For Quick Alerts
ALLOW NOTIFICATIONS  
For Daily Alerts

2018ರ ದೀಪಾವಳಿ: ದಿನಾಂಕ ಹಾಗೂ ಲಕ್ಷ್ಮೀ ಪೂಜೆಯ ಮುಹೂರ್ತ ಸಮಯ

|
Deepavali 2018 : ದೀಪಾವಳಿ ಹಬ್ಬದ ದಿನಾಂಕ ಹಾಗು ಲಕ್ಷ್ಮಿ ಪೂಜೆಯ ಮುಹೂರ್ತ | Oneindia Kannada

ಹಿಂದೂ ಧರ್ಮದಲ್ಲಿ ದೊಡ್ಡ ಹಬ್ಬವೆಂದರೆ ಅದು ದೀಪಾವಳಿ. ವಿಶ್ವದೆಲ್ಲೆಡೆಯಲ್ಲಿರುವಂತಹ ಹಿಂದೂಗಳು ದೀಪಾವಳಿ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸಿಕೊಳ್ಳುವರು. ಲಕ್ಷ್ಮೀಪೂಜೆ, ಗೋಪೂಜೆ ಇತ್ಯಾದಿ ಸಹಿತ ಸಿಹಿತಿಂಡಿ, ಹೊಸಬಟ್ಟಬರೆ ಹಾಗೂ ಪಟಾಕಿ ಹೀಗೆ ದೀಪಾವಳಿಗೆ ದೀಪಾವಳಿಯೇ ಸಾಟಿ. ಈ ವರ್ಷ ಅಂದರೆ 2018ರ ದೀಪಾವಳಿಯು ನವಂಬರ್ 7ರಂದು ಬಂದಿದೆ.

ಆದರೆ ದಕ್ಷಿಣ ಭಾರತದ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ದೀಪಾವಳಿಯನ್ನು ನ.6ರಂದು ಆಚರಿಸಿಕೊಳ್ಳಲಾಗುತ್ತಿದೆ. ಸಿಂಗಾಪುರದಲ್ಲಿರುವಂತಹ ಹಿಂದೂಗಳು ದಕ್ಷಿಣ ಭಾರತೀಯ ಸಂಸ್ಕೃತಿಯಂತೆ ನವಂಬರ್ 6, 2018ರಂದು ದೀಪಾವಳಿಯನ್ನು ಆಚರಿಸಿಕೊಳ್ಳುವರು.

ದೀಪಾವಳಿ ಐದು ದಿನಗಳ ಕಾಲ ಆಚರಿಸಲ್ಪಡುವುದು

ದೀಪಾವಳಿ ಐದು ದಿನಗಳ ಕಾಲ ಆಚರಿಸಲ್ಪಡುವುದು

ದೀಪಾವಳಿ ಐದು ದಿನಗಳ ಕಾಲ ಆಚರಿಸಲ್ಪಡುವುದು. ಇದರಲ್ಲಿ ಮೂರನೇ ದಿನವು ತುಂಬಾ ಮುಖ್ಯವಾಗಿ ಆಚರಿಸಲ್ಪಡುವುದು. ಐದು ದಿನಗಳ ಕಾಲ ಸಂಭ್ರಮಿಸುವ ದೀಪಾವಳಿ ವೇಳೆ ಧನ್ ತೇರಸ್, ಛೋಟಿ ದಿವಾಳಿ, ಬಡಿ ದಿವಾಳಿ, ಗೋವರ್ಧನ್ ಪೂಜಾ ಮತ್ತು ಭಾಯಿ ದೂಜಾ ಎಂದು ಕರೆಯಲಾಗುತ್ತದೆ. ಮನೆಗಳು, ಮಂದಿರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಹಚ್ಚಿ ಅಲಂಕಾರ ಮಾಡಲಾಗುತ್ತದೆ. ದೀಪಾವಳಿ ಹಬ್ಬದ ಸಂದೇಶವೆಂದರೆ `ಕೆಟ್ಟದರ ವಿರುದ್ಧ ಒಳ್ಳೆತನದ ಗೆಲುವು' ಮತ್ತು `ಅಂಧಕಾರದ ವಿರುದ್ಧ ಬೆಳಕಿನ ಗೆಲುವು'. ಹಿಂದೂ ಧರ್ಮದ ಪಂಚಾಂಗದ ಪ್ರಕಾರ ಕಾರ್ತಿಕ ಮಾಸದಲ್ಲಿ ದೀಪಾವಳಿ ಬರುವುದು. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ದೀಪಾವಳಿಯು ಅಕ್ಟೋಬರ್ ಅಥವಾ ನವಂಬರ್ ನಲ್ಲಿ ಬರುವುದು.

