For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದಲ್ಲಿ ಶಿವ ಭಕ್ತರು, ಈ ಮೂರು ಬಗೆಯ ತರಕಾರಿಗಳನ್ನು ಸೇವಿಸಬಾರದು

|

ಶಿವನನ್ನು ಆರಾಧಿಸುವ ಪ್ರಮುಖ ಮಾಸವಾಗಿರುವ ಶ್ರಾವಣ ಮಾಸವು ತನ್ನದೇ ಆದ ಪ್ರತ್ಯೇಕತೆಗಳನ್ನು ಒಳಗೊಂಡು ಜನಸಾಗರದಲ್ಲಿ ಪವಿತ್ರ ಸ್ಥಾನವನ್ನು ಪಡೆದುಕೊಂಡಿದೆ. ಜುಲೈನಿಂದ ಆರಂಭಗೊಂಡು ಆಗಸ್ಟ್‌ ಮಧ್ಯ ಸಮಯದವರೆಗೆ ಈ ಮಾಸದಲ್ಲಿ ವಿಶೇಷವಾಗಿ ನೀಲಕಂಠ ಶಿವನನ್ನು ನೆನೆಯಲಾಗುತ್ತದೆ. ಎಲ್ಲಾ ಕಷ್ಟಗಳನ್ನು ನಿಮಿಷಗಳಲ್ಲಿ ಸರಳಗೊಳಿಸುವ ಕರುಣಾಹೃದಯಿಯಾಗಿರುವ ಶಿವನನ್ನು ಬಿಲ್ವದಿಂದ ಪೂಜಿಸಿದರೂ ಕಣ್ಮುಚ್ಚಿಕೊಂಡು ಭಕ್ತರ ನಿವೇದನೆಗಳನ್ನು ಕೇಳುತ್ತಾರೆ. ನನ್ನ ನಂಬಿ ಬಂದ ಭಕ್ತರ ಕೈಯನ್ನು ನಾನು ಬಿಡುವುದಿಲ್ಲ ಎಂಬುದು ಶಿವನು ಭಕ್ತರಿಗೆ ಮಾಡಿದ ವಾಗ್ಧಾನವಾಗಿದೆ. ಅದಕ್ಕಾಗಿಯೇ ಜನರು ಶ್ರಾವಣ ಮಾಸದಲ್ಲಿ ಶಿವನನ್ನು ಭಜಿಸಿ ಉಪವಾಸವನ್ನು ಕೈಗೊಂಡು ದೇವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.

ಹರ ಹರ ಮಹಾದೇವ, ಭೋಲೇನಾಥ, ಶಂಭೋ ಶಂಕರ ಹೀಗೆ ಭಕ್ತವೃಂದ ಶಿವನನ್ನು ಬಗೆ ಬಗೆಯಾಗಿ ಕರೆಯುತ್ತಾರೆ. ಲೋಕ ಕಲ್ಯಾಣಕ್ಕಾಗಿ ವಿಷವನ್ನು ಕುಡಿದು ನಂಜುಂಡ ಎಂದು ಕರೆಯಿಸಕೊಳ್ಳುವ ಶಿವ ಭಗವಾನ್ ಭಕ್ತರ ಕಷ್ಟವನ್ನು ಅವರ ಅಪೇಕ್ಷೆಗಳನ್ನು ಕ್ಷಣದಲ್ಲಿಯೇ ತೀರಿಸುತ್ತಾರೆ. ವಿಶೇಷವಾಗಿ ಶ್ರಾವಣ ಮಾಸದಲ್ಲಿ ಕನ್ಯೆಯರು ಮತ್ತು ವಿವಾಹಿತ ಸ್ತ್ರೀಯರು ಶಿವನ ಪೂಜೆಯನ್ನು ಮಾಡುತ್ತಾರೆ.

