For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿಯ ವಿಶೇಷ: ಶ್ರೀಕೃಷ್ಣನ ಅನುಗ್ರಹ ಪಡೆಯಲು ಈ ಮಂತ್ರಗಳನ್ನು ಪಠಿಸಿ

|

ಜನ್ಮಾಷ್ಟಮಿ , ಭಗವಂತ ಶ್ರೀಕೃಷ್ಣನ ಜನ್ಮದಿನ ಈ ವರ್ಷದ ಆಗಸ್ಟ್ 30ರಂದು ಆಚರಿಸಲಾಗುತ್ತದೆ. ಈ ದಿನದಂದೇ ಭಗವಂತ ಶ್ರೀಕೃಷ್ಣನ ಜನನ ಸೆರೆಮನೆಯಲ್ಲಿ ಆಗಿತ್ತು. ಕೃಷ್ಣನ ಮಾವನಾದ ಕಂಸ ತನ್ನ ಸಹೋದರಿಯ ಮಗನಿಂದಲೇ ತನ್ನ ಕೊನೆಯಾಗಲಿದೆ ಎಂದು ತಿಳಿದು ಸಹೋದರಿ ಮತ್ತು ಭಾವನನ್ನು ಸೆರೆವಾಸದಲ್ಲಿರಿಸಿದ್ದ. ಕಂಸನ ಸಹೋದರಿಯಾದ ದೇವಕಿ ವಾಸುದೇವನನ್ನು ವರಿಸಿದ್ದು ಇವರ ಎಂಟನೆಯ ಸಂತಾನದಿಂದಲೇ ತನ್ನ ಸಂಹಾರವಾಗಲಿದೆ ಎಂಬ ಭವಿಷ್ಯವಾಣಿ ಕಂಸನಿಗೆ ಸಿಕ್ಕಿತ್ತು.

ಈ ಸುದ್ದಿ ಸಿಕ್ಕ ಬಳಿಕ ಕಂಸ ಈ ದಂಪತಿಗಳನ್ನುತನ್ನ ರಾಜ್ಯದ ರಾಜಧಾನಿಯಾಗಿದ್ದ ಮಥುರಾ ನಗರದ ಸೆರೆಮನೆಯಲ್ಲಿರಿಸಿದ್ದ. ಈ ಸೆರೆವಾಸದಲ್ಲಿ ದೇವಕಿಗೆ ಹುಟ್ಟಿದ ಎಲ್ಲಾ ಮಕ್ಕಳನ್ನೂ ಕಂಸ ಕೊಲ್ಲುತ್ತಿದ್ದ. ಆದರೆ ಏಳನೆಯ ಮಗು ಅತೀಂದ್ರಿಯವಾಗಿ ರೋಹಿಣಿಯ ಗರ್ಭದಲ್ಲಿ ವರ್ಗಗೊಂಡಿತ್ತು. ಈ ಮಗು ಮುಂದೆ ಹುಟ್ಟಿದ ಬಳಿಕ ಬಲರಾಮನೆಂಬ ಹೆಸರನ್ನು ಪಡೆಯಿತು. ಈತನನ್ನು ಶ್ರೀಕೃಷ್ಣನ ಅಣ್ಣ ಎಂದು ನಾವು ತಿಳಿದಿದ್ದೇವೆ.

ಎಂಟನೆಯ ಮಗುವಾಗಿ ಶ್ರೀಕೃಷ್ಣನ ಜನನವಾದ ಬಳಿಕ ವಾಸುದೇವ ಈ ಮಗುವನ್ನು ಭಾರೀ ಮಳೆ, ಚಂಡಮಾರುತದ ನಡುವೆ ನದಿಯ ಅಚೆದಡದಲ್ಲಿದ್ದ ನಂದ ಎಂಬುವರ ಮನೆಗೆ ಕೊಂಡೊಯ್ದು ಅಡಗಿಸಲು ಯತ್ನಿಸಿದ್ದ. ನಂದನ ಪತ್ನಿ ಯಶೋದೆಗೆ ಅದೇ ತಾನೇ ಹೆಣ್ಣು ಮಗುವೊಂದು ಜನಿಸಿತ್ತು. ವಾಸುದೇವ ಬಾಲಕೃಷ್ಣನನ್ನು ಈ ಮಗುವಿನ ಸ್ಥಳದಲ್ಲಿರಿಸಿ ಹೆಣ್ಣುಮಗುವನ್ನು ಎತ್ತಿತಂದ. ಮಕ್ಕಳು ಬದಲಾಗಿದ್ದ ಬಗ್ಗೆ ಯಶೋದೆಗೆ ಅರಿವಾಗಲೇ ಇಲ್ಲ. ತನಗೆ ಗಂಡುಮಗುವಾಯಿತೆಂದೇ ಆಕೆ ತಿಳಿದಳು. ಅಂದು ಗೋಕುಲದ ಎಲ್ಲಾ ಜನರೂ ನಂದನ ಮನೆಗೆ ಆಗಮಿಸಿ ಮಗುವಿನ ಜನನವನ್ನು ಸಂಭ್ರಮಿಸಿದರು.....

