For Quick Alerts
ALLOW NOTIFICATIONS  
For Daily Alerts

ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಹೆಚ್ಚು ಶಕ್ತಿಶಾಲಿ ಮಂತ್ರಗಳು

By Jaya Subramanya
|

ನಮ್ಮ ಇಷ್ಟಾರ್ಥವನ್ನು ನಡೆಸಿಕೊಡುವ ಭಗವಂತನ ಪೂಜೆಯನ್ನು ನಾವು ಅಗತ್ಯವಾಗಿ ನಡೆಸಿದರೆ ಮಾತ್ರವೇ ಆ ದೇವರು ನಮ್ಮ ಮೊರೆಯನ್ನು ಕೇಳುತ್ತಾರೆ. ಹಾಗಾಗಿ ನಾವು ದೇವರನ್ನು ಸಂತೃಪ್ತಿಗೊಳಿಸುವ ಕಾರ್ಯಗಳನ್ನು ತಪ್ಪದೇ ನಡೆಸಬೇಕಾಗುತ್ತದೆ. ಈ ದೀಪಾವಳಿಯಂದು ಸಂಪತ್ತಿಗೆ ಒಡತಿಯಾಗಿರುವ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ನೀವು ಕೆಲವೊಂದು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಪೂಜೆಗೂ ಮುನ್ನ ಮನೆಯನ್ನು ಸ್ವಚ್ಛಗೊಳಿಸುವುದು, ಪೂಜೆಗೆ ಬೇಕಾದ ಸಲಕರಣೆಗಳೊಂದಿಗೆ ದೇವಿಯನ್ನು ಪೂಜಿಸುವುದು ಹೀಗೆ ಮೊದಲಾದ ವಿಧಿ ವಿಧಾನಗಳನ್ನು ನಡೆಸಿಕೊಂಡು ನೀವು ದೇವಿಯನ್ನು ಪೂಜಿಸಬೇಕು. ಪೂಜಿಸುವ ಸಮಯದಲ್ಲಿ ನೀವು ದೇವಿಯನ್ನು ಹಾಡಿ ಹೊಗಳುವ ಅವರನ್ನು ಪ್ರೀತಿಪಡಿಸುವ ಕೆಲವೊಂದು ಮಂತ್ರಗಳನ್ನು ಪಠಿಸಬೇಕಾಗುತ್ತದೆ.

Lord Lakshmi

ಇಂದಿನ ಲೇಖನದಲ್ಲಿ ನಾವು ನೀಡಿರುವ ಕೆಲವೊಂದು ಮಂತ್ರಗಳು ಹೆಚ್ಚು ಶಕ್ತಿಶಾಲಿ ಎಂದೆನಿಸಿದ್ದು, ನಿಮ್ಮ ಶಕ್ತಿಯನ್ನು ಉಚ್ಛೀಕರಿಸಲು ಈ ಮಂತ್ರಗಳು ಸಹಕಾರಿಯಾಗಿದೆ. ನೀವು ಶ್ರದ್ಧೆಭಕ್ತಿಯಿಂದ ಈ ಮಂತ್ರವನ್ನು ಪಠಿಸಿದಲ್ಲಿ ಆ ದೇವಿಯು ನಿಮ್ಮ ಇಷ್ಟಾರ್ಥವನ್ನು ನಡೆಸಿಕೊಡುವುದು ಖಂಡಿತ. ಭಕ್ತರ ಶ್ರದ್ಧೆಯನ್ನು ಅನುಸರಿಸಿಕೊಂಡು 40 ರಿಂದ 50 ದಿನಗಳ ಕಾಲ ಮಂತ್ರವನ್ನು ಪಠಿಸಲು ಸಮಯವನ್ನು ತೆಗೆದುಕೊಳ್ಳಬಹುದಾಗಿದೆ.

