For Quick Alerts
ALLOW NOTIFICATIONS  
For Daily Alerts

ದೀಪಾವಳಿಯ ದಿನ ಗೋ ಪೂಜೆ ಮಾಡಿ ಜನ್ಮ ಪಾವನಗೊಳಿಸಿ

By Divya Pandith
|

ವಿವಿಧ ಬಗೆಯ ಧರ್ಮಗಳಲ್ಲಿ ಹಿಂದೂ ಧರ್ಮ ಒಂದಾಗಿರಬಹುದು. ಆದರೆ ಅದರ ವಿಶಾಲತೆ ಹಾಗೂ ಶ್ರೇಷ್ಠತೆ ಎಲ್ಲಕ್ಕಿಂತ ಭಿನ್ನ. ಹಿಂದೂಗಳು ಪ್ರಕೃತಿಯ ಆರಾಧಕರು. ವಾಯು, ಅಗ್ನಿ, ವರುಣ, ಇಂದ್ರ, ಪ್ರಥ್ವಿಗಳೆಲ್ಲವನ್ನೂ ದೇವರೆಂದು ಪರಿಗಣಿಸುತ್ತಾರೆ ಹಾಗೆಯೇ ಪೂಜಿಸುತ್ತಾರೆ ಸಹ. ಹಿಂದೂಗಳು ನಮ್ಮ ನಡುವೆ ಇರುವ ಕೆಲವು ಪ್ರಾಣಿ, ಪಕ್ಷಿ, ಗಿಡ-ಮರಗಳನ್ನು ಸಹ ಪವಿತ್ರವಾದದ್ದು ಹಾಗೂ ದೇವರೆಂದು ಭಾವಿಸುತ್ತಾರೆ. ಈ ಆಚರಣೆ ನಿನ್ನೆ ಮೊನ್ನೆಯಿಂದ ಬಂದ ಪದ್ಧತಿಯಲ್ಲ. ಇದಕ್ಕೆ ಸಾವಿರಾರು ವರ್ಷಗಳ ಕಥೆ-ಪುರಾಣಗಳಿವೆ.

ದಿನನಿತ್ಯ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಹಸು. ಹಸುವನ್ನು ಭೂಮಿತಾಯಿ, ಸಕಲ ದೇವರ ಆವಾಸ ಸ್ಥಾನ ಎಂಬ ನಂಬಿಕೆಯೂ ಇದೆ. ಹಸುವಿನಿಂದ ಮನುಷ್ಯನಿಗೆ ಅನೇಕ ಪ್ರಯೋಜನಗಳಿವೆ. ನಿತ್ಯ ಬೇಕಾಗುವ ಹಾಲು ಮಜ್ಜಿಗೆ, ಸಗಣಿಯನ್ನು ಗೊಬ್ಬರ ತಯಾರಿಕೆಗೆ, ಗಂಜಲವನ್ನು ಔಷಧಿ ತಯಾರಿಸಲು ಉಪಯೋಗಿಸುತ್ತಾರೆ. ನಿತ್ಯವೂ ಈ ಗೋಮಾತೆಯ ಆರಾಧನೆ ಮಾಡಿದರೆ ನಮ್ಮ ಪಾಪಕರ್ಮಗಳು ನಾಶವಾಗಿ, ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ.

ದೀಪಾವಳಿ ಎನ್ನುವ ಐದು ದಿನದ ಹಬ್ಬ ಆಚರಣೆಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಹಬ್ಬದ ನಾಲ್ಕನೇ ದಿನ ಗೋವಿಗೆ ಅಲಂಕಾರ ಮಾಡುವುದು, ವಿಶೇಷ ತಿನಿಸುಗಳನ್ನು ತಿನ್ನಿಸಿ, ಪೂಜೆ ಮಾಡಲಾಗುತ್ತದೆ. ದೀಪಾವಳಿಯಲ್ಲಿ ಏಕೆ ಗೋವಿಗೆ ಪೂಜೆ ಸಲ್ಲಿಸುತ್ತಾರೆ? ಇದರ ಹಿನ್ನೆಲೆ ಏನು ಎನ್ನುವ ವಿಶೇಷ ಸಂಗತಿಗಳನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಲೇಖನದ ಮುಂದಿನ ಭಾಗವನ್ನು ಓದಿ...

