For Quick Alerts
ALLOW NOTIFICATIONS  
For Daily Alerts

ರಾಶಿಗೆ ಅನುಗುಣವಾಗಿ 'ಗಣಪ'ನನ್ನು ಹೀಗೆ ಪೂಜಿಸಿದರೆ-ಸಂಕಷ್ಟ ಪರಿಹಾರವಾಗುತ್ತದೆ

|

ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನ ಗಣೇಶ ಚತುರ್ಥಿಯು ಬರುತ್ತಿದ್ದು ಸಪ್ಟೆಂಬರ್ 13, 2018 ರಂದು ಬರುತ್ತಿದೆ. ನಿಮ್ಮ ಜೀವನದಲ್ಲಿ ಬಂದಿರುವ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡಲು 10 ದಿನದ ಉಪವಾಸವನ್ನು ಕೈಗೊಳ್ಳಲಿದ್ದು ಗಣಪ ಭಕ್ತರನ್ನು ಅನುಗ್ರಹಿಸುತ್ತಾರೆ. ಗಣೇಶನು ತಮ್ಮ ಭಕ್ತರನ್ನು ಕಾಪಾಡುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿದ್ದು ದೇವರಿಗೆ ಶ್ರದ್ಧಾ ಭಕ್ತಿಯಿಂದ ನಮ್ಮ ಸೇವೆಯನ್ನು ಒದಗಿಸಬೇಕು.

ತಂದೆ ತಾಯಿಗೆ ಸುತ್ತು ಬಂದು ಇಡಿಯ ವಿಶ್ವವನ್ನೇ ಸುತ್ತುವುದಕ್ಕೆ ಸಮ ಎಂಬುದಾಗಿ ಗಣಪನು ಇಡಿಯ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಶಿವ ಮತ್ತು ಪಾರ್ವತಿಯ ಪುತ್ರನಾಗಿರುವ ಗಣೇಶ ಪ್ರತಿಯೊಬ್ಬರ ಜೀವನದಲ್ಲಿ ಯಶಸ್ಸನ್ನು ತಂದು ಕೊಡುತ್ತಾರೆ. ದೇವರಿಗೆ ಪ್ರಾರ್ಥನೆಯನ್ನು ಒದಗಿಸಲು ಗಣೇಶ ಚತುರ್ಥಿಯು ಹೆಚ್ಚು ಪವಿತ್ರವಾದುದಾಗಿದೆ. ಜ್ಯೋತಿಷ್ಯರು ಹೇಳುವಂತೆ ಹಬ್ಬದ ಸಮಯದಲ್ಲಿ ನಾವು ಗಣೇಶನ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ ಬೇಡಿಕೊಳ್ಳಬೇಕು. ನಮ್ಮ ರಾಶಿಗೆ ಅನುಗುಣವಾಗಿರುವಂತೆ ನಾವು ಪ್ರಾರ್ಥನೆಯನ್ನು ಸಲ್ಲಿಸಿದರೆ ಇನ್ನೂ ಉತ್ತಮವಾಗಿರುತ್ತದೆ. ಭಕ್ತರ ರಾಶಿಗೆ ಅನುಗುಣವಾಗಿ ಗಣಪನು ಅವರಿಗೆ ಅನುಗ್ರಹವನ್ನು ನೀಡುತ್ತಾರೆ.