Most Read: ಲಕ್ಷ್ಮೀ ದೇವಿ ಚಂಚಲೆ ಅಂತ ಎಲ್ಲರಿಗೂ ಗೊತ್ತು! ಆದರೆ ಇವಳ ಜನನದ ಕಥೆ ಗೊತ್ತೇ?

ದೀಪಗಳ ಹಬ್ಬ

ದೀಪಗಳ ಹಬ್ಬ

ದೀಪಗಳ ಹಬ್ಬವೆಂದು ಪರಿಗಣಿಸಲಾಗಿರುವ ದೀಪಾವಳಿಯನ್ನು ಹಲವಾರು ವಿಧಾನಗಳಿಂದ ಆಚರಿಸಿಕೊಳ್ಳುವರು. ದೀಪಾವಳಿ ಸಮಯದಲ್ಲಿ ಹೊಸ ವಸ್ತುಗಳನ್ನು ಖರೀದಿ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಹಿಂದೂಗಳು ತಮ್ಮ ಮನೆ ಹಾಗೂ ಅಂಗಡಿ, ಕಚೇರಿಗಳನ್ನು ಶುಚಿಗೊಳಿಸಿ, ಬಣ್ಣ ಹಚ್ಚಿ ಹೊಸತನ ನೀಡುವರು. ಇದೇ ವೇಳೆ ಮನೆಗೆ ಬೇಕಾಗಿರುವಂತಹ ಹೊಸ ಉಪಕರಣಗಳು, ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ದೀಪಾವಳಿ ಸಮಯದಲ್ಲಿ ಖರೀದಿ ಮಾಡುವರು. ಐದು ದಿನಗಳ ಹಬ್ಬದ ಮೂರನೇ ದಿನವು ಇದಕ್ಕೆ ಕ್ಲೈಮ್ಯಾಕ್ಸ ಆಗಿದ್ದು, ಅಂದು ಭಾರತದಾದ್ಯಂತ ರಜೆ ಘೋಷಿಸಲಾಗುತ್ತದೆ.

ದೀಪಾವಳಿಯ ಪ್ರಾಮುಖ್ಯತೆ

ದೀಪಾವಳಿಯ ಪ್ರಾಮುಖ್ಯತೆ

ದಿವಾಳಿ ಎನ್ನುವ ಶಬ್ದವು ಸಂಸ್ಕೃತದ ದೀಪಾವಳಿಯಿಂದ ಬಂದಿದೆ. ಇದರ ಅರ್ಥ ದೀಪಗಳ ಸಾಲು ಎಂದು. ಅಣತೆಗಳನ್ನು ಹಚ್ಚಿ ಅದನ್ನು ಸಾಲಾಗಿ ಜೋಡಿಸಿಡುವುದು ಎಂದು ಈ ಪದದ ಅರ್ಥವಾಗಿದೆ. ದೀಪಾವಳಿಯು ಶರತ್ಕಾಲದ ಆರಂಭ ಮತ್ತು ಬೇಸಿಗೆಯ ಸುಗ್ಗಿಯ ಅಂತ್ಯದ ವೇಳೆ ಬರುವುದು. ದೀಪಾವಳಿಯು ವರ್ಷದ ತುಂಬಾ ಕತ್ತಲಿನ, ಅಮವಾಸ್ಯೆಯ ದಿನವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಇದು ಅತೀ ಕತ್ತಲೆಯ ದಿನವಾಗಿದೆ. ಈ ಹಬ್ಬವು ಹಿಂದೂಗಳ ಪ್ರಧಾನ ಹಬ್ಬವಾಗಿದ್ದರೂ ಇದನ್ನು ಜೈನರು, ಸಿಕ್ಖರು ಮತ್ತು ನೆವಾರ್ ಬೌದ್ಧರು ಆಚರಿಸುವರು. ಈ ದಿನಕ್ಕೆ ಐತಿಹಾಸಿಕ ಕಥೆಗಳು ಇವೆ ಮತ್ತು ಇದು ಧರ್ಮಕ್ಕೆ ಅನುಗುಣವಾಗಿ ಭಿನ್ನವಾಗಿದೆ.

