For Quick Alerts
ALLOW NOTIFICATIONS  
For Daily Alerts

ಭಕ್ತನ ನೆರವಿಗೆ ಸದಾ ಧಾವಿಸುವ ಪರಶಿವನ ನಾನಾ ರೂಪಗಳ ಅವತಾರ

By Deepu
|

ಭಗವಂತ ಶಿವನ ಹೆಸರು ಕೇಳುತ್ತಿದ್ದಂತೆಯೇ ಮನದಲ್ಲಿ ಮೂಡುವ ಚಿತ್ರವೆಂದರೆ ಹಿಮಪರ್ವತದ ಮೇಲೆ ಕುಳಿತು ಶಿಖದಲ್ಲಿ ಚಂದ್ರನನ್ನೂ, ಕೊರಳಲ್ಲಿ ನಾಗನನ್ನೂ, ರುದ್ರಾಕ್ಷಿಮಾಲೆಗಳನ್ನೂ, ಕೈಯಲ್ಲೊಂದು ತ್ರಿಶೂಲ, ಡಮರುಗ ಮತ್ತು ತಲೆಯಿಂದ ಚಿಮ್ಮುತ್ತಿರುವ ಗಂಗೆ, ಹೀಗೆ ಅನೇಕ ರೀತಿಯ ಕಲ್ಪನೆಗಳು ಮನದಲ್ಲಿ ಮೂಡುತ್ತದೆ. ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು.

ಇನ್ನು ತ್ರಿಮೂರ್ತಿಗಳಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಗಳಿಸಿಕೊಂಡಿರುವ ಶಿವನನ್ನು ಸೃಷ್ಟಿಕರ್ತ ಎಂದಾಗಿ ಬೋಧಿಸುತ್ತಾರೆ. ಬ್ರಹ್ಮನು ಸೃಷ್ಟಿಯನ್ನು ರಚಿಸುವ ಕಲಾಕಾರ ಎಂದೆನಿಸಿದ್ದರೂ ಮೂಲವಾಗಿ ಶಿವನು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಏಕೆಂದರೆ ಸಕಲ ಚರಾ ಚರ ವಸ್ತುಗಳಲ್ಲೂ ಶಿವನು ತಮ್ಮ ಅಧಿಪತ್ಯವನ್ನು ಸ್ಥಾಪಿಸಿಕೊಂಡಿದ್ದಾರೆ ಎಂಬ ಮಾತಿದೆ. ಪಂಚಭೂತಗಳಲ್ಲಿ ಲೀನಗೊಂಡಿರುವ ಶಿವನಿಗೆ ಬೇರೆ ಬೇರೆ ಆಕಾರ ರೂಪಗಳಿದ್ದು ಹೆಚ್ಚಾಗಿ ದೇವಸ್ಥಾನಗಳಲ್ಲಿ ಶಿವನನ್ನು ಪೂಜಿಸುವುದು ಲಿಂಗ ರೂಪದಲ್ಲಾಗಿದೆ....

ಶಿವನ ನಾನಾ ಹೆಸರುಗಳು

ಶಿವನ ನಾನಾ ಹೆಸರುಗಳು

ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವೈಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ.