ಗಣಪತಿ ದೇವರ ಮೂರ್ತಿ ಖರೀದಿಸುವ ಮೊದಲು ಈ ಸಂಗತಿಗಳು ಗಮನದಲ್ಲಿಟ್ಟುಕೊಳ್ಳಿ

ganesha worship

ಗಣಪನಿಗೆ ಸಾಮಾನ್ಯ ರೀತಿಯಲ್ಲಿ ಪೂಜೆ ಮಾಡುವುದು ಮತ್ತು ನಿಮ್ಮ ರಾಶಿಗೆ ಅನುಗುಣವಾಗಿರುವ ಬಣ್ಣಗಳಿಂದ ತಯಾರಿಸಲಾದ ಗಣಪನ ಮೂರ್ತಿಗೆ ಪೂಜೆ ಮಾಡುವುದಕ್ಕೆ ಹೆಚ್ಚಿನ ವ್ಯತ್ಯಾಸವಿದೆ. ನಿಮ್ಮ ರಾಶಿಯನ್ನು ಯಾವ ದೇವರು ಆಳ್ವಿಕೆ ನಡೆಸುತ್ತಿದ್ದಾರೆ ಮತ್ತು ಗಣೇಶನನ್ನು ಯಾವ ಬಣ್ಣದಿಂದ ತಯಾರಿಸಬೇಕು ಅವರಿಗೆ ನೀಡುವ ಪ್ರಸಾದವನ್ನು ಹೇಗೆ ತಯಾರಿಸಬೇಕು ಎಂಬ ಮಾಹಿತಿಯನ್ನು ನೀವು ಅರಿತುಕೊಂಡಲ್ಲಿ ಗಣಪನ ಅನುಗ್ರಹವನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಬಹುದಾಗಿದೆ. ಮೂಷಿಕ ವಾಹನ ಮೋದಕ ಹಸ್ತ ಚಾಮರ ಕರ್ಣ ವಿಳಬಿತ ಸೂತ್ರ ಎಂಬ ಮಂತ್ರದಂತೆ ಮೂಷಿಕವನ್ನು ವಾಹನವನ್ನಾಗಿ ಮಾಡಿಕೊಂಡಿರುವ ಗಣಪ ದಯಾಪರ ಮತ್ತು ಅಪರಿಮಿತ ಶಕ್ತಿಯನ್ನು ಹೊಂದಿರುವ ಭಗವಂತ.

ದೇವರುಗಳಲ್ಲಿ ಪ್ರಥಮ ಪೂಜೆಯನ್ನು ಮಾಡಿಸಿಕೊಳ್ಳವ ಹರ ಪುತ್ರನು ತಂದೆಯಿಂದ ವರವನ್ನು ಪಡೆದುಕೊಂಡು ತಂದೆ ತಾಯಿಯನ್ನು ಮೆಚ್ಚಿಸಿದವರು. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಕೆಲಸವನ್ನು ಗಣಪ ಮಾಡುತ್ತಿದ್ದು ಭಕ್ತರು ಅವರನ್ನು ಪ್ರಿತಿಯಿಂದ ಡೊಳ್ಳು ಹೊಟ್ಟೆ ಗಣಪತಿ ಎಂದೇ ಕರೆಯುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ ನಮ್ಮ ರಾಶಿಗೆ ಅನುಗುಣವಾಗಿ ಗಣಪನನ್ನು ಹೇಗೆ ಪೂಜಿಸಬೇಕು ಎಂಬುದನ್ನು ಅರಿತುಕೊಳ್ಳೋಣ.

ಮೇಷ: 21 ಮಾರ್ಚ್ - 20 ಏಪ್ರಿಲ್

ಮೇಷ: 21 ಮಾರ್ಚ್ - 20 ಏಪ್ರಿಲ್

ಮಂಗಳನು ಈ ರಾಶಿಗೆ ಅಧಿಪತಿಯಾಗಿದ್ದಾರೆ. ಮಂಗಳ ದೇವ ಸಹಯೋಗಿ ದೇವರಾಗಿದ್ದಾರೆ. ಕೆಂಪು ಬಣ್ಣದಿಂದ ಮಾಡಿದ ಗಣಪನಿಗೆ ಈ ರಾಶಿಯವರು ಪೂಜೆಯನ್ನು ಸಲ್ಲಿಸಬೇಕು. ಲಾಡಿನ ನೈವೇದ್ಯವನ್ನು ದೇವರಿಗೆ ಅರ್ಪಿಸಬೇಕು. ಇದು ಭಕ್ತರ ಕೋರಿಕೆಯನ್ನು ಈಡೇರಿಸಲು ಸಹಕಾರಿಯಾಗಿದೆ.

