For Quick Alerts
ALLOW NOTIFICATIONS  
For Daily Alerts

ಭಾನುವಾರ ಇಂತಹ ಉಪವಾಸ ಮಾಡಿದರೆ ಶತ್ರುಗಳ ಕಾಟದಿಂದ ಮುಕ್ತಿ!

By Hemanth
|
ಭಾನುವಾರ ಹೀಗೆ ಮಾಡಿದ್ರೆ ಖಂಡಿತ ನಿಮಗೆ ಶತ್ರು ಕಾಟದಿಂದ ಸಿಗುತ್ತೆ ಮುಕ್ತಿ | Oneindia Kannada

ನೀವು ಎಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ ನಿಮಗೊಂದಿಷ್ಟು ಮಂದಿ ಶತ್ರುಗಳು ಇದ್ದೇ ಇರುತ್ತಾರೆ. ಯಾಕೆಂದರೆ ಕೆಲವು ಒಳ್ಳೆಯ ಕೆಲಸಗಳಿಂದಲೂ ಶತ್ರುಗಳ ಪಡೆ ನಿರ್ಮಾಣವಾಗುವುದು. ಇದಕ್ಕೆ ಬೇರೆಯವರೊಂದಿಗೆ ಜಗಳವಾಡಬೇಕೆಂದಿಲ್ಲ. ಆದರೂ ನಿಮ್ಮಅರಿವಿಗೆ ಬಾರದಂತೆ ಶತ್ರುಗಳು ಹುಟ್ಟಿಕೊಳ್ಳುವರು.

ರಾಜಕೀಯ ರಂಗ, ಸಮಾಜ ಸೇವೆಯಲ್ಲಿ ತೊಡಗಿಕೊಂಡವರಿಗೆ ವೈರಿಗಳು ಹೆಚ್ಚೇ ಎನ್ನಬಹುದು. ಆದರೆ ನಿಮ್ಮೆಲ್ಲಾ ಶತ್ರುಗಳನ್ನು ಸೋಲಿಸಬೇಕೆಂದು ನಿಮಗನಿಸಿದ್ದರೆ ಆಗ ಶಕ್ತಿ ನೀಡುವಂತಹ ಸೂರ್ಯ ದೇವರನ್ನು ಪ್ರಾರ್ಥಿಸಬೇಕು ಮತ್ತು ಆರಾಧಿಸಬೇಕು. ಸೂರ್ಯನು ಶಕ್ತಿಯ ಮೂಲ ಹಾಗೂ ಈತನನ್ನು ಆರಾಧಿಸಿದರೆ ಆಗ ಶತ್ರುಗಳ ಭೀತಿ ಇರದು.

lord

ಸೂರ್ಯ ದೇವರನ್ನು ಪೂಜಿಸುವ ವಿಧಿವಿಧಾನಗಳು
ಉಪವಾಸ ಮಾಡುವಂತಹ ಭಕ್ತರು ಸೂರ್ಯ ಮೂಡುವ ಮೊದಲು ಎದ್ದುಕೊಂಡು ಬ್ರಹ್ಮ ಮೂಹೂರ್ತದಲ್ಲಿ ಸ್ನಾನ ಮಾಡಬೇಕು. ಇದರ ಬಳಿಕ ಪೂಜೆ ಮಾಡುವಂತಹ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಪೂಜೆಗೆ ಬೇಕಾಗುವಂತಹ ಅರಿವಾಣ, ಕೆಂಪು ಪುಷ್ಪಗಳು, ಕುಂಕುಮ, ಅಕ್ಕಿ, ಆ ಋತುವಿನಲ್ಲಿ ಸಿಗುವಂತಹ ಒಂದು ಹಣ್ಣು. ಮೊದಲು ನೀವು ದೀಪ ಬೆಳಗಿಕೊಂಡ ಬಳಿಕ ದೇವರಿಗೆ ಪೂಜೆ ಮಾಡಿ. ಇದರ ಬಳಿಕ ಕಥೆ ಮತ್ತು ಆರತಿ. ಆರತಿ ಬೆಳಗಿದ ಬಳಿಕ ಸೂರ್ಯ ದೇವರಿಗೆ ಅರ್ಗ್ಯ ಅಥವಾ ನೀರು ಅರ್ಪಿಸಿ. ಈ ನೀರಿನಲ್ಲಿ ಅಕ್ಕಿ, ಕುಂಕುಮ ಮತ್ತು ಕೆಂಪು ಬಣ್ಣದ ಪುಷ್ಪಗಳು ಇರಲಿ.