ದೇವರುಗಳ ಆವಾಸಸ್ಥಾನ

ದೇವರುಗಳ ಆವಾಸಸ್ಥಾನ

ಮನುಷ್ಯನ ಅನೇಕ ಅವಶ್ಯಕತೆಗಳನ್ನು ಈಡೇರಿಸುವ ಕಾಮಧೇನು ದೇವಾನು ದೇವತೆಗಳ ಆವಾಸ ಸ್ಥಾನ ಎಂದು ಪರಿಗಣಿಸಲಾಗಿದೆ. ಇದರ ಆರಾಧನೆ ಹಾಗೂ ಪೂಜೆಯಿಂದ ಪುಣ್ಯ ಪ್ರಾಪ್ತಿಯಾಗುವುದೆಂದು ವೇದಗಳಲ್ಲೂ ಸಹ ಉಲ್ಲೇಖವಿದೆ. ಕಾಮಧೇನುವನ್ನು ಪೂಜಿಸುವುದರಿಂದ ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ಕರ್ಮಗಳು ಸಹ ತೊಳೆದುಹೋಗುತ್ತವೆ. ಒಮ್ಮೆಲೇ ಎಲ್ಲಾ ದೇವರನ್ನು ಪೂಜಿಸಿರುವ ಪುಣ್ಯವು ಪ್ರಾಪ್ತಿಯಾಗಿ, ಜೀವನದಲ್ಲಿ ಅನೇಕ ಅದೃಷ್ಟಗಳು ಕೈಗೂಡಿ ಬರುತ್ತವೆ. ಭಗವತ್ ಗೀತೆ, ಮಹಾ ಭಾರತ ಸೇರಿದಂತೆ ಅನೇಕ ಹಿಂದೂ ಪವಿತ್ರ ಗ್ರಂಥಗಳಲ್ಲಿ ಕಾಮಧೇನುವಿನ ಮಹಿಮೆ ಹಾಗೂ ಶ್ರೇಷ್ಠತೆಯ ಬಗ್ಗೆ ವರ್ಣಿಸಿರುವುದನ್ನು ಕಾಣಬಹುದು.

ವಸಿಷ್ಟರ ಆಶ್ರಮದಲ್ಲಿ ಕಾಮಧೇನು

ವಸಿಷ್ಟರ ಆಶ್ರಮದಲ್ಲಿ ಕಾಮಧೇನು

ಒಮ್ಮೆ ಕಾಮಧೇನು ದೇವರನ್ನು ಬಿಟ್ಟು ವಸಿಷ್ಟರ ಆಶ್ರಮಕ್ಕೆ ಬಂದಿತ್ತು. ಆಗ ವಸಿಷ್ಟ ಮುನಿಗಳು ರಾಜ ದಿಲೀಪನ್‍ಗೆ ಕಾಮಧೇನುವನ್ನು ಪೂಜಿಸು ಎಂದು ಹೇಳಿದರು. ಮಕ್ಕಳಿಲ್ಲದ ರಾಜ ದಿಲೀಪನ್ ಭಕ್ತಿಯಿಂದ ಕಾಮಧೇನುವನ್ನು ನಿತ್ಯವೂ ಪೂಜಿಸುತ್ತಿದ್ದನು. ಇದರಿಂದಾಗಿ ರಾಜ ಕಾಮಧೇನುವಿನ ಆಶೀರ್ವಾದಕ್ಕೆ ಒಳಗಾಗಿ, ಮಗುವನ್ನು ಪಡೆದುಕೊಂಡನು ಎನ್ನಲಾಗುತ್ತದೆ. ಹಸುವಿನ ಆರಾಧನೆಯ ಪ್ರಾಮುಖ್ಯತೆಗೆ ಹೇಳುವ ಕಥೆಗಳಲ್ಲಿ ಇದೂ ಒಂದು.

