For Quick Alerts
ALLOW NOTIFICATIONS  
For Daily Alerts

ನ.2ಕ್ಕೆ ಧನತ್ರಯೋದಶಿ: ಯಾವ ವಸ್ತು ಖರೀದಿಸಿದರೆ ಶುಭ, ಯಾವ ವಸ್ತು ಅಶುಭ? ಇಲ್ಲಿದೆ ಪಟ್ಟಿ

|

ಲಕ್ಷ್ಮಿ ಪೂಜೆಗೆ ಪ್ರಸಿದ್ಧಿಯಾದ ಧನ್‌ತೆರೇಸ್ ಅಥವಾ ಧನತ್ರಯೋದಶಿಯನ್ನು ಈ ವರ್ಷ ನವೆಂಬರ್ 2ರಂದು ಆಚರಣೆ ಮಾಡಲಾಗುತ್ತದೆ. ಇದು ಯಾವಾಗಲೂ ದೀಪಾವಳಿ ಸಂದರ್ಭದಲ್ಲಿ ಬರುವುದು. ಈ ದಿನ ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆಯಿದೆ. ಮುಖ್ಯವಾಗಿ ಇದು ಚಿನ್ನಕೊಳ್ಳಲು ಬಹಳ ಪ್ರಾಶಸ್ತ್ಯವಾದ ದಿನವಾಗಿದೆ.

ಆದರೆ, ಚಿನ್ನದ ಹೊರತಾಗಿ ಈ ದಿನ ಅದೃಷ್ಟಕ್ಕಾಗಿ ಯಾವ ವಸ್ತುಗಳನ್ನು ಖರೀದಿಸಬೇಕು? ಯಾವ ವಸ್ತುವನ್ನು ಖರೀದಿಸಬಾರದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ, ಪ್ರತಿಯೊಬ್ಬರಿಗೂ ಚಿನ್ನ ಖರೀದಿಸಲು ಸಾಧ್ಯವಿರುವುದಿಲ್ಲ. ಆದ್ದರಿಂದ ಅದನ್ನು ಈ ಲೇಖನದಲ್ಲಿ ನೋಡೋಣ.

ಧನತ್ರಯೋದಶಿಯಂದು ಯಾವ ವಸ್ತುವನ್ನು ಖರೀದಿಸಿದರೆ ಶುಭ, ಯಾವುದು ಅಶುಭ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಧನತ್ರಯೋದಶಿಯಂದು ಅದೃಷ್ಟಕ್ಕಾಗಿ ಖರೀದಿಸಬಹುದಾದ ವಸ್ತುಗಳು ಹೀಗಿವೆ:

ಪಾತ್ರೆಗಳು:

ಪಾತ್ರೆಗಳು:

ಧನತ್ರಯೋದಶಿ ದಿನದಂದು ಪಾತ್ರೆಗಳನ್ನು ಖರೀದಿಸುವುದು ವಾಡಿಕೆ ಆದರೆ, ಯಾವ ಪಾತ್ರೆಗಳನ್ನು ಖರೀದಿಸಬೇಕು ಎಂದು ಗೊಂದಲಕ್ಕೊಳಗಾಗುತ್ತಾರೆ. ಪಾತ್ರೆಗಳು ದೈನಂದಿನ ಜೀವನದ ಭಾಗವಾಗಿರುವುದರಿಂದ, ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆಗಳಿಗೆ ಖರೀದಿಸಬಹುದು ಏಕೆಂದರೆ ಇವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಜೊತೆಗೆ ಪೂಜೆಯ ಸಮಯದಲ್ಲಿ ಬಳಸಬಹುದು.

ಪೊರಕೆ :

ಪೊರಕೆ :

ಪೊರಕೆಯನ್ನು ಲಕ್ಷ್ಮಿ ದೇವಿಯ ವಾಸಸ್ಥಾನ ಎಂದು ನಂಬಿಕೆ ಇದೆ. ಇದು ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಿ, ಸಕಾರಾತ್ಮಕತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಪೊರಕೆ ಮನೆಯಿಂದ ಬಡತನ ಮತ್ತು ದುಃಖವನ್ನು ತೊಡೆದುಹಾಕಿ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.

ಗೋಮತಿ ಚಕ್ರ:

ಗೋಮತಿ ಚಕ್ರ:

ಗೋಮತಿ ಚಕ್ರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇವು ದ್ವಾರಕಾದ ಗೋಮತಿ ನದಿಯಲ್ಲಿ ಕಂಡುಬರುವ ಒಂದು ರೀತಿಯ ಬಸವನಹುಳ. ಗೋಮತಿ ಚಕ್ರವು ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಿಕೆಯಿದೆ.11 ಗೋಮತಿ ಚಕ್ರಗಳನ್ನು ಹಳದಿ ಬಟ್ಟೆಯಲ್ಲಿ ಹಾಕಿ, ಧನತ್ರಯೋದಶಿ ದಿನ ಲಾಕರ್‌ನಲ್ಲಿ ಇಡುವುದು ಶುಭ ಎಂದು ಹೇಳಲಾಗುತ್ತದೆ.

