಸುವ ಈ ದಿನ ಕೆಟ್ಟಕೆಲಸಗಳನ್ನು ಮಾಡಬಾರದು.

Diwali Lamp

ಬದಲಿಗೆ ಸತ್ಕಾರ್ಯಗಳು ಜರುಗಬೇಕು. ಹಬ್ಬದ ದಿನ ಯಾವೆಲ್ಲಾ ಕೆಲಸಗಳನ್ನು ಮಾಡಬಹುದು ಮತ್ತು ಮಾಡಬಾರದು ಎನ್ನುವುದನ್ನು ನಾವು ತಿಳಿದಿರಬೇಕು. ಹಾಗೊಮ್ಮೆ ಹಬ್ಬದದಿನ ಮಾಡಬಾರದಂತಹ ಕೆಲಸಗಳನ್ನು ಕೈಗೊಂಡರೆ ದೇವಿಯ ಕೋಪಕ್ಕೆ ಕಾರಣವಾಗಬೇಕಾಗುವುದು. ಹಾಗಾದರೆ ಆ ಕೆಲಸಗಳು ಯಾವವು? ಅದಕ್ಕಾಗಿ ನಾವು ತಿಳಿದಿರಬೇಕಾದ ವಿಚಾರಗಳು ಯಾವವು? ಎನ್ನುವುದನ್ನು ನಾವಿಲ್ಲಿ ಹೇಳುತ್ತಿದ್ದೇವೆ...

ರಾಮಾಯಣದ ನಂಟು

ಹಿಂದೂಗಳ ದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿ ಹಬ್ಬ ರಾಮಾಯಣದ ನಂಟನ್ನು ಪಡೆದುಕೊಂಡಿದೆ. ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗುತ್ತಾನೆ. ದಿವ್ಯಶಕ್ತಿಯನ್ನು ಹೊಂದಿರುವ ಪರಮ ಪುರುಷ ರಾಮನು ಇಲ್ಲದೆ ಅಯೋಧ್ಯೆಯು ಕತ್ತಲೆಯಿಂದ ಕೂಡಿತ್ತು. ದುಷ್ಟನಾದ ರಾವಣನನ್ನು ರಾಮ ಸೋಲಿಸಿ ಪುನಃ ಅಯೋಧ್ಯೆಗೆ ಕಾಲಿಡುತ್ತಿದ್ದಂತೆ ಅಯೋಧ್ಯೆಯ ಜನರು ಊರುತುಂಬಾ ದೀಪವನ್ನು ಬೆಳಗುವ ಮೂಲಕ ಸಡಗರವನ್ನು ಆಚರಿಸಿದರು. ಅದರಂತೆಯೇ ಅಯೋಧ್ಯೆಯಲ್ಲಿದ್ದ ಕಷ್ಟಗಳು ದೂರವಾದವು ಎನ್ನುವ ಸಂಖೇತವನ್ನು ದೀಪಾವಳಿ ಹಬ್ಬವಿವರಿಸುತ್ತದೆ.

Tulasi Pooja

ಲಕ್ಷ್ಮಿ ದೇವಿಗೆ ಪೂಜೆ ಮಾಡುವ ಸಂದರ್ಭದಲ್ಲಿ ತುಳಸಿ ಪೂಜೆಯನ್ನು ಮಾಡಬಾರದು

ತುಳಸಿ ದೇವಿಯು ಶಾಲಿಗ್ರಾಮನನ್ನು ವಿವಾಹವಾಗಿದ್ದಳು. ಶಾಲಿಗ್ರಾಮನು ವಿಷ್ಣುವಿನ ಪುನರ್ಜನ್ಮವಾಗಿತ್ತು ಎನ್ನಲಾಗುತ್ತದೆ. ಲಕ್ಷ್ಮಿ ಮತ್ತು ವಿಷ್ಣು ಪತಿ ಪತ್ನಿಯಾಗಿರುವಾಗಲೇ ವಿವಾಹವಾಗಿತ್ತು. ಈ ಉದ್ದೇಶದಿಂದ ಲಕ್ಷ್ಮಿ ದೇವಿಗೆ ಪೂಜೆ ಮಾಡುವ ಸಂದರ್ಭದಲ್ಲಿ ತುಳಸಿ ಪೂಜೆಯನ್ನು ಮಾಡಬಾರದು. ಹಾಗೆ ಮಾಡಿದರೆ ಲಕ್ಷ್ಮಿ ದೇವಿಗೆ ಕೋಪ ಬರುವುದು. ವಿಷ್ಣು ಪೂಜೆ ಹಾಗೂ ಇನ್ನಿತರ ದೇವತೆಗಳ ಪೂಜೆಯ ಸಂದರ್ಭದಲ್ಲಿ ತುಳಸಿಯನ್ನು ಬಳಸುವುದು ಅಥವಾ ಆರಾಧನೆಯನ್ನು ಸಹ ಮಾಡಬಹುದು.