ಉಪವಾಸ ವ್ರತ ಮಾಡುವವರು ದಿನದಲ್ಲಿ ಒಂದು ಸಲ ಮಾತ್ರ ಊಟ ಮಾಡಬೇಕು ಮತ್ತು ಬೆಲ್ಲದಿಂದ ಮಾಡಿರುವಂತಹ ಸಿಹಿ ತಿಂಡಿ ತಿಂದರೆ ತುಂಬಾ ಒಳ್ಳೆಯದು. ಇದು ಬೆಲ್ಲದಿಂದ ಮಾಡಿರುವ ಯಾವುದೇ ವಸ್ತುವಾಗಿರಬಹುದು. ಭೋಗದ ಬಳಿಕ ಸೂರ್ಯದೇವರಿಗೆ ಮತ್ತೆ ಅರ್ಗ್ಯ ನೀಡಬೇಕು. ನೀವು ಯಾವುದೇ ವಸ್ತುವಿಗೂ ಉಪ್ಪು ಬಳಸಬೇಡಿ. ಸೂರ್ಯ ಮುಳುಗುವ ಮೊದಲು ಊಟ ಮಾಡಿ, ಒಂದು ವೇಳೆ ಸೂರ್ಯ ಮುಳುಗಿದ್ದರೆ ಆಗ ನೀವು ಮರುದಿನ ಬೆಳಗ್ಗೆ ಪೂಜೆ ಮಾಡಿಕೊಂಡು ಆಹಾರ ಸೇವಿಸಬಹುದು.

ಇನ್ನು ಆದಿತ್ಯವಾರವನ್ನು ಸೂರ್ಯದೇವರಿಗೆ ಸಮರ್ಪಿಸುತ್ತಿದ್ದು, ಸೂರ್ಯನಾರಾಯಣ ಅಥವಾ ಸೂರ್ಯ ದೇವ ಎಂಬ ಹೆಸರಿನಿಂದ ಇವರನ್ನು ಕರೆಯಲಾಗುತ್ತದೆ. ಈ ದಿನದಂದು ಸೂರ್ಯನ ಭಕ್ತರು, ಧಾರ್ಮಿಕ ಸ್ನಾನಾದಿಗಳಲ್ಲಿ ಪಾಲ್ಗೊಂಡು ತಮ್ಮ ದೇಹ ಮತ್ತು ಮನೆಯನ್ನು ಶುದ್ಧೀಗೊಳಿಸುತ್ತಾರೆ. ದೇವರಿಗೆ ಕೆಂಪು ಹೂಗಳನ್ನು ಸಮರ್ಪಿಸಿ ಕೆಂಪು ಚಂದನದ ಪ್ರಸಾದವನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ಈ ದಿನದಂದು ಸೂರ್ಯದೇವರು ಎಲ್ಲಾ ಚರ್ಮ ವ್ಯಾಧಿಗಳನ್ನು ಗುಣಪಡಿಸುತ್ತಾರೆ ಎಂಬ ನಂಬಿಕೆ ಇದೆ.