ಚಿನ್ನ ಅಥವಾ ಬೆಳ್ಳಿಯ ಆಭರಣ:

ಚಿನ್ನ ಅಥವಾ ಬೆಳ್ಳಿಯ ಆಭರಣ:

ದೀಪಾವಳಿ ಸಮಯದಲ್ಲಿ ಶಾಪಿಂಗ್ ಮಾಡಲು ಆಭರಣಗಳು ಅತ್ಯಂತ ಆದ್ಯತೆಯ ವಸ್ತುವಾಗಿದೆ. ಆದರೆ, ಧನತ್ರಯೋದಶಿ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಸುವುದರಿಂದ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಎಲೆಕ್ಟ್ರಾನಿಕ್ಸ್ ಅಥವಾ ಗ್ಯಾಜೆಟ್‌ಗಳು:

ಎಲೆಕ್ಟ್ರಾನಿಕ್ಸ್ ಅಥವಾ ಗ್ಯಾಜೆಟ್‌ಗಳು:

ರೆಫ್ರಿಜರೇಟರ್, ಓವನ್‌ಗಳು, ಮೊಬೈಲ್ ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ನೀವು ಕಾಯುತ್ತಿದ್ದರೆ, ಅನೇಕ ಅಂಗಡಿಗಳು ಮತ್ತು ಬ್ರಾಂಡ್‌ಗಳು ಈ ವಸ್ತುಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡುವುದರಿಂದ ಅದನ್ನು ಖರೀದಿಸಲು ಇದು ಉತ್ತಮ ಸಮಯ.

ಧನತ್ರಯೋದಶಿ ದಿನದಂದು ಖರೀದಿಸಬಾರದಂತಹ ವಸ್ತುಗಳು ಹೀಗಿವೆ:

ಧನತ್ರಯೋದಶಿ ದಿನದಂದು ಖರೀದಿಸಬಾರದಂತಹ ವಸ್ತುಗಳು ಹೀಗಿವೆ:

  • ಧನತ್ರಯೋದಶಿ ದಿನದಂದು ಅನೇಕ ಜನರು ಉಕ್ಕಿನ ಪಾತ್ರೆಗಳನ್ನು ಖರೀದಿಸುತ್ತಾರೆ. ಆದರೆ, ಉಕ್ಕು ಲೋಹವಲ್ಲ. ರಾಹು ಇದರ ಮೇಲೆ ಹೆಚ್ಚು ಪ್ರಭಾವ ಬೀರುವುದರಿಂದ ಅದನ್ನು ತಪ್ಪಿಸಬೇಕು. ನೈಸರ್ಗಿಕ ಲೋಹಗಳನ್ನು ಮಾತ್ರ ಖರೀದಿಸಬೇಕು.
  • ಅಲ್ಯೂಮಿನಿಯಂನಿಂದ ಮಾಡಿದ ಯಾವುದೇ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ ಏಕೆಂದರೆ ಇದು ದುರಾದೃಷ್ಟದ ಸೂಚಕವೆಂದು ಪರಿಗಣಿಸಲಾಗಿದೆ.
  • ಈ ದಿನ ಯಾವುದೇ ಹರಿತವಾದ ವಸ್ತುಗಳನ್ನು ಖರೀದಿಸುವುದು ಮಂಗಳಕರವಲ್ಲ, ಆದ್ದರಿಂದ ಚಾಕು, ಕತ್ತರಿ ಅಥವಾ ಯಾವುದೇ ಹರಿತವಾದ ಆಯುಧವನ್ನು ಖರೀದಿಸಬೇಡಿ.
  • ಪ್ಲಾಸ್ಟಿಕ್‌ನಿಂದ ಮಾಡಿದ ವಸ್ತುಗಳನ್ನು ಖರೀದಿಸುವುದು ಬೇಡ, ಏಕೆಂದರೆ ಅವು ಯಾವುದೇ ಅದೃಷ್ಟವನ್ನು ತರುವುದಿಲ್ಲ.
  • ಜ್ಯೋತಿಷಿಗಳ ಪ್ರಕಾರ ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ. ಕಪ್ಪು ಅಶುಭದ ಸಂಕೇತ.
  • ಈ ದಿನದಂದು ಎಣ್ಣೆ ಅಥವಾ ತುಪ್ಪದಂತಹ ವಸ್ತುಗಳನ್ನು ಖರೀದಿಸಲು ಹೋದರೆ, ಸ್ವಲ್ಪ ಜಾಗರೂಕರಾಗಿರಿ. ಅಂತಹ ವಿಷಯಗಳನ್ನು ಕಲಬೆರಕೆ ಮಾಡಬಹುದು ಮತ್ತು ಈ ದಿನ ಅಶುದ್ಧ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು.
English summary

Dhanteras Special: Know What To Buy And What Not To Buy in Kannada

Here we talking about Dhanteras Special: Know What To Buy And What Not To Buy, read on
X
Desktop Bottom Promotion