For Quick Alerts
ALLOW NOTIFICATIONS  
For Daily Alerts

ದತ್ತ ಜಯಂತಿ 2021: ಜೀವನದಲ್ಲಿ ಯಶಸ್ಸು ಸಿಗಲು ಹೀಗೆ ಆಚರಣೆ ಮಾಡಿ

|

ಮಾರ್ಗಶಿರ ಮಾಸದ ಶುಕ್ಲಪಕ್ಷದ ಪೂರ್ಣಿಮೆಯಂದು ಅಂದರೆ ಇದೇ ಡಿಸೆಂಬರ್‌ 18ರಂದು ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನಂದು ಭಕ್ತರು ದತ್ತಾತ್ರೇಯನಿಗೆ ವಿವಿಧ ರೀತಿಯಲ್ಲಿ ಪೂಜೆಯನ್ನು ಸಲ್ಲಿಸಿ, ಆಶೀರ್ವಾದವನ್ನು ಪಡೆಯುತ್ತಾರೆ. ಬೇರೆಲ್ಲಾ ದಿನಗಳಿಗೆ ಹೊರತುಪಡಿಸಿ, ಮುಖ್ಯವಾಗಿ ಈ ದಿನದಂದು ದತ್ತಾತ್ರೇಯನ್ನು ಪೂಜಿಸಿದರೆ ಹೆಚ್ಚಿನ ಫಲ ದೊರೆಯುವುದೆಂದು ಹೇಳಲಾಗುತ್ತದೆ. ಈ ಜಯಂತಿಯನ್ನು ಪ್ರಮುಖವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವೆಡೆ ಆಚರಿಸಲಾಗುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ನಿಮಗಾಗಿ

ದತ್ತ ಜಯಂತಿ ಆಚರಣೆ ಹೇಗೆ, ಅದರ ಮಹತ್ವವೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ದತ್ತಾತ್ರೇಯ:

ದತ್ತಾತ್ರೇಯ:

ದತ್ತಾತ್ರೇಯನೆಂದರೆ ತ್ರಿಮೂರ್ತಿಗಳ ಅಂಶ . ಋಷಿ ದಂಪತಿಗಳಾದ ಅತ್ರಿ ಹಾಗೂ ಅನುಸೂಯಾರಿಗೆ ತ್ರಿಮೂರ್ತಿಗಳು ತಮ್ಮನ್ನು ತಾವೇ ಅರ್ಪಿಸಿದ್ದರಿಂದ ದತ್ತನೆಂದು ಕರೆಯಲ್ಪಡುತ್ತಾನೆ. ಜೀವನವನ್ನು ಯೋಗ್ಯ ರೀತಿಯಲ್ಲಿ ಸಾಗಿಸಲು ಭಕ್ತರಿಗೆ ಮಾರ್ಗದರ್ಶನ ನೀಡುವವನು ದತ್ತಾತ್ರೇಯನಾಗಿದ್ದಾನೆ.

ದತ್ತ ಜಯಂತಿಯ ಮಹತ್ವ:

ದತ್ತ ಜಯಂತಿಯ ಮಹತ್ವ:

ದತ್ತ ಜಯಂತಿಯಂದು ಪೂಜಾ ವಿಧಿಗಳನ್ನು ಮಾಡುವುದರಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಪ್ರತಿಫಲವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಅಲ್ಲದೇ ಜಯಂತಿಯ ಮುನ್ನಾದಿನ ಮಾಡುವ ಪೂಜೆಯಿಂದ ಪೂರ್ವಜರಿಗೆ ಮುಕ್ತಿ ಹಾಗೂ ಅವರಿಂದ ಉಂಟಾಗುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು. ದತ್ತಜಯಂತಿಯಂದು ಮಾಡುವ ಪೂಜೆಯು ಜೀವನದಲ್ಲಿ ಉತ್ಸಾಹ ಹಾಗೂ ಸಮೃದ್ಧಿಯನ್ನು ನೀಡುತ್ತದೆ.

ದತ್ತ ಜಯಂತಿ ಪೂಜಾ ವಿಧಿ ಮತ್ತು ಉಪವಾಸ:

ದತ್ತ ಜಯಂತಿ ಪೂಜಾ ವಿಧಿ ಮತ್ತು ಉಪವಾಸ:

ಭಕ್ತರು ಸೂರ್ಯೋದಯಕ್ಕೆ ಮುಂಚೆಯೇ ಎಚ್ಚರಗೊಂಡು ಪವಿತ್ರ ಸ್ನಾನವನ್ನು ಮಾಡಿ ನಂತರ ಉಪವಾಸವನ್ನು ಆಚರಿಸಬೇಕು.

ಪೂಜೆಯ ಸಮಯದಲ್ಲಿ, ಭಕ್ತರು ಸಿಹಿತಿಂಡಿಗಳು, ಅಗರಬತ್ತಿಗಳು, ಹೂವುಗಳು ಮತ್ತು ದೀಪವನ್ನು ಅರ್ಪಿಸಬೇಕು

ಪವಿತ್ರ ಮಂತ್ರಗಳನ್ನು ಮತ್ತು ಧಾರ್ಮಿಕ ಗೀತೆಗಳನ್ನು ಪಠಿಸಬೇಕು ಜೊತೆಗೆ ಜೀವನ್ಮುಕ್ತ ಗೀತೆ ಮತ್ತು ಅವಧೂತ ಗೀತೆಯ ಶ್ಲೋಕಗಳನ್ನು ಓದಬೇಕು.