ನಾಟ್ಯ ರೂಪದಲ್ಲಿ ನಟರಾಜನ ಶೈಲಿಯಲ್ಲಿ

ನಾಟ್ಯ ರೂಪದಲ್ಲಿ ನಟರಾಜನ ಶೈಲಿಯಲ್ಲಿ

ತಮ್ಮ ನೃತ್ಯ ಭಂಗಿಯಲ್ಲಿ ನಾಟ್ಯ ರಾಜ ನಿಂತಿರುವುದನ್ನು ನಟರಾಜ ರೂಪವು ತೋರಿಸುತ್ತದೆ. ಶಿವನನ್ನು ವಿನಾಶದ ಪ್ರತಿರೂಪವಾಗಿ ಕಾಣಲಾಗುತ್ತಿದ್ದು ಜೀವನ ಮತ್ತು ಸಾವನ್ನು ಪ್ರತಿನಿಧಿಸುವ ರೂಪವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮ ಗ್ರಂಥಗಳಲ್ಲಿ ಕೂಡ ಇದೇ ಅಂಶವನ್ನು ಸಾರಲಾಗಿದೆ.ಶಿವನು ವಿನಾಶದ ಸಮಯದಲ್ಲಿ ನರ್ತಿಸುವುದನ್ನು ತಾಂಡವ ನೃತ್ಯವೆಂದು ಕರೆಯಲಾಗಿದೆ ಇದು ಜನನ ಮರಣ ಮತ್ತು ಮರುಜನ್ಮದ ಅವಿನಾಭಾವ ಸಂಬಂಧವನ್ನು ಹೊಂದಿದೆ. ಶಿವನು ತಾಂಡವ ನೃತ್ಯವನ್ನು ಆಡುವಾಗ ಮಿಂಚು ಮಿಂಚುತ್ತದೆ, ದೈತ್ಯ ಅಲೆಗಳು ಅಪ್ಪಳಿಸುತ್ತವೆ, ವಿಷಪೂರಿತ ಹಾವುಗಳು ತಮ್ಮ ವಿಷವನ್ನು ಕಕ್ಕುತ್ತವೆ ಮತ್ತು ಬೆಂಕಿಯು ತನ್ನ ಕೆನ್ನಾಲಗೆಯನ್ನು ಚಾಚಿ ಎಲ್ಲವನ್ನು ಭಸ್ಮ ಮಾಡಿಬಿಡುತ್ತದೆ. ಇನ್ನು ಪರಶಿವನು ರಚನೆಯ ನೃತ್ಯವನ್ನು ಆಡಿದರೆ ಅದನ್ನು ಆನಂದ ನೃತ್ಯವೆಂದು ಕರೆಯಲಾಗಿದೆ. ಇದು ವಿಶ್ವವನ್ನು ಶಾಂತ ಮತ್ತು ಸಮೃದ್ಧಗೊಳಿಸುತ್ತದೆ.

ಅರ್ಧನಾರೀಶ್ವರ

ಅರ್ಧನಾರೀಶ್ವರ

ಶಿವ ಮತ್ತು ಪಾರ್ವತಿ ದೇವಿಯ ಮಿಶ್ರ ರೂಪವಾಗಿದೆ ಅರ್ಧನಾರೀಶ್ವರ. ಇದು ಜೀವನವನ್ನು ಸಂಕೇತಿಸುತ್ತದೆ. ಅರ್ಧ ಪುರುಷ ಮತ್ತು ಇನ್ನರ್ಧ ಸ್ತ್ರೀ ರೂಪದಲ್ಲಿ ಅರ್ಧನಾರೀಶ್ವರ ಕಂಡುಬಂದಿದ್ದು ಪುರುಷ ಮತ್ತು ಮಹಿಳೆ ಸಮಾನರು ಹಾಗೂ ಇವೆರಡೂ ಪವಿತ್ರ ಆತ್ಮಗಳು ಎಂದಾಗಿ ಬಿಂಬಿತವಾಗಿವೆ. ಪುರಾಣಗಳ ಪ್ರಕಾರ ನಮ್ಮ ವಿಶ್ವದಲ್ಲಿ ಎಂದಿಗು ನಾಶವಾಗದಿರುವ ಎರಡು ಶಕ್ತಿಗಳು ಇವೆಯಂತೆ: ಒಂದು ಪುರುಷ ಮತ್ತೊಂದು ಪ್ರಕೃತಿ. ಪ್ರಕೃತಿಯು ಮೂರು ಗುಣಗಳನ್ನು ಹೊಂದಿದೆ: ಸತ್ವ (ಪವಿತ್ರತೆ ಮತ್ತು ಸಂರಕ್ಷಣೆ ಮಾಡುವ ಗುಣ), ರಜಸ್ (ಸೃಷ್ಟಿ) ಮತ್ತು ತಮಸ್ (ಅಂಧಕಾರ ಅಥವಾ ವಿನಾಶಕಾರಿ) ಇವೇ ಆ ಮೂರು ಗುಣಗಳು. ಈ ಮೂರು ಗುಣಗಳ ನಡುವೆ ಯಾವಾಗ ಸಮತೋಲನವು ತಪ್ಪಿ ಹೋಗುತ್ತದೆಯೋ, ಆಗ ಸೃಷ್ಟಿ ಕಾರ್ಯವು ಆರಂಭವಾಗುತ್ತದೆ. ರಜಸ್ ಗುಣವು ಸೃಷ್ಟಿಯನ್ನು ಮುಂದುವರಿಸುತ್ತದೆ. ಆದ್ದರಿಂದ ಪುರುಷ ಮತ್ತು ಪ್ರಕೃತಿ ಎಂದಿಗು ಸ್ವಾತಂತ್ರವಾಗಿ ಅಸ್ತಿತ್ವದಲ್ಲಿರುವುದಿಲ್ಲ. ಸೃಷ್ಟಿಯನ್ನು ಮಾಡುವ ಸಲುವಾಗಿ ಇವೆರಡು ಜೊತೆಯಾಗಿ ಇರುತ್ತವೆ. ದೇವಿ ಭಾಗವತ ಪುರಾಣದ ಪ್ರಕಾರ ಪುರುಷನು (ಶಿವ, ಲೌಕಿಕ ರೂಪದಲ್ಲಿ) ಆದಿಶಕ್ತಿಯನ್ನು ಒಲಿಸಿಕೊಳ್ಳಲು "ಕ್ಲೀಂ" ಎನ್ನುವ ಬೀಜ ಮಂತ್ರದಿಂದ ಸಾವಿರ ವರ್ಷಗಳ ಕಾಲ ಧ್ಯಾನ ಮಾಡಿದನಂತೆ.

