Just In
Don't Miss
- News
LIVE: ಜಾರ್ಖಂಡ್ 3ನೇ ಹಂತದ ಮತದಾನ ಸಂಪೂರ್ಣ ಅಪ್ಡೇಟ್ಸ್
- Sports
ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್ಮ್ಯಾನ್ ರೋಹಿತ್!
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಜನ್ಮಾಷ್ಟಮಿಯ ವಿಶೇಷ: ಶ್ರೀಕೃಷ್ಣನ ಅನುಗ್ರಹ ಪಡೆಯಲು ಈ ಮಂತ್ರಗಳನ್ನು ಪಠಿಸಿ
ಜನ್ಮಾಷ್ಟಮಿ , ಭಗವಂತ ಶ್ರೀಕೃಷ್ಣನ ಜನ್ಮದಿನ ಈ ವರ್ಷದ ಸೆಪ್ಟೆಂಬರ್ ಎರಡನೆಯ ತಾರೀಖಿನಂದು ಆಚರಿಸಲಾಗುತ್ತದೆ. ಈ ದಿನದಂದೇ ಭಗವಂತ ಶ್ರೀಕೃಷ್ಣನ ಜನನ ಸೆರೆಮನೆಯಲ್ಲಿ ಆಗಿತ್ತು. ಕೃಷ್ಣನ ಮಾವನಾದ ಕಂಸ ತನ್ನ ಸಹೋದರಿಯ ಮಗನಿಂದಲೇ ತನ್ನ ಕೊನೆಯಾಗಲಿದೆ ಎಂದು ತಿಳಿದು ಸಹೋದರಿ ಮತ್ತು ಭಾವನನ್ನು ಸೆರೆವಾಸದಲ್ಲಿರಿಸಿದ್ದ. ಕಂಸನ ಸಹೋದರಿಯಾದ ದೇವಕಿ ವಾಸುದೇವನನ್ನು ವರಿಸಿದ್ದು ಇವರ ಎಂಟನೆಯ ಸಂತಾನದಿಂದಲೇ ತನ್ನ ಸಂಹಾರವಾಗಲಿದೆ ಎಂಬ ಭವಿಷ್ಯವಾಣಿ ಕಂಸನಿಗೆ ಸಿಕ್ಕಿತ್ತು.
ಈ ಸುದ್ದಿ ಸಿಕ್ಕ ಬಳಿಕ ಕಂಸ ಈ ದಂಪತಿಗಳನ್ನುತನ್ನ ರಾಜ್ಯದ ರಾಜಧಾನಿಯಾಗಿದ್ದ ಮಥುರಾ ನಗರದ ಸೆರೆಮನೆಯಲ್ಲಿರಿಸಿದ್ದ. ಈ ಸೆರೆವಾಸದಲ್ಲಿ ದೇವಕಿಗೆ ಹುಟ್ಟಿದ ಎಲ್ಲಾ ಮಕ್ಕಳನ್ನೂ ಕಂಸ ಕೊಲ್ಲುತ್ತಿದ್ದ. ಆದರೆ ಏಳನೆಯ ಮಗು ಅತೀಂದ್ರಿಯವಾಗಿ ರೋಹಿಣಿಯ ಗರ್ಭದಲ್ಲಿ ವರ್ಗಗೊಂಡಿತ್ತು. ಈ ಮಗು ಮುಂದೆ ಹುಟ್ಟಿದ ಬಳಿಕ ಬಲರಾಮನೆಂಬ ಹೆಸರನ್ನು ಪಡೆಯಿತು. ಈತನನ್ನು ಶ್ರೀಕೃಷ್ಣನ ಅಣ್ಣ ಎಂದು ನಾವು ತಿಳಿದಿದ್ದೇವೆ.
ಎಂಟನೆಯ ಮಗುವಾಗಿ ಶ್ರೀಕೃಷ್ಣನ ಜನನವಾದ ಬಳಿಕ ವಾಸುದೇವ ಈ ಮಗುವನ್ನು ಭಾರೀ ಮಳೆ, ಚಂಡಮಾರುತದ ನಡುವೆ ನದಿಯ ಅಚೆದಡದಲ್ಲಿದ್ದ ನಂದ ಎಂಬುವರ ಮನೆಗೆ ಕೊಂಡೊಯ್ದು ಅಡಗಿಸಲು ಯತ್ನಿಸಿದ್ದ. ನಂದನ ಪತ್ನಿ ಯಶೋದೆಗೆ ಅದೇ ತಾನೇ ಹೆಣ್ಣು ಮಗುವೊಂದು ಜನಿಸಿತ್ತು. ವಾಸುದೇವ ಬಾಲಕೃಷ್ಣನನ್ನು ಈ ಮಗುವಿನ ಸ್ಥಳದಲ್ಲಿರಿಸಿ ಹೆಣ್ಣುಮಗುವನ್ನು ಎತ್ತಿತಂದ. ಮಕ್ಕಳು ಬದಲಾಗಿದ್ದ ಬಗ್ಗೆ ಯಶೋದೆಗೆ ಅರಿವಾಗಲೇ ಇಲ್ಲ. ತನಗೆ ಗಂಡುಮಗುವಾಯಿತೆಂದೇ ಆಕೆ ತಿಳಿದಳು. ಅಂದು ಗೋಕುಲದ ಎಲ್ಲಾ ಜನರೂ ನಂದನ ಮನೆಗೆ ಆಗಮಿಸಿ ಮಗುವಿನ ಜನನವನ್ನು ಸಂಭ್ರಮಿಸಿದರು.....

