For Quick Alerts
ALLOW NOTIFICATIONS  
For Daily Alerts

ದೀಪಾವಳಿ 2021: ಹಬ್ಬಕ್ಕೂ ಮುನ್ನ ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ

|

ದೀಪಗಳ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಕೆಟ್ಟದನ್ನು ನಾಶ ಮಾಡಿ ಎಲ್ಲರ ಬಾಳಿಗೂ ಶುಭವನ್ನು ತರುವ ನರಕ ಚತುರ್ದಶಿ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವ ಕತ್ತಲೆಯನ್ನು ಹೋಗಲಾಡಿಸುತ್ತದೆ ಎಂಬ ಅರ್ಥ ನೀಡುತ್ತದೆ.

ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯದಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. 2021ರಲ್ಲಿ ನವೆಂಬರ್ 2 ಧನತ್ರಯೋದಶಿ, 3 ನರಕ ಚತುರ್ದಶಿ, 4 ದೀಪಾವಳಿ ಹಾಗೂ 5 ರಂದು ಸಹೋದರತ್ವವನ್ನು ಸಾರುವ ಭಾಯಿ ಧುಜ್‌ ಹಬ್ಬ ಸಾಲಾಗಿ ಇದೆ. ಈ ಹಬ್ಬಗಳ ಸಾಳು ಆರಂಭಕ್ಕೂ ಮುನ್ನ ನೀವು ಮನೆಯನ್ನು ಶುದ್ಧಗೊಳಿಸಬೇಕು. ದೀಪಾವಳಿ ಹಬ್ಬದ ಅರ್ಥ ಕೆಟ್ಟದರ ನಾಶ, ಶುಭಕ್ಕೆ ಆಹ್ವಾನ ಎಂಬಂತೆ ಮನಯಲ್ಲಿರುವ ಕೆಟ್ಟ, ಅಶುಭ, ಬೇಡವಾದ ವಸ್ತುಗಳನ್ನು ಮನೆಯಿಂದ ಹೊರಹಾಕುವುದು ದೀಪಾವಳಿ ಹಬ್ಬದ ಪಧ್ಧತಿ.

ಹಾಗಿದ್ದರೆ ದೀಪಾವಳ ಹಬ್ಕಕ್ಕೂ ಮುನ್ನ ಯಾವೆಲ್ಲಾ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು ಮುಂದೆ ಹೇಳಿದ್ದೀವಿ ನೋಡಿ:

ಮುರಿದ ದೇವರ ವಿಗ್ರಹಗಳು

ಮುರಿದ ದೇವರ ವಿಗ್ರಹಗಳು

ದೇವರು ಎಂದರೆ ಬಹಳ ಶುದ್ಧ, ಮಡಿ, ಪದ್ಧತಿ ಎಂಬ ಮಾತುಗಳು ಬರುತ್ತದೆ. ಆದರೆ ಮನೆಯಲ್ಲಿ ಮುಕ್ಕಾದ ದೇವರ ವಿಗ್ರಹಗಳನ್ನು ಇಡುವುದು ಎಷ್ಟು ಅಶುಭ ಗೊತ್ತೆ?. ಎಂದಿಗೂ ಮನೆಯಲ್ಲಿ ಹಾಳಾದ, ಮುಕ್ಕಾದ ಪೂಜೆಗೆ ಅರ್ಹವಲ್ಲದ ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ದುರದೃಷ್ಟವನ್ನು ಹೆಚ್ಚಿಸುತ್ತವೆ. ಆದ್ದರಿಂದ ಈ ದೀಪಾವಳಿಗೂ ಮುನ್ನ ಪೂಜೆಗೆ ಅರ್ಹವಲ್ಲದ ದೇವರ ವಿಗ್ರಹಗಳನ್ನು ಮನೆಯಿಂದ ಮರದ ಕೆಳಗೆ ಅಥವಾ ದೇವಾಲಯದ ಬಳಿ ಇಡಿ. ಹೀಗೆ ಮಾಡುವುದು ಬಹಳ ಮಂಗಳಕರ.

ಒಡೆದ ಗಾಜು

ಒಡೆದ ಗಾಜು

ಒಡೆದ ಗಾಜನ್ನು ಮನೆಯಲ್ಲಿ ಇಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯಲ್ಲಿ ಎಲ್ಲೋ ಕಿಟಕಿ, ಬಲ್ಬ್ ಅಥವಾ ಕನ್ನಡಿ ಒಡೆದರೆ ಅದನ್ನು ದೀಪಾವಳಿ ಶುಚಿಗೊಳಿಸುವಾಗ ತೆಗೆಯಿರಿ. ಒಡೆದ ಗಾಜಿನ ವಸ್ತುಗಳು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಬದಲಾಗಿ ಕೂಡಲೇ ಹೊಸ ಬಲ್ಬ್‌ ಅಥವಾ ಕನ್ನಡಿಯೊಂದಿಗೆ ಬದಲಾಯಿಸಿ.

ಹಾಳಾದ ಗಡಿಯಾರ

ಹಾಳಾದ ಗಡಿಯಾರ

ಮನೆಯಲ್ಲಿ ಕೆಲಸ ಮಾಡದ ಗಡಿಯಾರವನ್ನು ಹೊಂದಿರುವುದು ಕೂಡ ವಾಸ್ತುಶಾಸ್ತ್ರದಲ್ಲಿ ಅಶುಭ ಎಂದು ಹೇಳಲಾಗುತ್ತದೆ. ಗಡಿಯಾರವನ್ನು ಸಂತೋಷ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯಲ್ಲಿ ಮುರಿದ ಅಥವಾ ಹಾಳಾದ ಗಡಿಯಾರವಿದ್ದರೆ ಅದನ್ನು ದೀಪಾವಳಿಗೆ ಮುನ್ನ ಹೊರಗೆ ಹಾಕಿ.