ಲಕ್ಷ್ಮೀ ಮಂತ್ರವನ್ನು ಪಠಿಸಲು ಆರಂಭಿಸುವುದು

ಬೇರೆ ಬೇರೆ ಪ್ರಕಾರದ ಲಕ್ಷ್ಮೀ ಮಂತ್ರಗಳಿವೆ. ಇಲ್ಲಿ ನಾವು ಕೆಲವೊಂದು ಶಕ್ತಿಶಾಲಿ ಮಂತ್ರಗಳನ್ನು ಪಟ್ಟಿ ಮಾಡಿದ್ದೇವೆ. ಇದು ಕೆಲವೊಂದು ಶಕ್ತಿಗಳನ್ನು ಪಡೆದುಕೊಂಡಿವೆ. ಈ ಪ್ರತಿಯೊಂದು ಮಂತ್ರವೂ ನಿಮಗೆ ಶಕ್ತಿಯನ್ನು ತರುತ್ತವೆ ಮತ್ತು ಶುಭಕರವಾಗಿದೆ. ಶುಕ್ರವಾರದಂದು ಈ ಮಂತ್ರವನ್ನು ಪಠಿಸುವುದನ್ನು ಜನರು ಆರಂಭಿಸುತ್ತಾರೆ ನೀವು ಹುಣ್ಣಿಮೆಯ ದಿನ ಮಂತ್ರ ಪಠಿಸಲು ಆರಂಭಿಸಬಹುದು. ಅಂತೆಯೇ ದೀಪಾವಳಿಯ ದಿನ ಕೂಡ ಈ ಮಂತ್ರ ಪಠನೆಗೆ ಪ್ರಶಸ್ತ ದಿನವಾಗಿದೆ.

ಕಮಲದ ಬೀಜದ ಸರ ಅಥವಾ ಹರಳುಗಳಿಂದ ಕೂಡಿದ ಜಪಮಾಲೆಯನ್ನು ಆರಿಸಿಕೊಂಡು ಮಂತ್ರದ ಲೆಕ್ಕವನ್ನು ಇರಿಸಿಕೊಳ್ಳಿ.
ಜಪಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು 108 ಬಾರಿ ಮಂತ್ರವನ್ನು ಪಠಿಸಿ. ಇನ್ನು ಸಕಲ ಸಂಪತ್ತು ನಿಮಗೆ ದುಪ್ಪಟ್ಟಾಗಬೇಕು ಎಂದಾದಲ್ಲಿ 5 ಬಾರಿ 108 ಸಲ ಮಂತ್ರಗಳನ್ನು ಪಠಿಸಿ. ಹೀಗೆ ಹೆಚ್ಚು ಬಾರಿ ಹೇಳಿದಂತೆ ನೀವು ದೇವಿಯ ಕೃಪಾಕಟಾಕ್ಷಕ್ಕೆ ಹೆಚ್ಚು ಒಳಗಾಗುತ್ತೀರಿ.

ಲಕ್ಷ್ಮೀ ಬೀಜಾ ಮಂತ್ರ 1

"ಶ್ರೀಮ್" ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಬಳಸಲಾಗುವ ಮೂಲ ಮಂತ್ರವೆಂದರೆ ಶ್ರೀಮ್. ಇದು ಅಗಾಧ ಶಕ್ತಿಯನ್ನು ಪಡೆದುಕೊಂಡಿರುವ ಪದವೂ ಸಹ ಆಗಿದೆ. ಒಂದು ಆಯಾಮದಿಂದ ಇನ್ನೊಂದಕ್ಕೆ ಶಕ್ತಿಯನ್ನು ಬದಲಾಯಿಸುವ ಪದವಾಗಿದೆ. ಕ್ಲೆಮ್, ಹ್ರೆಮ್, ಕ್ರೆಮ್ ಇಂತಹ ಪದಗಳಿಗೆ ಉದಾಹರಣೆಗಳಾಗಿವೆ. ಆದರೆ ಶ್ರೀಮ್‌ಗಿಂತ ಹೆಚ್ಚು ಶಕ್ತಿಶಾಲಿ ಪದಗಳು ಇವುಗಳಲ್ಲ.