ಗೋವಿಗೆ ಹೇಳುವ ಮಂತ್ರಗಳು

ಗೋವಿಗೆ ಹೇಳುವ ಮಂತ್ರಗಳು

1. "ಸರ್ವಕಾಮದುಧೇ ದೇವಿ ಸರ್ವತಿರ್ಥಿಭಿಶೇಚಿನಿ,

ಪಾವನೇ ಸುರಭಿ ಶ್ರೇಷ್ಠೆ ದೇವಿ ತುಭ್ಯಂ ನಮೋಸ್ತುತೇ."

2. "ಲಕ್ಷ್ಮೀರ್ಯ ಲೋಕಪಾಲನಂ ಧೇನುರೂಪೇಣ ಸಂಸ್ಥಿತಾ,

ದೃತಂ ವಹತಿ ಯಜ್ಞಾರ್ಯ ಮಮ ಪಾಪಂ ವ್ಯಾಪೋಹತು."

ಹಸುವಿನ ಪೂಜೆಯ ಪ್ರಾಮುಖ್ಯತೆ

ಹಸುವಿನ ಪೂಜೆಯ ಪ್ರಾಮುಖ್ಯತೆ

ವಾರದ ಏಳು ದಿನಗಳಲ್ಲಿ ಹಸುವನ್ನು ಪೂಜಿಸಬೇಕು. ಪ್ರತಿಯೊಂದು ದಿನವೂ ಒಂದೊಂದು ವಿಶೇಷತೆಯಿಂದ ಕೂಡಿರುತ್ತದೆ.

*ಸೋಮವಾರ ಹಸುವಿಗೆ ಹುಲ್ಲು, ಆಹಾರ, ಸೊಪ್ಪು, ಬಾಳೆಹಣ್ಣನ್ನು ನೀಡುವುದರಿಂದ ನಮ್ಮ ಮನಸ್ಸು ಮೃದುವಾಗುತ್ತದೆ ಹಾಗೂ ಪಿತೃ ದೋಷವು ಕಳೆಯುತ್ತದೆ.

*ಮಂಗಳವಾರ ಹಸುವಿಗೆ ನೀರು ಮತ್ತು ಆಹಾರವನ್ನು ನೀಡುವುದರಿಂದ ವಸತಿ ಮತ್ತು ಭೂ ಖರೀದಿಗೆ ಅವಕಾಶ ಕಲ್ಪಿಸಿಕೊಡುತ್ತದೆ.

*ಬುಧವಾರ ಹಸುವಿಗೆ ಆಹಾರ ನೀಡುವುದು ಹಾಗೂ ಪೂಜಿಸುವುದರಿಂದ ವೃತ್ತಿ ಜೀವನದಲ್ಲಿ ಪ್ರತಿ ಉಂಟಾಗುತ್ತದೆ.

ಹಸುವಿನ ಪೂಜೆಯ ಪ್ರಾಮುಖ್ಯತೆ

ಹಸುವಿನ ಪೂಜೆಯ ಪ್ರಾಮುಖ್ಯತೆ

*ಗುರುವಾರ ಪೂಜಿಸುವುದು ಹಾಗೂ ಅಕ್ಕಿ ಗಂಜಿ ನೀಡುವುದರಿಂದ ಪೂರ್ವ ಜನ್ಮದ ದೋಷವು ಕಳೆಯುವುದು.

*ಶುಕ್ರವಾರ ಗೋ ಪೂಜೆ ಮಾಡುವುದರಿಂದ ಮಹಾಲಕ್ಷ್ಮಿಯ ಆಶೀರ್ವಾದ ಲಭಿಸುವುದು.

*ಶನಿವಾರ ಹುಲ್ಲು, ಅಗಾತಿ ಕಿರೈ ಹಾಗೂ ಸೊಪ್ಪನ್ನು ನೋಡುವುದರಿಂದ ಬಡತನವು ಕಳೆಯುವುದು.