ಎಡಭಾಗದಲ್ಲಿ ದೀಪ ಬೆಳಗಬಾರದು

ವಿಷ್ಣು ದೇವನು ಜಗತ್ತಿನ ಪಾಲಕನು. ಇವನು ಪ್ರಪಂಚದಾದ್ಯಂತ ಬೆಳಕನ್ನು ಬೆಳಗುವನು. ಇವನ ಪೂಜೆ ಹಾಗೂ ಇತರ ದೇವತೆಗಳನ್ನು ಪೂಜಿಸುವಾಗ ಸಾಮಾನ್ಯವಾಗಿ ದೇವರ ಎಡಭಾಗದಲ್ಲಿ ದೀಪವನ್ನು ಬೆಳಗುತ್ತಾರೆ. ಅದೇ ದೇವಾಲಯಗಲ್ಲಿ ಮಣ್ಣಿನ ಹಣತೆಯಲ್ಲಿ ದೀಪವನ್ನು ಬೆಳಗಬೇಕಾದರೆ ಬಲಭಾಗದಲ್ಲಿ ಇಡುತ್ತಾರೆ. ಹಾಗೆಯೇ ಲಕ್ಷ್ಮಿ ದೇವಿಯ ಪೂಜೆ ಮಾಡುವಾಗ ದೀಪವನ್ನು ಬಲಭಾಗದಲ್ಲಿಟ್ಟು ಪೂಜಿಸಬೇಕು. ಕೆಂಪು ಬಣ್ಣದ ದೀಪವನ್ನು ದೇವಿಗೆ ಬೆಳಗಬಹುದು.

Tulasi pooja Lamp

ಹೂವಿನ ಬಣ್ಣ ಪ್ರಮುಖವಾದದ್ದು

ಲಕ್ಷ್ಮಿ ದೇವಿಯು ವಿವಾಹಿತ ಮಹಿಳೆಯಾದ್ದರಿಂದ ಆಕೆಗೆ ಪ್ರಿಯವಾದ ಕಮಲದ ಹೂ ಅಥವಾ ಕೆಂಪು ಮತ್ತು ಗುಲಾಬಿ ಬಣ್ಣದ ಹೂವನ್ನು ಬಳಸಿಕೊಂಡು ಪೂಜೆ ಮಾಡಬೇಕು. ಲಕ್ಷ್ಮಿ ಪೂಜೆಗೆ ಎಂದಿಗೂ ಬಿಳಿ ಬಣ್ಣದ ಹೂವನ್ನು ಬಳಸಬಾರದು. ಬಿಳಿ ಬಣ್ಣದ ಚಾಪೆಯ ಮೇಲೂ ಲಕ್ಷ್ಮಿ ವಿಗ್ರಹವನ್ನು ಇಡಬಾರದು. ಶನಿ ದೇವರನ್ನು ಹೊರತು ಪಡಿಸಿ ಬೇರೆ ಯಾವ ದೇವರಿಗೂ ಬಿಳಿ ಮತ್ತು ಕಪ್ಪು ಬಣ್ಣದ ವಸ್ತು ಮತ್ತು ಹೂವನ್ನು ನೀಡಬಾರದು.

ವಿಷ್ಣು ದೇವರ ಪ್ರಾರ್ಥನೆ ಮುಖ್ಯ

ಲಕ್ಷ್ಮಿ ಮತ್ತು ವಿಷ್ಣು ಪತಿ-ಪತ್ನಿಯರಾದ್ದರಿಂದ ಲಕ್ಷ್ಮಿ ಪೂಜೆಗೆ ಪ್ರಾರ್ಥಿಸುವಾಗ ವಿಷ್ಣು ದೇವರ ಪ್ರಾರ್ಥನೆಯನ್ನು ಮಾಡಬೇಕು. ಇಲ್ಲವೇ ಗಣೇಶ, ಲಕ್ಷ್ಮಿ ಪ್ರಾರ್ಥನೆಯ ನಂತರ ವಿಷ್ಣು ದೇವರ ಪ್ರಾರ್ಥನೆಯನ್ನು ಮಾಡಬಹುದು.

ಪ್ರಸಾದವು ದಕ್ಷಿಣ ದಿಕ್ಕಿನಲ್ಲಿರಿಸಿ

ಲಕ್ಷ್ಮಿ ಪೂಜೆಯ ನಂತರ ಪ್ರಸಾದವನ್ನು ದೇವರ ಮನೆ/ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಇರಿಸಿ. ಹೂವಿನ ಪ್ರಸಾದವನ್ನು ದೇವಾಲಯ/ದೇವರ ಮನೆಯ ಬಲಭಾಗದಲ್ಲಿ ಇಡಬೇಕು. ಗಣೇಶ ಮತ್ತು ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಉಪಸ್ಥಿತರಿರಬೇಕು. ಪೂಜೆಯ ಪ್ರಸಾದವನ್ನು ಎಲ್ಲರೂ ಸ್ವೀಕರಿಸಬೇಕು.

ಹಬ್ಬದ ದಿನ ನೀವೇನು ಮಾಡಬೇಕು?