ಲಕ್ಷ್ಮಿ ಬೀಜ್ ಮಂತ್ರ 2

. ಓಂ ಹ್ರೀಮ್ ಶ್ರೀಮ್ ಲಕ್ಷ್ಮೀ ಭಾಯೋ ನಮಹ್.
ಇದು ಶ್ರೀಮ್ ಅನ್ನು ಬಳಸುವ ಸಂಪೂರ್ಣ ಬೀಜ ಮಂತ್ರವಾಗಿದೆ.

ಲಕ್ಷ್ಮಿ ಬೀಜ್ ಮಂತ್ರ 3

. ಓಂ ಶ್ರೀಂಗ್ ಶ್ರೀಯ ನಮ.
ಇದು ಮತ್ತೊಂದು ಬೀಜ್ ಮಂತ್ರವಾಗಿದೆ. ವ್ಯತ್ಯಾಸವೆಂದರೆ ಇದು ಶ್ರೇಮ್ ಎಂಬ ಶಬ್ದವನ್ನು ಬಳಸುವುದಿಲ್ಲ ಎಂಬುದು.

ಲಕ್ಷ್ಮಿ ಮಂತ್ರ

ಓಂ ಹಿರಿಂಗ್ ಶರಿಂಗ್ ಕ್ರೆಂಗ್ ಶರಿಂಗ್ ಕ್ರೆಂಗ್ ಕ್ಲಿಂಗ್ ಶರಿಂಗ್ ಮಹಾಲಕ್ಷ್ಮೀ ಮಾಮ್ ಗ್ರೀಹ ಧನಮ್ ಪುರ ಪೂರ್ಯ್ ಚಿಂತಾಯೈ ಡೋರೆ ಡೋರ್ಯ್

ಸ್ವಾಹಾ ||

ಈ ಮಂತ್ರವನ್ನು ನಡೆಯುತ್ತಿರುವಾಗ ಅಥವಾ ಕಚೇರಿಯಲ್ಲಿ ಅಥವಾ ಕೆಲಸದ ಸ್ಥಳಕ್ಕೆ ತೆರಳುವ ಮೊದಲು ಪಠಿಸಬೇಕು. ಇದು ಚಿಂತೆಗಳ ನಾಶವನ್ನು ಮಾಡುತ್ತದೆ ಮತ್ತು ಸಂಪತ್ತಿನೊಂದಿಗೆ ನಿಮ್ಮ ಮನೆ ತುಂಬುತ್ತದೆ.

ಲಕ್ಷ್ಮಿ ಗಾಯತ್ರಿ ಮಂತ್ರ

ಓ. ಶ್ರೀ ಮಹಾಲಕ್ಷ್ಮೀ ಚ್ ವಿಷ್ಮಾ ವಿಷ್ಣು ಪಟ್ನಾಯಾಯಿ ಚಾ ಧೀಮಾಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್ ಓಂ.

ಅನುವಾದ

ವಿಷ್ಣುವಿನ ಹೆಂಡತಿಯಾದ ಶ್ರೀ ಲಕ್ಷ್ಮೀ ದೇವಿಯೇ ನಾವು ನಿನ್ನನ್ನು ತಲೆಬಾಗುತ್ತೇನೆ. ಬುದ್ಧಿವಂತಿಕೆ, ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ನಮಗೆ ಆಶೀರ್ವಾದ ಮಾಡಿ.