ಕನ್ಯೆಯರು ಶಿವನಂತಹ ಪತಿಯನ್ನು ಪಡೆಯಲು ಮತ್ತು ವಿವಾಹಿತ ಸ್ತ್ರೀಯರು ತಮ್ಮ ಪತಿಯ ಆರೋಗ್ಯ ಮತ್ತು ಸುಖಕ್ಕಾಗಿ ಶಿವನ ಪೂಜೆಯನ್ನು ಮಾಡುತ್ತಾರೆ. 16 ಸೋಮವಾರಗಳಂದು ವಿಶೇಷ ಪೂಜೆಯನ್ನು ಮಾಡಿ ಪ್ರಸಾದವನ್ನು ದೇವರಿಗೆ ಅರ್ಪಿಸಿ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಹೀಗೆ ಶ್ರಾವಣ ಮಾಸವು ಇನ್ನಷ್ಟು ವಿವರವಾದ ಮಾಹಿತಿಗಳನ್ನು ತನ್ನಲ್ಲಿ ಹೊಂದಿಕೊಂಡಿದ್ದು ಅದೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ....

ಶ್ರಾವಣ ಮಾಸವನ್ನು 30 ದಿನಗಳ ಕಾಲ ಏಕೆ ಆಚರಿಸಲಾಗುತ್ತದೆ?

ಶ್ರಾವಣ ಮಾಸವನ್ನು 30 ದಿನಗಳ ಕಾಲ ಏಕೆ ಆಚರಿಸಲಾಗುತ್ತದೆ?

ಶ್ರಾವಣ ಮಾಸವನ್ನು ಶಿವನಿಗೆ ಅರ್ಪಿತವಾದ ಮಾಸವೆಂದು ವಿಶ್ವದ ಜನರು ಆಚರಿಸುತ್ತಾರೆ. ನಾಲ್ಕು ಸೋಮವಾರಗಳನ್ನು ಶಿವರಾತ್ರಿಯಂತೆಯೇ ಆಚರಿಸಲಾಗುತ್ತದೆ ಹಾಗೂ ವೃತವನ್ನು ಕೈಗೊಂಡು ವಿಶೇಷ ಅಭಿಷೇಕವನ್ನು ಮಾಡುತ್ತಾರೆ.

ಶ್ರಾವಣದ ಅರ್ಥ

ಶ್ರಾವಣದ ಅರ್ಥ

ಹಿಂದೂ ಧರ್ಮದಲ್ಲಿ ಶ್ರಾವಣ ಎಂದರೆ ಆಲಿಸು ಎಂದಾಗಿದೆ. ಈ ಸಮಯದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಜನರು ಆಲಿಸಬೇಕು ಎಂದೇ ಇದರರ್ಥವಾಗಿದೆ. ಶಿವನ ಕುರಿತಾದ ಸ್ತ್ರೋತ್ರಗಳ ಪಠನೆ, ಶಿವನ ಧ್ಯಾನ ಮೊದಲಾದ ಸತ್ಕಾರ್ಯಗಳನ್ನು ಈ ತಿಂಗಳಿನಲ್ಲಿ ಭಕ್ತರು ನಡೆಸಬೇಕು.

ಮಾರ್ಕಂಡೇಯನ ಕಥೆ

ಮಾರ್ಕಂಡೇಯನ ಕಥೆ

ಹಿಂದಿನ ಪುರಾಣದಲ್ಲಿ ವ್ಯಾಖ್ಯಾನಿಸಲಾದ ಕಥೆಯನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಒಮ್ಮೆ ಮೃಕಂದು ಋಷಿ ಮತ್ತು ಆವರ ಪತ್ನಿ ಮರದ್‌ಮತಿ ಪುತ್ರ ಸಂತಾನಕ್ಕಾಗಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಅವರ ತಪಸ್ಸಿಗೆ ಮೆಚ್ಚಿ ಶಿವನು ಅವರಿಗೆ ಅತೀ ಬುದ್ಧಿವಂತನಾದ ಆದರೆ ಕಡಿಮೆ ಆಯುಷ್ಯವನ್ನು ಹೊಂದಿರುವ ಪುತ್ರನನ್ನು ಅನುಗ್ರಹಿಸುತ್ತಾರೆ. ಶಿವನು ವರ ನೀಡುವ ಸಂದರ್ಭದಲ್ಲಿ ನಿಮಗೆ ಅತೀ ಹೆಚ್ಚು ಬುದ್ಧಿವಂತಿಕೆ ಆದರೆ ಕಡಿಮೆ ಆಯುಷ್ಯವಿರುವ ಪುತ್ರನು ಬೇಕೇ ಇಲ್ಲವೇ ದೀರ್ಘ ಆಯುಷ್ಯವನ್ನು ಹೊಂದಿರುವವನೂ ಆದರೆ ಪೆದ್ದನಾಗಿರುವ ಪುತ್ರ ಬೇಕೇ ಎಂದು ಕೇಳುತ್ತಾರೆ.

