For Quick Alerts
ALLOW NOTIFICATIONS  
For Daily Alerts

ದಸರಾ 2021: ವಿಜಯದಶಮಿಯಂದು ಇವುಗಳನ್ನು ನೋಡಿದರೆ ಅದೃಷ್ಟ

|

ಅಕ್ಟೋಬರ್‌ 15ರಂದು ವಿಜಯದಶಮಿಯನ್ನು ಸಡಗರದಿಂದ ಆಚರಿಸಲಾಗುತ್ತಿದೆ. ದುಷ್ಟಶಕ್ತಿಯ ವಿರುದ್ಧ ಸಾರಿದ ಜಯದ ಆಚರಣೆಯೇ ವಿಜಯದಶಮಿ. ದುರ್ಗಾ ದೇವಿ ಮಹಿಷಾಸುರ ಎಂಬ ಅಸುರನನ್ನು ಹತ್ಯೆ ಮಾಡಿದ ದಿನವೇ ವಿಜಯದಶಮಿ. ಪೌರಾಣಿಕ ಕತೆಯ ಪ್ರಕಾರ ರಾಮ ರಾವಣನನ್ನು ಕೊಂದ ದಿನವನ್ನು ವಿಜಯದಶಮಿಯೆಂದು ಆಚರಿಸಲಾಗುವುದು.


ವಿಜಯದಶಮಿಯಂದು ಕೆಲವು ವಸ್ತುಗಳನ್ನು ನೋಡುವುದರಿಂದ ಅಥವಾ ಕೆಲ ಕಾರ್ಯ ಮಾಡುವುದರಿಂದ ಅದೃಷ್ಟ ಒಲಿಯಲಿದೆ ಎಂದು ನಂಬಲಾಗುವುದು. ಅವುಗಳೇನು ಎಂದು ನೋಡೋಣ ಬನ್ನಿ:
 ನೀರಿನಲ್ಲಿ ಮೀನು ನೋಡಿದರೆ

ನೀರಿನಲ್ಲಿ ಮೀನು ನೋಡಿದರೆ

ವಿಜಯದಶಮಿಯಂದು ನೀರಿನಲ್ಲಿ ಮೀನು ನೋಡಿದರೆ ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು ಎಂಬ ನಂಬಿಕೆ ಇದೆ.

 ನೀಲಕಂಠ ಪಕ್ಷಿಯನ್ನು ನೋಡುವುದು

ನೀಲಕಂಠ ಪಕ್ಷಿಯನ್ನು ನೋಡುವುದು

ದಸರಾ ಹಬ್ಬದಂದು ನೀಲಕಂಠ ಪಕ್ಷಿಯನ್ನು ನೋಡಿದರೆ ತುಂಬಾನೇ ಶುಭ ಎಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ ಇದನ್ನು ನೋಡಿದವರ ಅದೃಷ್ಟ ಹೆಚ್ಚುವುದು ಅಲ್ಲದೆ ಜೀವನದಲ್ಲಿ ಏಳಿಗೆ ಉಂಟಾಗುವುದು.

ರಾಮ ಅಥವಾ ಶಿವನ ದೇವಾಲಯಕ್ಕೆ ಹೋಗುವುದು

ರಾಮ ಅಥವಾ ಶಿವನ ದೇವಾಲಯಕ್ಕೆ ಹೋಗುವುದು

ದಸರಾ ಹಬ್ಬದಂದು ರಾಮ ಅಥವಾ ಶಿವನ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯುವುದರಿಂದ ಶುಭ ಉಂಟಾಗುವುದು. ಈ ದಿನ ರಾಮ ಹಾಗೂ ಶಿವನ ಆರಾಧನೆ ಮಾಡಬೇಕು.

ಹನುಮಂತನಿಗೆ ಪಾನ್ ಇಡುವುದು

ಹನುಮಂತನಿಗೆ ಪಾನ್ ಇಡುವುದು

ದಸರಾ ಹಬ್ಬದಂದು ರಾಮನ ಮಾತ್ರವಲ್ಲ ರಾಮನ ಭಕ್ತ ಹನುಮಂತನನ್ನು ಕೂಡ ಪೂಜಿಸಬೇಕು. ಹನುಮಂತನಿಗೆ ಪಾನ್ ಅರ್ಪಿಸುವುದರಿಂದ ಶುಭ ಉಂಟಾಗುವುದು. ಪಾನ್‌ ಪ್ರೀತಿ ಹಾಗೂ ಗೌರವ, ವಿಜಯದ ಸಂಕೇತವಾಗಿದೆ.

English summary

Dasara 2021: Sighting these things on Vijayadashami can bring you good luck in kannada

Dasara 2021: Sighting these things on Vijayadashami can bring you good luck in kannada, read on...
Story first published: Thursday, October 14, 2021, 21:00 [IST]
X