ಮಹಾ ಲಕ್ಷ್ಮೀ ಮಂತ್ರ

ಓಂ ಸರ್ವಾಬಾಧಾ ವಿಣರ್ಮುಕ್ತೊ, ಧನ್ ದಯಾನ್ಯಾ ಸೂತಾನ್ವಿತ್ತಾ
ಮನುಶುಯೋ ಮತ್ಪ್ರಸಾಜನ್ ಭಾವಿಶತಿ ನಾ ಸನ್ಶಯಃ ಓಂ ||

ಅನುವಾದ-
ಓ ದೇವತೆ ಮಹಾ ಲಕ್ಷ್ಮೀ, ದಯವಿಟ್ಟು ಎಲ್ಲಾ ದುಷ್ಟರನ್ನು ನಾಶಮಾಡಿ ಮತ್ತು ಪ್ರಕಾಶಮಾನವಾದ ಮತ್ತು ಶ್ರೀಮಂತ ಭವಿಷ್ಯದ ಮೂಲಕ ನಮ್ಮನ್ನು ಆಶೀರ್ವದಿಸಿ.

ಮಹಾ ಲಕ್ಷ್ಮೀ ಮಂತ್ರ (ತಾಂತ್ರಿಕ)

"ಓಂ ಶರಿಂಗ್ ಹೆರಿಂಗ್ ಕ್ಲಿಲಿಂಗ್ ಏಂಗ್ ಸೌಂಗ್ ಓಂ ಹಿರಿಂಗ್ ಕಾ ಎ ಇ ಲಾ ಹೆರಿಂಗ್ ಹಾ ಸ ಕಾ ಹಾ ಲಾ ಹೆರಿಂಗ್ ಸಕಲ್ ಹರಿಂಗ್ ಸೌಂಗ್ ಐಂಗ್ ಕ್ಲಿಂಗ್ ಹಿರಿಂಗ್ ಶರಿಂಗ್ ಓಂ" ಈ ಮಂತ್ರವು ಮಹಾ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಬಳಸಲಾಗುವ ಶಕ್ತಿಶಾಲಿ ತಾಂತ್ರಿಕ ಮಂತ್ರವಾಗಿದೆ.

ಲಕ್ಷ್ಮಿ ನರಸಿಂಹ ಮಂತ್ರ

|| ಓಂ ಹಿರಿಂಗ್ ಕ್ಶ್ರಾಂಗ್ ಶರಿಂಗ್ ಲಕ್ಷ್ಮಿ ನರಿಂಗೈ ನಾಮಾ ||
|| ಓಂ ಕ್ಲಿಲಿಂಗ್ ಖ್ರೌಂಗ್ ಶೃಂಗ್ ಲಕ್ಷ್ಮೀ ದೇವೈ ನಾಮಾ ||
ಈ ಮಂತ್ರವು ನರಸಿಂಹನನ್ನು ತನ್ನ ಸಂಗಾತಿಯೊಂದಿಗೆ, ಮಹಾ ಲಕ್ಷ್ಮೀ ದೇವಿಯೊಂದಿಗೆ ಆರಾಧಿಸುತ್ತದೆ.
ಎಕ್ಷಶಕ್ಷರ್ ಸಿದ್ಧ ಲಕ್ಷ್ಮೀ ಮಂತ್ರ
|| ಓಂ ಶರಿಂಗ್ ಹರಿಂಗ್ ಕ್ಲಿಂಗ್ ಶರಿಂಗ್ ಸಿಧ್ದಾ ಲಕ್ಷ್ಮೀ ನಾಮ ||
ಈ ಲಕ್ಷ್ಮೀ ಮಂತ್ರ ನೀವು ಸಿದ್ಧವನ್ನು ತಲುಪಲು ಸಹಾಯ ಮಾಡುವಲ್ಲಿ ಬಹಳ ಶಕ್ತಿಶಾಲಿಯಾಗಿದೆ.