ಪವಿತ್ರವಾದ ಶ್ರೀಕೃಷ್ಣನ ಜನ್ಮದಿನ
ಜ್ಯೋತಿಶ್ಯಾಸ್ತ್ರದ ಪ್ರಕಾರ, ಶ್ರೀಕೃಷ್ಣ ಜನಿಸಿದ ಈ ದಿನ ಅತ್ಯಂತ ಪವಿತ್ರವಾಗಿದೆ. ಅಂದರೆ ಭಾದ್ರಪದ ಶುಕ್ಲದ ಕೃಷ್ಣಪಕ್ಷದ ಅಷ್ಠಮಿ ತಿಥಿಯ ದಿನವಾಗಿದ್ದು ಈತನ ಜನನದ ಸಮಯ ಮಧ್ಯರಾತ್ರಿಯಾಗಿತ್ತು. ಈ ಸಮಯದಲ್ಲಿ ರೋಹಿಣಿ ನಕ್ಷತ್ರ ಆಗಸದಲ್ಲಿ ನಟ್ಟ ನಡುವಿನಲ್ಲಿದ್ದು ಸೂರ್ಯ ಸಿಂಹರಾಶಿಯಲ್ಲಿಯೂ ಚಂದ್ರ ವೃಷಭ ರಾಶಿಯಲ್ಲಿಯೂ ಸ್ಥಿತರಿದ್ದರು. ಈ ಸಮಯದಲ್ಲಿ ಹುಟ್ಟಿದ ಮಗು ಅತ್ಯಂತ ಅದೃಷ್ಟಶಾಲಿಯಾಗಿರುತ್ತಾನೆ. ತನ್ನ ಜೀವನ ಮಾತ್ರವಲ್ಲ, ಇಡಿಯ ಸಮಾಜಕ್ಕೇ ಅದೃಷ್ಟಶಾಲಿಯಾಗಿರುತ್ತಾನೆ.

ಪವಿತ್ರವಾದ ಶ್ರೀಕೃಷ್ಣನ ಜನ್ಮದಿನ
ಅಚ್ಚರಿಯೋ ಎಂಬಂತೆ, ಈ ಗ್ರಹ ಮತ್ತು ತಾರೆಗಳ ಅದೇ ಸ್ಥಾನಗಳು ಈ ವರ್ಷದ ಜನ್ಮಾಷ್ಠಮಿಯಂದು ಅಂದರೆ ಸೆಪ್ಟೆಂಬರ್ 2 ನೇ ತಾರೀಖಿನಂದು ಮತ್ತೊಮ್ಮೆ ಮರುಕಳಿಸಲಿವೆ. ಸೆಪ್ಟೆಂಬರ್ 2 ರ ರಾತ್ರಿ 8:48ಕ್ಕೆ ಅಷ್ಠಮಿ ತಿಥಿ ಪ್ರಾರಂಭವಾಗಲಿದೆ ಹಾಗೂ ಸೆಪ್ಟೆಂಬರ್ 3 ರ ಸಂಜೆ 7:19 ಕ್ಕೆ ಕೊನೆಗೊಳ್ಳಲಿದೆ. ರೋಹಿಣಿ ನಕ್ಷತ್ರ ಸೆಪ್ಟೆಂಬರ್ 2 ರ ರಾತ್ರಿ 8:48ಕ್ಕೆ ಗೋಚರವಾಗಲಿದ್ದು ಸೆಪ್ಟೆಂಬರ್ 3 ರ ರಾತ್ರಿ 8:08 ಕ್ಕೆ ಕೊನೆಗೊಳ್ಳಲಿದೆ. ಆದ್ದರಿಂದ ಈ ವರ್ಷದ ಜನ್ಮಾಷ್ಠಮಿಯ ದಿನ ಅತ್ಯಂತ ಪವಿತ್ರವಾಗಿರಲಿದೆ ಎಂದು ಜ್ಯೋತಿಶ್ಯಾಸ್ತ್ರಜ್ಞರು ತಿಳಿಸುತ್ತಾರೆ.

