For Quick Alerts
ALLOW NOTIFICATIONS  
For Daily Alerts

ದಸರಾದಲ್ಲಿ ಗೊಂಬೆ ಕೂರಿಸುವುದು: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿಗಳು

|

ಮೈಸೂರು ದಸರಾ ಎಂದರೆ ಅದು ಬರೀ ಮೈಸೂರಿಗೆ ಸೀಮಿತವಾಗಿಲ್ಲ, ಬದಲಿಗೆ ಕರ್ನಾಟಕದ ನಾಡಹಬ್ಬವಾಗಿದೆ. ಈ ನಾಡಹಬ್ಬದಲ್ಲಿ ಹಲವಾರು ವಿಶೇಷತೆಗಳನ್ನು ಕಾಣಬಹುದು. ಅದರಲ್ಲೊಂದು ಗೊಂಬೆ ಕೂರಿಸುವುದು. ಮೈಸೂರಿನ ಮನೆಗಳಲ್ಲಿ ಗೊಂಬೆಯನ್ನು ಕೂರಿಸಿ ನಾಡಹಬ್ಬವನ್ನು ಆಚರಿಸುತ್ತಾರೆ.

ದಸರಾ ಹಬ್ಬಕ್ಕೆ ಈ ಗೊಂಬೆ ಕೂರಿಸುವ ಪದ್ಧತಿ ಸುಮಾರು 18 ನೇ ಶತಮಾನದಿಂದಲೂ ಜಾರಿಗೆ ಬಂತು ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಆಚರಣೆ ಕಡಿಮೆಯಾಗುತ್ತದೆ.

Navratri 2020: Dasara Doll Festival – History, Rituals, Customs and Significance

ಆದರೆ ಯಾರು ಹಿಂದಿನಿಂದಲೂ ಈ ಸಂಪ್ರದಾಯವನ್ನು ಆಚರಿಸುತ್ತಾ ಬಂದಿದ್ದಾರೋ ಅವರ ಮನೆಯಲ್ಲಿ ದಸರಾದಲ್ಲಿ ಗೊಂಬೆ ಕೂರಿಸುವ ಸಂಪ್ರದಾಯ ಕಾಣಬಹುದು. ಇದಕ್ಕಾಗಿ ಗೊಂಬೆ ಮನೆ ತಯಾರು ಮಾಡುತ್ತಾರೆ. ಈ ಗೊಂಬೆ ಮನೆಯಲ್ಲಿ ಥೀಮ್‌ಗೆ ತಕ್ಕಂತೆ ಪ್ರತಿದಿನ ಗೊಂಬೆಗಳನ್ನು ಕೂರಿಸುತ್ತಾ ಹೋಗುತ್ತಾರೆ. ಕೆಲವರು ಪೌರಾಣಿಕ ಕಥೆಯನ್ನು ಹೇಳುವಂತೆ ಗೊಂಬೆ ಕೂರಿಸಿದರೆ ಇನ್ನು ಕೆಲವರು ಸಾಮಾಜಿಕ ಸಂದೇಶ ಸಾರುವ ಗೊಂಬೆ ಕೂರಿಸುತ್ತಾರೆ. ದಸರಾದಲ್ಲಿ ಗೊಂಬೆ ಕೂರಿಸುವುದರ ಹಿಂದಿನ ಇತಿಹಾಸ, ಇದರ ಉದ್ದೇಶ ಮುಂತಾದ ಸ್ವಾರಸ್ಯಕರ ಸಂಗತಿಗಳನ್ನು ಹೇಳಲಾಗಿದೆ ನೋಡಿ:

ಗೊಂಬೆ ಕೂರಿಸುವುದು ಯಾವಾಗ ಪ್ರಾರಂಭವಾಯಿತು.

ಗೊಂಬೆ ಕೂರಿಸುವುದು ಯಾವಾಗ ಪ್ರಾರಂಭವಾಯಿತು.

ದಸರಾಗೆ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿ ಅಲಂಕರಿಸಿ ಅವುಗಳನ್ನು ಪೂಜಿಸುವ ಪದ್ಧತಿಯು ಮೈಸೂರು ರಾಜರ ಕಾಲದಲ್ಲಿ ಮೊಟ್ಟಮೊದಲು ಆರಂಭವಾಯಿತು ಎನ್ನಲಾಗುತ್ತದೆ. ಜಗತ್ ಪ್ರಸಿದ್ಧಿಯಾಗಿರುವ ಮೈಸೂರು ದಸರಾ ಮೈಸೂರು ಅರಮನೆಯಲ್ಲಿ ನಡೆದರೆ ಮೈಸೂರು ಪ್ರಾಂತ್ಯದ ಪ್ರಜೆಗಳ ಮನೆಗಳಲ್ಲಿ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಪ್ರಾರಂಭವಾಯಿತು. ಹೀಗೆ ಪ್ರಜೆಗಳು ದಸರಾ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರು.