ವ್ರತ ಕಥೆ
ಪುರಾಣದಲ್ಲಿರುವ ಪ್ರಕಾರ ತುಂಬಾ ಭಕ್ತೆಯಾಗಿದ್ದ ವೃದ್ಧೆಯೊಬ್ಬಳು ಸೂರ್ಯ ದೇವರನ್ನು ಪೂಜಿಸಿ, ಪ್ರತಿ ಭಾನುವಾರ ಉಪವಾಸ ಮಾಡುತ್ತಲಿದ್ದಳು. ಆಕೆ ತಾನು ಪೂಜೆ ಮಾಡುವಂತಹ ಸ್ಥಳವನ್ನು ಸೆಗಣಿಯಿಂದ ಶುದ್ಧಗೊಳಿಸುತ್ತಿದ್ದಳು. ಹಿಂದೂ ಧರ್ಮದಲ್ಲಿ ಸೆಗಣಿಯನ್ನು ತುಂಬಾ ಪವಿತ್ರವೆಂದು ಭಾವಿಸಲಾಗುತ್ತದೆ. ಈ ವೃದ್ಧೆಯ ಬಳಿ ಗೋವು ಇಲ್ಲದ ಕಾರಣ ಆಕೆ ನೆರೆಮನೆಯಿಂದ ಇದನ್ನು ತರುತ್ತಿದ್ದಳು. ದಿನ ಕಳೆದಂತೆ ಆ ವೃದ್ಧೆ ತುಂಬಾ ಸಮೃದ್ಧಿ ಪಡೆಯಲು ಆರಂಭಿಸಿದಳು. ಇದರಿಂದ ನೆರೆಮನೆಯವರು ಹೊಟ್ಟೆಕಿಚ್ಚು ಪಟ್ಟುಕೊಂಡರು. ಇದರಿಂದ ಸೆಗಣಿ ಮಹಿಳೆಗೆ ಸಿಗದಂತೆ ನೋಡಿಕೊಂಡರು.

ಸೆಗಣಿ ಸಾರಿಸಲು ಸಾಧ್ಯವಾಗದೆ ಇದ್ದ ಕಾರಣ ಮುಂದಿನ ಭಾನುವಾರ ಆಕೆಗೆ ಪೂಜೆ ಮಾಡಲು ಸಾಧ್ಯವಾಗಲಿಲ್ಲ. ಅಂದು ರಾತ್ರಿ ಆಕೆಯ ಕನಸಿನಲ್ಲಿ ಬಂದ ಸೂರ್ಯದೇವರು, ನೀನು ಯಾಕೆ ಇಂದು ಉಪವಾಸ ಮಾಡಲಿಲ್ಲವೆಂದು ಕೇಳಿದರು. ನಡೆದಿರುವ ಕಥೆಯೆನ್ನೆಲ್ಲಾ ಆಕೆ ಸೂರ್ಯ ದೇವರಿಗೆ ತಿಳಿಸಿದಳು. ಇದನ್ನು ಕೇಳಿದ ಅವರು ವೃದ್ಧೆಗೆ ಒಂದು ದನ ಹಾಗೂ ಕರು ನೀಡಿದರು. ಈ ದನವು ಬಂಗಾರದ ಸೆಗಣಿ ಹಾಕುತ್ತಲಿತ್ತು. ಆದರೆ ಇದನ್ನು ಆಕೆ ಗಮನಿಸಿರಲಿಲ್ಲ, ನೆರೆಮನೆಯವರು ಮಾತ್ರ ಇದನ್ನು ನೋಡಿದರು.

ಕುಟಿಲ ಬುದ್ಧಿಯ ನೆರೆಮನೆಯವರು ತಮ್ಮ ದನದ ಸೆಗಣಿ ತಂದು ವೃದ್ಧ ಮಹಿಳೆಯ ಬಂಗಾರದ ಸೆಗಣಿಯ ಜಾಗದಲ್ಲಿಟ್ಟರು. ಆದರೂ ಇದು ಮಹಿಳೆಗೆ ಮಾತ್ರ ತಿಳಿಯುತ್ತಿರಲಿಲ್ಲ. ಆದರೆ ಇದೆಲ್ಲವನ್ನು ಸೂರ್ಯ ದೇವ ನೋಡುತ್ತಲಿದ್ದರು. ಅವರು ಒಂದು ದಿನ ಜೋರಾಗಿ ಗಾಳಿ ಬೀಸುವಂತೆ ಮಾಡಿದರು. ಈ ವೇಳೆ ವೃದ್ಧ ಮಹಿಳೆ ತನ್ನ ದನ ಹಾಗೂ ಕರುವನ್ನು ಒಳಗೆ ತೆಗೆದುಕೊಂಡು ಹೋದಳು. ಅವಳಿಗೆ ಅಲ್ಲಿ ದನವು ಚಿನ್ನದ ಸೆಗಣಿ ಹಾಕುತ್ತಿದೆ ಮತ್ತು ನೆರೆಮನೆಯವರು ಮೋಸ ಮಾಡಿದ್ದಾರೆ ಎಂದು ತಿಳಿಯಿತು. ಇದರ ಬಳಿಕ ಆಕೆ ಎಂದಿಗೂ ತನ್ನ ದನವನ್ನು ಮನೆಯ ಹೊರಗೆ ಕಟ್ಟಿ ಹಾಕಲಿಲ್ಲ.