ವೃಷಭ 21 ಏಪ್ರಿಲ್ - 21 ಮೇ

ವೃಷಭ 21 ಏಪ್ರಿಲ್ - 21 ಮೇ

ಶುಕ್ರನು ಈ ರಾಶಿಗೆ ಅಧಿಪತಿಯಾಗಿದ್ದಾರೆ. ಕೆಂಪು ಹವಳದಿಂದ ತಯಾರಿಸಿ ಗಣಪನ ವಿಗ್ರಹವನ್ನು ಈ ರಾಶಿಯವರು ಪೂಜಿಸಬೇಕು. ಪ್ರಸಾದದಲ್ಲಿ ತುಪ್ಪ ಮತ್ತು ಮಿಶ್ರಿಯನ್ನು ಬಳಸಬೇಕು. ಇದರಿಂದ ಭಕ್ತರ ಮನದ ಕಾಮನೆ ಈಡೇರುತ್ತದೆ.

ಮಿಥುನ: 22 ಮೇ - 21 ಜೂನ್

ಮಿಥುನ: 22 ಮೇ - 21 ಜೂನ್

ಬುಧ ಈ ಗ್ರಹಕ್ಕೆ ಅಧಿದೇವತೆಯಾಗಿದ್ದು ಬುದ್ಧ ದೇವ ಈ ರಾಶಿಗೆ ದೇವರು. ಗಣೇಶನ ಬಿಳಿ ಮೂರ್ತಿಯನ್ನು ಸ್ಥಾಪಿಸಿ ನೀವು ಪೂಜೆಯನ್ನು ಸಲ್ಲಿಸಬೇಕು. ಹಸಿರು ಕಾಳಿನಿಂದ ತಯಾರಿಸಿದ ಲಾಡನ್ನು ದೇವರಿಗೆ ಅರ್ಪಿಸಬೇಕು. ಲಕ್ಷ್ಮೀ ದೇವರಿಗೂ ನೀವು ಪ್ರಾರ್ಥನೆಯನ್ನು ಸಲ್ಲಿಸಿ ಗಣೇಶನಿಗೆ ಪೂಜೆಯನ್ನು ಮಾಡಬೇಕು.

ಕರ್ಕಾಟಕ: 22 ಜೂನ್ - 22 ಜುಲೈ

ಕರ್ಕಾಟಕ: 22 ಜೂನ್ - 22 ಜುಲೈ

ಈ ರಾಶಿಗೆ ಚಂದ್ರನು ಅಧಿಪತಿಯಾಗಿದ್ದಾರೆ. ಈ ರಾಶಿಯವರು ಶ್ವೇತಾರ್ಕ್ ಸಸ್ಯದಿಂದ ಮಾಡಿದ ಗಣಪನ ಪೂಜೆಯನ್ನು ಮಾಡಬೇಕು. ಸೇಮಿಗೆ ಮತ್ತು ಬೆಣ್ಣೆಯನ್ನು ಪ್ರಸಾದ ರೂಪದಲ್ಲಿ ಸೇವಿಸಬೇಕು.

ಸಿಂಹ: 23 ಜುಲೈ - 21 ಆಗಸ್ಟ್

ಸಿಂಹ: 23 ಜುಲೈ - 21 ಆಗಸ್ಟ್

ಸೂರ್ಯನು ಈ ರಾಶಿಗೆ ಅಧಿಪತಿಯಾಗಿದ್ದಾರೆ. ಸೂರ್ಯ ದೇವರು ಇದನ್ನು ಆಳುತ್ತಿದ್ದಾರೆ. ತಿಳಿ ಕೆಂಪು ಬಣ್ಣದ ಗಣಪನನ್ನು ಈ ರಾಶಿಯವರು ಪೂಜಿಸಬೇಕು ಮತ್ತು ಗಣಪನಿಗೆ ಪ್ರಾರ್ಥನೆಯನ್ನು ಸಲ್ಲಿಸಬೇಕು. ಮೋತಿಚೂರ್ ಲಾಡನ್ನು ಪ್ರಸಾದ ರೂಪದಲ್ಲಿ ದೇವರಿಗೆ ನೀಡಿ