ಗಂಗಾಧರ

ಗಂಗಾಧರ

ಗಂಗೆಯನ್ನು ತಮ್ಮ ಜಟೆಯಲ್ಲಿ ಧರಿಸುವ ಶಿವನಿಗೆ ಗಂಗಾಧರ ಎಂಬ ಹೆಸರೂ ಇದೆ. ಒಮ್ಮೆ ಭಗೀರಥ ಮಹರ್ಷಿಯು ಗಂಗೆಯನ್ನು ಸ್ವರ್ಗದಿಂದ ಧರೆಗಿಳಿಯುವಂತೆ ಮಾಡಿದಾಗ ಆಕೆ ತಾನು ಬಂದಾಗ ಇಡಿಯ ಭೂಮಿಯೇ ಅಲ್ಲೋಲ ಕಲ್ಲೋಲವಾಗಲಿದೆ. ತನ್ನ ರಭಸವನ್ನು ತಡೆಹಿಡಿಯುವ ಸಾಮರ್ಥ್ಯವಿದ್ದಲ್ಲಿ ಮಾತ್ರವೇ ತನ್ನನ್ನು ಭೂಮಿಗೆ ಕರೆಸಿಕೊಳ್ಳುವಂತೆ ಸವಾಲೊಡ್ಡುತ್ತಾಳೆ. ಭಗೀರಥನ ಕೋರಿಕೆಯ ಮೇರೆಗೆ ಶಿವನು ತಮ್ಮ ಕೂದಲನ್ನು ಹರಡಿ ಗಂಗೆಯ ಪ್ರಬಲತೆಯನ್ನು ಹಿಡಿದಿಡುತ್ತಾರೆ ಮತ್ತು ಭೂಮಿಗೆ ಆಕೆ ಸಾವಕಾಶವಾಗಿ ಹರಿಯುವಂತೆ ಮಾಡುತ್ತಾರೆ.

ಭಿಕ್ಷಾಟನೆ

ಭಿಕ್ಷಾಟನೆ

ಭಿಕ್ಷಾಟನೆ ಎಂಬುದು ಭಿಕ್ಷೆ ಬೇಡುವುದು ಎಂದಾಗಿದೆ. ಶಿವನ ಈ ರೂಪವು ಸೊಕ್ಕು ಮತ್ತು ಅಜ್ಞಾನವನ್ನು ನಿವಾರಿಸುತ್ತದೆ. ಶಿವನನ್ನು ಸರಳ ದಿರಿಸುಗಳ ರೂಪದಲ್ಲಿ ಚಿತ್ರಿಸಲಾಗಿದ್ದು, ಹುಲಿಯ ಚರ್ಮವನ್ನು ಧರಿಸಿಕೊಂಡು, ತ್ರಿಶೂಲವನ್ನು ಕೈಯಲ್ಲಿ ಹಿಡಿದುಕೊಂಡು ಹಾವನ್ನು ಕೊರಳಿಗೆ ಹಾರವಾಗಿ ಧರಿಸಿ ಒಂದು ಕೈನಲ್ಲಿ ತಲೆಬುರುಡೆಯನ್ನು ಹಿಡಿದುಕೊಂಡು, ಡಮರುವನ್ನು ಬಾರಿಸುತ್ತಾ ಶಿವನು ತಮ್ಮ ರೂಪವನ್ನು ಭಕ್ತರಿಗೆ ಪ್ರದರ್ಶಿಸುತ್ತಾರೆ.