ಭಾರತದಲ್ಲಿ ಇರುವಂತಹ ಹಲವಾರು ರಾಜ್ಯಗಳಿಗೆ ಅನುಗುಣವಾಗಿ ದೀಪಾವಳಿ ಪ್ರಾಮುಖ್ಯತೆಯು ಬದಲಾಗುತ್ತದೆ. ಯಾಕೆಂದರೆ ಒಂದೊಂದು ಪ್ರದೇಶದಲ್ಲಿ ಜನರು ವಿಭಿನ್ನವಾಗಿ ದೇವರನ್ನು ಪೂಜಿಸಿ, ಆಚರಣೆ ಮಾಡುವರು. ಹಿಂದೂ ಪುರಾಣ ರಾಮಾಯಣ ಮತ್ತು ದೀಪಾವಳಿಗೆ ಒಂದು ಮಹತ್ವದ ಅನುಬಂಧವಿದೆ. ಲಂಕೆಯಲ್ಲಿನ ರಾಜ ರಾವಣನನ್ನು ಅಯೋಧ್ಯೆಯ ರಾಮನು ಕೊಲ್ಲುವನು. ಈ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ. 14 ವರ್ಷಗಳ ವನವಾಸದ ಬಳಿಕ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನು ಅಯೋಧ್ಯೆಗೆ ಮರಳುವರು. ಈ ವೇಳೆ ಅಯೋಧ್ಯೆಯ ಜನರು ಇವರನ್ನು ಸ್ವಾಗತಿಸಲು ದೀಪಗಳನ್ನು ಹಚ್ಚಿಡುವರು ಮತ್ತು ತಮ್ಮ ಸಂಭ್ರಮವನ್ನು ಆಚರಿಸಿಕೊಳ್ಳುವರು. 2018ರಲ್ಲಿ ದೀಪಾವಳಿಯ ಐದು ದಿನಗಳು ಮತ್ತು ಇದರ ಮಹತ್ವಗಳು.

Most Read: ದೀಪಾವಳಿ ದಿನ ಮನೆಗೆ ಉಪ್ಪು ತರಬೇಕು ಹೇಳುತ್ತಾರೆ, ಯಾಕೆ ಗೊತ್ತೇ?

ಧನ್ ತೇರಸ್ 2018

ಧನ್ ತೇರಸ್ 2018

ಧನ್ ತೇರಸ್ 2018 ನವಂಬರ್ 5ರಂದು ಬಂದಿದೆ. ಈ ದಿನ ಹೆಚ್ಚಿನ ಜನರು ತಮ್ಮ ಮನೆಗೆ ಬೇಕಾಗಿರುವ ಪಾತ್ರೆಗಳು, ಬಂಗಾರದ ನಾಣ್ಯ ಮತ್ತು ಆಭರಣಗಳನ್ನು ಖರೀದಿಸುವರು. ಮನೆ ಹಾಗೂ ಕಚೇರಿಗಳನ್ನು ಸ್ವಚ್ಛಗೊಳಿಸುವರು ಮತ್ತು ದೀಪಗಳು ಹಾಗೂ ವಿವಿಧ ರೀತಿಯಿಂದ ಶೃಂಗಾರ ಮಾಡುವರು.

ಛೋಟಿ ದೀಪಾವಳಿ 2018

ಛೋಟಿ ದೀಪಾವಳಿ 2018

ಈ ದಿನವನ್ನು ನರಕ ಚತುದರ್ಶಿ ಎಂದು ಕರೆಯಲಾಗುವುದು. ಆದರೆ ಸಾಮಾನ್ಯವಾಗಿ ಹೆಚ್ಚಿನ ಕಡೆಗಳಲ್ಲಿ ಛೋಟಿ ದಿವಾಳಿ ಎಂದು ಹೇಳಲಾಗುತ್ತದೆ. ಈ ವರ್ಷ ಛೋಟಿ ದಿವಾಳಿಯು ನವಂಬರ್ 6, 2018ರಂದು ಬಂದಿದೆ. ಈ ದಿನ ಜನರು ತಮ್ಮ ಅತಿಥಿಗಳಿಗೆ, ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ನೀಡಲು ವಿವಿಧ ರೀತಿಯ ಸಿಹಿತಿಂಡಿಗಳನ್ನು ಖರೀದಿ ಮಾಡುವರು. ದೀಪಾವಳಿ ಸಮಯದಲ್ಲಿ ಹಲ್ವಾ, ಲಾಡು ಮತ್ತು ಇತರ ಸಿಹಿತಿಂಡಿಗಳಿಗೆ ಬಂದಿರುವಂತಹ ಬೇಡಿಕೆಗಳನ್ನು ಪೂರೈಸಲು ಸಿಹಿ ತಿಂಡಿ ಮಾರಾಟಗಾರರು ಹೆಚ್ಚಿನ ಸಮಯ ಕೆಲಸ ಮಾಡುವರು. ಕೆಲವು ಮಹಿಳೆಯರು ಮನೆಯಲ್ಲೇ ಸಿಹಿತಿಂಡಿಗಳನ್ನು ತಯಾರಿಸಿಕೊಳ್ಳುವರು. ಇದನ್ನು ಅವರು ದೀಪಾವಳಿ ಸಮಯದಲ್ಲಿ ಮನೆಗೆ ಬರುವಂತಹ ಅತಿಥಿಗಳಿಗೆ ನೀಡುವರು.