ಈ ಗೊಂಬೆ ಕೂರಿಸುವ ಪದ್ಧತಿ ವಿಜಯನಗರ ಸಾಮ್ರಾಜ್ಯದಲ್ಲಿದ್ದು ಅದೇ ಸಂಪ್ರದಾಯವನ್ನು ಮೈಸೂರು ಒಡೆಯರು ಈ ಪ್ರಾಂತ್ಯದ ಜನರಿಗೆ ಪರಿಚಯಿಸಿದರು ಎಂದು ಹೆಳಲಾಗುತ್ತದೆ. ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ ವಿದೇಶಿಗರು ಈ ಕುರಿತು ಬರದಿರುವ ಉಲ್ಲೇಖಗಳಿವೆ. ಬೊಂಬೆ ಪ್ರದರ್ಶನದ ಪರಂಪರೆ ಮೈಸೂರು ಒಡೆಯರ ಕಾಲದಲ್ಲಿಯೇ ಹುಟ್ಟಿಕೊಂಡಿತು ಎಂಬ ಪ್ರತೀತಿಯೂ ಇದೆ.

ಥೀಮ್ ಪ್ರಕಾರ ಗೊಂಬೆ ಕೂರಿಸಲಾಗುವುದು

ಥೀಮ್ ಪ್ರಕಾರ ಗೊಂಬೆ ಕೂರಿಸಲಾಗುವುದು

ಗೊಂಬೆ ಕೂರಿಸುವುದು ಒಂದು ಸಂಭ್ರಮವಾಗಿ ಕಂಡು ಬಂದರೂ ಅದರದ್ದೇ ಆದ ಧಾರ್ಮಿಕ ಚೌಕಟ್ಟು ಕೂಡ ಇದೆ. ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ಶ್ರೀಕೃಷ್ಣ ಲೀಲೆಗಳು, ದುರ್ಗಾ ಅವತಾರಗಳು ಹೀಗೆ ನಾನಾ ಕಥೆಗಳನ್ನು ಬಿಂಬಿಸುವ ರೀತಿಯಲ್ಲಿ ಗೊಂಬೆಯನ್ನು ಕೂರಿಸಲಾಗುವುದು.

 ಗೊಂಬೆ ಕೂರಿಸುವಾಗ ಪಾಲಿಸುವ ಕ್ರಮಗಳು

ಗೊಂಬೆ ಕೂರಿಸುವಾಗ ಪಾಲಿಸುವ ಕ್ರಮಗಳು

ಸಾಮಾನ್ಯವಾಗಿ ಮನೆಗಳಲ್ಲಿ ಗೊಂಬೆ ಕೂರಿಸುವಾಗ 9, 7, 5 ಹಂತಗಳಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ. ಹೆಚ್ಚು ಗೊಂಬೆಗಳನ್ನು ಹೊಂದಿರುವವರು9 ಹಂತಗಳಲ್ಲಿ ಕೂರಿಸಿದರೆ, ಕೆಲವರು 7 ಹಂತಗಳಲ್ಲಿ ಕೂರಿಸುತ್ತಾರೆ, ಹೆಚ್ಚು ಗೊಂಬೆಗಳು ಇಲ್ಲದಿದ್ದರೆ 5 ಹಂತಗಳಲ್ಲಿ ಕೂರಿಸುತ್ತಾರೆ.

ರಾಜ-ರಾಣಿಯನ್ನು ಕೂರಿಸಬೇಕು

ರಾಜ-ರಾಣಿಯನ್ನು ಕೂರಿಸಬೇಕು

ಮರದ ಸ್ಟ್ಯಾಂಡ್‌ ಅಥವಾ ಸ್ಟೀಲ್‌ ಸ್ಟ್ಯಾಂಡ್‌ಗಳಲ್ಲಿ ಗೊಂಬೆಗಳನ್ನು ಕೂರಿಸಲಾಗುವುದು. ಗೊಂಬೆಗಳನ್ನು ಕೂರಿಸುವಾಗ ಮುಖ್ಯವಾಗಿ ರಾಜ, ರಾಣಿ ಎಂಬ ಪಟ್ಟದ ಗೊಂಬೆಗಳನ್ನ ಕೂರಿಸಿ ಅದಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಮೇಲಿನ ಮೆಟ್ಟಿಲಿನಲ್ಲಿ ರಾಜ-ರಾಣಿ , ಕೆಳ ಭಾಗದಲ್ಲಿ ಕಳಸ ಇಡುವುದು ಕಡ್ಡಾಯ.