ಪೂಜೆಯ ಸಮಯದಲ್ಲಿ ದತ್ತ ದೇವರ ಪ್ರತಿಮೆಗೆ ಅರಿಶಿನ, ಕುಂಕುಮ ಮತ್ತು ಶ್ರೀಗಂಧದವನ್ನು ಹಚ್ಚಿ.

ಆತ್ಮ ಮತ್ತು ಮನಸ್ಸಿನ ಶುದ್ಧೀಕರಣ ಮತ್ತು ಜ್ಞಾನೋದಯಕ್ಕಾಗಿ, ಭಕ್ತರು "ಓಂ ಶ್ರೀ ಗುರುದೇವ ದತ್ತ" ಮತ್ತು "ಶ್ರೀ ಗುರು ದತ್ತಾತ್ರೇಯಾಯ ನಮಃ" ಮುಂತಾದ ಮಂತ್ರಗಳನ್ನು ಪಠಿಸಬೇಕು.

ದತ್ತಾತ್ರೇಯ ಬೀಜ ಮಂತ್ರ:

ದತ್ತಾತ್ರೇಯ ಬೀಜ ಮಂತ್ರ:

ದಕ್ಷಿಣಾಮೂರ್ತಿ ಬೀಜಂ ಚ ರಾಮ ಬೀಕೇನ್ ಸಂಯುಕ್ತಮ್ ।

ದ್ರಾಮ್ ಇತ್ಯೇಕಾಕ್ಷರಂ ಜ್ಞೇಯಂ ಬಿಂದುನಾಥಕಲಾತ್ಮಕಂ ದತ್ತಸ್ಯಾದಿ ಮಂತ್ರಸ್ಯಾ

ದಾತ್ರೇಯ ಸ್ಯಾದಿಮಸ್ವರಃ ತತ್ರಸ್ಥರೇಫ ಸಂಯುಕ್ತಂ

ಬಿಂದುನಾದ ಕಲಾತ್ಮಿಕಾ ಏತತ್

ಬೀಜಂ ಮಾಯಾಪ ರೋಕ್ತಂ ಬ್ರಹ್ಮ-ವಿಷ್ಣು- ಶಿವ ನಾಮಕಮ್

ದತ್ತ ಪೂಜೆಯ ಪ್ರಯೋಜನಗಳು:

ದತ್ತ ಪೂಜೆಯ ಪ್ರಯೋಜನಗಳು:

ದತ್ತಾತ್ರೇಯ ಉಪನಿಷದ್‌ ಹೇಳುವಂತೆ ಯಾರು ದತ್ತಾತ್ರೇಯ ಜಯಂತಿಯ ಮುನ್ನಾ ದಿನ ಉಪವಾಸ ಮಾಡುತ್ತಾರೋ ಅವರಿಗೆ ದತ್ತನ ಆಶೀರ್ವಾದದೊಂದಿಗೆ ಈ ಕೆಲವು ಪ್ರಯೋಜನಗಳು ಪ್ರಾಪ್ತಿಯಾಗುವುದು:

ಭಕ್ತರ ಎಲ್ಲಾ ಭೌತಿಕ ಮತ್ತು ಸಂಪತ್ತಿನ ಆಸೆಗಳು ಈಡೇರಿಕೆಯಾಗುವುದು

ಅತ್ಯುನ್ನತ ಜ್ಞಾನ ಮತ್ತು ಜೀವನದ ಗುರಿಗಳನ್ನು ಸಾಧಿಸುವುದು

ತಮ್ಮಲ್ಲಿರುವ ಆತಂಕದ ಮಟ್ಟಗಳು ಮತ್ತು ಅಜ್ಞಾತ ಭಯಗಳನ್ನು ತೊಡೆದುಹಾಕುವುದು

ದುಷ್ಟ ಗ್ರಹ ಬಾಧೆಗಳ ನಿರ್ಮೂಲನೆ

ಎಲ್ಲಾ ಮಾನಸಿಕ ನೋವುಗಳು ಮತ್ತು ಪೂರ್ವಜರ ಸಮಸ್ಯೆಗಳ ನಿವಾರಣೆ

ಜೀವನದಲ್ಲಿ ನ್ಯಾಯಯುತ ಮಾರ್ಗಗಳನ್ನು ಸಾಧಿಸಲು ಸಹಾಯ ಮಾಡುತ್ತದೆ

ಆತ್ಮ ಎಲ್ಲಾ ಕರ್ಮ ಬಂಧನಗಳಿಂದ ಮುಕ್ತಗೊಳ್ಳುವುದು

ಆಧ್ಯಾತ್ಮಿಕತೆಯತ್ತ ಒಲವು ಬೆಳೆಯುವುದು.

English summary

Datta Jayanti 2021 Puja Vidhi, Fasting, Benefits & Dattatreya Beej Mantra in kannada

Here we talking about Datta Jayanti 2021 Puja Vidhi, Fasting, Benefits & Dattatreya Beej Mantra in kannada, read on
X
Desktop Bottom Promotion