ಶ್ರೀಕೃಷ್ಣನ ಅನುಗ್ರಹವನ್ನು ಪಡೆಯಲು ಕೆಲವು ಮಂತ್ರಗಳನ್ನು ಪಠಿಸುವುದು ಒಳ್ಳೆಯದು.
ಅಷ್ಟೇ ಅಲ್ಲ, ಈ ವರ್ಷದ ಜನ್ಮಾಷ್ಠಮಿ ಎರಡು ದಿನಗಳ ಅವಧಿಗೆ ವಿಸ್ತರಿಸಲಿದೆ. ಅಂದರೆ, ಸೆಪ್ಟೆಂಬರ್ 2 ರಂದು ಮೊದಲ ದಿನವಾಗಿದ್ದು ದೇವಾಲಯ ಹಾಗೂ ಅರ್ಚಕರ ನಿವಾಸಸ್ಥಾನಗಳಲ್ಲಿ ಆಚರಿಸಲಾಗುತ್ತದೆ. ಮರುದಿನ ಅಂದರೆ ಸೆಪ್ಟೆಂಬರ್ 3 ರಂದು ಇತರರ ಮನೆಗಳಲ್ಲಿ ಆಚರಿಸಲಾಗುತ್ತದೆ. ಇದೇ ದಿನ ಮೊಸರು ಕುಡಿಕೆ ಅಥವಾ ದಹಿ ಹಾಂಡಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುತ್ತದೆ. ಈ ದಿನದಂದು ಶ್ರೀಕೃಷ್ಣನ ಅನುಗ್ರಹವನ್ನು ಪಡೆಯಲು ಕೆಲವು ಮಂತ್ರಗಳನ್ನು ಪಠಿಸುವುದು ಒಳ್ಳೆಯದು.

ಈ ದಿನದಂದು ಪಠಿಸಬೇಕಾದ ಕೆಲವು ಮಂತ್ರಗಳು
* ಹರೇ ಕೃಷ್ಣ ಹರೇ ಕೃಷ್ಣ , ಕೃಷ್ಣ ಕೃಷ್ಣ ಹರೇ ಹರೇ
* ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಈ ಮಂತ್ರವನ್ನು ಮಹಾಮಂತ್ರ ಎಂದು ಕರೆಯಲಾಗುತ್ತದೆ. ಹದಿನೈದನೇ ಶತಮಾನದ ಚೈತನ್ಯ ಮಹಾಪ್ರಭುಗಳ ಭಕ್ತಿ ಚಳುವಳಿಯ ಸಮಯದಲ್ಲಿ ಈ ಮಂತ್ರ ಅತ್ಯಂತ ಜನಪ್ರಿಯಗೊಂಡಿತ್ತು.

ಓಂ ನಮೋ ಭಾಗ್ವತೇ ಶ್ರೀ ಗೋವಿಂದಾಯೇ
ಈ ಮಂತ್ರದ ಪಠಣದಿಂದ ಮನೆಯಲ್ಲಿ ಸಮೃದ್ದಿ ಆಗಮಿಸುತ್ತದೆ ಹಾಗೂ ವಿಶೇಷವಾಗಿ ಪ್ರೇಮವಿವಾಹವಾಗಬಯಸುವ ವ್ಯಕ್ತಿಗಳಿಗೆ ಹೆಚ್ಚು ಪ್ರಯೋಜನ ನೀಡಲಿದೆ.

ಕ್ರೀಂ ಕೃಷ್ಣಾಯೇ ನಮಃ
ಈ ಮಂತ್ರವನ್ನು ಭಗವಂತ ಶ್ರೀಕೃಷ್ಣನೇ ಸ್ವತಃ ನೀಡಿದ್ದಾನೆ ಎಂದು ನಂಬಲಾಗಿದೆ. ಈ ಮಂತ್ರದ ಪಠಣದಿಂದ ಮನೆಯಲ್ಲಿ ಸಂತೋಷ ಆಗಮಿಸುತ್ತದೆ ಹಾಗೂ ಜೀವನದ ಎಲ್ಲಾ ತೊಂದರೆಗಳು ಇಲ್ಲವಾಗುತ್ತವೆ.

ಶ್ರೀ ಕೃಷ್ಣೇ ಶರಣಂ ಮಂ
ಈ ಮಂತ್ರವನ್ನು ಪಠಿಸುವ ಮೂಲಕ ಜೀವನದಲ್ಲಿ ಎದುರಾಗಬಹುದಾದ ಎಲ್ಲಾ ಕಂಟಕಗಳು ನಿವಾರಣೆಯಾಗುತ್ತವೆ.

ಕನ್ಹೈಯಾ ಸ್ತುತಿ ಯನ್ನೂ ಪಠಿಸಬಹುದು
ಈ ಮಂತ್ರಗಳ ಪಠಣದ ಜೊತೆಗೇ ನೀವು ಕನ್ಹೈಯಾ ಸ್ತುತಿ ಯನ್ನೂ ಪಠಿಸಬಹುದು. ಭಗವಂತ ಶ್ರೀಕೃಷ್ಣನ ಅನುಗ್ರಹ ಪಡೆಯಲು ಈ ಮಂತ್ರವನ್ನು ಪಠಿಸುವುದು ಅತ್ಯುತ್ತಮ ಮಾರ್ಗವಾಗಿದೆ.