ಪ್ರತೀ ವರ್ಷ ಹೊಸ ಗೊಂಬೆ ಇರಲೇಬೇಕು

ಗೊಂಬೆ ಕೂರಿಸುವವರು ಪ್ರತೀ ವರ್ಷ ತಮ್ಮ ಕಲೆಕ್ಷನ್‌ನಲ್ಲಿರುವ ಗೊಂಬೆಯ ಜೊತೆಗೆ ಒಂದು ಜೋಡಿ ಹೊಸ ಗೊಂಬೆಯನ್ನು ಕೂರಿಸಬೇಕು.

ಪಟ್ಟದ ಗೊಂಬೆಗಳು ಇರಲೇಬೇಕು

ಪಟ್ಟದ ಗೊಂಬೆಗಳು ಇರಲೇಬೇಕು

ದಸರಾ ಅಂದ ಮೇಲೆ ಪಟ್ಟದ ಗೊಂಬೆಗಳು ಇರಲೇ ಬೇಕು ಅಲ್ವಾ? ಗೊಂಬೆ ಮನೆಯಲ್ಲಿ ಪಟ್ಟದ ಗೊಂಬೆಗಳ ಜೊತೆಗೆ ಅಷ್ಟ ಲಕ್ಷ್ಮೀಯರು, ಆನೆಗಳು, ರಾಮ, ಕೃಷ್ಣ ಹೀಗೆ ವಿವಿಧ ಗೊಂಬೆಗಳನ್ನು, ಅರಮನೆ, ಪ್ರಾಣಿಗಳು, ಹಳ್ಳಿ ಜನರು ಹೀಗೆ ವಿವಿಧ ಮನೆಯ ಗೊಂಬೆಗಳನ್ನು ಕೂರಿಸಲಾಗುವುದು.

ಸನ್ನಿವೇಶಗಳಿಗೆ ಹೋಲುವ ಗೊಂಬೆಗಳ ಜೋಡಣೆಯಿಂದ ಹಿಡಿದು ನಮ್ಮ ಪರಂಪರೆ, ನೀತಿ ಹಾಗೂ ಪೌರಾಣಿಕ ಕತೆಗಳನ್ನು ಬಿಂಬಿಸುವ ಗೊಂಬೆ ಹಬ್ಬದ ಸಡಗರ ನವರಾತ್ರಿಯಲ್ಲಿ ಎದ್ದು ಕಾಣುತ್ತದೆ. ಕೆಲವರು ದೈನಂದಿನ ಜೀವನ ಬಿಂಬಿಸುವ ರೀತಿಯಲ್ಲಿ ಗೊಂಬೆ ಕೂರಿಸಿದರೆ ಇನ್ನು ಕೆಲವರು ಪ್ರತಿವರ್ಷ ಧೀಮ್ ಬದಲಾಯಿಸುತ್ತಾರೆ.

ಗೊಂಬೆ ಹಬ್ಬಕ್ಕೆ ಚೆನ್ನಪಟ್ಟಣದ ಗೊಂಬೆಗಳು ಫೇಮಸ್

ಗೊಂಬೆ ಹಬ್ಬಕ್ಕೆ ಚೆನ್ನಪಟ್ಟಣದ ಗೊಂಬೆಗಳು ಫೇಮಸ್

ಗೊಂಬೆಗಳನ್ನು ಚೆನ್ನಪಟ್ಟಣ, ಕೋಲಾರದಿಂದ ತರುತ್ತಾರೆ. ಚೆನ್ನಪಟ್ಟಣ ಹೇಳೀ ಕೇಳಿ ಗೊಂಬೆಗಳಿಗೆ ಫೇಮಸ್. ವಿವಿಧ ಬಗೆಯ ಗೊಂಬೆಗಳನ್ನು ತಂದು ತಮ್ಮ ಥೋಮ್‌ಗೆ ತಕ್ಕಂತೆ ಗೊಂಬೆ ಜೋಡಿಸುತ್ತಾರೆ.

ಹೀಗೆ ದಸರಾ ಹಬ್ಬಕ್ಕೆ ನಮ್ಮ ಜೊತೆ ಗೊಂಬೆಗಳು ಸೇರಿ ಹಬ್ಬವನ್ನು ಮತ್ತಷ್ಟು ರಂಗೇರಿಸುತ್ತದೆ.

English summary

Dasara Doll Festival, History, Importance and Significance of in Bombe Habba Kannada

Here are Dasara Doll Festival – History, Rituals, Customs and Significance, Read on...
X
Desktop Bottom Promotion