ಕನ್ಯಾರಾಶಿ: 22 ಆಗಸ್ಟ್ - 23 ಸಪ್ಟೆಂಬರ್

ಕನ್ಯಾರಾಶಿ: 22 ಆಗಸ್ಟ್ - 23 ಸಪ್ಟೆಂಬರ್

ನ್ಯಾರಾಶಿ ರಾಶಿಚಕ್ರವು ಬುಧ ಗ್ರಹದಿಂದ ಆಳಲ್ಪಡುತ್ತದೆ. ಬುದ್ಧ ದೇವ ಈ ಗ್ರಹದೊಂದಿಗೆ ಸಂಬಂಧ ಹೊಂದಿದ ಆಡಳಿತ ದೇವತೆ. ಲಕ್ಷ್ಮೀಗೆ ಪ್ರಾರ್ಥನೆಯನ್ನು ಸಲ್ಲಿಸಿ ನಂತರ ಗಣೇಶನಿಗೆ ಪ್ರಾರ್ಥನೆಗಳನ್ನು ಸಲ್ಲಿಸಬೇಕು. ಈ ಚತುರ್ಥಿಯಲ್ಲಿ ಭೋಗ ಮತ್ತು ಪ್ರಸಾದದಂತೆ ಎಂದು ಮೂಂಗ್ ಲಾಡನ್ನು ನೀಡಿ.

ತುಲಾ ರಾಶಿ: 24 ಸಪ್ಟೆಂಬರ್ - 23 ಅಕ್ಟೋಬರ್

ತುಲಾ ರಾಶಿ: 24 ಸಪ್ಟೆಂಬರ್ - 23 ಅಕ್ಟೋಬರ್

ಈ ರಾಶಿಯನ್ನು ಶುಕ್ರ ಗ್ರಹ ಆಳುತ್ತದೆ. ಶುಕ್ರ ಈ ರಾಶಿಗೆ ಅಧಿಪತಿ. ತಿಳಿ ಕಂದು ಬಣ್ಣದ ಮೂರ್ತಿಯನ್ನು ಪೂಜಿಸಬೇಕು. ಗಣೇಶನಿಗೆ ತೆಂಗಿನ ಕಾಯಿಯನ್ನು ನೀಡಲು ಮರೆಯದಿರಿ.

ವೃಶ್ಚಿಕ: 24 ಅಕ್ಟೋಬರ್ - 22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ - 22 ನವೆಂಬರ್

ಮಂಗಳ ಈ ಗ್ರಹಕ್ಕೆ ಅಧಿಪತಿಯಾಗಿದ್ದಾರೆ ಮತ್ತು ಮಂಗಳ ಈ ರಾಶಿಯನ್ನು ಆಳುತ್ತಿದ್ದಾರೆ. ಕೆಂಪು ಬಣ್ಣದಿಂದ ಮೂರ್ತಿಯನ್ನು ಮಾಡಿದ ನಂತರ ಈ ರಾಶಿಯವರು ಪೂಜೆಯನ್ನು ಮಾಡಬೇಕು. ಕಡಲೆ ಹಿಟ್ಟಿನಿಂದ ತಯಾರಿಸಿದ ಲಾಡನ್ನು ಪ್ರಸಾದವಾಗಿ ತೆಗೆದುಕೊಳ್ಳಬೇಕು.

ಧನು ರಾಶಿ: 23 ನವೆಂಬರ್ - 22 ಡಿಸೆಂಬರ್

ಧನು ರಾಶಿ: 23 ನವೆಂಬರ್ - 22 ಡಿಸೆಂಬರ್

ಗುರುವು ಈ ರಾಶಿಯ ಅಧಿಪತಿಯಾಗಿದ್ದಾರೆ. ಬೃಹಸ್ಪತಿ ದೇವ ಈ ರಾಶಿಯನ್ನು ಆಳುವವರಾಗಿದ್ದಾರೆ. ಹಳದಿ ಬಣ್ಣದಿಂದ ಮಾಡಿದ ಗಣೇಶ ಮೂರ್ತಿಯನ್ನು ಮಾಡಿ ಪೂಜೆಯನ್ನು ನಡೆಸಬೇಕು. ಗಣೇಶನಿಗೆ ಬೇಸನ್ ಲಾಡನ್ನು ನೀವು ಪ್ರಸಾದ ರೂಪದಲ್ಲಿ ನೀಡಬೇಕು.