ವೃದ್ಧ ಮಹಿಳೆಯು ಭಾನುವಾರದಂದು ತನ್ನ ಉಪವಾಸವನ್ನು ಮುಂದುವರಿಸಿಕೊಂಡು ಹೋದಳು ಮತ್ತು ಆಕೆಯ ಸಮೃದ್ಧಿ ಕೂಡ ಹೆಚ್ಚಾಗುತ್ತಲೇ ಹೋಯಿತು. ಇದರಿಂದ ನೆರೆಮನೆಯಾಕೆಯ ಹೊಟ್ಟೆಕಿಚ್ಚು ಅತಿಯಾಯಿತು. ವೃದ್ಧೆಯಲ್ಲಿರುವ ಬಂಗಾರದ ಸೆಗಣಿ ಹಾಕುವ ದನ ಮತ್ತು ವೃದ್ಧೆಯಲ್ಲಿರುವ ಸಂಪತ್ತಿನ ಬಗ್ಗೆ ರಾಜನಿಗೆ ದೂರು ನೀಡಲು ತನ್ನ ಗಂಡನಿಗೆ ಹೇಳಿದಳು.

ನೆರೆಮನೆಯಾಕೆಯ ಗಂಡ ರಾಜನಲ್ಲಿಗೆ ಹೋಗಿ ಎಲ್ಲಾ ವಿಚಾರವನ್ನು ತಿಳಿಸಿದ. ಇದನ್ನು ಕೇಳಿದ ರಾಜ ತನ್ನ ಜನರನ್ನು ಕರೆಸಿ, ದನ ಹಾಗೂ ಕರುವನ್ನು ತರಲು ಸೂಚಿಸಿದ. ವೃದ್ಧೆಯ ಮನೆಗೆ ಅರಸನ ಆಳುಗಳು ಹೋದಾಗ ಅಲ್ಲಿ ಆಕೆ ತನ್ನ ದೇವರಿಗೆ ಸಂಜೆಯ ಪ್ರಸಾದವನ್ನು ಅರ್ಪಿಸುತ್ತಿದ್ದಳು. ಆಳುಗಳು ದನದ ಹಗ್ಗ ಬಿಚ್ಚಿ ಆಕೆಯನ್ನು ಕೂಡ ಅದರೊಂದಿಗೆ ಕರೆದುಕೊಂಡು ಹೋದರು. ಮಹಿಳೆಯು ಎಷ್ಟೇ ಕಿರುಚಿಕೊಂಡರೂ ಅವರು ಮಾತ್ರ ಇದಕ್ಕೆ ಸೊಪ್ಪು ಹಾಕಲಿಲ್ಲ.