ಪವಿತ್ರವಾದ ಶ್ರೀಕೃಷ್ಣನ ಜನ್ಮದಿನ

ಪವಿತ್ರವಾದ ಶ್ರೀಕೃಷ್ಣನ ಜನ್ಮದಿನ

ಜ್ಯೋತಿಶ್ಯಾಸ್ತ್ರದ ಪ್ರಕಾರ, ಶ್ರೀಕೃಷ್ಣ ಜನಿಸಿದ ಈ ದಿನ ಅತ್ಯಂತ ಪವಿತ್ರವಾಗಿದೆ. ಅಂದರೆ ಭಾದ್ರಪದ ಶುಕ್ಲದ ಕೃಷ್ಣಪಕ್ಷದ ಅಷ್ಠಮಿ ತಿಥಿಯ ದಿನವಾಗಿದ್ದು ಈತನ ಜನನದ ಸಮಯ ಮಧ್ಯರಾತ್ರಿಯಾಗಿತ್ತು. ಈ ಸಮಯದಲ್ಲಿ ರೋಹಿಣಿ ನಕ್ಷತ್ರ ಆಗಸದಲ್ಲಿ ನಟ್ಟ ನಡುವಿನಲ್ಲಿದ್ದು ಸೂರ್ಯ ಸಿಂಹರಾಶಿಯಲ್ಲಿಯೂ ಚಂದ್ರ ವೃಷಭ ರಾಶಿಯಲ್ಲಿಯೂ ಸ್ಥಿತರಿದ್ದರು. ಈ ಸಮಯದಲ್ಲಿ ಹುಟ್ಟಿದ ಮಗು ಅತ್ಯಂತ ಅದೃಷ್ಟಶಾಲಿಯಾಗಿರುತ್ತಾನೆ. ತನ್ನ ಜೀವನ ಮಾತ್ರವಲ್ಲ, ಇಡಿಯ ಸಮಾಜಕ್ಕೇ ಅದೃಷ್ಟಶಾಲಿಯಾಗಿರುತ್ತಾನೆ.

ಪೂಜಾ ಮುಹೂರ್ತ:

ಪೂಜಾ ಮುಹೂರ್ತ:

ನಿಶಿತಾ ಕಾಲ ಮುಹೂರ್ತ: ರಾತ್ರಿ 11:59ರಿಂದ 12:44ರವರೆಗೆ

ಅಷ್ಟಮಿ ತಿಥಿ ಪ್ರಾರಂಭ: ಆಗಸ್ಟ್ 29, 2021 ರಾತ್ರಿ 11:25ರವರೆಗೆ

ಅಷ್ಟಮಿ ತಿಥಿ ಮುಕ್ತಾಯ: ಆಗಸ್ಟ್‌ 30 ರಾತ್ರಿ 01:59ರವರೆಗೆ

ಮಧ್ಯ ರಾತ್ರಿ ಪೂಜಾ ಸಮಯ: ಆಗಸ್ಟ್‌ 30, 2021 ರಾತ್ರಿ 12:22ರವರೆಗೆ

ಚಂದ್ರೋದಯ ಸಮಯ: ರಾತ್ರಿ 11:35, ಕೃಷ್ಣ ದಶಮಿ

ರೋಹಿಣಿ ನಕ್ಷತ್ರ ಪ್ರಾರಂಭ: ಆಗಸ್ಟ್‌ 30, 2021 ಬೆಳಗ್ಗೆ 06:39ರವರೆಗೆ

ರೋಹಿಣಿ ನಕ್ಷತ್ರ ಮುಕ್ತಾಯ: ಆಗಸ್ಟ್ 31, 2021 ಬೆಳಗ್ಗೆ 09:44ರವರೆಗೆ

ಮೊಸರು ಮಡಿಕೆ ಹೊಡೆಯುವುದು: ಆಗಸ್ಟ್ 31, 2021 ಮಂಗಳವಾರ

ಶ್ರೀಕೃಷ್ಣನ ಅನುಗ್ರಹವನ್ನು ಪಡೆಯಲು ಕೆಲವು ಮಂತ್ರಗಳನ್ನು ಪಠಿಸುವುದು ಒಳ್ಳೆಯದು.

ಶ್ರೀಕೃಷ್ಣನ ಅನುಗ್ರಹವನ್ನು ಪಡೆಯಲು ಕೆಲವು ಮಂತ್ರಗಳನ್ನು ಪಠಿಸುವುದು ಒಳ್ಳೆಯದು.