ದೀಪಾವಳಿ 2018

ದೀಪಾವಳಿ 2018

ಐದು ದಿನಗಳ ದೀಪಾವಳಿಯಲ್ಲಿ ಈ ದಿನವು ತುಂಬಾ ಮಹತ್ವದ್ದಾಗಿದೆ. ಈ ದಿನ ಹೆಚ್ಚಿನ ಜನರು ಲಕ್ಷ್ಮೀ ಪೂಜೆ ಮಾಡುವರು. ಸಂಪತ್ತು ಹಾಗೂ ಸಮೃದ್ಧಿಯ ದೇವಿಯಾಗಿರುವ ಲಕ್ಷ್ಮೀ ದೇವಿಯನ್ನು ಜನರು ಈ ದಿನ ಪೂಜೆ ಮಾಡುವರು. ಲಕ್ಷ್ಮೀ ಪೂಜೆ ಮಾಡಲು ಕೆಲವೊಂದು ಮುಹೂರ್ತ ಹಾಗೂ ಶುಭಸಮಯವಿದೆ. ಈ ವರ್ಷ ಲಕ್ಷ್ಮೀ ಪೂಜೆ ಮಾಡಲು ನವಂಬರ್ 7, 2018ರಂದು ಸಂಜೆ 5.57 ಮತ್ತು 7.53ರಂದು. ದೀಪಾವಳಿಯ ಈ ಸಮಯದಲ್ಲಿ ಕುಟುಂಬದವರು ಜತೆಯಾಗಿ ಇದ್ದುಕೊಂಡು ಪ್ರಾರ್ಥನೆ ಸಲ್ಲಿಸುವರು ಮತ್ತು ದೀಪಗಳನ್ನು ಹಚ್ಚಿ, ಸಿಹಿತಿಂಡಿ ವಿತರಿಸುವರು. ಈ ದಿನ ಸ್ನೇಹಿತರು, ಕುಟುಂಬದವರು ಮತ್ತು ಸಂಬಂಧಿಕರ ಮಧ್ಯೆ ಉಡುಗೊರೆ ಮತ್ತು ಸಿಹಿ ಹಂಚಿಕೊಳ್ಳುವರು.

Most Read: ಜೀವನದಲ್ಲಿ ಶಾಂತಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಿಸಲು, ದೇವರ ಕೋಣೆಯ ಎದುರು ತೆಂಗಿನಕಾಯಿ ಇಟ್ಟು ಪೂಜೆ ಮಾಡಿ!

ಗೋವರ್ಧನ ಪೂಜೆ 2018

ಗೋವರ್ಧನ ಪೂಜೆ 2018

ಈ ದಿನವು ದೀಪಾವಳಿ ಬಳಿಕ ಬರುವುದು. ಈ ವರ್ಷ ನವಂಬರ್ 8, 2018ರಂದು ಬಂದಿದೆ. ಈ ದಿನವನ್ನು ಭಾರತದ ಹೆಚ್ಚಿನ ಕಡೆಗಳಲ್ಲಿ ಪತಿ ಹಾಗೂ ಪತ್ನಿಯ ಅನ್ಯೋನ್ಯ ಸಂಬಂಧವನ್ನು ಆಚರಿಸಲಾಗುವುದು. ಈ ದಿನ ಪತಿಯು ತನ್ನ ಪತ್ನಿಗೆ ಉಡುಗೊರೆ ನೀಡುವನು. ಇನ್ನು ಕೆಲವು ಪ್ರದೇಶಗಳಲ್ಲಿ ಪೋಷಕರು ಹೊಸತಾಗಿ ಮದುವೆಯಾದ ಮಗಳು ಹಾಗೂ ಅಳಿಯನನ್ನು ತಮ್ಮ ಮನೆಗೆ ಆಹ್ವಾನಿಸುವರು. ಈ ವೇಳೆ ಅವರಿಗೆ ಹಬ್ಬದ ಊಟ ಮಾಡಿಸಿ, ಉಡುಗೊರೆ ನೀಡುವರು.