ಮಾರ್ಕಂಡೇಯ ಜನನ

ಮಾರ್ಕಂಡೇಯ ಜನನ

ಮೃಕಂದು ಮತ್ತು ಮರದ್‌ಮತಿ ಹೆಚ್ಚು ಬುದ್ಧಿವಂತ ಹಾಗೂ ಕಡಿಮೆ ಆಯುಷ್ಯವನ್ನು ಹೊಂದಿರುವ ಪುತ್ರನನ್ನು ವರವಾಗಿ ಕೇಳುತ್ತಾರೆ. ಹೀಗೆ ಮಾರ್ಕಂಡೇಯನ ಜನನವಾಗುತ್ತದೆ. ತನ್ನ ಬಾಲ್ಯದಲ್ಲಿಯೇ ಮಾರ್ಕಂಡೇಯನು ಶಿವನ ಮೇಲೆ ಅಪರಿಮಿತ ಭಕ್ತಿಯನ್ನು ಹೊಂದಿರುತ್ತಾನೆ. ವರವನ್ನು ಕುರಿತು ಮಾರ್ಕಂಡೇಯನಿಗೆ ಋಷಿ ದಂಪತಿಗಳು ತಿಳಿಸುತ್ತಾರೆ. ಸಣ್ಣ ವಯಸ್ಸಿನಲ್ಲಿಯೇ ಪುತ್ರನನ್ನು ಕಳೆದುಕೊಳ್ಳುವ ದುಃಖ ಪಾಲಕರದ್ದಾಗಿರುತ್ತದೆ. ಇದನ್ನರಿತ ಮಾರ್ಕಂಡೇಯನು ಶಿವನನ್ನು ನೋಡುವ ತವಕದಿಂದ ಶಿವಲಿಂಗದ ಮುಂದೆ ಕುಳಿತು ಇನ್ನಷ್ಟು ಶ್ರದ್ಧೆ ಭಕ್ತಿಯಿಂದ ಶಿವನನ್ನು ಪೂಜಿಸಲು ಆರಂಭಿಸುತ್ತಾನೆ

ಶ್ರಾವಣ ಮಾಸದ ನಿಜವಾದ ಕಥೆ

ಶ್ರಾವಣ ಮಾಸದ ನಿಜವಾದ ಕಥೆ

ಮಾರ್ಕಂಡೇಯನು ಶಿವನನ್ನು ಆರಾಧಿಸಲು ಕುಳಿತ ದಿನವೇ ಯಮದೂತರು ಆತನ ಜೀವವನ್ನು ಸೆಳೆಯಲು ಬರುತ್ತಾರೆ. ಆದರೆ ಭಕ್ತಿಯಿಂದ ಮುಳುಗಿದ್ದ ಮಾರ್ಕಂಡೇಯನನ್ನು ಸ್ಪರ್ಶಿಸಲು ಅವರಿಗೆ ಸಾಧ್ಯವಾಗಲಿಲ್ಲ. ತಮ್ಮೊಂದಿಗೆ ಆತನನ್ನು ಕರೆದೊಯ್ಯಲು ಅವರಿಗೆ ಆಗಲಿಲ್ಲ. 30 ದಿನಗಳ ಕಾಲ ಯಮದೂತರು ಪ್ರಯತ್ನಿಸುತ್ತಾರೆ ಕೊನೆಗೆ ಯಮನೇ ಬಂದು ಮಾರ್ಕಂಡೇಯನನ್ನು ಕರೆದೊಯ್ಯಲು ನಿರ್ಧರಿಸುತ್ತಾರೆ.