ಅಷ್ಟೇ ಅಲ್ಲ, ಈ ವರ್ಷದ ಜನ್ಮಾಷ್ಠಮಿ ಎರಡು ದಿನಗಳ ಅವಧಿಗೆ ವಿಸ್ತರಿಸಲಿದೆ. ಮೊದಲ ದಿನವಾಗಿದ್ದು ದೇವಾಲಯ ಹಾಗೂ ಅರ್ಚಕರ ನಿವಾಸಸ್ಥಾನಗಳಲ್ಲಿ ಆಚರಿಸಲಾಗುತ್ತದೆ. ಮರುದಿನ ಅಂದರೆ ಇತರರ ಮನೆಗಳಲ್ಲಿ ಆಚರಿಸಲಾಗುತ್ತದೆ. ಇದೇ ದಿನ ಮೊಸರು ಕುಡಿಕೆ ಅಥವಾ ದಹಿ ಹಾಂಡಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುತ್ತದೆ. ಈ ದಿನದಂದು ಶ್ರೀಕೃಷ್ಣನ ಅನುಗ್ರಹವನ್ನು ಪಡೆಯಲು ಕೆಲವು ಮಂತ್ರಗಳನ್ನು ಪಠಿಸುವುದು ಒಳ್ಳೆಯದು.

ಈ ದಿನದಂದು ಪಠಿಸಬೇಕಾದ ಕೆಲವು ಮಂತ್ರಗಳು

ಈ ದಿನದಂದು ಪಠಿಸಬೇಕಾದ ಕೆಲವು ಮಂತ್ರಗಳು

* ಹರೇ ಕೃಷ್ಣ ಹರೇ ಕೃಷ್ಣ , ಕೃಷ್ಣ ಕೃಷ್ಣ ಹರೇ ಹರೇ

* ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

ಈ ಮಂತ್ರವನ್ನು ಮಹಾಮಂತ್ರ ಎಂದು ಕರೆಯಲಾಗುತ್ತದೆ. ಹದಿನೈದನೇ ಶತಮಾನದ ಚೈತನ್ಯ ಮಹಾಪ್ರಭುಗಳ ಭಕ್ತಿ ಚಳುವಳಿಯ ಸಮಯದಲ್ಲಿ ಈ ಮಂತ್ರ ಅತ್ಯಂತ ಜನಪ್ರಿಯಗೊಂಡಿತ್ತು.

ಓಂ ನಮೋ ಭಾಗ್ವತೇ ಶ್ರೀ ಗೋವಿಂದಾಯೇ

ಓಂ ನಮೋ ಭಾಗ್ವತೇ ಶ್ರೀ ಗೋವಿಂದಾಯೇ

ಈ ಮಂತ್ರದ ಪಠಣದಿಂದ ಮನೆಯಲ್ಲಿ ಸಮೃದ್ದಿ ಆಗಮಿಸುತ್ತದೆ ಹಾಗೂ ವಿಶೇಷವಾಗಿ ಪ್ರೇಮವಿವಾಹವಾಗಬಯಸುವ ವ್ಯಕ್ತಿಗಳಿಗೆ ಹೆಚ್ಚು ಪ್ರಯೋಜನ ನೀಡಲಿದೆ.

ಕ್ರೀಂ ಕೃಷ್ಣಾಯೇ ನಮಃ

ಕ್ರೀಂ ಕೃಷ್ಣಾಯೇ ನಮಃ

ಈ ಮಂತ್ರವನ್ನು ಭಗವಂತ ಶ್ರೀಕೃಷ್ಣನೇ ಸ್ವತಃ ನೀಡಿದ್ದಾನೆ ಎಂದು ನಂಬಲಾಗಿದೆ. ಈ ಮಂತ್ರದ ಪಠಣದಿಂದ ಮನೆಯಲ್ಲಿ ಸಂತೋಷ ಆಗಮಿಸುತ್ತದೆ ಹಾಗೂ ಜೀವನದ ಎಲ್ಲಾ ತೊಂದರೆಗಳು ಇಲ್ಲವಾಗುತ್ತವೆ.

ಶ್ರೀ ಕೃಷ್ಣೇ ಶರಣಂ ಮಂ

ಶ್ರೀ ಕೃಷ್ಣೇ ಶರಣಂ ಮಂ

ಈ ಮಂತ್ರವನ್ನು ಪಠಿಸುವ ಮೂಲಕ ಜೀವನದಲ್ಲಿ ಎದುರಾಗಬಹುದಾದ ಎಲ್ಲಾ ಕಂಟಕಗಳು ನಿವಾರಣೆಯಾಗುತ್ತವೆ.

ಕನ್ಹೈಯಾ ಸ್ತುತಿ ಯನ್ನೂ ಪಠಿಸಬಹುದು

ಕನ್ಹೈಯಾ ಸ್ತುತಿ ಯನ್ನೂ ಪಠಿಸಬಹುದು

ಈ ಮಂತ್ರಗಳ ಪಠಣದ ಜೊತೆಗೇ ನೀವು ಕನ್ಹೈಯಾ ಸ್ತುತಿ ಯನ್ನೂ ಪಠಿಸಬಹುದು. ಭಗವಂತ ಶ್ರೀಕೃಷ್ಣನ ಅನುಗ್ರಹ ಪಡೆಯಲು ಈ ಮಂತ್ರವನ್ನು ಪಠಿಸುವುದು ಅತ್ಯುತ್ತಮ ಮಾರ್ಗವಾಗಿದೆ.

English summary

Chant These Mantras To Please Krishna

Krishna Janmashtami will be observed on September 2, 2018. Chant these mantras, to get Krishna's blessings.
X
Desktop Bottom Promotion