For Quick Alerts
ALLOW NOTIFICATIONS  
For Daily Alerts

5 ಬಗೆಯ ಶ್ರಾದ್ಧಗಳು ಹಾಗೂ ಅವುಗಳನ್ನು ಯಾವಾಗ ಮಾಡಲಾಗುವುದು?

|

ಶ್ರಾದ್ಧ ಅಥವಾ ಪಿಂಡ ಪ್ರಧಾನ ಎನ್ನುವುದು ಒಂದು ಪುಣ್ಯ ಕಾರ್ಯ. ಶ್ರಾದ್ಧ ಮಾಡುವುದರಿಂದ ಪುಣ್ಯ ಲಭಿಸುವುದು. ನಮ್ಮನ್ನು ಬಿಟ್ಟು ಅಗಲಿದ ಹಿರಿಯರಿಗೆ ಶ್ರಾದ್ಧ ಮಾಡಿದರೆ ಅವರಿಗೆ ಮೋಕ್ಷ ಸಿಗುವುದು, ಇದರಿಂದ ತೃಪ್ತಿರಾಗಿ ನಮ್ಮ ಕುಟುಂಬದಲ್ಲಿ ಆರೋಗ್ಯ-ಐಶ್ವರ್ಯ ಎಂದು ಆಶೀರ್ವದಿಸುತ್ತಾರೆ.

ಪಿತೃದೋಷ ದೊಡ್ಡ ಶಾಪವಾಗಿದೆ. ಪಿತೃದೋಷಕ್ಕೆ ಗುರಿಯಾದರೆ ಕುಟುಂಬದಲ್ಲಿ ಅನೇಕ ಕಷ್ಟಗಳು ಎದುರಾಗುವುದು, ಏಳಿಗೆಯಾಗುವುದೇ ಇಲ್ಲ, ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಇದರಿಂದ ಪಿತೃಶಾಪಕ್ಕೆ ಗುರಿಯಾಗಬಾರದು ಎನ್ನುತ್ತಾರೆ. ಪಿತೃದೋಷದಿಂದ ಮುಕ್ತರಾಗಲು ಶಾದ್ಧ ಮಾಡಲಾಗುವುದು.

ಶ್ರಾದ್ಧ ಮಾಡಿದರೆ ಹಿರಿಯರ ಆಶೀರ್ವಾದ ನಮ್ಮ ಮೇಲಿರುತ್ತದೆ. 5 ಬಗೆ ಶ್ರಾದ್ಧ ಮಾಡಲಾಗುವುದು. ಒಂದೊಂದು ಬಗೆಯ ಶ್ರಾದ್ಧವನ್ನು ಒಂದೊಂದು ಸಮಯದಲ್ಲಿ ಮಾಡಲಾಗುವುದು. ಶ್ರಾದ್ಧದ ವಿಧಗಳು ಯಾವುವು? ಅವುಗಳ ಮಹತ್ವವೇನು ಎಂದು ತಿಳಿಯೋಣ ಬನ್ನಿ:

ನಿತ್ಯ ಶ್ರಾದ್ಧ

ನಿತ್ಯ ಶ್ರಾದ್ಧ

ನಿತ್ಯ ಶ್ರಾದ್ಧ ಎನ್ನುವುದು ದಿನಾ ಮಾಡುವ ಶ್ರಾದ್ಧ ಕಾರ್ಯವಾಗಿದೆ. ಈ ನಿತ್ಯ ಶ್ರಾದ್ಧದಲ್ಲಿ ನೀರನ್ನು ಮಾತ್ರ ಅರ್ಪಿಸಲಾಗುವುದು, ಪಿಂಡ ಪ್ರಧಾನ ಮಾಡುವುದಿಲ್ಲ.

ಏಕೋದಿಷ್ಟ ಶ್ರಾದ್ಧ

ಏಕೋದಿಷ್ಟ ಶ್ರಾದ್ಧ

ಈ ಶ್ರಾದ್ಧವನ್ನು ಒಬ್ಬ ವ್ಯಕ್ತಿಗಾಗಿ ಮಾಡಲಾಗುವುದು. ವ್ಯಕ್ತಿ ಮರಣವೊಂದಿದಾಗ ಏಕೋದಿಷ್ಟ ಶ್ರಾದ್ಧ ಮಾಡಲಾಗುವುದು. ಪ್ರತೀವರ್ಷ ಅವರ ವರ್ಷ ತುಂಬುವಾಗ ಏಕೋದಿಷ್ಟ ಶ್ರಾದ್ಧ ಮಾಡಲಾಗುವುದು. ಇದನ್ನು ವಾರ್ಷಿಕ ಶ್ರಾದ್ಧ ಎಂದು ಕೂಡ ಕರೆಯಲಾಗುವುದು. ಭೀಷ್ಮ ಅಷ್ಟಮಿಯಂದು ಪಿತಾಮಕ ಭೀಷ್ಮನಿಗೆ ಏಕೋದಿಷ್ಟ ಶ್ರಾದ್ಧ ಮಾಡಲಾಗುವುದು.