ಭಾಯ್ ದೂಜ್ 2018

ಭಾಯ್ ದೂಜ್ 2018

ಭೈಯಾ ದೂಜ್ ಅಥವಾ ಭಾಯಿ ದೂಜ್ ಹಬ್ಬದ ಕೊನೆಯ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಭಾಯ್ ದೂಜ್ ನ್ನು ನವಂಬರ್ 9, 2018ರಂದು ಆಚರಿಸಲಾಗುತ್ತದೆ. ಈ ದಿನವು ಸೋದರ ಮತ್ತು ಸೋದರಿಯ ನಡುವಿನ ಭಾಂದವ್ಯದ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವು ಇವರಿಗೆ ತುಂಬಾ ವಿಶೇಷವಾಗಿರುವುದು. ಈ ದಿನದಂದು ಸೋದರನು ತನ್ನ ಸೋದರಿಯ ಮನೆಗೆ ಹೋಗಿವನು. ಅಲ್ಲಿ ಆತನಿಗೆ ಸೋದರಿಯು ತಿಲಕವನ್ನಿಟ್ಟು ಸ್ವಾಗತಿಸುವಳು. ಇದು ಒಂದು ರೀತಿಯ ರಕ್ಷಾಬಂಧನದಂತೆ ಆಚರಿಸಲ್ಪಡುತ್ತದೆ.

ದೀಪಾವಳಿ 2018: ವಿಶೇಷ ಆಹಾರ ಮತ್ತು ಸಿಹಿತಿಂಡಿಗಳು

ದೀಪಾವಳಿ 2018: ವಿಶೇಷ ಆಹಾರ ಮತ್ತು ಸಿಹಿತಿಂಡಿಗಳು

ದೀಪಾವಳಿ ಎಂದರೆ ಸಿಹಿಯ ಹಬ್ಬವೆಂದೇ ಹೇಳಬಹುದು ಮತ್ತು ಈ ಹಬ್ಬದ ವೇಳೆ ವಿವಿಧ ರೀತಿಯ ಸಿಹಿತಿಂಡಿಗಳನ್ನು ಮಾಡಿ ಹಂಚಿಕೊಳ್ಳಲಾಗುತ್ತದೆ. ಮಾರುಕಟ್ಟೆಯಲ್ಲಿ ಪ್ರತಿಯೊಂದು ಕಡೆಯಲ್ಲೂ ಸಿಹಿತಿಂಡಿಯ ಭರಾಟೆ. ದೀಪಾವಳಿ ಸಮಯದಲ್ಲಿ ಒಣಹಣ್ಣುಗಳು, ಬೀಜಗಳು ಮತ್ತು ಕೆಲವು ಸಿಹಿತಿಂಡಿಗಳನ್ನು ಇಟ್ಟುಕೊಂಡಿರುವ ಅರಿವಾಣವನ್ನು ಮನೆಗೆ ಬಂದ ಅತಿಥಿಗಳಿಗೆ ನೀಡಲಾಗುತ್ತದೆ. ಅವರು ಕೂಡ ಇದೇ ರೀತಿಯಲ್ಲಿ ಸಿಹಿ ತಿಂಡಿಯನ್ನು ತರುತ್ತಾರೆ. ದೀಪಾವಳಿಯ ಸಮಯದಲ್ಲಿ ಆಹಾರವು ಪ್ರಮುಖ ಆಕರ್ಷಣೆಯಾಗಿರುವುದು. ಅದರಲ್ಲೂ ಸಿಹಿ ತಿಂಡಿಗಳು. ಹೆಚ್ಚಿನ ಜನರು ಮನೆಯಲ್ಲೇ ಸಿಹಿ ತಿಂಡಿಗಳನ್ನು ತಯಾರಿಸಿಕೊಂಡು ಮನೆಗೆ ಬಂದ ಅತಿಥಿಗಳಿಗೆ ದೀಪಾವಳಿಯ ದಿನ ಬಡಿಸುವರು. ಪಟಾಕಿ ಸಿಡಿಸುವುದು, ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವುದು, ದೇಶೀಯ ಬೆಣ್ಣೆಯಿಂದ ಮಾಡಿರುವಂತಹ ಸಿಹಿ ತಿಂಡಿಗಳು ದೀಪಾವಳಿಯ ಪ್ರಮುಖ ಆಕರ್ಷಣೆಯಾಗಿದೆ.

English summary

Diwali 2018: Dates, Lakshmi Puja Muhurat

Diwali is one of the most important festival celebrated by Hindus all around the world. Diwali 2018 will be celebrated on 7th November in most parts of India, and on 6th November in the South Indian states of Karnataka, Kerala and Tamil Nadu. Hindu residents of Singapore will also celebrate Diwali along with these three states on November 6th, 2018. The festival and its celebrations usually last for five days, among which the third day is the main day.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more