ಭೈರವ ಅವತಾರ

ಭೈರವ ಅವತಾರ

ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದಾಗಿ ಬ್ರಹ್ಮ ಮತ್ತು ವಿಷ್ಣುವು ಯುದ್ಧ ನಡೆಸುತ್ತಿದ್ದ ಸಮಯದಲ್ಲಿ ಶಿವನು ಭೈರವ ಅವತಾರವನ್ನು ತಾಳಿ ಬ್ರಹ್ಮನ ಐದನೇ ತಲೆಯನ್ನು ಅವರು ಸುಳ್ಳು ಹೇಳಿದ್ದಕ್ಕಾಗಿ ಕಡಿಯುತ್ತಾರೆ. ಇದರಿಂದ ಬ್ರಹ್ಮ ಹತ್ಯಾ ದೋಷಕ್ಕೆ ಶಿವನ ಗುರಿಯಾಗುತ್ತಾರೆ. ಹನ್ನೆರಡು ವರ್ಷಗಳ ಕಾಲ ಶಿವನು ಬ್ರಹ್ಮನ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಬೇಕಾಗಿ ಬರುತ್ತದೆ. ಎಲ್ಲಾ ಶಕ್ತಿಪೀಠಗಳನ್ನು ಕಾಯುವ ಹೊಣೆಯನ್ನು ಶಿವನು ಈ ಅವತಾರದಲ್ಲಿ ಹೊತ್ತುಕೊಂಡಿರುತ್ತಾರೆ.

ಹನುಮಾನ್‌ನ ಅವತಾರ

ಹನುಮಾನ್‌ನ ಅವತಾರ

ಹನಮಂತನ ಅವತಾರವನ್ನು ಶಿವನ ಅವತಾರವೆಂದು ಕರೆಯಲಾಗಿದೆ. ರಾಮನ ಅವರಾತರದಲ್ಲಿದ್ದ ವಿಷ್ಣುವಿನ ಸೇವೆಯನ್ನು ಮಾಡಲು ಶಿವನು ಹನುಮಂತನ ಅವತಾರವನ್ನು ತಾಳಿದರು ಎಂಬುದಾಗಿ ಇತಿಹಾಸದಲ್ಲಿ ದಾಖಲಿಸಲಾಗಿದೆ.

ರಿಷಭ ಅವತಾರ

ರಿಷಭ ಅವತಾರ

ಸಮುದ್ರ ಮಂಥನದ ಬಳಿಕ, ವಿಷ್ಣುವು ಒಮ್ಮೆ ಪಾತಾಳ ಲೋಕಕ್ಕೆ ಹೋಗುತ್ತಾರೆ. ಅಲ್ಲಿದ್ದ ಸುಂದರ ಮಹಿಳೆಯಿಂದ ಪ್ರಭಾವಗೊಂಡು ಅವರು ಹೆಚ್ಚು ಮಕ್ಕಳನ್ನು ಹೊಂದುತ್ತಾರೆ. ಆದರೆ ಅವರ ಪುತ್ರರೆಲ್ಲರೂ ಕ್ರೂರಿಗಳಾಗಿರುತ್ತಾರೆ. ದೇವತೆಗಳನ್ನು ಮತ್ತು ಮಾನವರನ್ನು ಹಿಂಸಿಸಲು ಅವರು ಪ್ರಾರಂಭಿಸುತ್ತಾರೆ. ಈ ಸಮಯದಲ್ಲಿ ಶಿವನು ಎತ್ತಿನ ಅವತಾರವನ್ನು ತಾಳಿ ಮಕ್ಕಳನ್ನು ಕೊಲ್ಲುತ್ತಾರೆ. ವಿಷ್ಣುವು ಎತ್ತಿನೊಂದಿಗೆ ಕಾಳಗಕ್ಕೆ ಬಂದಾಗ ಅದು ಶಿವ ಎಂಬುದು ಅವರಿಗೆ ಅರಿವಾಗುತ್ತದೆ.

English summary

Different forms of Lord Shiva in Hinduism

Lord Shiva is prayed in various forms by the Shaivites, or the believers of Lord Shiva. Here we have listed some of the forms of Lord Shiva, which you must have come across. Read to know more.
X
Desktop Bottom Promotion