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬಕ್ಕೆ ಬಂಧು ಬಾಂಧವರು ಹಾಗೂ ಸ್ನೇಹಿತರನ್ನು ಆಹ್ವಾನಿಸಿ. ದೇವಿಯ ಪೂಜೆಯನ್ನು ಭಕ್ತಿಭಾವದಿಂದ ಮಾಡಿ. ಕುಟುಂಬದವರೊಂದಿಗೆ ಸಂತೋಷದಿಂದ ದಿನವನ್ನು ಕಳೆಯಿರಿ.

Diwali rangoli

ರಂಗೋಲಿಯನ್ನು ಹಾಕಿ

ರಂಗೋಲಿ ಹಾಕುವುದು ಕೇವಲ ಅಲಂಕಾರದ ಸಂಕೇತವಲ್ಲ. ಅದು ನಿಮ್ಮ ಮನೆಯ ಸಮೃದ್ಧಿ ಹಾಗೂ ಸಂಪತ್ತಿನ ಸಂಖೇತವಾಗಿರುತ್ತದೆ. ರಂಗೋಲಿ ಹಾಲಕು ನಿಮಗೆ ಬರದು ಅಥವಾ ಕ್ರಿಯಾಶೀಲತೆ ಇಲ್ಲವೆಂದರೆ ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ರಂಗೋಲಿ ತಟ್ಟೆಯನ್ನು ಬಳಸಿ ರಂಗೋಲಿಯನ್ನು ಹಾಕಿ. ಅದಕ್ಕೆ ನಿಮಗಿಷ್ವಾಗುವ ಬಣ್ಣಗಳಿಂದ ಅಲಂಕರಿಸಿ. ಹೀಗೆ ಮಾಡುವುದರಿಂದ ದೇವಿ ನಿಮಗೆ ಒಳ್ಳೆಯದನ್ನು ಕರುಣಿಸುತ್ತಾಳೆ.

ದಾನ ಮಾಡಿ

ಹಣತೆಯನ್ನು ಮಾರುವ ಹುಡುಗ ಮನೆಯಲ್ಲಿ ದೀಪ ಬೆಳಗುತ್ತಾನೋ ಇಲ್ಲವೋ. ಆದರೆ ಬೇರೆಯವರಿಗೆ ಮಾರಿ ಅವರ ಮನೆಯಲ್ಲಿ ದೀಪ ಬೆಳಗಲು ಪರೋಕ್ಷವಾಗಿ ಸಹಾಯ ಮಾಡುತ್ತಾನೆ. ನೀವು ನಿಮ್ಮ ಮನೆಯಲ್ಲಿ ಸಡಗರದ ಆಚರಣೆ ಮಾಡುವುದರ ಜೊತೆಗೆ, ಬಡವರಿಗೆ ಸಿಹಿ ತಿಂಡಿ, ಹೊದಿಕೆ, ಉಡುಪು ಅಥವಾ ಹಣತೆಯನ್ನು ನೀಡುವುದರ ಮೂಲಕ ಬಡವರ ಮನೆಯಲ್ಲೂ ದೀಪಾವಳಿ ಆಚರಿಸಲು ಅನುವು ಮಾಡಿಕೊಡಿ. ಇದರಿಂದ ದೇವಿ ನಿಮಗೆ ಆಶೀರ್ವದಿಸುತ್ತಾಳೆ.

crackers

ಪಟಾಕಿಗಳನ್ನು ಸಿಡಿಸದಿರಿ

ಹಬ್ಬದ ಸಂಭ್ರಮಕ್ಕೆ ಅಪಾಯವನ್ನುಂಟುಮಾಡುವ ಪಟಾಕಿಯನ್ನು ಸಿಡಿಸಬೇಕೆಂದಿಲ್ಲ. ಪಟಾಕಿ ಸಿಡಿಸುವುದು ಹಣವನ್ನು ಸುಟ್ಟಷ್ಟೇ ಫಲ ದೊರೆಯುವುದು. ಅದರಿಂದ ಉಂಟಾಗುವ ಮಾಲಿನ್ಯವು ಪ್ರಾಣಿಗಳಿಗೆ, ಮಕ್ಕಳಿಗೆ ಹಾಗೂ ವಯಸ್ಕರಿಗೆ ಅನಾರೋಗ್ಯವನ್ನುಂಟು ಮಾಡುತ್ತದೆ. ಈ ನಿಟ್ಟಿನಲ್ಲೇ ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ಪಟಾಕಿ ಮಾರಾಟವನ್ನು ನಿಷೇಧಿಸಿದೆ.

English summary

Diwali, don't commit these mistakes during Laxmi Puja!

One of India's most most popular Hindu festivals, Diwali is just around the corner! Though the festival is celebrated to commemorate the return of Lord Rama to Ayodhya after defeating Ravana, the festival stands for bigger purpose -- that is the victory of good over evil. It is said that those who do Laxmi puja on this day will be blessed with prosperity all year round -- however when it comes to Laxmi puja, there are things that you should not do as well. Read on to know what they are.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more