ಶ್ರೀ ದಕ್ಷಿಣ ಲಕ್ಷ್ಮಿ ಸ್ತೋತ್ರಂ

"ಟ್ರಲೋಕ್ಯ ಪೂಜಿಥೆ ಧೀವೀ ಕಮಲಾ ವಿಷ್ಣು ವಲ್ಲಬೇ ಯಾಯಾ ತವಂ ಅಚಲಾ ಕೃಷ್ಣ ಥಾತ-ಭವ ಮೇಯಿ ಸ್ತರರಾ
ಕಮಲಾ ಚಂಚಲ ಲಕ್ಷ್ಮಿ ಚಾಲಾ ಭೂತೀರ್ ಹರಿ ಪ್ರಿಯಾ
ಪದ್ಮ ಪದ್ಮಲೈಯಾ ಸಂಮ್ಯಾಕ್ ಉಚೈ ಶ್ರೀ ಪದ್ಮ-ಧರಿಣಿ
ದ್ವಾಡ -ಸಾನಾನಿ ನಾಮನಿ ಲಕ್ಷ್ಮಿ ಸಂಪೂಜ ಯಾ ಯಾ ಪದೇತ್
ಸ್ಧೀರಾ ಲಕ್ಷ್ಮಿರ್ ಭಾವೇದ್ ತಾಶ್ಯ ಪುತ್ರ-ಧಾರ ಅಭಿ-ಸಾಹ
ಇಥಿ ಶ್ರೀ ದೀಕ್ಷಾ ಲಕ್ಷ್ಮಿ ಸ್ತೋತ್ರಂ ಸಂಪೂರ್ಣಮ್ "

ಅನುವಾದ-
ಓ ದೇವತೆ ಮಹಾ ಲಕ್ಷ್ಮೀ, ನಿನ್ನನ್ನು ಮೂರು ಲೋಕಗಳಲ್ಲಿ ಪೂಜಿಸಲಾಗುತ್ತದೆ. ನೀನು ಕೃಷ್ಣ ಪರಂಪರೆಯ ಮಹಾ ವಿಷ್ಣುವಿನ ಪತ್ನಿ. ಒ ಕಮಾಲಾ! ನೀವು ಸ್ಥಿರವಾಗಿರಲು ಮತ್ತು ನನ್ನಿಂದ ಶಾಶ್ವತವಾಗಿ ಉಳಿಯಬೇಕೆಂದು ನಾನು ಬಯಸುತ್ತೇನೆ. ಅಸ್ಥಿರವಾದವರೇ, ನೀವು ಸಮೃದ್ಧಿಯ ದೇವತೆ ಮತ್ತು ಎಲ್ಲ ಸ್ಥಳಗಳನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುವವರಾಗಿದ್ದೀರಿ. ಹರಿಯ ಪ್ರೀತಿಯ ದೇವಿಯೇ, ಕಮಲದಲ್ಲಿ ಆಸೀನರಾಗಿರುವವರೇ ನೀನು ಶಾಶ್ವತವಾಗಿ ಆನಂದವನ್ನು ನೀಡುವವರಾಗಿದ್ದೀರಿ. ಓ ಸಂಪತ್ತಿನ ಓ ದೇವರೇ, ನೀನು ಉನ್ನತವಾದವರು ಮತ್ತು ಕಮಲವನ್ನು ಕೈಯಲ್ಲಿ ಹಿಡಿದುಕೊಂಡಿದ್ದೀರಿ. ಲಕ್ಷ್ಮೀ ದೇವಿಯ 12 ಹೆಸರುಗಳನ್ನು ಪಠಿಸುವವನು ಅವಳನ್ನು ಸ್ಥಿರವಾಗಿ ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಅವರು ಪತ್ನಿ ಮತ್ತು ಕುಮಾರರೊಂದಿಗೆ ಆಶೀರ್ವದಿಸಲ್ಪಡುತ್ತಾರೆ. ಇದರೊಂದಿಗೆ, ದಕ್ಷಿಣ ಲಕ್ಷ್ಮೀ ಕಥಾರಾಮ್ ಕೊನೆಗೊಳ್ಳುತ್ತದೆ.

