For Quick Alerts
ALLOW NOTIFICATIONS  
For Daily Alerts

ಇಂದು ದೇವ್‌ ದೀಪಾವಳಿ: ಏನಿದರ ಮಹತ್ವ?

|

ಪ್ರತಿವರ್ಷ ಕಾರ್ತಿಕ ಪೂರ್ಣಿಮೆಯಂದು ದೇವ್‌ ದೀಪಾವಳಿಯನ್ನು ಆಚರಿಸಲಾಗುವುದು. ದೇವ್‌ ದೀಪಾವಳಿಯನ್ನು ವಾರಾಣಸಿಯಲ್ಲಿ ಆಚರಿಸಲಾಗುವುದು. ಶಿವನು ಈ ದಿನ ಅಸುರ ತ್ರಿಪುರಾಸುರನನ್ನು ವಧಿಸಿದನು ಎಂದು ಹೇಳಲಾಗುವುದು. ಆದ್ದರಿಂದ ಈ ದಿನವನ್ನು ತ್ರಿಪುರಾರಿ ಪೂರ್ಣಿಮಾ ಎಂದು ಕರೆಯಲಾಗುವುದು.

Dev Deepawali 2021: Date, Time, History And Significance

ಈ ದಿನ ಶಿವ ಭಕ್ತರು ಪವಿತ್ರ ಗಂಗೆಯಲ್ಲಿ ಮಿಂದು ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನ ಗಂಗೆಯ ತೀರದಲ್ಲಿ ದೀಪಗಳನ್ನು ಹಚ್ಚಲಾಗುವುದು. ಈ ದಿನ ಮನೆಗಳಿಗೂ ಲೈಟಿಂಗ್ಸ್‌ ಹಾಕಿ ಅಲಂಕರಿಸಲಾಗುವುದು.
ಸಂಜೆ ಹೊತ್ತಿಗೆ ಗಂಗೆಗೆ ಆರತಿಯನ್ನು ಮಾಡಲಾಗುವುದು.

ದೇವ್‌ ದೀಪಾವಳಿ ದಿನಾಂಕ ಮತ್ತು ಸಮಯ

ದೇವ್‌ ದೀಪಾವಳಿ ದಿನಾಂಕ: ನವೆಂಬರ್ 26

ದೇವ್‌ ದೀಪಾವಳಿ ಆಚರಣೆಯ ಮಹತ್ವ

ಅಸುರ ತ್ರಿಪುರಾನನ್ನು ಶಿವನು ಸೋಲಿಸಿದ ದಿನವನ್ನು ದೇವ್‌ ದೀಪಾವಳಿ ಎಮದು ಆಚರಿಸಲಾಗುವುದು. ಈ ದಿನ ನೂರಾರು ಮಣ್ಣಿನ ಹಣತೆಗಳನ್ನು ಗಂಗಾ ನದಿಯಲ್ಲಿ ತೇಲಿ ಬಿಡಲಾಗುವುದು. ಈ ಆಚರಣೆ 1985ರಿಂದ ಪ್ರಾರಂಭವಾಗಿದೆ. ರಾತ್ರಿ ಪೂರ್ತಿ ಶಿವನ ಕೀರ್ತನೆಗಳನ್ನು ಹಾಡುತ್ತಾ ವಾರಾಣಸಿ ಬೀದಿಗಳಲ್ಲಿ ಮೆರವಣಿಗೆ ಕೂಡ ಇಡುತ್ತದೆ.

ಈ ದಿನ 21 ಬ್ರಾಹ್ಮಣರು ಹಾಗೂ 24 ಮಹಿಳೆಯರು ಗಂಗೆಗೆ ಆರತಿ ಎತ್ತುತ್ತಾರೆ. ಗಂಗೆಗೆ ನೂರಾರು ಮಣ್ಣಿನ ಹಣತೆಗಳನ್ನು ತೇಲಿ ಬಿಡಲಾಗುವುದು, ಇದನ್ನು ಅಲ್ಲಿ ನೆರೆದ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಾರೆ. ಈ ಇನ ಗುರುನಾನಕ್ ಜಯಂತಿಯನ್ನು ಕೂಡ ಆಚರಿಸಲಾಗುವುದು.

English summary

Dev Deepawali 2023: Date, Time, History And Significance

Dev Deepawali 2021: Date, Time, History And Significance, Read on.. .
X
Desktop Bottom Promotion