*ಗೋವಿಗೆ ಆರಾಧನೆ ಹಾಗೂ ಆಹಾರ ನೀಡುವುದರಿಂದ 1000 ಜನರಿಗೆ ಅನ್ನದಾನ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುವುದು.

ಗೋಪಾಷ್ಟಮಿ/ಗೋಕುಲಾಷ್ಟಮಿ

ಗೋಪಾಷ್ಟಮಿ/ಗೋಕುಲಾಷ್ಟಮಿ

ಪ್ರತಿವರ್ಷವೂ ಗೋಪಾಷ್ಟಮಿಯನ್ನು ಆಚರಿಸಲಾಗುತ್ತದೆ. ಅದು ಕಾರ್ತಿಕ ತಿಂಗಳ ದೀಪಾವಳಿಯಲ್ಲಿ. ಶ್ರೀಕೃಷ್ಣನಿಗೆ ಗೋವುಗಳನ್ನು ಮೇಯಿಸುವುದೆಂದರೆ ಬಹು ಇಷ್ಟವಾದ ಕೆಲಸವಾಗಿತ್ತು. ಹಾಗಾಗಿಯೇ ಗೋಪಾಲ ಎಂದು ಕರೆಯುತ್ತಾರೆ. ಹಿಂದೂ ಪುರಾಣಗಳ ಪ್ರಕಾರ ಇಂದ್ರನ ಕೋಪಕ್ಕೆ ಒಳಗಾದ ವೃಂದಾವನ, ಹಸುಗಳು ಮತ್ತು ಜನರು ತತ್ತರಿಸಿ ಹೋಗಿದ್ದರು. ಆಸಂದರ್ಭದಲ್ಲಿ ಕೃಷ್ಣನು ಅವರನ್ನು ರಕ್ಷಿಸುವ ಉದ್ದೇಶದಿಂದ ಗೋವರ್ಧನೆಯ ಬೆಟ್ಟವನ್ನು ಎತ್ತಿದನು. ಅವನ ಕಿರು ಬೆರಳಿನಲ್ಲಿ ಎತ್ತಿದ ಗುಡ್ಡವನ್ನು 7 ದಿನಗಳ ಕಾಲ ಹಾಗೇ ನಿಂತಿದ್ದನು. ಅದು ಕಾರ್ತಿಕ ಶುಕ್ಲ ಪಕ್ಷ ಪ್ರತಿಪಾದಿಂದ ಸಪ್ತಮಿಯವರೆಗಿನ ದಿನವಾಗಿತ್ತು. ಎಂಟನೇ ದಿನ ಇಂದ್ರನು ತನ್ನ ತಪ್ಪನ್ನು ಅರಿತುಕೊಂಡನು. ನಂತರ ಭೂ ಲೋಕಕ್ಕೆ ಬಂದು, ಕೃಷ್ಣನಲ್ಲಿ ಕ್ಷಮೆಯಾಚಿಸಿದನು. ಈ ಕಥೆಯ ಹಿನ್ನೆಲೆಯಲ್ಲಿಯೇ ದೀಪಾವಳಿಯಂದು ಹಸುವನ್ನು ಸುಂದರವಾಗಿ ಅಲಂಕರಿಸುವುದು, ಕೋಡುಗಳನ್ನು ಮೊನಚಾಗಿಸುವುದು, ಸಿಹಿಯಾದ ಕಬ್ಬು, ತಿಂಡಿ ಹಾಗೂ ಹುಲ್ಲನ್ನು ನೀಡಲಾಗುತ್ತದೆ. ಈ ರೀತಿ ಮಾಡುವುದರಿಂದ ವರ್ಷದುದ್ದಕ್ಕೂ ನಮಗಾಗಿ ಸಹಾಯ ಮಾಡುವ ಹಸುವಿಗೆ ಕೃತಜ್ಞತೆಯನ್ನು ಹೇಳುವ ಪರಿ ಎಂದು ಪರಿಗಣಿಸಲಾಗುತ್ತದೆ.