ಪೂಜೆಯ ವಿಧಿ ವಿಧಾನ
ಲಕ್ಷ್ಮೀಯನ್ನು ನಿತ್ಯವೂ ಪೂಜಿಸಲಾಗುತ್ತದೆ, ಆದರೆ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಗಮನವನ್ನು ಲಕ್ಷ್ಮಿ ಪೂಜೆಗೆ ನೀಡಲಾಗುತ್ತದೆ. ಹಣ್ಣು ಮತ್ತು ಸಿಹಿಗಳನ್ನು ದೇವರಿಗೆ ಅರ್ಪಿಸುವುದು, 108 ಹೆಸರುಗಳನ್ನು ಪಠಿಸುವುದು, ಪ್ರಾರ್ಥನೆಗಳನ್ನು ಮಾಡುವುದು, ದೇವರ ಹಾಡುಗಳನ್ನು ಹಾಡುವುದನ್ನು ಆಕೆಯ ಪೂಜೆಯು ಒಳಗೊಂಡಿದೆ.

ಅಷ್ಟ ಲಕ್ಷ್ಮೀ (ಸಂಸ್ಕೃತ: ಅಷ್ಟಲಕ್ಷ್ಮಿ ಎಂಟು ಲಕ್ಷ್ಮೀಯರು) ಎಂಟು ಗುಂಪಿರುವ ದೇವರ ಎರಡನೆಯ ಕುರುಹಾಗಿದ್ದು, ಸಂಪತ್ತಿನ ಎಂಟು ಮೂಲಗಳಾಗಿದ್ದು ಶ್ರೀ ಲಕ್ಷ್ಮಿಯರ ಶಕ್ತಿಗಳನ್ನು ಪ್ರಸ್ತುತಪಡಿಸುತ್ತದೆ.ನಿಜವಾಗಿ ಮಹಾಲಕ್ಷ್ಮಿಯು ಸಂಪತ್ತಿನ ಹದಿನೆಂಟನೆಯ ಕುರುಹಾಗಿದ್ದು, ಹತ್ತರಲ್ಲಿ ಎಂಟು ಸಿದ್ಧಿಗಳನ್ನು ಅಷ್ಟ ಸಿದ್ಧಿ ಎಂದು ಕರೆಯಲಾಗಿದೆ. ಜ್ಞಾನದ ಆಧ್ಯಾತ್ಮಿಕ ಅರಿವಾಗಿದೆ, ಮತ್ತು ಯಾವುದೇ ವರ್ಗ ಬೇಧವಿಲ್ಲದೆ ಸಂಪೂರ್ಣ ಜಗತ್ತಿಗೆ ಆಧ್ಯಾತ್ಮಿಕ ಜ್ಞಾನವನ್ನು ಶ್ರುತಪಡಿಸುವುದಾಗಿದೆ.

ಮಹಾಲಕ್ಷ್ಮಿಯನ್ನು ಅಷ್ಟ ಸಿದ್ಧಿಗಳು, ಜ್ಞಾನ ಮತ್ತು ಜ್ಞಾನ ಶ್ರುತಪಡಿಸುವ ಅಂತಲ್ಲದೆ ಲೌಕಿಕ ಸಂಪತ್ತಿನ 16 ರೂಪಗಳ ಅಧಿದೇವತೆ ಎಂದು ಕರೆಯಲಾಗುತ್ತದೆ. ಅವು ಈ ಕೆಳಗಿನಂತಿವೆ: ಪ್ರಸಿದ್ಧಿ, ಜ್ಞಾನ, ಧೈರ್ಯ ಮತ್ತು ಶಕ್ತಿ, ವಿಜಯ, ಉತ್ತಮ ಮಕ್ಕಳು, ಶೌರ್ಯ, ಚಿನ್ನ, ರತ್ನ ಮತ್ತು ಇತರ ಬೆಲೆಬಾಳುವಂಥದ್ದು, ಹೇರಳ ಧಾನ್ಯಗಳು, ಸಂತೋಷ, ಪರಮಾನಂದ, ಬುದ್ಧಿಮತ್ತೆ, ಸೌಂದರ್ಯ, ಹೆಚ್ಚಿನ ಗುರಿ, ಮಹತ್ತರ ಯೋಚನೆ, ಉತ್ತಮ ಧ್ಯಾನ, ನೈತಿಕತೆ ಮತ್ತು ಸಿದ್ಧಾಂತಗಳು, ಉತ್ತಮ ಆರೋಗ್ಯ, ಸುದೀರ್ಘ ಜೀವನ ಎಂಬುದಾಗಿ ವಿವರಿಸಲಾಗಿದೆ.