ಮಕರ ರಾಶಿ: 23 ಡಿಸೆಂಬರ್ - 20 ಜನವರಿ

ಮಕರ ರಾಶಿ: 23 ಡಿಸೆಂಬರ್ - 20 ಜನವರಿ

ಮಕರ ರಾಶಿಗೆ ಅಧಿಪತಿ ಶನಿಯಾಗಿದ್ದಾರೆ. ಶನಿ ದೇವ ಈ ರಾಶಿಯ ಮೇಲೆ ಆಡಳಿತ ನಡೆಸುತ್ತಾರೆ. ನೀಲಿ ಬಣ್ಣದಿಂದ ಮಾಡಿದ ಗಣಪನ ಮೂರ್ತಿಗೆ ಪೂಜೆಯನ್ನು ಸಲ್ಲಿಸಬೇಕು. ಕಪ್ಪು ಎಳ್ಳನಿಂದ ಮಾಡಿದ ಲಾಡನ್ನು ದೇವರಿಗೆ ನೀಡಿ ಗಣೇಶನ ಅನುಗ್ರಹ ಪಡೆದುಕೊಳ್ಳಿ.

ಕುಂಭ ರಾಶಿ 21 ಜನವರಿ - 19 ಫೆಬ್ರವರಿ

ಕುಂಭ ರಾಶಿ 21 ಜನವರಿ - 19 ಫೆಬ್ರವರಿ

ಶನಿಯು ಈ ರಾಶಿಯ ಅಧಿಪತಿಯಾಗಿದ್ದಾರೆ. ಶನಿ ದೇವ ಈ ರಾಶಿಯ ಮೇಲೆ ಆಳ್ವಿಕೆ ನಡೆಸುತ್ತಾರೆ. ಕಪ್ಪು ಕಲ್ಲಿನಿಂದ ಮಾಡಿದ ಗಣೇಶನ ವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸಬೇಕು. ಹಸಿರು ಬಣ್ಣದ ಹಣ್ಣುಗಳನ್ನು ದೇವರಿಗೆ ಅರ್ಪಿಸಬೇಕು ಇದರಿಂದ ನಿಮ್ಮ ಅಭೀಷ್ಟೆ ನೆರವೇರುತ್ತದೆ.

ಮೀನ 20 ಫೆಬ್ರವರಿ - 20 ಮಾರ್ಚ್

ಮೀನ 20 ಫೆಬ್ರವರಿ - 20 ಮಾರ್ಚ್

ಈ ರಾಶಿಯನ್ನು ಗುರುವು ಆಳ್ವಿಕೆ ನಡೆಸುತ್ತಾರೆ. ಗುರುವು ಈ ರಾಶಿಗೆ ಅಧಿಪತಿಯಾಗಿದ್ದಾರೆ. ಹಸಿರು ಬಣ್ಣದಿಂದ ತಯಾರಿಸಿದ ಮೂರ್ತಿಯ ಪೂಜೆಯನ್ನು ಮಾಡಬೇಕು. ಜೇನು ಮತ್ತು ಕೇಸರಿಯನ್ನು ಪ್ರಸಾದ ರೂಪದಲ್ಲಿ ನೀಡಿ.

English summary

Choose Ganesha Idol And Bhoga As Per Zodiac

Ganesha Chaturthi 2018 will be observed on September 13, 2018. Worshipping Ganesha during this ten-day festival is considered to be very auspicious. The bestower of perfection and the remover of obstacles visits the homes of his devotees during these days, in the month of Bhadrapad. One should choose an idol as well as offer Bhoga to him as per zodiac sign.
Story first published: Wednesday, September 12, 2018, 15:38 [IST]
X
Desktop Bottom Promotion