ಕಾಮ್ಯಾ ಶ್ರಾದ್ಧ:

ಕಾಮ್ಯಾ ಶ್ರಾದ್ಧ:

ವಿಶೇಷ ಬೇಡಿಕೆಗಳು ನೆರವೇರಲು ಈ ಶ್ರಾದ್ಧವನ್ನು ಮಾಡಲಾಗುವುದು. ಈ ಶ್ರಾದ್ಧವನ್ನು ರೋಹಿಣಿ ಅಥವಾ ಕೃತಿಕಾ ನಕ್ಷತ್ರದಲ್ಲಿ ಮಾಡಲಾಗುವುದು.

ವೃದ್ಧಿ ಶ್ರಾದ್ಧ:

ವೃದ್ಧಿ ಶ್ರಾದ್ಧ:

ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಈ ಶ್ರಾದ್ಧ ಮಾಡಲಾಗುವುದು. ಈ ವೃದ್ಧಿ ಶ್ರಾದ್ಧವನ್ನು ಹಿರಿಯರ ಆಶೀರ್ವಾದ ಪಡೆಯಲು ಮಾಡಲಾಗುವುದು. ವೃದ್ಧಿ ಶ್ರಾದ್ಧವನ್ನು ನಂದಿ ಶ್ರಾದ್ಧ ಎಂದು ಕೂಡ ಕರೆಯಲಾಗುವುದು.

ಪಾರ್ವಣ ಶ್ರಾದ್ಧ

ಪಾರ್ವಣ ಶ್ರಾದ್ಧ

ಪಾರ್ವಣ ಶ್ರಾದ್ಧ ಪಿತೃಪಕ್ಷ, ಭಾದ್ರಪದ ಪೂರ್ಣಿಮೆ ಇಂಥ ವಿಶೇಷ ಸಂದರ್ಭಗಳಲ್ಲಿ ಮಾಡಲಾಗುವುದು. ಈ ಶ್ರಾದ್ಧದಲ್ಲಿ ಪಿಂಡ ಪ್ರಧಾನ ಮಾಡಲಾಗುವುದು.

ಪಾರ್ವಣ ಶ್ರಾದ್ಧ ಮಾಡಲು 2021ರಲ್ಲಿ ಸೆಪ್ಟೆಂಬರ್‌ 20 ಅಕ್ಟೋಬರ್‌ 6ರವರೆಗೆ ಸಮಯವಿದೆ.

ಪಿತೃ ಪಕ್ಷ ಯಾವಾಗ ಪ್ರಾರಂಭ, ಯಾವಾಗ ಮುಕ್ತಾಯ? (bold)

ಸೆಪ್ಟೆಂಬರ್ 2021

ಸೆಪ್ಟೆಂಬರ್ 20 : ಪೂರ್ಣಿಮಾ ಶ್ರಾದ್ಧ

ಸೆಪ್ಟೆಂಬರ್ 21 : ಪ್ರತಿಪಾದ ಶ್ರಾದ್ಧ

ಸೆಪ್ಟೆಂಬರ್ 22 : ದ್ವಿತೀಯಾ ಶ್ರಾದ್ಧ

ಸೆಪ್ಟೆಂಬರ್ 23 :ತ್ರಿತೀಯಾ ಶ್ರಾದ್ಧ

ಸೆಪ್ಟೆಂಬರ್ 24: ಚತುರ್ಥಿ ಶ್ರಾದ್ಧ

ಸೆಪ್ಟೆಂಬರ್ 25 : ಪಂಚಮಿ ಶ್ರಾದ್ಧ

ಸೆಪ್ಟೆಂಬರ್ 26 : ಷಷ್ಠಿ ಶ್ರಾದ್ಧ

ಸೆಪ್ಟೆಂಬರ್ 28: ಸಪ್ತಮಿ ಶ್ರಾದ್ಧ

ಸೆಪ್ಟೆಂಬರ್ 29: ಅಷ್ಟಮಿ ಶ್ರಾದ್ಧ

ಸೆಪ್ಟೆಂಬರ್ 30: ನವಮಿ ಶ್ರಾದ್ಧ

ಅಕ್ಟೋಬರ್ 2021

ಅಕ್ಟೋಬರ್ 1: ದಶಮಿ ಶ್ರಾದ್ಧ

ಅಕ್ಟೋಬರ್ 2: ಏಕಾದಶಿ ಶ್ರಾದ್ಧ

ಅಕ್ಟೋಬರ್ 3: ದ್ವಾದಶಿ ಶ್ರಾದ್ಧ

ಅಕ್ಟೋಬರ್ 3: ಮಘಾ ಶ್ರಾದ್ಧ

ಅಕ್ಟೋಬರ್ 4: ತ್ರಯೋದಶಿ ಶ್ರಾದ್ಧ

ಅಕ್ಟೋಬರ್ 5: ಚತುರ್ದಶಿ ಶ್ರಾದ್ಧ

ಅಕ್ಟೋಬರ್ 6: ಸರ್ವ ಪಿತೃ ಅಮವಾಸ್ಯೆ

English summary

Different Types of Shradha and when it performed in Kannada

Different Types of Shradha and when it performed in Kannada, read on...
Story first published: Thursday, September 16, 2021, 16:54 [IST]
X
Desktop Bottom Promotion