ಮನೆಯ ಅಟ್ಟಗಳನ್ನು ಸ್ವಚ್ಛಮಾಡಿ

ಮನೆಯ ಅಟ್ಟಗಳನ್ನು ಸ್ವಚ್ಛಮಾಡಿ

ಈ ದೀಪಾವಳಿ ಹಬ್ಬಕ್ಕೂ ಮುನ್ನ ಮನೆಯ ಮೇಲ್ಛಾವಣಿಯನ್ನು ಸ್ವಚ್ಛಗೊಳಿಸಿ. ಅನಗತ್ಯ, ಬೇಡವಾದ, ಉಪಯೋಗಿಸದ ವಸ್ತುಗಳನ್ನು ಇಡಬೇಡಿ, ಮನೆಯಿಂದ ಹೊರಹಾಕಿ. ಅನಗತ್ಯ ಬಟ್ಟೆಗಳು, ಹಳೆಯ ಬಟ್ಟೆಗಳನ್ನು ದಾನ ಮಾಡಿ.

ಮುರಿದ ಪೀಠೋಪಕರಣ

ಮುರಿದ ಪೀಠೋಪಕರಣ

ಮನೆಯಲ್ಲಿ ಮೇಜು, ಕುರ್ಚಿ ಅಥವಾ ಇತರೆ ಮುರಿದ ಪೀಠೋಪಕರಣಗಳಂಥ ವಸ್ತುಗಳನ್ನು ಮನೆಯಿಂದ ಹೊರಹಾಕುವುದು ಉತ್ತಮ. ಮನೆಯ ಪೀಠೋಪಕರಣಗಳು ಯಾವಾಗಲೂ ಪರಿಪೂರ್ಣ ಸ್ಥಿತಿಯಲ್ಲಿರಬೇಕು. ವಾಸ್ತುಶಾಸ್ತ್ರದ ಪ್ರಕಾರ ಮುರಿದ ಪೀಠೋಪಕರಣಗಳು ಮನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಒಡೆದ ಅಡುಗೆ ಮನೆಯ ವಸ್ತುಗಳು

ಒಡೆದ ಅಡುಗೆ ಮನೆಯ ವಸ್ತುಗಳು

ಮನೆಯಲ್ಲಿ ಎಂದಿಗೂ ಒಡೆದ ಪಾತ್ರೆಗಳನ್ನು ಇಡಬೇಡಿ. ಈ ದೀಪಾವಳಿ ಆರಂಭಕ್ಕೂ ಮುನ್ನ ಮನೆಯನ್ನು ಶುದ್ಧ ಮಾಡುವಾಗ ಒಡೆದ ಪಾತ್ರೆಗಳನ್ನು ಹಾಗೂ ದೀರ್ಘಕಾಲದಿಂದ ಬಳಸದೇ ಇರುವ ಪಾತ್ರೆಗಳನ್ನು ಮನೆಯಿಂದ ಹೊರಹಾಕಿರಿ. ಮುರಿದ ಪಾತ್ರೆಗಳನ್ನು ಮನೆಯಲ್ಲಿ ಇಡುವುದು ಅಶುಭ ಹಾಗೂ ಇವು ಮನೆಯಲ್ಲಿ ಜಗಳಕ್ಕೆ ಕಾರಣವಾಗುತ್ತವೆ ಎಂದು ಪರಿಗಣಿಸಲಾಗಿದೆ.

ಶೂ-ಚಪ್ಪಲಿಗಳು

ಶೂ-ಚಪ್ಪಲಿಗಳು

ನಿಮ್ಮ ಮನೆಯಲ್ಲಿ ಹಳೆಯ, ಹರಿದ ಶೂಗಳು ಮತ್ತು ಚಪ್ಪಲಿಗಳು ಇದ್ದರೆ, ದೀಪಾವಳಿಗೆ ಮನೆಯನ್ನು ಸ್ವಚ್ಛಗೊಳಿಸುವಾಗ ಅವುಗಳನ್ನು ತೆಗೆಯಲು ಮರೆಯಬೇಡಿ. ಹರಿದ ಬೂಟುಗಳು ಮತ್ತು ಚಪ್ಪಲಿಗಳು ಮನೆಗೆ ನಕಾರಾತ್ಮಕತೆ ಮತ್ತು ದುರದೃಷ್ಟವನ್ನು ತರುತ್ತವೆ.

ವಿದ್ಯುತ್ ಉಪಕರಣಗಳು

ವಿದ್ಯುತ್ ಉಪಕರಣಗಳು

ನಿಮ್ಮ ಮನೆಯಲ್ಲಿ ಬಲ್ಬ್‌ಗಳು, ಟ್ಯೂಬ್ ಲೈಟ್‌ಗಳು ಅಥವಾ ಪವರ್ ಸ್ವಿಚ್‌ಗಳಂಥ ವಿದ್ಯುತ್ ಉಪಕರಣಗಳು ಇದ್ದರೆ ಅವುಗಳನ್ನು ಹೊರಗೆ ಹಾಕಿ ಅಥವಾ ದುರಸ್ತಿ ಮಾಡಿ. ದೀಪಾವಳಿಯ ಸಮಯದಲ್ಲಿ ಕತ್ತಲೆಯನ್ನು ದುರಾದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

English summary

Diwali 2021: Inauspicious things to throw away from house before deepawali

Here we are discussing about Diwali 2021: Inauspicious things to throw away from house before deepawali. Read more.
X
Desktop Bottom Promotion