ಯಮನನ್ನು ಶಿಕ್ಷಿಸಿದ ಶಿವ

ಯಮನನ್ನು ಶಿಕ್ಷಿಸಿದ ಶಿವ

ಯಮನು ತನ್ನ ಪಾಶವನ್ನು ಮಾರ್ಕಂಡೇಯನ ಕೊರಳಿಗೆ ಹಾಕುವ ಸಂದರ್ಭದಲ್ಲಿ ಅದು ಶಿವಲಿಂಗಕ್ಕೆ ಹೋಗಿ ಬೀಳುತ್ತದೆ. ಇದು ಶಿವನಿಗೆ ಕೋಪ ತರಿಸುತ್ತದೆ ಮತ್ತು ತನ್ನ ಮುಂದೆಯೇ ತನ್ನ ಭಕ್ತರಿಗೆ ನೋವುಂಟು ಮಾಡಿದ್ದಕ್ಕೆ ಪ್ರತಿಯಾಗಿ ಶಿಕ್ಷೆಯನ್ನು ಅನುಭವಿಸಲು ಯಮನಿಗೆ ಹೇಳುತ್ತಾರೆ.

ಶ್ರಾವಣವನ್ನು 30 ದಿನಗಳ ಕಾಲ ನಡೆಸಲಾಗುತ್ತದೆ

ಶ್ರಾವಣವನ್ನು 30 ದಿನಗಳ ಕಾಲ ನಡೆಸಲಾಗುತ್ತದೆ

ಶ್ರಾವಣ ಮಾಸದಲ್ಲಿ ಶಿವ ಪೂಜೆಯನ್ನು ನಡೆಸಿದರೆ ಅವರು ನಮ್ಮ ಸಂಕಷ್ಟವನ್ನು ಆಲಿಸಿ ನಮಗೆ ಅಭಯವನ್ನು ನೀಡುತ್ತಾರೆ ಎಂದು ಹೇಳಲಾಗಿದೆ. ಶ್ರಾವಣ ಮಾಸದಲ್ಲಿ 30 ದಿನಗಳ ಕಾಲ ಭಕ್ತನು ಎಲ್ಲಾ ಸುಖ ಭೋಗಗಳನ್ನು ತೊರೆದು ಉಪವಾಸವನ್ನು ಕೈಗೊಳ್ಳಬೇಕು.

ಶ್ರಾವಣ ಪೂಜಾ ವಿಧಿ

ಶ್ರಾವಣ ಪೂಜಾ ವಿಧಿ

ಶಾಸ್ತ್ರಗಳಲ್ಲಿ ವಿವರಿಸಿರುವಂತೆ ಈ ಸಮಯದಲ್ಲಿ ಶಿವಪುರಾಣದಲ್ಲಿ ತಿಳಿಸಿರುವ ನಿಯಮಗಳನ್ನು ಭಕ್ತರು ಅನುಸರಿಸಬೇಕು. ಈ ಮಾಸದಲ್ಲಿ ವಿಶೇಷವಾಗಿ ಮಾಂಸಹಾರ ಮತ್ತು ಮದ್ಯವನ್ನು ತ್ಯಜಿಸಬೇಕು ಅಂತೆಯೇ ನಕಾರಾತ್ಮಕ ಚಿಂತನೆಗಳನ್ನು ಮನಸ್ಸಿನಿಂದ ದೂರಾಗಿಸಬೇಕು. ಈ ತಿಂಗಳಿನಲ್ಲಿ ನೀವು ಸೇವಿಸಬಾರದ ಸಸ್ಯಹಾರಿ ಆಹಾರಗಳನ್ನು ನಾವು ವಿವರಿಸುತ್ತಿದ್ದೇವೆ:

ಬದನೆ

ಬದನೆ

ಶ್ರಾವಣ ಮಾಸದಲ್ಲಿ ಕೆಲವು ತರಕಾರಿಗಳನ್ನು ತಿನ್ನಬಾರದು. ಅವುಗಳಲ್ಲಿ ಬದನೆಕಾಯಿಯೂ ಒಂದು. ಈ ತಿಂಗಳಲ್ಲಿ ಇದನ್ನು ತಿನ್ನುವುದರಿಂದ ದುರಾದೃಷ್ಟ ಉಂಟಾಗುವುದು ಎನ್ನಲಾಗುತ್ತದೆ. ನಮ್ಮ ಗ್ರಂಥದಲ್ಲಿ ಬದನೆಕಾಯಿಯನ್ನು ಅಶುದ್ಧ ತರಕಾರಿ ಎಂದು ಪರಿಗಣಿಸಲಾಗಿದೆ. ಅಲ್ಲದೆ ಮಳೆಗಾಲದ ಸಮಯದಲ್ಲಿ ಬದನೆ ಕಾಯಿಯಲ್ಲೂ ಕೂಡ ಕೀಟಗಳು ಮತ್ತು ಸೂಕ್ಷ್ಮಜೀವಿಗಳು ಸಾಕಷ್ಟು ಕಂಡು ಬರುವ ಕಾರಣ ವೃತಧಾರಿಗಳು ಬದನೆಯನ್ನು ಸೇವಿಸಬಾರದು. ಅಷ್ಟೇ ಅಲ್ಲದೆ ಶ್ರಾವಣ ಮಾಸದಲ್ಲಿ ಹಾಲನ್ನು ಕುಡಿಯುವ ಮುನ್ನ ಅದನ್ನು ಕುದಿಸಿ ಆರಿಸಿ ಕುಡಿಯಬೇಕೆಂಬ ನಿಯಮ ಇದೆ. ಅಂತೆಯೇ ಹಸಿ ಹಾಲನ್ನು ಸೇವಿಸಬಾರದು ಎಂಬುದು ಶ್ರಾವಣ ಮಾಸದ ನಿಯಮವಾಗಿದೆ.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಈ ಮಾಸದಲ್ಲಿ ನಮ್ಮ ರಕ್ತದ ಹರಿವನ್ನು ನಿಯಂತ್ರಿಸುವ ವಟ ಭಾಗವು ಉಸಿರಾಟ ಮತ್ತು ಇಂದ್ರಿಯಗಳನ್ನು ವಿಸ್ತರಿಸುತ್ತವೆ. ಹಾಲು, ಮೊಸರು, ಪನ್ನೀರು ಮೊದಲಾದ ಹಾಲಿನ ಉತ್ಪನ್ನಗಳು ಈ ಭಾಗಗಳಲ್ಲಿ ಅಸಮತೋಲವನ್ನುಂಟು ಮಾಡುತ್ತವೆ. ಇದರಿಂದ ವಟ ದೋಷವುಂಟಾಗುತ್ತದೆ. (ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ). ಬದಲಿಗೆ ಇದನ್ನು ಶಿವ ದೇವರಿಗೆ ಅಥವಾ ಶಿವಲಿಂಗಕ್ಕೆ ಅರ್ಪಿಸಿ.

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ದೀರ್ಘ ಧ್ಯಾನ ಮತ್ತು ಭಕ್ತಿಯನ್ನು ನಿರ್ವಹಿಸುವ ಸಲುವಾಗಿ ಸಮತೂಕದ ವಟವನ್ನು ಹೊಂದಿರಬೇಕು. ಮಳೆಗಾಲದಲ್ಲಿ ಹಸಿರು ತರಕಾರಿಗಳು ದೇಹದಲ್ಲಿ ಪಿತ್ತರಸವನ್ನು ಉತ್ತೇಜಿಸುವಲ್ಲಿ ಪರಿಣಾಮಕಾರಿಯಾಗಿರುವ ಘಟಕಗಳನ್ನು ಉತ್ತೇಜಿಸುತ್ತವೆ (ಕೀಟಗಳು ಮತ್ತು ಕಾಣದ ಬ್ಯಾಕ್ಟೀರಿಯಾ) ನಮ್ಮ ವಟ ಘಟಕಕ್ಕೆ ತೊಂದರೆಯನ್ನುಂಟು ಮಾಡುವ ತರಕಾರಿಗಳನ್ನು ಸೇವಿಸಬಾರದು.

English summary

Devotee must avoid these 3 veg foods during Shravan Month!

According to Shastras, during this period, one must religiously follow the rules and rituals mentioned in shivpurana. As we all know, the major things to give up during this month is Non-veg and liquor, apart from hatred and negative thoughts, today we are going to tell you about these vegetarian foods, which should be avoided during Shravan Month...
X
Desktop Bottom Promotion