ದನ, ಕರು ಮತ್ತು ಮಹಿಳೆಯನ್ನು ರಾಜನ ಆಸ್ಥಾನಕ್ಕೆ ಕರೆದುಕೊಂಡು ಬಂದರು. ರಾಜ ಇಂತಹ ದನವನ್ನು ನೋಡಿ ಅದನ್ನು ತನ್ನಲ್ಲೇ ಇರಿಸಿಕೊಂಡ. ಆದರೆ ಮಹಿಳೆ ಮಾತ್ರ ಈಗಲೂ ಸೂರ್ಯ ದೇವರನ್ನು ಪೂಜಿಸುತ್ತಲೇ ಇದ್ದಳು. ತನಗೊಂದು ದನ ಬೇಕೆಂದು ಬೇಡಿಕೊಂಡಳು. ಆ ದಿನ ರಾತ್ರಿ ರಾಜನ ಕನಸಿನಲ್ಲಿ ಬಂದ ಸೂರ್ಯದೇವರು,ಓ ದೊರೆಯೇ, ನೀವು ಆ ಮಹಿಳೆಯ ದನವನ್ನು ನಾಳೆ ಬೆಳಗ್ಗೆ ಮರಳಿಸಬೇಕು. ಇಲ್ಲದಿದ್ದರೆ ನಿಮ್ಮ ಸಂಪೂರ್ಣ ಸಾಮ್ರಾಜ್ಯ ಧ್ವಂಸವಾಗುವುದು.'

ತನ್ನ ತಪ್ಪಿನ ಅರಿವಾದ ಬಳಿಕ ಮರುದಿನ ಬೆಳಗ್ಗೆ ದನವನ್ನು ಅದರ ಮಾಲಕಿಗೆ ಒಪ್ಪಿಸುವಂತೆ ಸೂಚನೆ ನೀಡಿದ. ರಾಜನು ವೃದ್ಧೆಯ ನೆರೆಮನೆಯ ಮಹಿಳೆ ಮತ್ತು ಆತನ ಪತಿಗೆ ಶಿಕ್ಷೆ ಕೂಡ ನೀಡಿದ. ಭಾನುವಾರದಂದು ಪ್ರತಿಯೊಬ್ಬರು ಉಪವಾಸ ಮಾಡಬೇಕೆಂದು ರಾಜನು ಆದೇಶ ಹೊರಡಿಸಿದ. ರಾಜನ ಆದೇಶವನ್ನು ಪ್ರತಿಯೊಬ್ಬರು ಪಾಲಿಸಿದ್ದರಿಂದ ಆತನ ರಾಜ್ಯವು ಸಂತೋಷದಿಂದ ತುಂಬಿಹೋಯಿತು. ಬಡವರು ಶ್ರೀಮಂತರಾದರೆ, ಅನಾರೋಗ್ಯ ಹೊಂದಿದವರು ಆರೋಗ್ಯವಂತರಾದರು. ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ರಾಜ್ಯವು ಸುಖ ಹಾಗು ಸಮೃದ್ಧಿಯಿಂದ ಬೆಳಗಿತು.

ಭಾನುವಾರ ಉಪವಾಸ ಮಾಡುವ ಲಾಭಗಳು
ಭಾನುವಾರ ಉಪವಾಸ ಮಾಡಿಕೊಂಡು ಸೂರ್ಯ ದೇವರ ಆರಾಧನೆ ಮಾಡಿದರೆ ಆಗ ಶತ್ರುಗಳ ನಾಶವಾಗುವುದು. ಎಲ್ಲಾ ಸಮಸ್ಯೆಗಳು ದೂರವಾಗಿ, ಮನೆಯಲ್ಲಿ ಸುಖಶಾಂತಿ ನೆಲೆಸುವುದು. ಸೂರ್ಯ ದೇವರ ಆರಾಧನೆ ಮಾಡಿದರೆ ಅದರಿಂದ ಒಳ್ಳೆಯ ಆರೋಗ್ಯ, ದೃಷ್ಟಿ ಮತ್ತು ಸಂತಾನ ಪ್ರಾಪ್ತಿಯಾಗುವುದು. ಇಷ್ಟು ಮಾತ್ರವಲ್ಲದೆ ಸಮಾಜದಲ್ಲೂ ನಮಗೆ ಗೌರವ ಸಿಗುವುದು.

English summary

Defeat Your Enemies By Worshipping This Deity

Do you often wish you could defeat all your enemies? Or that you had no enemy at all? Well, if yes, then you must worship the Sun God - the source of all energy. Sun is the biggest star and the ultimate source of energy in the solar system. Surya is the Indian name of Sun, and Sun God is the deity that we worship as a personification of the Sun.
X
Desktop Bottom Promotion