ಲಕ್ಷ್ಮಿಯ ಇತರ ರೂಪ

ಲಕ್ಷ್ಮಿಯು ಇತರೆ ರೂಪಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಇದರಲ್ಲಿ ಹೆಚ್ಚು ಪ್ರಸಿದ್ಧವಾಗಿರುವಂಥದ್ದು, ಶ್ರೀದೇವಿ, ಭೂದೇವಿ ಮತ್ತು ನೀಲಾದೇವಿಯಾಗಿದೆ. ಪ್ರಸಿದ್ಧ ವೈಷ್ಣವ ಸಂತೆ ಅಂಡಾಲ್, ತಮಿಳು ನಾಡಿನ ಶ್ರೀವಲ್ಲಿಪುತ್ತೂರ್‎ನಲ್ಲಿ ಜನಿಸಿದ್ದ ಈಕೆಗೆ 5050 ವರ್ಷಗಳ ಇತಿಹಾಸವಿದ್ದು ಮಹಾಲಕ್ಷ್ಮೀಯ ಅವತಾರವೆಂದೇ ಅಂಡಾಳ್ ಅನ್ನು ಸ್ಮರಿಸುತ್ತಾರೆ. ಶ್ರೀದೇವಿ ಎಂಬುದು ಸಂಸ್ಕೃತದಲ್ಲಿ ಚಲಿಸಬಹುದಾದ ಸಂಪತ್ತು ಎಂದಾಗಿದ್ದು, ಚಂಚಲ ಎಂದೂ ಸಂಸ್ಕೃತದಲ್ಲಿ ಇದನ್ನು ಕರೆಯುತ್ತಾರೆ.

ಭೂದೇವಿಯನ್ನು ಚಲಿಸಲು ಸಾಧ್ಯವಿಲ್ಲದ್ದು ಎಂದು ಕರೆಯುತ್ತಾರೆ. ಆದ್ದರಿಂದಲೇ ಭಾರತದಲ್ಲಿರುವ ಪರ್ವತಗಳನ್ನು ಅಚನಾಚಲ ಎಂದು ನಮೂದಿಸಲಾಗಿದೆ ಉದಾಹರಣೆಗೆ ಅರುಣಾಚಲ, ಹಿಮಾಚಲ ಇತ್ಯಾದಿ. ಚಂಚಲ ಎಂಬ ಪದವೂ ಚಂಚಲತೆಯನ್ನೇ ಸೂಚಿಸುತ್ತದೆ. ಆದ್ದರಿಂದಲೇ ಜನರು ಯಾವಾಗಲೂ ಹಣವಂತರಾಗಿರುವುದಿಲ್ಲ. ಮಹಾಲಕ್ಷ್ಮೀಯ ಅನುಗ್ರಹದಿಂದಲೇ ಜಗತ್ತಿನಲ್ಲಿರುವ ಎಲ್ಲವೂ ಕಾರ್ಯನಿರ್ವಿಸುತ್ತದೆ ಎಂದಾಗಿದೆ.

English summary

Chant These Powerful Lakshmi Mantras To Gain Wealth And Fortune

Mantras are especially crafted incantations that hold immense power. They have boundless spiritual energy that helps in concentrating in the almighty. Mantras are supposed to be uttered in a way that they create divine vibrations. These vibrations resound in the universe and bring peace of mind and happiness to us when we chant on them.
X
Desktop Bottom Promotion