ಔಷಧೀಯ ಮೂಲ

ಔಷಧೀಯ ಮೂಲ

ಹಸುವಿನ ಹಾಲು ಜವಜಾತ ಶಿಶುಗಳಿಗೂ ಪರ್ಯಾಯ ಆಹಾರ. ಹಸುವಿನಿಂದ ಪಡೆಯುವ ಹಾಲು, ಬೆಣ್ಣೆ, ತುಪ್ಪ, ಮೂತ್ರಗಳೆಲ್ಲವೂ ಆಯುರ್ವೇದದಲ್ಲಿ ದಿವ್ಯ ಔಷಧಿ ಎಂದು ಪರಿಗಣಿಸಲಾಗುತ್ತದೆ. ಹಸುವಿನಿಂದ ಪಡೆಯುವ ಉತ್ಪನ್ನ ಹಾಗೂ ಮೂತ್ರದಲ್ಲಿ ಜೀರ್ಣವಾಗುವ ಅಂಶಗಳು, ಮೆದುಳಿನ ಕಾರ್ಯ ಚಟುವಟಿಕೆ ಹೆಚ್ಚಿಸುವುದು, ಕೆಮ್ಮು, ಉದರ ಸಮಸ್ಯೆ ಎಲ್ಜಿಮಾ, ಲ್ಯುಕೋಡರ್ಮಾ, ಸೋಕು ನಿವಾರಕ ಸೇರಿದಂತೆ ಅನೇಕ ವಿಶೇಷ ಗುಣಗಳನ್ನು ಒಳಗೊಂಡಿದೆ ಎನ್ನುತ್ತಾರೆ.

ವಿವಿಧೆಡೆಯಲ್ಲಿ ಗೋ ಪೂಜೆ

ವಿವಿಧೆಡೆಯಲ್ಲಿ ಗೋ ಪೂಜೆ

ದೇಶದೆಲ್ಲೆಡೆ ಗೋಮಾತೆಯನ್ನು ವಿವಿಧ ಸಂದರ್ಭದಲ್ಲಿ ಆಚರಿಸುತ್ತಾರೆ. ಕರ್ನಾಟಕದ ವಿವಿಧೆಡೆ ದೀಪಾವಳಿಯ ಸಂದರ್ಭದಲ್ಲಿ, ತಮಿಳುನಾಡಿನಲ್ಲಿ ಥಾಯ್ ಪೊಂಗಲ್ ಸಂದರ್ಭದಲ್ಲಿ ಹಾಗೂ ಇನ್ನಿತರ ರಾಜ್ಯಗಳಲ್ಲಿ ವಿಶೇಷ ಸಂದರ್ಭದಲ್ಲಿ ಉತ್ಸವ ರೂಪದಲ್ಲಿಯೇ ಆಚರಿಸುತ್ತಾರೆ. ಸೂರ್ಯ ದೇವರನ್ನು ಆರಾಧಿಸುವ ಕಡೆ ಪೊಂಗಲ್ ಹಬ್ಬದಲ್ಲಿ ವಿಶೇಷ ಪೂಜೆ ಹಾಗೂ ಸುಗ್ಗಿಯ ಸಂದರ್ಭದಲ್ಲಿ ಹಸುವಿಗೆ ಪೂಜೆ ಸಲ್ಲಿಸುತ್ತಾರೆ. ಭಾರತವು ಹಳ್ಳಿಗಳಿಂದ ಕೂಡಿರುವುದರಿಂದ ರೈತಾಪಿ ಜನರು ಗೋವನ್ನು ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸುತ್ತಾರೆ.

English summary

Cow Puja - Rituals and Mantra to Worship Cows

Hindus are worshipers of nature’s forces. We worship Vayu, Agni, Varuna, Indra, Prithvi and so on. They are natural forces embodied in the form of gods. Not just nature, we also have an age old tradition of worshiping nature’s creations such as animals, plants and trees. One of the most venerated animals in Hinduism is the cow. Hindus often refer to cows as the mother of earth because they give a lot for the human race.
X
Desktop Bottom Promotion